Don't Miss

ಇಂಡಿಗೋ ವಿಮಾನದ ಅವ್ಯವಸ್ಥೆಯ ಸಮಯದಲ್ಲಿ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim : ಇಂಡಿಗೋ ವಿಮಾನ ವಿಳಂಬಗಳು, ಸಂಪೂರ್ಣ ಅವ್ಯವಸ್ಥೆ ಮತ್ತು ಕಿಕ್ಕಿರಿದ ಟರ್ಮಿನಲ್‌ಗಳು ಮತ್ತು ಕಳವಳಗೊಂಡ ಜನರು- ಇವೆಲ್ಲದರ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಕಾರ್ಯಕ್ರಮವೊಂದರಲ್ಲಿ ಕುಣಿಯುತ್ತಿದ್ದಾರೆ.

ಕಡೆನುಡಿ/Conclusion :ಈ ಹೇಳಿಕೆ ತಪ್ಪು ನಿರೂಪಣೆ ನೀಡುತ್ತದೆ. ಡಿಸೆಂಬರ್ 2025 ರಲ್ಲಿ ಇಂಡಿಗೋ ಪ್ರೇರಿತ ವಿಮಾನ ನಿಲ್ದಾಣದ ವಾಸ್ತವಿಕ ಅಡಚಣೆ ಸಂಭವಿಸಿದ ಸಮಯದಲ್ಲಿ, ರಾಮ್ ಮೋಹನ್ ನಾಯ್ಡು ರವರು ಕುಣಿಯುತ್ತಿರುವುದು ಎನ್ನಲಾಗಿದ್ದ ವೀಡಿಯೊ ವಾಸ್ತವವಾಗಿ ಜುಲೈ 2025 ರಲ್ಲಿ ಅವರ ಸೋದರಸಂಬಂಧಿಯ ವಿವಾಹ ಸಮಾರಂಭದ್ದಾಗಿತ್ತು, ಇದಕ್ಕೂ ಇಂಡಿಗೋ ಬಿಕ್ಕಟ್ಟಿಗೂ ಸಂಬಂಧವೇ ಇಲ್ಲ.

ರೇಟಿಂಗ್/Rating : ತಪ್ಪು ನಿರೂಪಣೆ

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಇತ್ತೀಚೆಗೆ ಡಿಸೆಂಬರ್ 2025 ರಲ್ಲಿ ನಡೆದ ಇಂಡಿಗೋ ವಿಮಾನಗಳ ಅಡಚಣೆಗಳ ನಡುವೆ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ನೃತ್ಯ ಮಾಡುತ್ತಿರುವ ವೀಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘KothadiyaSpeaks’ ಅಂತಹ ಒಂದು ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ:

“ವಿಮಾನಗಳು ಹಾರುತ್ತಿಲ್ಲ, ಟರ್ಮಿನಲ್‌ಗಳು ತುಂಬುತ್ತಿವೆ, ಪ್ರಯಾಣಿಕರು ಯಾವುದೇ ಸಹಾಯವಿಲ್ಲದೆ ಸಿಲುಕಿಕೊಂಡಿದ್ದಾರೆ… ಮತ್ತು ವಿಮಾನಯಾನ ಸಚಿವರು ನೃತ್ಯ-ನಿರತರಾಗಿದ್ದಾರೆ. ಇದು ನಾಯಕತ್ವವಲ್ಲ, ಇದು ವಿಪತ್ತಿನ ಪ್ರದರ್ಶನ. ನಾಟಕ ಬಿಟ್ಟು ನೀವು ಉಂಟುಮಾಡಿದ ಅವ್ಯವಸ್ಥೆಯ ಜವಾಬ್ದಾರಿಯನ್ನು ತೆಗೆದುಕೊಂಡು ರಾಜೀನಾಮೆ ಕೊಡಿ, ಅದರಿಂದ ನೀವು ನಿಮ್ಮ ನೃತ್ಯ ಕೌಶಲ್ಯವನ್ನು ತೋರಿಸಲು #BiggBoss19 ಫೈನಲ್‌ನಲ್ಲಿ ಭಾಗವಹಿಸಬಹುದು. ಭಾರತಕ್ಕೆ ಇಂತಹ ನಾಯಕರ ಅಗತ್ಯವಿಲ್ಲ.”

ಈ ಪೋಸ್ಟ್ ಅನ್ನು ಕೆಳಗೆ ನೋಡಿ:

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಅಧಿಕೃತ ಸುದ್ದಿ ವರದಿಗಳ ಪ್ರಕಾರ, ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಹೊಸ ಸರ್ಕಾರಿ ಪೈಲಟ್ ಕರ್ತವ್ಯ ಮತ್ತು ವಿಶ್ರಾಂತಿ ನಿಯಮಗಳಿಗೆ ತಯಾರಾಗಲು ವಿಫಲವಾದ ನಂತರ ಬೃಹತ್ ಅಡಚಣೆಯನ್ನು ಎದುರಿಸಿತು. ಡಿಸೆಂಬರ್ 2 ರಿಂದ ಪೈಲಟ್‌ಗಳ ತೀವ್ರ ಕೊರತೆಯಿಂದಾಗಿ 4,000ಕ್ಕೂ ಹೆಚ್ಚು ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಸಾವಿರಾರು ಜನರು ಸಿಲುಕಿಕೊಂಡಿದ್ದರು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡಕೊಂಡಿತು. ಈ ಹೇಳಿಕೆಯು ವಿಮಾನಯಾನ ಸಚಿವರ ಹಳೆಯ, ಸಂಬಂಧವಿಲ್ಲದ ವೀಡಿಯೊವನ್ನು ಬಳಸಿಕೊಂಡು ಅವರು ಇತ್ತೀಚಿನ ಇಂಡಿಗೋ ಅವ್ಯವಸ್ಥತೆಗೆ ಸಂಬಂಧಿಸಿದಂತೆ  ಉದಾಸೀನತೆ ತೋರಿದ್ದಾರೆಂದು ಸೂಚಿಸುತ್ತದೆ. ಈ ವೀಡಿಯೊ ಜುಲೈ 2025ರದ್ದು ಮತ್ತು ಡಿಸೆಂಬರ್ 2025 ರಲ್ಲಿ ದೇಶವನ್ನು ಆವರಿಸಿದ ಇಂಡಿಗೊ ಬಿಕ್ಕಟ್ಟಿನ ಸಮಯದ್ದಲ್ಲ.

ವಿವರಗಳು:

ಮೂಲ ವೀಡಿಯೊವನ್ನು ಪಡೆಯಲು ನಾವು ಮೊದಲು “ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ನಾಯ್ಡು ನೃತ್ಯ, ಡಿಸೆಂಬರ್ 2025” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಡಿಸೆಂಬರ್ 2025ರ ಬದಲು ನಮಗೆ ಜುಲೈ 2025ರ ಹಲವಾರು ವೀಡಿಯೊಗಳು ದೊರಕಿದವು.

ಜುಲೈ 29, 2025 ರಂದು ಟೋನ್ ನ್ಯೂಸ್ ಅಪ್‌ಲೋಡ್ ಮಾಡಿದ ಅಂತಹ ಒಂದು ಯೂಟ್ಯೂಬ್ ವೀಡಿಯೊ ಈ ಮುಂದಿನ ಶೀರ್ಷಿಕೆ ಹೊಂದಿತ್ತು: “ರಾಮ್ ಮೋಹನ್ ನಾಯ್ಡು ಸಂಗೀತ ಕಾರ್ಯಕ್ರಮದಲ್ಲಿ ನೃತ್ಯ | ಶ್ರೀಕಾಕುಲಂ | ಟೋನ್ ನ್ಯೂಸ್”. ಇದರಲ್ಲಿ ಸಚಿವರು ಅದೇ ಉಡುಪು ಧರಿಸಿರುವುದನ್ನು ಕಾಣಬಹುದು ಮತ್ತು ದೃಶ್ಯಗಳೂ ಸಹ ಹೇಳಿಕೆಯಲ್ಲಿರುವ ವೀಡಿಯೊಗೆ ಹೊಂದಿಕೆಯಾಗುತ್ತವೆ. ಸ್ಕ್ರೀನ್‌ಶಾಟ್ ಮತ್ತು ವೀಡಿಯೊವನ್ನು ಕೆಳಗೆ ನೋಡಿ:

(ಕೃಪೆ: ಟೋನ್ ನ್ಯೂಸ್)

ಜುಲೈ 30, 2025 ರಂದು ABN ತೆಲುಗು ಅಪ್‌ಲೋಡ್ ಮಾಡಿದ ಮತ್ತೊಂದು ವೀಡಿಯೊ ಇದನ್ನು ದೃಢಪಡಿಸುತ್ತದೆ, ಅದರ ಶೀರ್ಷಿಕೆ: “సోషల్ మీడియా ను ఊపేస్తున్న రామ్మోహన్ నాయుడు డ్యాన్స్” |ಕೇಂದ್ರ ಸಚಿವ ರಾಮಮೋಹನ್ ನಾಯ್ಡು ನೃತ್ಯ ವೀಡಿಯೊ. ಕನ್ನಡದ ಅನುವಾದ ಹೀಗಿದೆ: ಸಾಮಾಜಿಕ ಮಾಧ್ಯಮದಲ್ಲಿ ಅಲೆ ಎಬ್ಬಿಸುತ್ತಿರುವ  ರಾಮಮೋಹನ್ ನಾಯ್ಡು ನೃತ್ಯ | ಕೇಂದ್ರ ಸಚಿವ ರಾಮಮೋಹನ್ ನಾಯ್ಡು ನೃತ್ಯ ವೀಡಿಯೊ.

ಇದರ ನಂತರ, ಅವ್ಯವಸ್ಥೆ ಮತ್ತು ವಿಮಾನ ವಿಳಂಬಕ್ಕೆ ಸಂಬಂಧಿಸಿದಂತೆ ಸಚಿವ ನಾಯ್ಡು ರವರು ಕೈಗೊಂಡ ಕ್ರಮಗಳಿಗಾಗಿ ನಾವು ಹುಡುಕಾಟ ನಡೆಸಿದೆವು. ಅವರು ಡಿಸೆಂಬರ್ 9ರಂದು ಸಂಸತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದರು ಮತ್ತು ಇಂಡಿಗೋ CEO ಪೀಟರ್ ಎಲ್ಬರ್ಸ್ ಅವರನ್ನು ಕರೆಸಿ ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು 10% ವೇಳಾಪಟ್ಟಿ ಕಡಿತಕ್ಕೆ ನಿರ್ದೇಶನ ನೀಡಿದರು.

ಟೈಮ್ಸ್ ಆಫ್ ಇಂಡಿಯಾದ ವರದಿಯೊಂದು ಇದನ್ನು ಒಳಗೊಂಡಿದ್ದು, “ಈ ಚಳಿಗಾಲ ಡೊಮೆಸ್ಟಿಕ್ ವಿಮಾನಗಳು ತುಂಬಾ ಕಡಿಮೆಯಾಗಲಿವೆ ಏಕೆಂದರೆ ಮಂಗಳವಾರ ಸಂಜೆ ತೀವ್ರ ತಾಪಕ್ಕೊಳಗಾಗಿರುವ ವಾಯುಯಾನ ಸಚಿವಾಲಯವು ಇಂಡಿಗೋದ ವೇಳಾಪಟ್ಟಿಯನ್ನು 10% ರಷ್ಟು ಕಡಿತಗೊಳಿಸಲು ನಿರ್ಧರಿಸಿದೆ, ಇದು ಆ ದಿನದ ಆರಂಭದಲ್ಲಿ ಆದೇಶಿಸಲಾದ 5% ಕಡಿತಕ್ಕಿಂದ ದ್ವಿಗುಣವಾಗಿದೆ” ಎಂದು ಹೇಳಿದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ:

ಹೀಗಾಗಿ, ಇಂಡಿಗೋ ವಿಮಾನ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರು ನೃತ್ಯ ಮಾಡುತ್ತಿರುವುದನ್ನು ಯಾವುದೇ ಪುರಾವೆಗಳು ತೋರಿಸುವುದಿಲ್ಲ.

ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂತಿದೆ ಎನ್ನಬಹುದು.

******************************************************
ಇದನ್ನೂ ಓದಿ:

ಭಾರತೀಯ ಸೇನೆಯು LoC ಉದ್ದಕ್ಕೂ ಬಾಲಾಕೋಟ್ ಸೆಕ್ಟರ್‌ನಲ್ಲಿ ಹಲವಾರು ನೆಲಬಾಂಬ್‌ಗಳನ್ನು ಸ್ಫೋಟ ಮಾಡಿತೇ? ಸತ್ಯ ಪರಿಶೀಲನೆ

ಲಂಡನ್‌ನಲ್ಲಿ ನಡೆದ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಪ್ರಿನ್ಸ್ ವಿಲಿಯಂ ಮತ್ತು ಅವರ ಕುಟುಂಬವನ್ನು ಜನಸಮೂಹವು ಕಡೆಗಣಿಸಿತೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*