ಹೇಳಿಕೆ/Claim : ಟೈಮ್ಸ್ ಸ್ಕ್ವೇರ್ ಶಕ್ತಿಯುತ ಲೇಸರ್ಗಳನ್ನು ಬಳಸಿ ರಚಿಸಲಾದ ದೈತ್ಯ ಹೊಳೆಯುವ ಚಿನ್ನದ ಶಿಲುಬೆಯಾದ ದಿ ಕ್ರಾಸ್ ಆಫ್ ಲೈಟ್ ಅನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ.
ಕಡೆನುಡಿ/Conclusion : ಹೇಳಿಕೆ ಸುಳ್ಳು. ಈ ಹೇಳಿಕೆಯನ್ನು ಬೆಂಬಲಿಸುವ ಯಾವುದೇ ವರದಿಗಳಿಲ್ಲ ಮತ್ತು ಟೈಮ್ಸ್ ಸ್ಕ್ವೇರ್ನಿಂದ ಯಾವುದೇ ಅಧಿಕೃತ ಸೂಚನೆ ಇಲ್ಲ. ದೃಶ್ಯಗಳು AI ರಚಿತವಾದಂತೆ ತೋರುತ್ತವೆ ಮತ್ತು ಇವು ನಿಜವಲ್ಲ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ನ್ಯೂಯಾರ್ಕ್ ನಗರದ ಮಿಡ್ಟೌನ್ ಮ್ಯಾನ್ಹ್ಯಾಟನ್ ವಿಭಾಗದಲ್ಲಿರುವ ಟೈಮ್ಸ್ ಸ್ಕ್ವೇರ್, ಶಕ್ತಿಯುತ ಲೇಸರ್ಗಳನ್ನು ಬಳಸಿ ರಚಿಸಲಾದ ದೈತ್ಯ ಹೊಳೆಯುವ ಶಿಲುಬೆಯಾದ “ದ ಕ್ರಾಸ್ ಆಫ್ ಲೈಟ್” ಅನ್ನು ಅನಾವರಣಗೊಳಿಸಲು ಯೋಜಿಸುತ್ತಿದೆ ಎಂದು ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘usanewshq’ ಅಂತಹ ಹೇಳಿಕೆಯೊಂದಿಗೆ, ಹರ್ಷೋದ್ಗಾರವೆತ್ತುತ್ತಿದ್ದ ಜನಸಮೂಹದ ನಡುವೆ ನಾಟಕೀಯ, ಅಲೌಕಿಕ ಶಿಲುಬೆಯ ಮೂಲಕ ಟೈಮ್ಸ್ ಸ್ಕ್ವೇರ್ ಅನ್ನು ಬೆಳಗುವುದನ್ನು ತೋರಿಸುವ 10 ಸೆಕೆಂಡುಗಳ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್ 119,000 ಕ್ಕೂ ಹೆಚ್ಚು ಲೈಕ್ಗಳನ್ನು ಮತ್ತು 3 ಮಿಲಿಯ ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು-

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಮಾಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಟೈಮ್ಸ್ ಸ್ಕ್ವೇರ್ ಅಧಿಕಾರಿಗಳು ನಿಜವಾಗಿಯೂ ಇದರ ಯೋಜನೆ ಮಾಡಿರುವುದು ಅಥವಾ ಅನಾವರಣಗೊಳಿಸುವುದನ್ನು ಯಾವುದೇ ಪುರಾವೆಗಳು ಬೆಂಬಲಿಸುವುದಿಲ್ಲ. ವೀಡಿಯೊದ ಎಲ್ಲಾ ಅಂಶಗಳನ್ನು ಗಮನಿಸಿದರೆ, ಅದು AI ಮೂಲಕ ರಚಿಸಿರುವ ವಿಷಯವಾಗಿದೆ ಎಂದು ತೋರುತ್ತದೆ.
ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “ಟೈಮ್ಸ್ ಸ್ಕ್ವೇರ್ ಕ್ರಾಸ್ ಆಫ್ ಲೈಟ್” ಎಂಬ ಪದಗುಚ್ಛದೊಂದಿಗೆ ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು. ಟೈಮ್ಸ್ ಸ್ಕ್ವೇರ್ ಅಲೈಯನ್ಸ್ನ ಅಧಿಕೃತ ವೆಬ್ಸೈಟ್ ನಲ್ಲಿ ನವೆಂಬರ್ 2025 ಅಥವಾ ನಂತರದ ಅವಧಿಗೆ “ಕ್ರಾಸ್ ಆಫ್ ಲೈಟ್,” ಲೇಸರ್ಗಳು ಅಥವಾ ಧಾರ್ಮಿಕ ಚಿಹ್ನೆಗಳನ್ನು ಒಳಗೊಂಡ ಯಾವುದೇ ಘಟನೆಗಳು, ಸ್ಥಾಪನೆಗಳು ಅಥವಾ ಪ್ರಕಟಣೆಗಳನ್ನು ಪಟ್ಟಿ ಮಾಡಲಾಗಿಲ್ಲ.

ಇತ್ತೀಚಿನ ಕಾರ್ಯಕ್ರಮಗಳಲ್ಲಿ ಒಂದು ನವೆಂಬರ್ 2, 2025 ರಂದು NYC ಸಾರಿಗೆ ಇಲಾಖೆ ಮತ್ತು ಮೇಯರ್ ಅವರ ವಲಸೆ ವ್ಯವಹಾರಗಳ ಕಚೇರಿಯು ಟೈಮ್ಸ್ ಸ್ಕ್ವೇರ್ನಲ್ಲಿ ಆಯೋಜಿಸಿದ ಎರಡನೇ ವಾರ್ಷಿಕ ಡಿಯಾ ಡಿ ಮುಯೆರ್ತೋಸ್ ಕಾರ್ಯಕ್ರಮ. ಈ ಸಾಂಸ್ಕೃತಿಕ ಆಚರಣೆಯಲ್ಲಿ ನೇರ ಪ್ರದರ್ಶನಗಳು, ದೊಡ್ಡ ಕ್ಯಾಟ್ರಿನಾಗಳ ಸಾರ್ವಜನಿಕ ಕಲಾ ಸ್ಥಾಪನೆಗಳು (ಮೃತರನ್ನು ಗೌರವಿಸುವ ಅಸ್ಥಿಪಂಜರದಂತಹ ಪ್ರತಿಮೆಗಳು) ಮತ್ತು ಸಾರ್ವಜನಿಕ ಛಾಯಾಗ್ರಹಣ ಅವಕಾಶಗಳಿಗಾಗಿ ಓಡಾಡುತ್ತಿದ್ದ ವೇಷಭೂಷಣಧಾರಿ ಪ್ರದರ್ಶಕರು ಸೇರಿದ್ದರು. ಇದನ್ನು ಇಲ್ಲಿ ನೋಡಿ.

ಇದರ ನಂತರ, ನಾವು ಮಾಧ್ಯಮಗಳಿಂದ ಬಂದ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳಿವೆಯೇ ಎಂದು ಹುಡುಕಿದೆವು, ಆದರೆ ಯಾವುದೂ ಸಿಗಲಿಲ್ಲ. ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, 7 ವಾರಗಳ ಹಿಂದೆ, ಸೆಪ್ಟೆಂಬರ್ 18, 2025 ರಂದು ಯಾವುದೇ ದೃಢವಾದ ಪುರಾವೆಗಳಿಲ್ಲದೆ ಪೋಸ್ಟ್ ಮಾಡಲಾದ ಅದೇ ಹೇಳಿಕೆ ನಮಗೆ ದೊರಕಿತು. ದ ನ್ಯೂಯಾರ್ಕ್ ಟೈಮ್ಸ್ ನಂತಹ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸಾಮಾನ್ಯವಾಗಿ ಇಂತಹ ದೊಡ್ಡ ಪ್ರಮಾಣದ ಘಟನೆಗಳನ್ನು ಒಳಗೊಂಡ ಯಾವುದೇ ವರದಿ ಕಾಣಿಸಲಿಲ್ಲ.
ಹೆಚ್ಚಿನ ತನಿಖೆಯ ನಂತರ, ನ್ಯೂ ಯಾರ್ಕ್ ನಗರದಲ್ಲಿ (NYC) ಲೇಸರ್ ಸ್ಥಾಪನೆಗಳ ಗೋಚರತೆಗಾಗಿ FAA ಅನುಮೋದನೆಗಳು ಮತ್ತು ಜನಸಂದಣಿ ನಿಯಂತ್ರಣಕ್ಕಾಗಿ ನ್ಯೂ ಯಾರ್ಕ್ ಪೊಲೀಸ್ ವಿಭಾಗದ ಪರವಾನಗಿಗಳು ಬೇಕಾಗುತ್ತವೆ ಎಂದು ನಮಗೆ ತಿಳಿದುಬಂದಿತು. ನಾವು NYC ಸರ್ಕಾರಿ ವೆಬ್ಸೈಟ್ನಲ್ಲಿ ಸಾರ್ವಜನಿಕ ಡೇಟಾಬೇಸ್ಗಳನ್ನು ಹುಡುಕಿದಾಗ, ಅಂತಹ ಕಾರ್ಯಕ್ರಮಕ್ಕೆ ಸಂಬಂಧಿಸಿದ ಯಾವುದೇ ಲಿಂಕ್ಗಳು ಅಥವಾ ಅನುಮತಿಗಳು ನಮಗೆ ಸಿಗಲಿಲ್ಲ. ಇದಲ್ಲದೆ, ಟೈಮ್ಸ್ ಸ್ಕ್ವೇರ್ ಜಾತ್ಯತೀತ ಕಾರ್ಯಕ್ರಮಗಳನ್ನು ಆಯೋಜಿಸುವ ಖ್ಯಾತಿಯನ್ನು ಹೊಂದಿದೆ ಮತ್ತು ಶಾಶ್ವತ ಧಾರ್ಮಿಕವಾದ (ಹೇಳಿಕೆಯಲ್ಲಿರುವ ಶಿಲುಬೆಯಂತೆ) ಕಾರ್ಯಕ್ರಮವು ನಡೆಯುವ ಸಂಭಾವನೆ ಕಡಿಮೆ.
ಕೊನೆಯದಾಗಿ, ಕ್ಲಿಪ್ನ ವಿವಿಧ ಸ್ಕ್ರೀನ್ಶಾಟ್ಗಳನ್ನು ಅವು ಕೃತ್ರಿಮವಾಗಿವೆಯೇ ಎಂದು ಪರಿಶೀಲಿಸಲು ನಾವು AI ಡಿಟೆಕ್ಟರ್ ಟೂಲ್ ನಲ್ಲಿ ಹಾಕಿದೆವು. ಫಲಿತಾಂಶಗಳಲ್ಲಿ ಸಾಬೀತಾಗಿರುವುದೇನೆಂದರೆ, ಪೂರ್ಣವಾಗಿ ಅಲ್ಲದಿದ್ದರೂ ಈ ಕ್ಲಿಪ್ನ ಗಮನಾರ್ಹ ಭಾಗವು AI ಮೂಲಕ ರಚಿಸಲಾಗಿರುವಂಥದ್ದು. ಫಲಿತಾಂಶಗಳನ್ನು ಕೆಳಗೆ ವೀಕ್ಷಿಸಿ:

ಹೀಗಾಗಿ, ಈ ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಭಾರತ ತಂಡ ಹೊರಬರುವ ಮೊದಲು ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಏರ್ ಫ್ರೆಶ್ನರ್ ಸಿಂಪಡಿಸಿತ್ತೇ? ಸತ್ಯ ಪರಿಶೀಲನೆ
Digiteye Kannada Fact Checkers