ಹೇಳಿಕೆ/Claim: ವೈರಲ್ ವೀಡಿಯೊದಲ್ಲಿ ಒಂದು ರೆಸ್ಟೋರೆಂಟ್‌ನಲ್ಲಿ ಕೋತಿಯು ತಿರುಗಾಡುತ್ತಾ ಗ್ರಾಹಕರಿಗೆ ಇಡ್ಲಿಗಳನ್ನು ಬಡಿಸುವ ದೃಶ್ಯವನ್ನು ತೋರಿಸಲಾಗಿದೆ.
ಕಡೆನುಡಿ/Conclusion: ಹೇಳಿಕೆ ಸುಳ್ಳು. ವೀಡಿಯೊವನ್ನು AI ಮೂಲಕ ರಚಿಸಲಾಗಿದೆ ಮತ್ತು ಇದನ್ನು ಹಲವಾರು ಬಳಕೆದಾರರು ಹಾಸ್ಯಕ್ಕಾಗಿ ಮತ್ತು ಮೀಮ್ ಆಗಿ ಹಂಚಿಕೊಂಡಿದ್ದಾರೆ.
ರೇಟಿಂಗ್/Rating: ಸಂಪೂರ್ಣವಾಗಿ ಸುಳ್ಳು — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ರೆಸ್ಟೋರೆಂಟ್‌ನಲ್ಲಿ ಕೋತಿಯೊಂದು ಇಡ್ಲಿಯನ್ನು ಬಡಿಸುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ಬಳಕೆದಾರ ‘multiversematrix’ ಈ ಕ್ಲಿಪ್ ಅನ್ನು ಈ ಶೀರ್ಷಿಕೆಯ ಭಾಗದೊಂದಿಗೆ ಹಂಚಿಕೊಂಡಿದ್ದಾರೆ: “ಮಂಗ ವೇಟರ್ ಇಡ್ಲಿ ಮಾತ್ರ ಬಡಿಸುತ್ತಾನೆ! ವೈರಲ್ ರೆಸ್ಟೋರೆಂಟ್ ಕ್ಲಿಪ್ ಮನಸ್ಸು ಗೆಲ್ಲುತ್ತದೆ”, ಮುಂದುವರೆದು ಈ ಶೀರ್ಷಿಕೆಯು “ಕೋತಿಯು ಅಚ್ಚರಿಗೊಳಿಸುವಂತಹ ಶಿಸ್ತಿನೊಂದಿಗೆ ಟೇಬಲ್‌ನಿಂದ ಟೇಬಲ್‌ಗೆ ಚಲಿಸಿತು, ವೃತ್ತಿಪರರಂತೆ ಪ್ಲೇಟ್‌ಗಳನ್ನು ಇರಿಸುವುದು ಮತ್ತು ನ್ಯಾಪ್‌ಕಿನ್‌ಗಳನ್ನು ಸಂಗ್ರಹಿಸುವುದು ಮಾಡಿತು” ಎಂದು ಹೇಳುತ್ತದೆ. ಪೋಸ್ಟ್ ಅನ್ನು ಕೆಳಗೆ ನೋಡಿ:
View this post on Instagram

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಮಾಡಿದ್ದಾರೆ ಮತ್ತು ಅದನ್ನು ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು AI ಮೂಲಕ ರಚಿಸಲ್ಪಟ್ಟಿದೆ ಎಂದು ಕಂಡುಕೊಂಡಿತು. ಈ ಘಟನೆಯನ್ನು ವರದಿ ಮಾಡಿದ ಯಾವುದೇ ಪುರಾವೆಗಳು ಅಥವಾ ಯಾವುದೇ ವಿಶ್ವಾಸಾರ್ಹ ಮಾಧ್ಯಮಗಳು ಇಲ್ಲ. ಇದಲ್ಲದೆ, “HiggsfieldAI” ವೀಡಿಯೊದಲ್ಲಿನ ವಾಟರ್‌ಮಾರ್ಕ್ ನಿಂದ ವೀಡಿಯೊವನ್ನು AI ವೇದಿಕೆಯನ್ನು ಬಳಸಿಕೊಂಡು ರಚಿಸಲಾಗಿದೆ ಎಂದು ಸಾಬೀತಾಗುತ್ತದೆ.
“ಮಂಗ ರೆಸ್ಟೋರೆಂಟ್‌ನಲ್ಲಿ ಇಡ್ಲಿಯನ್ನು ಬಡಿಸುವುದು” ಎಂಬ ಪದಗುಚ್ಛವನ್ನು ಬಳಸಿಕೊಂಡು ನಾವು ಮೊದಲು ಅಂತರ್ಜಾಲ ಹುಡುಕಾಟವನ್ನು ನಡೆಸಿದೆವು, ಆದರೆ ಯಾವುದೇ ದೃಢೀಕೃತ ವರದಿಗಳು ಕಂಡುಬಂದಿಲ್ಲ. ಆದರೆ, ನಕಲಿ AI-ರಚಿತ ವೀಡಿಯೊಗಳು ಜನರನ್ನು ಹೇಗೆ ದಾರಿ ತಪ್ಪಿಸಿವೆ ಎಂಬುದನ್ನು ಚರ್ಚಿಸುವ ಹಲವಾರು ವರದಿಗಳು ನಮ್ಮ ಕಣ್ಣಿಗೆ ಬಿದ್ದವು. ಕೋತಿ ಇಡ್ಲಿಗಳನ್ನು ಬಡಿಸುವುದು, ಫೋಟೋಗಳನ್ನು ತೆಗೆದುಕೊಳ್ಳುವುದು, ಚಪ್ಪಾಳೆ ತಟ್ಟುವುದನ್ನೆಲ್ಲಾ ನೋಡಿ ವೀಡಿಯೊದಲ್ಲಿನ ಗ್ರಾಹಕರು ಸಂತಸಪಡುವುದನ್ನು ನೋಡಿ ಇದು ನಿಜ ಎಂದು ವೀಕ್ಷಕರು ನಂಬುವಂತೆ ಮಾಡುತ್ತದೆ.
ಉದಾಹರಣೆಗೆ, ಯಾಹೂ ನ್ಯೂಸ್ ಯುಕೆ ಪ್ರಕಟಿಸಿದ ವರದಿಯ ಅನುಸಾರ AI-ರಚಿತ ಕೋತಿ ವೀಡಿಯೊಗಳು ಪೊಲೀಸರು ಅವುಗಳನ್ನು ಹುಡುಕಲು ಪ್ರೇರೇಪಿಸಿವೆ ಎಂದು ಉಲ್ಲೇಖಿಸುತ್ತದೆ, ಆದರೆ ವೀಡಿಯೊಗಳು ನಕಲಿಯಾಗಿರುವುದರಿಂದ ಯಾವ ಕೋತಿಗಳೂ ಸಿಕ್ಕಿಲ್ಲ.
ಇದರ ನಂತರ, ಇಡ್ಲಿಗಳನ್ನು ಬಡಿಸುವ ಕೋತಿಯ ವೀಡಿಯೊ ಕ್ಲಿಪ್‌ನಲ್ಲಿ “HiggsfieldAI” ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದೆವು. ಹಿಗ್ಸ್‌ಫೀಲ್ಡ್ AI ಎಂಬುದು ಸರಳ ಇನ್‌ಪುಟ್‌ಗಳನ್ನು (ಲಿಖಿತ ಪ್ರಾಂಪ್ಟ್‌ಗಳು ಅಥವಾ ಚಿತ್ರಗಳಂತಹವು) ಉತ್ತಮ ಗುಣಮಟ್ಟದ ದೃಶ್ಯಗಳಾಗಿ ಪರಿವರ್ತಿಸಲು ರಚನಾಕಾರರಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾದ ಸುಧಾರಿತ ಜನರೇಟಿವ್-AI ಪ್ಲಾಟ್‌ಫಾರ್ಮ್ ಆಗಿದೆ. ಕ್ಲಿಪ್‌ಗಳಲ್ಲಿ ವಾಟರ್‌ಮಾರ್ಕ್‌ನ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ವೀಕ್ಷಿಸಿ:

ನಾವು ವೀಡಿಯೊದ ವಿವಿಧ ಭಾಗಗಳನ್ನು AI ಡಿಟೆಕ್ಟರ್ ಟೂಲ್ ನಲ್ಲಿ ಹಾಕಿ ನೋಡಿದೆವು ಮತ್ತು ಫಲಿತಾಂಶಗಳಲ್ಲಿ ಅವುಗಳನ್ನು AI ಮೂಲಕ ರಚಿಸಲಾಗಿದೆ ಎಂದು ಸಾಬೀತಾಯಿತು. ಫಲಿತಾಂಶಗಳನ್ನು ಕೆಳಗೆ ನೋಡಿ:

ಹೀಗಾಗಿ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಈ ಕ್ಲಿಪ್ ನಲ್ಲಿ ನಿಜವಾಗಿಯೂ ಕೆಳಜಾತಿಯ ಹಿಂದೂಗಳಿಗೆ ನೆಲದ ಮೇಲೆ ಊಟ ಬಡಿಸುವುದನ್ನು ತೋರಿಸಲಗಿದೆಯೇ? ಸತ್ಯ ಪರಿಶೀಲನೆ
Digiteye Kannada Fact Checkers