ಹೇಳಿಕೆ/Claim : ರಿಯಾದ್‌ನಲ್ಲಿ ಬಲೋಚಿಸ್ತಾನ್ ಬಗ್ಗೆ ಹೇಳಿಕೆ ನೀಡಿದ್ದಕ್ಕಾಗಿ ಬಾಲಿವುಡ್ ನಟ ಸಲ್ಮಾನ್ ಖಾನ್ ರವರನ್ನು ಪಾಕಿಸ್ತಾನ ಭಯೋತ್ಪಾದಕ ಎಂದು ಘೋಷಿಸಿದೆ.
ಕಡೆನುಡಿ/Conclusion :ಈ ಹೇಳಿಕೆ ಸುಳ್ಳು. ಹಂಚಿಕೊಳ್ಳಲಾಗುತ್ತಿರುವ ಸುದ್ದಿ ನಕಲಿ ಮತ್ತು ಪಾಕಿಸ್ತಾನ ಸರ್ಕಾರವು ಅಧಿಕೃತವಾಗಿ ಇದನ್ನು ತಳ್ಳಿಹಾಕಿದೆ.
ರೇಟಿಂಗ್/Rating :ಸಂಪೂರ್ಣವಾಗಿ ಸುಳ್ಳು ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ಬಾಲಿವುಡ್ ನಟ ಸಲ್ಮಾನ್ ಖಾನ್ ಅವರನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕ ಎಂದು ಘೋಷಿಸಲಾಗಿದೆ ಮತ್ತು ಪಾಕಿಸ್ತಾನದ 1997 ರ ಭಯೋತ್ಪಾದನಾ ವಿರೋಧಿ ಕಾಯ್ದೆ (ATA) ಯ “ನಾಲ್ಕನೇ ಶೆಡ್ಯೂಲ್”ಗೆ ಸೇರಿಸಲಾಗಿದ್ದು, ಈ ಮೂಲಕ ಅವರನ್ನು ಭಯೋತ್ಪಾದಕ ಶಂಕಿತ ಎಂದು ಹೆಸರಿಸಲಾಗಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘OsintUpdates’ ರಿಯಾದ್‌ನಲ್ಲಿ ನಡೆದ ಘಟನೆಯ ದೃಶ್ಯಾವಳಿ ಮತ್ತು ಹಂಚಿಲ್ಪಡುತ್ತಿರುವ ವೈರಲ್ ಸುತ್ತೋಲೆಯ ಜೊತೆಗೆ ಅಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ಕೆಳಗೆ ನೋಡಿ-
⚡ NEW: Bollywood actor Salman Khan’s name has reportedly been added by Pakistan govt to it’s “Fourth Schedule” — a list under its Anti-Terrorism Act used to monitor people suspected of links to banned groups or extremist activity.
It’s a serious designation that restricts… pic.twitter.com/GzgH02WhUl
— OSINT Updates (@OsintUpdates) October 26, 2025

ಈ ಕ್ಲಿಪ್‌ನಲ್ಲಿ ಕಾಣುವಂತೆ, ಅಕ್ಟೋಬರ್ 17, 2025 ರಂದು ರಿಯಾದ್‌ನ ಜಾಯ್ ಫೋರಂನಲ್ಲಿ ಸಲ್ಮಾನ್ ಖಾನ್ “ಬಲೋಚಿಸ್ತಾನ್” ಅನ್ನು “ಪಾಕಿಸ್ತಾನ” ದಿಂದ ಪ್ರತ್ಯೇಕಿಸಿದಂತೆ ಕಂಡಾಗ ಇಡೀ ವಿವಾದ ಭುಗಿಲೆದ್ದಿತು. ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಸುತ್ತೋಲೆಯಲ್ಲಿ ಸಲ್ಮಾನ್ ಖಾನ್ ರವರನ್ನು ಮೇಲೆ ಕಾಣುವಂತೆ “ಆಜಾದ್ ಬಲೋಚಿಸ್ತಾನ್ ಫೆಸಿಲಿಟೇಟರ್” ಎಂದು ಸಂಬೋಧಿಸಲಾಗಿದೆ.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಬಾಲಿವುಡ್ ನಟ ಸಲ್ಮಾನ್ ಖಾನ್ ರವರನ್ನು ಪಾಕಿಸ್ತಾನ ಸರ್ಕಾರ ಯಾವುದೇ ಭಯೋತ್ಪಾದಕ ಪಟ್ಟಿಗೆ ಸೇರಿಸಿಲ್ಲ. ಇದಲ್ಲದೆ, ಅಂತಹ ಹೇಳಿಕೆಯನ್ನು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಅಧಿಕೃತ ದೃಢೀಕರಣದ ಮೂಲಕ ತಳ್ಳಿಯೂ ಹಾಕಿದೆ.
ಮೊದಲನೆಯದಾಗಿ, ವೈರಲ್ ಹೇಳಿಕೆಯ ಬಗ್ಗೆ ತಿಳಿಯಲು ನಾವು “ಸಲ್ಮಾನ್ ಖಾನ್ ಬಲೊಚಿಸ್ತಾನ್ ಕಾಮೆಂಟ್ಸ್” ಎಂಬ ಶಬ್ದಗಳೊಂದಿಗೆ ಅಂತರ್ಜಾಲ ಹುಡುಕಾಟ ನಡೆಸಿದೆವು. ಪತ್ರಕರ್ತೆ ಸ್ಮಿತಾ ಪ್ರಕಾಶ್ ಇಲ್ಲಿ ಹಂಚಿಕೊಂಡಿರುವ ವಿಸ್ತೃತ ಕ್ಲಿಪ್‌ನಲ್ಲಿ ಸಲ್ಮಾನ್ ಖಾನ್ ಹೀಗೆ ಹೇಳುತ್ತಾರೆ – “ನೋಡಿ, ನೀವು ಹಿಂದಿ ಚಿತ್ರ ನಿರ್ಮಿಸಿ ಇಲ್ಲಿ ಬಿಡುಗಡೆ ಮಾಡಿದರೆ, ಅದು ಸೂಪರ್ ಹಿಟ್ ಆಗುತ್ತದೆ. ನೀವು ತಮಿಳು ಚಿತ್ರ ಅಥವಾ ತೆಲುಗು ಚಿತ್ರ ಅಥವಾ ಮಲಯಾಳಿ ಚಿತ್ರ ಮಾಡಿದರೆ, ಅವು ನೂರಾರು ಕೋಟಿ ಗಳಿಸುತ್ತವೆ,…… ಏಕೆಂದರೆ ನಮ್ಮ ದೇಶಗಳಿಂದ ಬಹಳಷ್ಟು ಜನರು ಇಲ್ಲಿಗೆ ಬಂದಿದ್ದಾರೆ. ಬಲೋಚಿಸ್ತಾನದ ಜನರಿದ್ದಾರೆ, ಅಫ್ಘಾನಿಸ್ತಾನದ ಜನರಿದ್ದಾರೆ, ಪಾಕಿಸ್ತಾನದ ಜನರಿದ್ದಾರೆ. ಇಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಾರೆ.”
I don’t know if it was slip of tongue, but this is amazing! Salman Khan separates “people of Balochistan” from “people of Pakistan” .
pic.twitter.com/dFNKOBKoEz— Smita Prakash (@smitaprakash) October 19, 2025
ಇದರ ನಂತರ ನಾವು ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ಸುತ್ತೋಲೆಯನ್ನು ಪರಿಶೀಲಿಸಿದೆವು, ಆಗ ಅದರಲ್ಲಿ ಕೆಲವು ಸಮಸ್ಯೆಗಳು ಕಂಡುಬಂದವು. ಈ ಸುತ್ತೋಲೆಯು ದಿನಾಂಕ ಅಕ್ಟೋಬರ್ 16, 2025 ರದ್ದು, ಇದು ಸಲ್ಮಾನ್ ಖಾನ್ ರವರು ಶಾರುಖ್ ಖಾನ್ ಮತ್ತು ಆಮಿರ್ ಖಾನ್ ರವರೊಂದಿಗೆ ರಿಯಾದ್‌ನ ಜಾಯ್ ಫೋರಂನಲ್ಲಿ ಅಕ್ಟೋಬರ್ 17, 2025 ರಂದು ಮಾತನಾಡಿದ್ದಕ್ಕಿಂತ ಒಂದು ದಿನ ಮೊದಲಿನದು. ಇದಲ್ಲದೆ, CNIC 52203000000 ಪಾಕಿಸ್ತಾನಿ ರಾಷ್ಟ್ರೀಯ ಗುರುತಿನ ಚೀಟಿಯಾಗಿದೆ. ಭಾರತದಲ್ಲಿ ಜನಿಸಿದ ಸಲ್ಮಾನ್ ಖಾನ್, ಭಾರತೀಯ ಪೌರತ್ವವನ್ನು ಹೊಂದಿದ್ದಾರೆ, ಪಾಕಿಸ್ತಾನಿ ಗುರುತನ್ನಲ್ಲ. ಸುತ್ತೋಲೆಯ ಚಿತ್ರವನ್ನು ಕೆಳಗೆ ನೋಡಿ –

ನಂತರ ನಾವು ಯಾವುದೇ ಅಧಿಕೃತ ಸ್ಪಷ್ಟೀಕರಣಗಳಿವೆಯೇ ಎಂದು ಹುಡುಕಿದೆವು ಮತ್ತು ಹಿಂದೂಸ್ತಾನ್ ಟೈಮ್ಸ್ ಪ್ರಕಟಿಸಿದ ವರದಿಯು ನಮ್ಮ ಕೈಸಿಕ್ಕಿತು. ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ತಮ್ಮ X ಖಾತೆಯಲ್ಲಿ ಈ ವಿಷಯದ ಕುರಿತು ಅಧಿಕೃತ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದೆಯೆಂದು ಆ ವರದಿಯು ಉಲ್ಲೇಖಿಸುತ್ತದೆ. ಈ ಹೇಳಿಕೆಗೆ ಸಂಬಂಧಿಸಿದಂತೆ “ಯಾವುದೇ ಪಾಕಿಸ್ತಾನಿ ಸರ್ಕಾರದ ಅಧಿಕೃತ ಹೇಳಿಕೆ, ಅಧಿಸೂಚನೆ ಅಥವಾ ನಮೂದು ಇಲ್ಲ” ಎಂದು ಈ ಪೋಸ್ಟ್ ನಲ್ಲಿ ಬರೆಯಲಾಗಿದೆ. ಸ್ಕ್ರೀನ್‌ಶಾಟ್ ಅನ್ನು ಕೆಳಗೆ ನೋಡಿ –

ಹೀಗಾಗಿ, ಹೇಳಿಕೆ ಸುಳ್ಳು.
******************************************************
ಇದನ್ನೂ ಓದಿ:
ಭಾರತ ತಂಡ ಹೊರಬರುವ ಮೊದಲು ಪಾಕಿಸ್ತಾನಿ ಮಹಿಳಾ ಕ್ರಿಕೆಟ್ ತಂಡವು ಏರ್ ಫ್ರೆಶ್ನರ್ ಸಿಂಪಡಿಸಿತ್ತೇ? ಸತ್ಯ ಪರಿಶೀಲನೆ
Digiteye Kannada Fact Checkers