Don't Miss

ಸರ್ಕಾರಿ ಸೇವೆಗಳಲ್ಲಿನ ಭ್ರಷ್ಟಾಚಾರವನ್ನು ವರದಿ ಮಾಡಲು ನಾಗರಿಕರಿಗಾಗಿ ಭಾರತದ PMO (ಪ್ರಧಾನ ಮಂತ್ರಿಗಳ ಕಛೇರಿಯು) 9851145045 ಹಾಟ್‌ಲೈನ್ ಅನ್ನು ಪ್ರಾರಂಭಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :ಲಂಚ, ವಿಳಂಬ, ಸರ್ಕಾರಿ ಸೇವೆಗಳಲ್ಲಿನ ದುರ್ನಡತೆಗಳನ್ನು ವರದಿ ಮಾಡಲು ಭಾರತದ PMO ನಾಗರಿಕರಿಗಾಗಿ ಹಾಟ್‌ಲೈನ್ (9851145045) ಪ್ರಾರಂಭಿಸಿದೆ.

ಕಡೆನುಡಿ/Conclusion :  ಹೇಳಿಕೆ ಸುಳ್ಳು. ಹಾಟ್‌ಲೈನ್ (9851145045) ನೇಪಾಳ ಸರ್ಕಾರದ ಉಪಕ್ರಮವಾಗಿದ್ದು, ಇದು ಭಾರತದ PMOನಿಂದ ಬಂದದ್ದಲ್ಲ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು Five rating

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಭ್ರಷ್ಟಾಚಾರವನ್ನು ನಿಭಾಯಿಸಲು  ಭಾರತದ ಪ್ರಧಾನ ಮಂತ್ರಿಗಳ ಕಚೇರಿ ನಾಗರಿಕರಿಗಾಗಿ ಹಾಟ್‌ಲೈನ್ (9851145045) ಅನ್ನು ಪ್ರಾರಂಭಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘RavinderKapur2’ ರವರು “ಇನ್ನೀಗ ಭಾರತವು ಭ್ರಷ್ಟಾಚಾರವನ್ನು ಬುಡದಿಂದಲೇ ನೇರವಾಗಿ ವರದಿ ಮಾಡಬಹುದು” ಎಂಬ ಶೀರ್ಷಿಕೆಯೊಂದಿಗೆ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಪೋಸ್ಟ್‌ನಲ್ಲಿರುವ ಚಿತ್ರದಲ್ಲಿ “ಹಾಟ್‌ಲೈನ್” ಎಂದು ಅಲಂಕರಿಸಲಾದ ಕೆಂಪು ಫೋನ್ ಐಕಾನ್ ಜೊತೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರವಿದೆ. ಅದರಲ್ಲಿರುವ ಹೇಳಿಕೆ ಹೀಗಿದೆ: “ಈಗ ನೀವು ಪ್ರಧಾನಿಗಳ ಕಚೇರಿಗೆ ನೇರವಾಗಿ ಭ್ರಷ್ಟಾಚಾರವನ್ನು ವರದಿ ಮಾಡಬಹುದು!”

ಈ ಪೋಸ್ಟ್ ಸುಮಾರು 3,200 ಲೈಕ್‌ಗಳನ್ನು ಮತ್ತು 129,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು –

 

ಇತರ ಬಳಕೆದಾರರೂ ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು. ಹಾಟ್‌ಲೈನ್ 9851145045 ನೇಪಾಳದದ್ದು, ಅದು ಭಾರತದ ಪ್ರಧಾನಿಗಲ ಕಛೇರಿಯ ಉಪಕ್ರಮವಲ್ಲ. ಭಾರತದ PMO ಕಚೇರಿಯಿಂದ ಯಾವುದೇ ಅಧಿಕೃತ ದೃಢೀಕರಣ ಅಥವಾ ಈ ಹಾಟ್‌ಲೈನ್ ಸಂಖ್ಯೆಯ ಬಗ್ಗೆ ಯಾವುದೇ ಹೇಳಿಕೆಗಳು ಕಂಡುಬಂದಿಲ್ಲ.

ಈ ವಿಷಯದ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಾವು ಮೊದಲು “PMO ಭಾರತ ಹಾಟ್‌ಲೈನ್ 9851145045” ಎಂಬ ಶಬ್ದಗಳೊಂದಿಗೆ ವೆಬ್ ಹುಡುಕಾಟವನ್ನು ನಡೆಸಿದೆವು. ಈ ಹಾಟ್‌ಲೈನ್ PMO ಭಾರತಕ್ಕೆ ಸೇರಿದ್ದು ಎಂದು ದೃಢೀಕರಿಸುವ ಯಾವುದೇ ಮಾಧ್ಯಮಗಳ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಅಧಿಕೃತ ಭಾರತದ ಪ್ರಧಾನ ಮಂತ್ರಿಗಳ ವೆಬ್‌ಸೈಟ್‌ನಲ್ಲಿ ಹುಡುಕಾಟ ನಡೆಸಿದಾಗ 9851145045 ಸಂಖ್ಯೆಯ ಭ್ರಷ್ಟಾಚಾರ-ವರದಿ ಮಾಡುವ ಹಾಟ್‌ಲೈನ್‌ನ ಯಾವುದೇ ಉಲ್ಲೇಖಗಳು ದೊರೆತಿಲ್ಲ.

ಹಾಟ್‌ಲೈನ್ ಸಂಖ್ಯೆಯನ್ನು ಮಾತ್ರ ಬಳಸಿ ಮತ್ತೊಂದು ಅಂತರ್ಜಾಲದ ಹುಡುಕಾಟವನ್ನು ನಡೆಸಿದ ನಂತರ, ಈ ಹಾಟ್‌ಲೈನ್ ಭಾರತದ್ದಲ್ಲ, ನೇಪಾಳದ್ದು ಎಂದು ನಮಗೆ ತಿಳಿದುಬಂತು. ರಿಪಬ್ಲಿಕಾದ ವರದಿಯ ಪ್ರಕಾರ, 9851145045 ಸಂಖ್ಯೆಯು ನೇಪಾಳದ ಪ್ರಧಾನ ಮಂತ್ರಿ ಕಚೇರಿ ಮತ್ತು ಮಂತ್ರಿ ಮಂಡಳಿಗೆ (OPMCM) ಸೇರಿದ್ದು, ಸರ್ಕಾರಿ ಸಂಸ್ಥೆಗಳಲ್ಲಿ ದುಷ್ಕೃತ್ಯ, ಲಂಚ ಅಥವಾ ವಿಳಂಬಗಳನ್ನು ವರದಿ ಮಾಡಲು ನೇಪಾಳದ ಪ್ರಧಾನಿ ಸುಶೀಲಾ ಕರ್ಕಿಯವರು ಇದನ್ನು ಪ್ರಾರಂಭಿಸಿದರು. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ನೇಪಾಳಿ ಟೆಲಿಕಾಂ ಪ್ರಕಟಿಸಿದ ಮತ್ತೊಂದು ವರದಿಯೂ ಸಹ 9851145045 ಹಾಟ್‌ಲೈನ್ ಸಂಖ್ಯೆ ನೇಪಾಳಕ್ಕೆ ಸೇರಿದ್ದು ಎಂದು ಪ್ರತಿಪಾದಿಸುತ್ತದೆ. “ಶ್ರೀಮತಿ ಸುಶೀಲಾ ಕರ್ಕಿ ನೇತೃತ್ವದ ಪ್ರಸ್ತುತ ಸರ್ಕಾರವು ಸಾರ್ವಜನಿಕರನ್ನು ತಲುಪಲು ಮತ್ತು ಉತ್ತಮ ಆಡಳಿತವನ್ನು ಖಚಿತಪಡಿಸುವ ತಮ್ಮ ಕ್ರಮಗಳ ಭಾಗವಾಗಿ ಶನಿವಾರ, ಸೆಪ್ಟೆಂಬರ್ 20, 2025 ರಂದು ಹಾಟ್‌ಲೈನ್ ಸಂಖ್ಯೆ 9851145045 ಅನ್ನು ಪ್ರಾರಂಭಿಸಿತು” ಎಂದು ಈ ವರದಿಯು ನಮೂದಿಸುತ್ತದೆ. ವರದಿಯ ಒಂದು ಭಾಗವನ್ನು ಕೆಳಗೆ ನೋಡಿ-

ನೇಪಾಳದ ಪ್ರಧಾನ ಮಂತ್ರಿ ಕಚೇರಿ ಮತ್ತು ಮಂತ್ರಿ ಮಂಡಳಿಯ (OPMCM) ಅಧಿಕೃತ ವೆಬ್‌ಸೈಟ್‌ನಲ್ಲಿ ಹುಡುಕಿದಾಗ, “ಹಲೋ ಸರ್ಕಾರ” ವಿಭಾಗದ ಅಡಿಯಲ್ಲಿ ಇದೇ ಸಂಖ್ಯೆಯು ನಮಗೆ ದೊರಕಿತು. ಪುಟದ ಸ್ಕ್ರೀನ್‌ಶಾಟ್ ಅನ್ನು ಕೆಳಗೆ ವೀಕ್ಷಿಸಿ –

ಆದ್ದರಿಂದ, ಹೇಳಿಕೆ ಸುಳ್ಳು.

*********************************************************************************

ಇದನ್ನೂ ಓದಿ:

ಗ್ರೇಟಾ ಥನ್‌ಬರ್ಗ್ ಬಂಧನದ ಬಗ್ಗೆ ಸ್ವೀಡನ್ ಇಸ್ರೇಲ್‌ಗೆ ಅಂತಿಮ ಎಚ್ಚರಿಕೆ ನೀಡಿದೆಯೇ? ಸತ್ಯ ಪರಿಶೀಲನೆ

ಭಾರತವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ರಫ್ತು ಮಾಡುವುದನ್ನು ಕಡಿಮೆ ಮಾಡುತ್ತಿದೆ ಎಂದು ರಜತ್ ಶರ್ಮಾ ವರದಿ ಮಾಡುತ್ತಿರುವ ಕ್ಲಿಪ್; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*