Don't Miss

ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆಯೇ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೈನ್ಯಕ್ಕೆ ಕಳುಹಿಸಿದರೇ? ಸತ್ಯ ಪರಿಶೀಲನೆ

ಗಾಜಾ಼ ಪಟ್ಟಿಯಲ್ಲಿ ನಡೆಯುತ್ತಿರುವ ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆ, ಹಮಾಸ್ ಹಠಾತ್ ದಾಳಿಯನ್ನು ಪ್ರಾರಂಭಿಸಿದ ನಂತರ, ಅನೇಕ ವೀಡಿಯೊಗಳು ಮತ್ತು ಚಿತ್ರಗಳು  ವಿವಿಧ ಹೇಳಿಕೆಗಳೊಂದಿಗೆ ಅಂತರ್ಜಾಲದಲ್ಲಿ ಪುಟಿದೆದ್ದಿವೆ. ವೈರಲ್ ಚಿತ್ರಗಳಲ್ಲೊಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಮಗನನ್ನು ಸೇನೆಗೆ ಸೇರಲು ಕಳುಹಿಸಿದ್ದಾರೆ ಎಂದು ಹೇಳಿಕೊಂಡಿದೆ.

ಈ ವೈರಲ್ ಟ್ವೀಟ್ ಬೆಂಜಮಿನ್ ನೆತನ್ಯಾಹುರವರು ಒಬ್ಬ ಯುವಕನೊಂದಿಗೆ ಇರುವ ಚಿತ್ರವನ್ನು ತೋರಿಸುತ್ತದೆ. ಟ್ವೀಟ್‌ನಲ್ಲಿ, “ಎಂತಹ ನಾಯಕ. ನಿಜವಾದ ದೇಶಭಕ್ತಿ: ಬೆಂಜಮಿನ್ ನೆತನ್ಯಾಹು ಹಮಾಸ್ ವಿರುದ್ಧದ ಯುದ್ಧದಲ್ಲಿ ಭಾಗವಹಿಸಲು ರಾಷ್ಟ್ರೀಯ ಕರ್ತವ್ಯಕ್ಕೆ ತಮ್ಮ ಮಗನನ್ನು ಕಳುಹಿಸುತ್ತಿದ್ದಾರೆ. ಇಸ್ರೇಲಿ ಸೇನೆ.”

ಸಂಘರ್ಷದ ನಡುವೆ ಹಮಾಸ್ ವಿರುದ್ಧ ಹೋರಾಡಲು ಬೆಂಜಮಿನ್ ನೆತನ್ಯಾಹು ರವರ ಮಗ ಇಸ್ರೇಲಿ ಸೇನೆಯನ್ನು ಸೇರಲಿದ್ದಾರೆ ಎಂದು ಟ್ವೀಟ್ ಹೇಳುತ್ತದೆ.

ಅದೇ ಹೇಳಿಕೆಯೊಂದಿಗೆ ಚಿತ್ರವನ್ನೂ ಇಲ್ಲಿಯೂ,ಇಲ್ಲಿಯೂ,ಮತ್ತು ಇಲ್ಲಿಯೂ ಹಂಚಿಕೊಳ್ಳಲಾಗಿದೆ.

ಈ ವೈರಲ್ ಚಿತ್ರ ಸತ್ಯ ಪರಿಶೀಲನೆ ನಡೆಸಲು ಡಿಜಿಟೈ ಇಂಡಿಯಾಗೆ ವಾಟ್ಸಾಪ್‌ನಲ್ಲಿ ಒಂದು ಕೋರಿಕೆ ಬಂತು.

FACT CHECK

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಗೂಗಲ್ ನಲ್ಲಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ಒಂದು ಫಲಿತಾಂಶದಲ್ಲಿ ಇಸ್ರೇಲಿ ಸೈನಿಕರನ್ನು ಬೆಂಬಲಿಸುವ ಇಸ್ರೇಲಿ ವೆಬ್‌ಸೈಟ್ ಆದ ಫ್ರೆಂಡ್ಸ್ ಆಫ್ ಲಿಬಿಯ ಈ ಪೋಸ್ಟ್‌ ಕಂಡುಬಂದಿತು. ಡಿಸೆಂಬರ್ 4, 2017ರ ಒಂದು ಪೋಸ್ಟ್‌ನಲ್ಲಿ, ಆ ವೆಬ್‌ಸೈಟ್ ಈ ಚಿತ್ರವನ್ನು ಪೋಸ್ಟ್‌ಗಾಗಿ ಹಂಚಿಕೊಂಡಿದೆ, ಇದರಲ್ಲಿರುವ ಹೇಳಿಕೆ “ಇಸ್ರೇಲಿ ಪ್ರಧಾನ ಮಂತ್ರಿಯವರ ಮಗ ಅವ್ನರ್ ನೆತನ್ಯಾಹು ರವರು ಸೇನಾ ಸೇವೆಯನ್ನು ಪೂರ್ಣಗೊಳಿಸಿದ್ದಾರೆ.”

ಇದರಿಂದಾಗಿ  ನಾವು ಬೆಂಜಮಿನ್ ನೆತನ್ಯಾಹು ರವರ ಮಗ ಅವ್ನರ್ ಅವರ ಹೆಚ್ಚಿನ ಚಿತ್ರಗಳನ್ನು ಹುಡುಕಲಾರಂಭಿಸಿದೆವು. ನಾವು ಕೀವರ್ಡ್ ಹುಡುಕಾಟವನ್ನು ನಡೆಸಿದಾಗ ಫಲಿತಾಂಶಗಳಲ್ಲಿ ದ ಟೈಮ್ಸ್ ಆಫ್ ಇಸ್ರೇಲ್‌ನ ಈ ಪೋಸ್ಟ್‌ ಕಂಡುಬಂದಿತು. ಡಿಸೆಂಬರ್ 1, 2014ರ ಈ ಲೇಖನದಲ್ಲಿ ನೆತನ್ಯಾಹು ರವರು ತಮ್ಮ ಮಗನನ್ನು ಕಡ್ಡಾಯ ಸೇನಾ ಸೇವೆಗೆ ಕಳಿಸಿಕೊಡುತ್ತಿರುವುದಾಗಿ ಹೇಳಲಾಗಿತ್ತು. ಸುದ್ದಿ ಪ್ರಕಟಣೆಯು ಅದೇ ಚಿತ್ರವನ್ನು, “ಡಿಸೆಂಬರ್ 01, 2014ರಂದು ಜೆರುಸಲೆಮ್ ನ ಅಮ್ಯುನಿಷನ್ ಹಿಲ್ ನಲ್ಲಿ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಮತ್ತು ಪತ್ನಿ ಸಾರಾರವರು ಮಗ ಅವ್ನರ್ ರವರೊಂದಿಗೆ ಕಾಣಿಸಿಕೊಂಡರು.” ಎಂಬ ಶೀರ್ಷಿಕೆಯೊಂದಿಗೆ ಪ್ರಕಟಿಸಿತು.

ಲೇಖನದಲ್ಲಿ, ” ತಾವು ಬಸ್ಸು ಹತ್ತುವುದನ್ನು ಕಾಣಲು ಬಂದ ಪೋಷಕರು ಹೃತ್ಪೂರ್ವಕವಾಗಿ ವಿದಾಯ ಹೇಳಿದ ನಂತರ ಇಸ್ರೇಲ್‌ನ ಪ್ರಧಾನ ಮಂತ್ರಿಯ ಕಿರಿಯ ಮಗ ಅವ್ನರ್ ನೆತನ್ಯಾಹು ರವರು ಸೋಮವಾರ ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ತಮ್ಮ ಮಿಲಿಟರಿ ಸೇವೆಯನ್ನು ಪ್ರಾರಂಭಿಸಿದರು.” ಎಂದು ಹೇಳಲಾಗಿದೆ.

ಯಹೂದಿ, ಡ್ರೂಜ಼್ ಅಥವಾ ಕರ್ಕೇಶಿಯನ್ ಆಗಿರುವ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಇಸ್ರೇಲಿ ಪ್ರಜೆಯು ಇಸ್ರೇಲ್ ರಕ್ಷಣಾ ಪಡೆಗಳಲ್ಲಿ ಸೇವೆ ಸಲ್ಲಿಸಬೇಕೆಂದು ಕಡ್ಡಾಯವಾಗಿಸುವ ನೀತಿಯನ್ನು ಇಸ್ರೇಲ್ ಹೊಂದಿದೆ. ಇದಕ್ಕೆ ಕೆಲವು ವಿನಾಯಿತಿಗಳಿವೆ. ನಾಗರಿಕರನ್ನು ಸೇರಿಸಿಕೊಂಡ ನಂತರ, ಅವರು ನಿರ್ದಿಷ್ಟ ದಿನಗಳವರೆಗೆ ಸೈನ್ಯದಲ್ಲಿ ಸೇವೆ ಸಲ್ಲಿಸಬೇಕು. ಪುರುಷರು ಕನಿಷ್ಠ 32 ತಿಂಗಳು ಸೇವೆ ಸಲ್ಲಿಸುವ ನಿರೀಕ್ಷೆಯಿದ್ದರೆ, ಮಹಿಳೆಯರು ಕನಿಷ್ಠ 24 ತಿಂಗಳು ಸೇವೆ ಸಲ್ಲಿಸುವರೆಂದು ನಿರೀಕ್ಷಿತವಾಗಿರುತ್ತದೆ. ನಾಗರಿಕರು ಗಣ್ಯ ಯುದ್ಧ ಘಟಕಗಳಿಂದ ಯುದ್ಧ ಬೆಂಬಲ ಘಟಕಗಳವರೆಗೆ ಇರುವ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಾರೆ.

ಆದ್ದರಿಂದ, ಎಂಬ ಹೇಳಿಕೆ ಸುಳ್ಳು.

Claim/ಹೇಳಿಕೆ: ಇಸ್ರೇಲ್ ನ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷದ ನಡುವೆ ಇಸ್ರೇಲಿ ಸೈನ್ಯಕ್ಕೆ ಸೇರಲು ತಮ್ಮ ಮಗ ಅವ್ನರ್ ರವರನ್ನು ಕಳುಹಿಸಿದ್ದಾರೆ.

Conclusion/ಕಡೆನುಡಿ: ಈ ವೈರಲ್ ಚಿತ್ರವು 2014ರಲ್ಲಿ ಬೆಂಜಮಿನ್ ನೆತನ್ಯಾಹು ರವರು ತಮ್ಮ ಮಗ ಕಡ್ಡಾಯ ಸೇನಾ ಸೇವೆಗೆ ಸೇರ್ಪಡೆಯಾಗುವ ಮೊದಲು ಅವರನ್ನು ಬೀಳ್ಗೊಡಲು ಹೋದಾಗಿನ ಚಿತ್ರ.

ರೇಟಿಂಗ್:ತಪ್ಪು ನಿರೂಪಣೆ???

[ಇದನ್ನೂ ಓದಿ: ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ ;

ಉತ್ತರ ಪ್ರದೇಶ, ಬಿಹಾರದ ಜನರನ್ನು ದೆಹಲಿಯಿಂದ ಓಡಿಸಬೇಕು ಎಂದು ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ]

One comment

Leave a Reply

Your email address will not be published. Required fields are marked *

*