Don't Miss

ಪ್ರಧಾನಿ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ಬೃಹತ್ ಪ್ರತಿಭಟನೆಗಳು ಭುಗಿಲೆದ್ದವೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿ ನಡೆದ ಬೃಹತ್ ಪ್ರತಿಭಟನೆಗಳು ಮತ್ತು ಅಡಚಣೆಗಳನ್ನು ತೋರಿಸುವುದೆನ್ನುವ ದೃಶ್ಯಾವಳಿಗಳು.

ಕಡೆನುಡಿ/Conclusion: ಹೇಳಿಕೆ ನಿಜ. ವೀಡಿಯೊದ ಕೀಫ್ರೇಮ್ ಗಳು, ಸುದ್ದಿ ವರದಿಗಳು ಮತ್ತು ಸಮಯಸೂಚಿಗಳು ಈ ಹೇಳಿಕೆಯು ಬಹುಪಾಲು ನಿಖರವಾಗಿದೆ ಎಂದು ಖಚಿತಪಡಿಸುತ್ತದೆ. ಸೆಪ್ಟೆಂಬರ್ 23, 2025 ರಂದು ಮಿಲಾನ್‌ನಲ್ಲಿ ನಡೆದ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗಳ ಸಮಯದಲ್ಲಿ ದಾಖಲೆಯಾದ ಘರ್ಷಣೆಗಳೊಂದಿಗೆ ವೀಡಿಯೊ ಹೊಂದಿಕೆಯಾಗುತ್ತದೆ.

ರೇಟಿಂಗ್/Rating: ನಿಜ

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.


ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಪ್ಯಾಲೆಸ್ಟೈನ್ ರಾಜ್ಯವನ್ನು ಗುರುತಿಸಲು ನಿರಾಕರಿಸಿದ ನಂತರ ಹಿಂಸಾತ್ಮಕವಾಗಿ ಮಾರ್ಪಟ್ಟ ಪ್ಯಾಲೆಸ್ಟೈನ್ ಪರ ಪ್ರತಿಭಟನೆಯ ದೃಶ್ಯಗಳನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘ಪಾರ್ಟಿಸನ್_12’ ಅಂತಹ ಒಂದು ಹೇಳಿಕೆ ಮತ್ತು ವೀಡಿಯೊವನ್ನು “PM ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸಲು ನಿರಾಕರಿಸಿದ ನಂತರ ಇಟಲಿಯಲ್ಲಿನ ಪರಿಸ್ಥಿತಿ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಸ್ಟ್ ಅನ್ನು ಕೆಳಗೆ ನೋಡಬಹುದು:

ದೃಢೀಕೃತ X ಖಾತೆ ‘TimesAlgebraIND’ ಕೂಡ ಅದೇ ದೃಶ್ಯಾವಳಿಯನ್ನು ಶೀರ್ಷಿಕೆಯ ಒಂದು ಭಾಗದೊಂದಿಗೆ ಹಂಚಿಕೊಂಡಿದ್ದಾರೆ: “ಈಗ, ತೀವ್ರ-ಎಡ ಮೂಲಭೂತವಾದಿಗಳು ಮತ್ತು ವಲಸೆ ಗ್ಯಾಂಗ್‌ಗಳು ಇಟಲಿಯಾದ್ಯಂತ ಗಲಭೆ ಎಬ್ಬಿಸುತ್ತಿದ್ದಾರೆ. ಅವರು ಬಂದರುಗಳನ್ನು ನಿರ್ಬಂಧಿಸುತ್ತಿದ್ದಾರೆ, ಆಸ್ತಿಗಳಿಗೆ ಹಾನಿಯುಂಟು ಮಾಡುತ್ತಿದ್ದಾರೆ.” ಸೆಪ್ಟೆಂಬರ್ 23, 2025 ರಂದು ಪೋಸ್ಟ್ ಮಾಡಲಾದ ಈ ಪೋಸ್ಟ್ ಅನ್ನು ಇಲ್ಲಿ ನೋಡಿ:

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ನಿಜವೆಂದು ಕಂಡುಕೊಂಡಿತು. ಹಲವಾರು ವಿಶ್ವಾಸಾರ್ಹ ಸುದ್ದಿ ಸಂಸ್ಥೆಗಳು ಈ ಘಟನೆ ಮತ್ತು ಹಿಂಸಾಚಾರವನ್ನು ವರದಿ ಮಾಡಿವೆ. ವೀಡಿಯೊವನ್ನು ತಪ್ಪಾಗಿ ವಿತರಿಸಲಾಗಿದೆ ಎಂದು ಯಾವುದೇ ಪುರಾವೆಗಳಿಲ್ಲ ಮತ್ತು ಈ ಹೇಳಿಕೆಯು ಇಟಲಿಯ ಮಿಲನ್‌ನಲ್ಲಿ ನಡೆದ ಇತ್ತೀಚಿನ ಘಟನೆಗಳ ನ್ಯಾಯಯುತ ಪ್ರಾತಿನಿಧ್ಯವಾಗಿ ನಿಲ್ಲುತ್ತದೆ.

ಆಕೆಯ ನಿರ್ಧಾರದ ಬಗ್ಗೆ ತಿಳಿಯಲು ನಾವು ಮೊದಲು “ಪ್ಯಾಲೆಸ್ಟೈನ್ ಕುರಿತಾಗಿ ಮೆಲೋನಿಯ ನಿಲುವು” ಎಂಬ ಶಬ್ದಗಳೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಮತ್ತು ಹಮಾಸ್ ಅನ್ನು ಹೊರಪಡಿಸಿದರೆ ಮಾತ್ರ ಇಟಲಿಯು ಪ್ಯಾಲೆಸ್ಟೈನ್ ಅನ್ನು ಗುರುತಿಸುತ್ತದೆ ಎಂದು ಮೆಲೋನಿ ಸೆಪ್ಟೆಂಬರ್ 23, 2025 ರಂದು ಹೇಳಿದ್ದರು. ಯುರೋನ್ಯೂಸ್‌ನ ವರದಿಯಲ್ಲಿ ಹೇಳಿರುವಂತೆ, “ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ ಮತ್ತು ಸರ್ಕಾರದಿಂದ ಹಮಾಸ್ ಹೊರಗುಳಿದರೆ” ಮಾತ್ರ PM ಮೆಲೋನಿ ಪ್ಯಾಲೆಸ್ಟೈನ್ ಅನ್ನು ಗುರುತಿಸುತ್ತಾರೆ. ವರದಿಯ ಒಂದು ತುಣುಕನ್ನು ಕೆಳಗೆ ನೋಡಿ:

ಸೆಪ್ಟೆಂಬರ್ 24, 2025 ರಂದು ರಾಯಿಟರ್ಸ್ ಪ್ರಕಟಿಸಿದ ಮತ್ತೊಂದು ವರದಿಯು ಸಹ ಆಕೆಯ ನಿರ್ಧಾರದ ಬಗ್ಗೆ ಮಾತನಾಡುತ್ತದೆ. “ಪ್ಯಾಲೆಸ್ಟೈನ್ ಅನ್ನು ಗುರುತಿಸುವುದರ ಬಗ್ಗೆ ನನಗೆ ವಿರೋಧವಿಲ್ಲ, ಆದರೆ ನಾವು ಸರಿಯಾದ ಆದ್ಯತೆಗಳನ್ನು ದೃಢಪಡಿಸಿಕೊಳ್ಳಬೇಕು” ಎಂದು PM ಮೆಲೋನಿಯವರ ಹೇಳಿಕೆಯನ್ನು ವರದಿಯು ಎತ್ತಿ ತೋರಿಸುತ್ತದೆ. ಈ ಹೇಳಿಕೆಯು, ಅಸ್ತಿತ್ವದಲ್ಲಿಲ್ಲದ ರಾಜ್ಯವನ್ನು ಗುರುತಿಸುವುದರಿಂದ ಪ್ರತಿಕೂಲ ಪರಿಣಾಮ ಉಂಟಾಗಬಹುದು ಎಂಬ ಆಕೆಯ ಸರ್ಕಾರದ ದೃಷ್ಟಿಕೋನವನ್ನು ಪ್ರತಿಧ್ವನಿಸಿತು.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯನ್ನು ಉದ್ದೇಶಿಸಿ PM ಮೆಲೋನಿ ನೀಡಿದ ಪೂರ್ಣ ಭಾಷಣ ಮತ್ತು ಹೇಳಿಕೆಗಳನ್ನು ಇಲ್ಲಿ ಯೂಟ್ಯೂಬ್ ನಲ್ಲಿ ವೀಕ್ಷಿಸಬಹುದು.

ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ನಂತರ, ಈ ಹೇಳಿಕೆಗೆ ಹೊಂದಿಕೆಯಾಗುವ ಹಲವಾರು ವರದಿಗಳು ನಮಗೆ ದೊರಕಿದವು. ಉದಾಹರಣೆಗೆ, ಸೆಪ್ಟೆಂಬರ್ 23, 2025 ರ ಟೈಮ್ಸ್ ಆಫ್ ಇಂಡಿಯಾದ ವರದಿಯು ಇಟಲಿಯ ಮಿಲನ್‌ನಲ್ಲಿನ ಗೊಂದಲವನ್ನು ಎತ್ತಿತೋರಿಸಲು ಅದೇ ದೃಶ್ಯಗಳನ್ನು ಬಳಸಿದೆ. ವರದಿಯ ಪ್ರಕಾರ, “ಪ್ರದರ್ಶನಕಾರರ ಗುಂಪೊಂದು ಕೇಂದ್ರ ರೈಲು ನಿಲ್ದಾಣಕ್ಕೆ ನುಗ್ಗಿ, ಗಲಭೆ ಪೊಲೀಸರೊಂದಿಗೆ ಘರ್ಷಣೆ ನಡೆಸಿದಾಗ ಪ್ರತಿಭಟನೆಗಳು ಉಲ್ಬಣಗೊಂಡವು.” ಲೇಖನದ ಒಂದು ತುಣುಕನ್ನು ಕೆಳಗೆ ನೋಡಿ:

ಸೆಪ್ಟೆಂಬರ್ 22, 2025 ರಂದು ದ ಗಾರ್ಡಿಯನ್ ಪ್ರಕಟಿಸಿದ ಇತರ ವರದಿಗಳೂ ಸಹ ಇದೇ ರೀತಿಯ ದೃಶ್ಯಗಳನ್ನು ಬಳಸಿಕೊಂಡು ಘಟನೆಯ ಕುರಿತು ವರದಿ ಮಾಡಿವೆ. ಆದ್ದರಿಂದ, ಈ ಹೇಳಿಕೆಯನ್ನು ವಿಶ್ವಾಸಾರ್ಹ ವರದಿಗಳು ದೃಢೀಕರಿಸುತ್ತವೆ ಮತ್ತು ಈ ಹೇಳಿಕೆಯಲ್ಲಿ ಹಂಚಿಕೊಂಡಿರುವ ದೃಶ್ಯಗಳೂ ಸಹ ಅಧಿಕೃತವಾಗಿವೆ.

ಆದ್ದರಿಂದ, ಈ ಹೇಳಿಕೆ ನಿಜ.

******************************************************

ಇದನ್ನೂ ಓದಿ:

ಈಗಿನಿಂದ ಪ್ರತಿ ತಿಂಗಳ ಎಲ್ಲಾ ಭಾನುವಾರಗಳು ಮತ್ತು ಶನಿವಾರಗಳಂದು ಬ್ಯಾಂಕುಗಳು ಮುಚ್ಚಿರುತ್ತವೆಯೇ? ಸತ್ಯ ಪರಿಶೀಲನೆ

ನೇಪಾಳ ಪ್ರತಿಭಟನಾಕಾರರು ಭಾರತದ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*