Don't Miss

‘ಹೋಮ್ ಅಲೋನ್ 2’ ಚಿತ್ರದ ಮಗು ಡೊನಾಲ್ಡ್ ಟ್ರಂಪ್ ರವರನ್ನು ಜೆಫ್ರಿ ಎಪ್ಸೈನ್ ಬಗ್ಗೆ ಕೇಳಿದನೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ ಚಿತ್ರದಲ್ಲಿ, ಹುಡುಗ ಟ್ರಂಪ್ ಅವರನ್ನು ‘ಕ್ಷಮಿಸಿ, ಮಿಸ್ಟರ್ ಎಪ್ಸೈನ್ ಎಲ್ಲಿ?’ ಎಂದು ಕೇಳುತ್ತಾನೆ ಎಂದು ದೃಶ್ಯಗಳು ಹೇಳುತ್ತವೆ.

ಕಡೆನುಡಿ/Conclusion : ಹೇಳಿಕೆ ಸಂಪೂರ್ಣವಾಗಿ ಸುಳ್ಳು. ದೃಶ್ಯಾವಳಿಯನ್ನು ಬದಲಾಯಿಸಿ, ತಿರುಚಿ, ಚಿತ್ರದ ಮೂಲ ಸಂಭಾಷಣೆಗಳನ್ನು ಅತಿಕ್ರಮಿಸಲಾಗಿದೆ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು–Five rating

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಕ್ರಿಸ್ ಕೊಲಂಬಸ್ ನಿರ್ದೇಶನದ ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್’ (1992) ಚಿತ್ರದ ದೃಶ್ಯವನ್ನು ತೋರಿಸುವ ಒಂದು ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇನ್‌ಸ್ಟಾಗ್ರಾಮ್ ಬಳಕೆದಾರ ‘ಅಮೇರಿಕನ್‌ಲಾಫ್’ ಒಂದು ರೀಲ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಕೆವಿನ್ (ಮೆಕೌಲೆ ಕಲ್ಕಿನ್ ಪಾತ್ರ) ಡೊನಾಲ್ಡ್ ಟ್ರಂಪ್ ರವರನ್ನು ಮಿಸ್ಟರ್ ಎಪ್ಸ್ಟೈನ್‌ ಹತ್ತಿರ ತಲುಪುವ ದಾರಿ ಕೇಳುತ್ತಾನೆ ಎಂದು ಹೇಳಲಾಗಿದೆ. ಈ ರೀಲ್ 980,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ, ಅದನ್ನು ಕೆಳಗೆ ನೋಡಬಹುದು –

 

 

View this post on Instagram

 

A post shared by AmericaLaugh (@americalaugh)

ಮತ್ತೊಬ್ಬ ಫೇಸ್‌ಬುಕ್ ಬಳಕೆದಾರ ‘ರಿವರ್ ಸಿಟಿ ಎಂಟರ್‌ಟೈನ್‌ಮೆಂಟ್ ಗ್ರೂಪ್’ ಅದೇ ಕ್ಲಿಪ್ ಅನ್ನು: ಹೋಮ್ ಅಲೋನ್ ನಲ್ಲಿ ಡೊನಾಲ್ಡ್ ಎಪ್ಸ್ಟೈನ್ ಅತಿಥಿ ಪಾತ್ರ. ಪೋಸ್ಟ್ ಅನ್ನು ಇಲ್ಲಿ ನೋಡಬಹುದು

ಜೆಫ್ರಿ ಎಪ್ಸ್ಟೈನ್ ಒಬ್ಬ ಶ್ರೀಮಂತ ಫೈನಾನ್ಶಿಯರ್, ಆತನನ್ನು 2019 ರಲ್ಲಿ ಅಪ್ರಾಪ್ತ ವಯಸ್ಕರನ್ನು ಒಳಗೊಂಡ ಲೈಂಗಿಕ ಕಳ್ಳಸಾಗಣೆಯ ಆರೋಪದ ಮೇಲೆ ಬಂಧಿಸಲಾಗಿತ್ತು; ಆ ವರ್ಷದ ಕೊನೆಗೆ ಆತ ವಿವಾದಾತ್ಮಕ ರೂಪದಲ್ಲಿ ಜೈಲಿನಲ್ಲಿ ಮರಣಹೊಂದಿದ್ದರು. ಹಲವು ವರದಿಗಳ ಪ್ರಕಾರ, ಆತ ಡೊನಾಲ್ಡ್ ಟ್ರಂಪ್ ಸೇರಿದಂತೆ ಉನ್ನತ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿದ್ದರು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಹೇಳಿಕೆ ಸಂಪೂರ್ಣವಾಗಿ ಸುಳ್ಳು ಎಂದು ಕಂಡುಹಿಡಿಯಿತು. ‘ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್ (1992)’ ಚಿತ್ರದ ಮೂಲ ದೃಶ್ಯದಲ್ಲಿ ಅಂತಹ ಯಾವುದೇ ಸಂಭಾಷಣೆ ಇಲ್ಲ. ಚಿತ್ರದಲ್ಲಿ ಬಾಲನಟ ಮತ್ತು ಡೊನಾಲ್ಡ್ ಟ್ರಂಪ್ ಇರುವಂತಹ ಅದೇ ದೃಶ್ಯವಿದೆ, ಆದರೂ ಸಂಭಾಷಣೆ ಬೇರೆ. ಹೇಳಿಕೆಯಲ್ಲಿರುವ ಆಡಿಯೊವನ್ನು ತಿದ್ದಲಾಗಿದೆ ಮತ್ತು ಮೂಲ ಸಂಭಾಷಣೆಗಳನ್ನು ಆಡಿಯೊ ಬದಲಾವಣೆಯ ಮೂಲಕ ಅತಿಕ್ರಮಿಸಲಾಗಿದೆ.

ಸಾಮಾಜಿಕ ಜಾಲತಾಣದ ಹೇಳಿಕೆಯನ್ನು ಪರಿಶೀಲಿಸಲು, ನಾವು “ಹೋಮ್ ಅಲೋನ್ 2 ನಲ್ಲಿ ಡೊನಾಲ್ಡ್ ಟ್ರಂಪ್” ಎಂಬ ಶಬ್ದಾವಳಿಯನ್ನು ಬಳಸಿ ಗೂಗಲ್ ಹುಡುಕಾಟ ನಡೆಸಿದೆವು, ನಮಗೆ ಚಲನಚಿತ್ರ ದೃಶ್ಯದ ಮೂಲ ಕ್ಲಿಪ್ ಅನ್ನು ತೋರಿಸುವ ಹಲವಾರು ಕ್ಲಿಪ್‌ಗಳು ಯೂಟ್ಯೂಬ್ ನಲ್ಲಿ ದೊರಕಿದವು. ನಿಜವಾದ ದೃಶ್ಯದಲ್ಲಿ ಆಗಿರುವ ಮಾತುಕತೆ ಹೀಗಿದೆ: “ಎಕ್ಸ್‌ಕ್ಯೂಸ್ ಮಿ, ಲಾಬಿ ಎಲ್ಲಿದೆ?” ಎಂದು ಕೆವಿನ್ ಕೇಳುತ್ತಾನೆ ಮತ್ತು ಅದಕ್ಕೆ ಉತ್ತರವಾಗಿ, “ಹಾಲ್ ನ ಕೊನೆಗೆ ಹೋಗಿ ಎಡಕ್ಕೆ” ಎಂದು ಟ್ರಂಪ್ ಹೇಳುತ್ತಾರೆ. ಹಲವು ವೀಡಿಯೊಗಳ ಮೂಲಕ ಇದನ್ನು ಪರಿಶೀಲಿಸಲಾಗಿದೆ. ಅಂತಹ ಒಂದು ವೀಡಿಯೊವನ್ನು ಇಲ್ಲಿ ನೋಡಬಹುದು.

ಡೈಲಾಗ್ ಗಳನ್ನು ಪರಿಶೀಲಿಸಲು ಹೋಮ್ ಅಲೋನ್ 2: ಲಾಸ್ಟ್ ಇನ್ ನ್ಯೂಯಾರ್ಕ್‌ನ ಸಂಭಾಷಣೆಗಳನ್ನು ಗಮನಿಸಿದಾಗ, ನಮಗೆ ಎಲ್ಲಿಯೂ ಎಪ್ಸ್ಟೀನ್ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ. ಕೆಳಗಿನ ಪ್ರತಿಲಿಪಿಯನ್ನು ನೋಡಿ:

ಹಲವರಿಗೆ ತಿಳಿದಿರುವಂತೆ ಈ ದೃಶ್ಯವನ್ನು ಟ್ರಂಪ್ ಒಡೆತನದ ‘ದ ಪ್ಲಾಜಾ’ ಹೋಟೆಲ್‌ನಲ್ಲಿ ಚಿತ್ರೀಕರಿಸಲಾಗಿದೆ, ಇದರಲ್ಲಿ ಟ್ರಂಪ್ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ.

ಚಿತ್ರದಲ್ಲಿ ಟ್ರಂಪ್ ಅವರ ಅತಿಥಿ ಪಾತ್ರದ ಕುರಿತು ಹೆಚ್ಚಿನ ಹುಡುಕಾಟ ನಡೆಸಿದಾಗ, ನಮಗೆ 2023 ರಲ್ಲಿ ದ ಗಾರ್ಡಿಯನ್ ಪ್ರಕಟಿಸಿದ ವರದಿ ದೊರಕಿತು. ಟ್ರಂಪ್ “ಸಿನೆಮಾದೊಳಗೆ ನುಸುಳಿಕೊಂಡರು” ಎಂದು ಚಿತ್ರದ ನಿರ್ದೇಶಕ ಕ್ರಿಸ್ ಕೊಲಂಬಸ್ ಹೇಳಿದರೆ, ಕೊಲಂಬಸ್ “ತಮ್ಮನ್ನು ಅತಿಥಿ ಪಾತ್ರ ವಹಿಸಲು ಬೇಡಿಕೊಂಡರು” ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ವರದಿಯ ಒಂದು ತುಣುಕನ್ನು ಕೆಳಗೆ ನೋಡಿ:

ನಿರ್ದೇಶಕ ಕ್ರಿಸ್ ಕೊಲಂಬಸ್ ರವರು ಈ ಕ್ಲಿಪ್ ಅನ್ನು ಕತ್ತರಿಸಲು ಸಾಧ್ಯವಿಲ್ಲ ಏಕೆಂದರೆ “ತಮ್ಮನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸಲು ಯೋಗ್ಯರಲ್ಲ ಎಂದು ಪರಿಗಣಿಸಿ  ದೇಶದಿಂದ ಹೊರಗೆ ಕಳಿಸಲಾಗಬಹುದೇನೇ… ” ಎಂದು ಹೇಳಿದರು ಎಂಬುದನ್ನು ಏಪ್ರಿಲ್ 14, 2025 ರಂದು ಸ್ಯಾನ್ ಫ್ರಾನ್ಸಿಸ್ಕೋ ಕ್ರಾನಿಕಲ್ ಪ್ರಕಟಿಸಿದ ಮತ್ತೊಂದು ಲೇಖನದಲ್ಲಿ ವರದಿ ಮಾಡಲಾಗಿದೆ, ಇದು ಟ್ರಂಪ್ ಆಡಳಿತದ ಇತ್ತೀಚಿನ ಸಾಮೂಹಿಕ ಗಡೀಪಾರು ಯೋಜನೆಗಳನ್ನು ವ್ಯಂಗ್ಯವಾಗಿ ಉಲ್ಲೇಖಿಸವಮ್ತನಿಸುತ್ತದೆ. ಈ ಲೇಖನವು ಚಿತ್ರದ ಮೂಲ ಕ್ಲಿಪ್ ಅನ್ನು ಸಹ ಒಳಗೊಂಡಿದ್ದು ಅದರಲ್ಲಿ ಎಪ್ಸ್ಟೈನ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಲೇಖನದಿಂದ ತುಣುಕನ್ನು ಕೆಳಗೆ ನೋಡಿ:

ಯಾವುದೇ ಮಾಧ್ಯಮ ಮುಖ್ಯವಾಹಿನಿಗಳು, ಚಲನಚಿತ್ರ ಆರ್ಕೈವ್‌ಗಳು ಅಥವಾ ಅಧಿಕೃತ ಬಿಡುಗಡೆಗಳು ಬದಲಾದ ಸಂವಾದವನ್ನು ತೋರಿಸಿಲ್ಲ. ಹೇಳಿಕೆಯಲ್ಲಿನ ವೀಡಿಯೊದಲ್ಲಿನ ಧ್ವನಿಯನ್ನು ತಿದ್ದಲಾಗಿದ್ದು ಅದು ಮೂಲ ಧ್ವನಿಯನ್ನು ಅತಿಕ್ರಮಿಸುತ್ತದೆ.

ಆದ್ದರಿಂದ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.

ಇದನ್ನೂ ಓದಿ:

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*