ಹೇಳಿಕೆ/Claim:: ಸೆಪ್ಟೆಂಬರ್ 2025ರ ನೇಪಾಳ ಪ್ರತಿಭಟನೆಯ ಸಮಯದಲ್ಲಿ, ಜನರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸುತ್ತಿದ್ದರು.
ಕಡೆನುಡಿ/Conclusion: ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಪ್ರಸಾರವಾಗುತ್ತಿರುವ ದೃಶ್ಯಗಳು ಸಿಕ್ಕಿಂ ರಾಜ್ಯೋತ್ಸವದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಸೆರೆಹಿಡಿಯಲಾದವು, ಇವು ನೇಪಾಳ ಪ್ರತಿಭಟನೆಗಳೊಂದಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ.
ರೇಟಿಂಗ್/Rating: ದಾರಿ ತಪ್ಪಿಸುವಂಥದ್ದು —
ನೇಪಾಳದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ವ್ಯಾಪಕ ಬೆಂಬಲವನ್ನು ತೋರಿಸಲಾಗಿದೆ ಎನ್ನುವ ವೀಡಿಯೊವನ್ನು ಸೆಪ್ಟೆಂಬರ್ 10, 2025 ರಂದು, X ಬಳಕೆದಾರರಾದ ‘KajalKushwaha’ ಪೋಸ್ಟ್ ಮಾಡಿದ್ದರು. ಹಿಂದಿಯಲ್ಲಿನ ಶೀರ್ಷಿಕೆಯು ಹೀಗಿದೆ: “देखो चमचों मोदी नेपाल में भी छाया हुआ है‚ तुम लोग डूब कर मर क्यों नहीं जाते आहुल गांडी को साथ में लेकर के।”. ಕನ್ನಡದ ಅನುವಾದ ಹೀಗಿದೆ “ನೋಡಿ (ರಾಹುಲ್ ಗಾಂಧಿ) ಅನುಯಾಯಿಗಳೇ, ಮೋದಿ ನೇಪಾಳದಲ್ಲಿಯೂ ಮಿಂಚುತ್ತಿದ್ದಾರೆ, ನೀವೆಲ್ಲ ಮುಳುಗಿ ಸಾಯಬಾರದಾ ‘ಅಹುಲ್’ [ರಾಹುಲ್ ಅನ್ನು ಉಲ್ಲೇಖಿಸಿ] ಗಾಂಡಿಯನ್ನು ಜೊತೆಸೇರಿಸಿಕೊಂಡು.”
ಭಾರತೀಯ ಧ್ವಜಗಳು ಮತ್ತು ಸಂಭ್ರಮಾಚರಣೆಯ ಘೋಷವಾಕ್ಯಗಳೊಂದಿಗೆ ಮೋದಿಯವರನ್ನು ಸ್ವಾಗತಿಸುವ ಬ್ಯಾನರ್ ಹಿಡಿದಿರುವ ಸಾಂಪ್ರದಾಯಿಕ ಉಡುಗೆ ತೊಟ್ಟ ಜನರ ರೋಮಾಂಚಕ ಮೆರವಣಿಗೆಯನ್ನು ವೀಡಿಯೊ ತೋರಿಸುತ್ತದೆ. ಪೋಸ್ಟ್ ಸುಮಾರು 236,000 ವೀಕ್ಷಣೆಗಳನ್ನು ಮತ್ತು 15,000 ಕ್ಕೂ ಹೆಚ್ಚು ಲೈಕ್ ಗಳನ್ನು ಗಳಿಸಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ:
देखो चमचों मोदी नेपाल में भी छाया हुआ है‚ तुम लोग डूब कर मर क्यों नहीं जाते आहुल गांडी को साथ में लेकर के। pic.twitter.com/6Xs0L9wiTN
— Kajal Kushwaha (@_KajalKushwaha) September 10, 2025
ಮತ್ತೊಬ್ಬ X ಬಳಕೆದಾರರು ಇದೇ ಹೇಳಿಕೆಯನ್ನು ಇಲ್ಲಿ ಹಿಂದಿಯಲ್ಲಿ ಹಂಚಿಕೊಂಡಿದ್ದಾರೆ.
ಅದರ ಅನುವಾದ ಹೀಗಿದೆ: “ನೇಪಾಳದ ಜನರು ನೇಪಾಳದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ತೆಗೆದುಹಾಕಿ ರಾಷ್ಟ್ರೀಯವಾದಿ ಸರ್ಕಾರವನ್ನು ಬಯಸುತ್ತಾರೆ. ಅಲ್ಲಿಯೂ ನರೇಂದ್ರ ಮೋದಿಯವರ ಅವಶ್ಯಕತೆಯಿದೆ. ಮತ್ತು ಭಾರತದಲ್ಲಿ, ಕೆಲವರು ಮೋದಿಯನ್ನು ತೆಗೆದುಹಾಕಲು 11 ವರ್ಷಗಳಿಂದ “ಸಾಮ, ದಾನ, ದಂಡ, ಭೇದ” ತಂತ್ರವನ್ನು ಬಳಸುತ್ತಿದ್ದಾರೆ, ಆದರೆ ಜನರು ಸ್ವತಃ ಜನಾರ್ದನರಾಗಿರುವುದರಿಂದ ಏನೂ ಪ್ರಯೋಜನವಾಗುತ್ತಿಲ್ಲ”
नेपाल में कम्युनिस्ट सरकार को हटा कर नेपाल की जनता राष्ट्रवादी सरकार चाहती है
एक नरेंद्र मोदी की दरकार वहां भी हैऔर भारत में कुछ लोग 11 साल से मोदी को हटाने के लिए साम दाम दंड भेद की रणनीति अपना रहे है पर कुछ हो नहीं रहा क्योंकि जनता ही जनार्दन है #Nepal #Modi #NepalProtests… pic.twitter.com/ZFZygrlnKx
— Dr. Archana Singh (@AnaArchana) September 10, 2025
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಬಂತು. ಮೇ 2025ರಲ್ಲಿ ಸಿಕ್ಕಿಂನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ಮೋದಿಯನ್ನು ಸ್ವಾಗತಿಸುತ್ತಿದ್ದ ದೃಶ್ಯ ಎಂದು ಬ್ಯಾನರ್ನಲ್ಲಿ ಸ್ಪಷ್ಟವಾಗಿ ಕಾಣುತ್ತದೆ.
ಸೆಪ್ಟೆಂಬರ್ 2025ರ ಆರಂಭದಲ್ಲಿ ನೇಪಾಳದ ಜೆನ್ Z ನೇತೃತ್ವದಲ್ಲಿ ನಡೆದ ಬಂಡಾಯದ ಸಮಕಾಲಿಕವಾಗಿ ಈ ತಪ್ಪು ಮಾಹಿತಿಯು ಹೊರಬಂದಂತೆ ತೋರುತ್ತದೆ, ಈ ಬಂಡಾಯದಲ್ಲಿ ಯುವಕರು ಭ್ರಷ್ಟಾಚಾರ, ಸ್ವಜನಪಕ್ಷಪಾತ (ನೆಪೊಟಿಸಮ್) ಮತ್ತು ಸಾಮಾಜಿಕ ಮಾಧ್ಯಮ ನಿಷೇಧದ ವಿರುದ್ಧ ಪ್ರತಿಭಟಿಸಿದರು, ಇದು ಮುಂದುವರೆದು ಸೆಪ್ಟೆಂಬರ್ 9 ರಂದು ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರ ರಾಜೀನಾಮೆಗೆ ಕಾರಣವಾಯಿತು.
ಮೂಲ ವೀಡಿಯೊದಲ್ಲಿನ ಬ್ಯಾನರ್ನಲ್ಲಿ ಸ್ಪಷ್ಟವಾಗಿ “ಸಿಕ್ಕಿಮೀಸ್ 300 ಪಂಗಡಗಳಿಂದ ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಸಿಕ್ಕಿಂಗೆ ಸ್ವಾಗತ. ತಕ್ಥೋ ಲಾಂಗ್ಚುಂಬೋ” ಎಂದು ಬರೆಯಲಾಗಿದೆ, ಇದರಿಂದ ಇದು ಭಾರತೀಯ ರಾಜ್ಯ ಸಿಕ್ಕಿಂ ನ ವೀಡಿಯೊ ಎಂಬುದು ತಿಳಿಯುತ್ತದೆ. ವೀಡಿಯೊ ಫ್ರೇಮ್ಗಳ ದೃಶ್ಯ ಪರಿಶೀಲನೆ ನಡೆಸಿದಾಗ ಇದು ನೇಪಾಳದ ಜನರಲ್ಲ, ಭಾರತೀಯ ತ್ರಿವರ್ಣ ಧ್ವಜಗಳು ಮತ್ತು ಸಾಂಪ್ರದಾಯಿಕ ಸಿಕ್ಕಿಂನ ಉಡುಪನ್ನು ತೋರಿಸುತ್ತದೆ. ಜೂಮ್ ಮಾಡಿದ ಆವೃತ್ತಿಯನ್ನು ಕೆಳಗೆ ವೀಕ್ಷಿಸಿ:
ವೀಡಿಯೊ ಕೀಫ್ರೇಮ್ಗಳಿಂದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ ನಂತರ, ಈ ವೀಡಿಯೊವನ್ನು ಸಿಕ್ಕಿಂನ 50ನೇ ರಾಜ್ಯೋತ್ಸವ ವಾರ್ಷಿಕ ಆಚರಣೆಯ ಸಮಯದಲ್ಲಿ ಮೇ 29, 2025 ರ ದಿನಾಂಕದಂದು ಸೆರೆಹಿಡಿಯಲಾಗಿತ್ತು ಎಂದು ನಮಗೆ ಕಂಡುಬಂತು. ಮೇ 29 ರಂದು ಪ್ರಕಟವಾದ ಅಧಿಕೃತ PIB ವರದಿಯ ಪ್ರಕಾರ, ಪ್ರಧಾನಿ ಮೋದಿಯವರು ವೀಡಿಯೊ ಕಾನ್ಫರೆನ್ಸ್ ಮೂಲಕ ಜನರನ್ನು ಉದ್ದೇಶಿಸಿ ಸಿಕ್ಕಿಂ ಜನರನ್ನುಈ ವಿಶೇಷ ದಿನದಂದು ಅಭಿನಂದಿಸಿದ್ದಾರೆ ಎಂದು ದೃಢಪಡಿಸಲಾಗಿದೆ.
ಪ್ರಧಾನಿ ಮೋದಿಯವರ ವರ್ಚುವಲ್ ಭಾಷಣಕ್ಕೆ ಸಂಬಂಧಿಸಿದಂತೆ ಸಿಕ್ಕಿಂ ಸರ್ಕಾರವು ತಮ್ಮ ವೆಬ್ಸೈಟ್ನಲ್ಲಿ ಅಧಿಕೃತ ಪತ್ರಿಕಾ ಪ್ರಕಟಣೆಯನ್ನೂ ಸಹ ಬಿಡುಗಡೆ ಮಾಡಿತ್ತು. ಇದನ್ನು ಇಲ್ಲಿ ಕಾಣಬಹುದು.
ಮೂಲ ಸನ್ನಿವೇಶವು ಸುಖಿಮ್ ಯಕ್ತುಂಗ್ ಸಪ್ಸೋಕ್ ಸಾಂಗ್ಚುಂಬೋ ಅಡಿಯಲ್ಲಿ ಲಿಂಬೂ (ಲಿಂಬು) ಪಂಗಡದವರು ಮೋದಿಯವರನ್ನು ಸ್ವಾಗತಿಸಲು ಆಯೋಜಿಸಿದ್ದ ರ್ಯಾಲಿಯನ್ನು ತೋರಿಸುತ್ತದೆ, ಆಗ ಮೋದಿಯವರು ಹವಾಮಾನ ವೈಪರೀತ್ಯದಿಂದಾಗಿ ತಮ್ಮ ಭೌತಿಕ/ವೈಯಕ್ತಿಕ ಭೇಟಿಯನ್ನು ರದ್ದುಗೊಳಿಸಿ ಕಾರ್ಯಕ್ರಮವನ್ನು ಉದ್ದೇಶಿಸಿ ವರ್ಚುವಲ್ ಆಗಿ ಮಾತನಾಡಿದ್ದರು. ಸರಿಯಾದ ಸನ್ನಿವೇಶದೊಂದಿಗೆ ಇಲ್ಲಿ ಫೇಸ್ಬುಕ್ ಪೋಸ್ಟ್ ಅನ್ನು ನೋಡಿ.
ಈ ಹೇಳಿಕೆಗಳು ಮತ್ತು ವೀಡಿಯೊಗಳನ್ನು ನೇಪಾಳದಲ್ಲಿ ಪ್ರಧಾನಿ ಮೋದಿಯವರಂತಹ ನಾಯಕತ್ವವನ್ನು ಒತ್ತಾಯಿಸಿದರೆನ್ನಲಾದ ನೇಪಾಳ ಪ್ರತಿಭಟನೆಗಳಿಗೆ ತಪ್ಪಾಗಿ ಆರೋಪಿಸಲಾಗಿದೆ. ಸಿಕ್ಕಿಂ ರಾಜ್ಯದ 50ನೇ ರಾಜ್ಯೋತ್ಸವದ ವಾರ್ಷಿಕ ಆಚರಣೆಯ ಸಂದರ್ಭದಲ್ಲಿ ಈ ದೃಶ್ಯಗಳನ್ನು ಸೆರೆಹಿಡಿಯಲಾಗಿತ್ತು ಮತ್ತು ಇವು ಸೆಪ್ಟೆಂಬರ್, 2025ರಲ್ಲಿ ನಡೆದ ನೇಪಾಳ ಪ್ರತಿಭಟನೆಯದ್ದಲ್ಲ.
ಆದ್ದರಿಂದ, ಈ ಹೇಳಿಕೆ ದಾರಿತಪ್ಪಿಸುವಂಥದ್ದು.
ಇದನ್ನೂ ಓದಿ: