ಹೇಳಿಕೆ/Claim: ಸೆಪ್ಟೆಂಬರ್ 14, 2025 ರಂದು ನಡೆದ ಭಾರತ ಮತ್ತು ಪಾಕಿಸ್ತಾನದ ನಡುವಿನ ವಿಶ್ವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ಸಮಯದಲ್ಲಿ, ಡಿಜೆ ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ‘ಜಲೇಬಿ ಬೇಬಿ’ ನುಡಿಸಿದರು.
ಕಡೆನುಡಿ/Conclusion: ಹೇಳಿಕೆ ನಿಜ. ವಿಶ್ವಾಸಾರ್ಹ ಸುದ್ದಿವಾಹಿನಿಗಳು ಮತ್ತು ವರದಿಗಳ ಜೊತೆಗೆ ಹಲವಾರು ಪ್ರತ್ಯಕ್ಷದರ್ಶಿಗಳೂ ಸಹ ಇದನ್ನು ದೃಢಪಡಿಸಿದ್ದಾರೆ..
ರೇಟಿಂಗ್/Rating : ನಿಜ–
DP ವಿಶ್ವ ಏಷ್ಯಾ ಕಪ್‌ನಲ್ಲಿ ಬಹು ನಿರೀಕ್ಷಿತ ಮತ್ತು ವಿವಾದಾತ್ಮಕ ಭಾರತ- ಪಾಕಿಸ್ತಾನ ಪಂದ್ಯವು ಸೆಪ್ಟೆಂಬರ್ 14, 2025 ರಂದು ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಿತು. X ಬಳಕೆದಾರ ‘ImHvardhan21’ ಕ್ರೀಡಾಂಗಣದ ಡಿಜೆಯು ಪಾಕಿಸ್ತಾನದ ರಾಷ್ಟ್ರಗೀತೆಯ ಬದಲಿಗೆ ಜನಪ್ರಿಯ ಹಾಡು “ಜಲೇಬಿ ಬೇಬಿ” ಯನ್ನು ತಪ್ಪಾಗಿ ನುಡಿಸಿದ್ದಾರೆ ಎಂಬ ಹೇಳಿಕೆ ಹಂಚಿಕೊಂಡರು. ವೀಡಿಯೊ ಕ್ಲಿಪ್ ಅನ್ನು ಒಳಗೊಂಡ ಪೋಸ್ಟ್ 431,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ:
DJ played Jalebi Baby song on Pakistan National anthem 🤣#INDvsPAK #BoycottINDvPAK pic.twitter.com/rJBmfvqedI
— 𝗩 𝗔 𝗥 𝗗 𝗛 𝗔 𝗡 (@ImHvardhan21) September 14, 2025
ರಾಷ್ಟ್ರಗೀತೆಯ ಮುನ್ನ ಪಾಕಿಸ್ತಾನ ತಂಡವನ್ನು ಮುಜುಗರಕ್ಕೀಡುಮಾಡುವ ಹಾಸ್ಯಮಯ ಪ್ರಮಾದವನ್ನು ಈ ಹೇಳಿಕೆಯು ಸೂಚಿಸಿತು. ಇದೇ ರೀತಿಯ ಹೇಳಿಕೆಯನ್ನು “ಪಾಕಿಸ್ತಾನಕ್ಕೆ ಮತ್ತೊಂದು ಅವಮಾನ – ಪಾಕಿಸ್ತಾನ ರಾಷ್ಟ್ರಗೀತೆಯ ಬದಲಿಗೆ ಜಲೇಬಿ ಬೇಬಿ ಹಾಡನ್ನು ನುಡಿಸಿದ ಡಿಜೆ ” ಎಂಬ ಶೀರ್ಷಿಕೆಯೊಂದಿಗೆ ಮತ್ತೊಬ್ಬ ದೃಢೀಕೃತ X ಬಳಕೆದಾರ ‘MeghUpdates’ ಸಹ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಅನ್ನು ಇಲ್ಲಿ ನೋಡಿ:
Another humiliation for Pakistan- as DJ played Jalebi Baby song instead of Pakistan National anthem 😂🇵🇰 pic.twitter.com/G74bGCNWGr
— Megh Updates 🚨™ (@MeghUpdates) September 14, 2025
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಹೇಳಿಕೆ ನಿಜವೆಂದು ಕಂಡುಕೊಂಡಿತು. ಪಂದ್ಯದ ಟಾಸ್‌ಗೆ ಮುನ್ನ ಎರಡೂ ತಂಡಗಳು ಸಾಲಾಗಿ ನಿಂತಿದ್ದು ಪ್ರೇಕ್ಷಕರೂ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಜೇಸನ್ ಡೆರುಲೋ ಒಳಗೊಂಡ ಕೆನಡಾದ ಕಲಾವಿದ ಟೆಷರ್ ರವರ 2021ರ ಹಿಟ್ ಹಾಡು “ಜಲೇಬಿ ಬೇಬಿ” ಅನಿರೀಕ್ಷಿತವಾಗಿ ಕ್ರೀಡಾಂಗಣದ ಸ್ಪೀಕರ್‌ಗಳಲ್ಲಿ ಕೇಳಿಬಂತು, ಇದು ಗೋಚರ ಗೊಂದಲಕ್ಕೆ ಕಾರಣವಾಯಿತು.
ಹಿಂದೂಸ್ತಾನ್ ಟೈಮ್ಸ್‌ನ ವರದಿ (ಇಲ್ಲಿ) ಸೇರಿದಂತೆ ಹಲವಾರು ಸುದ್ದಿ ವರದಿಗಳಲ್ಲಿ ನಾವು ಈ ಘಟನೆಯನ್ನು ಪರಿಶೀಲಿಸಿದೆವು. “ಪಾಕಿಸ್ತಾನದ ರಾಷ್ಟ್ರಗೀತೆ ನುಡಿಸುವ ಸಮಯ ಬಂದಾಗ, ಡಿಜೆಯು ತಪ್ಪಿದಾಗ ಟೆಷರ್ ಮತ್ತು ಜೇಸನ್ ಡೆರುಲೋ ಅವರ ಅತ್ಯಂತ ಜನಪ್ರಿಯ ಹಾಡಾದ ‘ಜಲೇಬಿ ಬೇಬಿ’ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದ ಸುತ್ತಲೂ ಪ್ರತಿಧ್ವನಿಸಿತು” ಎಂದು ಹೇಳಿಕೆ ತಿಳಿಸುತ್ತದೆ. ವರದಿಯ ಇನ್ನೊಂದು ವಿಭಾಗದ ತುಣುಕನ್ನು ಕೆಳಗೆ ನೋಡಿ:
“ಸ್ಪೀಕರ್ ಗಳು ಪಾಕಿಸ್ತಾನದ ರಾಷ್ಟ್ರಗೀತೆ ನುಡಿಸಿ ತಪ್ಪನ್ನು ತ್ವರಿತವಾಗಿ ಸರಿಪಡಿಸಲಾಯಿತು” ಎಂಬುದನ್ನು ಗಮನಿಸಿದ NDTVಯ ಮತ್ತೊಂದು ವರದಿಯೂ ಸಹ ಇದನ್ನು ದೃಢಪಡಿಸಿದೆ. ಈ ಲೇಖನದ ಒಂದು ತುಣುಕನ್ನು ಕೆಳಗೆ ನೋಡಿ
ಘಟನೆ ನಡೆದ ನಂತರ ‘ಜಲೇಬಿ ಬೇಬಿ’ ಹಾಡಿನ ಸೃಷ್ಟಿಕರ್ತರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಸೆಪ್ಟೆಂಬರ್ 14, 2025 ರಂದು, ಇದು ಹಾಡಿನ ಕುರಿತು ತನ್ನ ಮನಸ್ಸಿನಲ್ಲಿದ್ದ ಯೋಜನೆಯಾಗಿರಲಿಲ್ಲ ಎಂದು ಆತ ಹಾಸ್ಯವಾಗಿ ಬರೆಯುತ್ತಾ (ಪಾಕಿಸ್ತಾನದ ರಾಷ್ಟ್ರಗೀತೆಯನ್ನು ಉಲ್ಲೇಖಿಸಿ) “ಜಲೇಬಿ ಬೇಬಿ ಯಾವಾಗಲೂ ಸರಿಯಾದ ಗೀತೆ” ಎಂಬ ಶೀರ್ಷಿಕೆಯೊಂದಿಗೆ ಘಟನೆಯ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಅನ್ನು ಇಲ್ಲಿ ನೋಡಿ:
View this post on Instagram
ಪಾಕಿಸ್ತಾನಿ ರಾಷ್ಟ್ರಗೀತೆಯ ಬದಲಿಗೆ ‘ಜಲೇಬಿ ಬೇಬಿ’ ಹಾಡನ್ನು ನುಡಿಸಲಾಗಿದೆ ಎಂದು ವೀಡಿಯೊ ದೃಶ್ಯಗಳು, ಮಾಧ್ಯಮ ವರದಿಗಳು ಮತ್ತು ಹಾಡಿನ ಸೃಷ್ಟಿಕರ್ತ ಸ್ವತಃ ದೃಢಪಡಿಸಿದ್ದಾರೆ. ಹೀಗಾಗಿ, ಈ ಹೇಳಿಕೆ ನಿಜ.
ಇದನ್ನೂ ಓದಿ:
ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ