Don't Miss

ಬಿಹಾರದಲ್ಲಿ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ಯಾತ್ರೆಯ ಸಮಯದಲ್ಲಿ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ನಡೆಸಲಾಯಿತೇ? ಸತ್ಯ ಪರಿಶೀಲನೆ

Claim: ಬಿಹಾರದಲ್ಲಿ ರಾಹುಲ್ ಗಾಂಧಿಯವರ ಮತದಾರ ಅಧಿಕಾರ ರ‍್ಯಾಲಿಯ ಸಮಯದಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಬಲವಂತವಾಗಿ ನಡೆಸಲಾಯಿತು.

Conclusion : ಈ ಹೇಳಿಕೆ ದಾರಿ ತಪ್ಪಿಸುವಂಥದ್ದು. ಡಿಕೆ ಶಿವಕುಮಾರ್ ರವರು ರಾಹುಲ್ ಗಾಂಧಿಯವರೊಂದಿಗೆ ವಾಹನದಲ್ಲಿ ಸೇರಿಕೊಂಡರು ಮತ್ತು ವೈರಲ್ ಕ್ಲಿಪ್ ಅನ್ನು ಆತ ವಾಹನವನ್ನು ಏರುವ ಮೊದಲ ಸಮಯದಿಂದ ಆಯ್ದು ತೆಗೆದುಕೊಳ್ಳಲಾಗಿದೆ.

Rating : ದಾರಿ ತಪ್ಪಿಸುವಂಥದ್ದು

************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************

ಇತ್ತೀಚೆಗೆ, ರಾಹುಲ್ ಗಾಂಧಿಯವರ ‘ಮತದಾರ ಅಧಿಕಾರ’ ರ‍್ಯಾಲಿಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಬಲವಂತವಾಗಿ ನಡೆಯುವಂತೆ ಮಾಡಲಾಯಿತು ಎಂದು ಹಲವಾರು ಬಳಕೆದಾರರು ‘X’ ನಲ್ಲಿ ಆರೋಪಿಸಿದ್ದಾರೆ. ವಾಹನದಲ್ಲಿ ಅವರಿಗೆ ಜಾಗ ಸಿಗಲಿಲ್ಲ ಮತ್ತು ಇತರ ನಾಯಕರು ಅವರನ್ನು ಕಡೆಗಣಿಸಿದರೆಂದು ಬಳಕೆದಾರರು ಹೇಳಿಕೊಂಡರು.

ಪರಿಶೀಲಿತ X ಬಳಕೆದಾರರು ರ‍್ಯಾಲಿಯ 30 ಸೆಕೆಂಡುಗಳ ಕ್ಲಿಪ್ ಅನ್ನು ಹಂಚಿಕೊಂಳ್ಳುತ್ತಾ ರಾಹುಲ್ ಗಾಂಧಿಯವರ ಬಿಹಾರದ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ಕರ್ನಾಟಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು “ಸಾಮಾನ್ಯ ಕಾರ್ಯಕರ್ತರಂತೆ ನಡೆಸಲಾಯಿತು” ಎಂದು ಆರೋಪಿಸಿದ್ದಾರೆ. ಈ ಪೋಸ್ಟ್ ಸುಮಾರು 340,000 ವೀಕ್ಷಣೆಗಳು ಮತ್ತು 4,000 ಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ –

 

ಮತ್ತೊಬ್ಬ X ಬಳಕೆದಾರರು ಅದೇ ಕ್ಲಿಪ್ ಅನ್ನು ಹಂಚಿಕೊಂಡು “ಡಿ.ಕೆ ಶಿವಕುಮಾರ್ ರವರಿಗೆ ಜೀಪಿನಲ್ಲಿ ಸ್ಥಳವಿಲ್ಲ, ಅವರನ್ನು ಹೊರಗೆ ನಿಲ್ಲಿಸಲಾಯಿತು” ಎಂದು ಹೇಳಿಕೊಂಡದ್ದಾರೆ. ಪೋಸ್ಟ್ ಅನ್ನು ಇಲ್ಲಿ ನೋಡಿ.

 

FACT CHECK

ಡಿಜಿಟೈ ಇಂಡಿಯಾ ಈ ವಿಷಯದ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ದಾರಿತಪ್ಪಿಸುವ ಸುದ್ದಿ ಎಂದು ಕಂಡುಬಂತು. ವೈರಲ್ ಆದ ವೀಡಿಯೊವು ಘಟನೆಯ ಅನುಕ್ರಮಣವನ್ನು ತಪ್ಪಾಗಿ ಪ್ರತಿನಿಧಿಸಲು ಆಯ್ದ ಕ್ಲಿಪ್ ಆಗಿದೆ. ಸಂಪೂರ್ಣ ಘಟನೆಯನ್ನು ನೋಡಿದರೆ, ಶಿವಕುಮಾರ್ ರವರನ್ನು ಬದಿಯಲ್ಲಿ ನಿಲ್ಲಿಸಲಾಗಿಲ್ಲ, ಆತ ಮುಂದೆ ಮೆರವಣಿಗೆಯಲ್ಲಿ ಜೀಪ್‌ಗೆ ಸೇರಿಕೊಂಡರು.

ಈ ಕಾರ್ಯಕ್ರಮವು ಚುನಾವಣಾ ಸಮಗ್ರತೆಯ ಮೇಲೆ ಕೇಂದ್ರೀಕರಿಸುವ ಆರೋಪಿಸಲಾಗಿರುವ “ಮತ ಚೋರಿ” (ಮತ ಕಳ್ಳತನ) ಸಮಸ್ಯೆಗಳನ್ನು ಪರಿಹರಿಸಲು ಬಿಹಾರದಲ್ಲಿ ಕಾಂಗ್ರೆಸ್ ನೇತೃತ್ವದ ಅಭಿಯಾನವಾದ ಮತದಾರರ ಅಧಿಕಾರ ಯಾತ್ರೆಯ ಸಂದರ್ಭದಲ್ಲಿ ನಡೆಯಿತು. ರಾಹುಲ್ ಗಾಂಧಿಯವರು ಯಾತ್ರೆಯನ್ನು ಮುನ್ನಡೆಸಿದರು, ಮತ್ತು ತೇಜಸ್ವಿ ಯಾದವ್, ಪಪ್ಪು ಯಾದವ್, ದೀಪಂಕರ್ ಭಟ್ಟಾಚಾರ್ಯ ಮತ್ತು ಶಿವಕುಮಾರ್ ರವರಂತಹ ಮಿತ್ರರು ಅಂತರ್-ರಾಜ್ಯ ಒಗ್ಗಟ್ಟನ್ನು ಪ್ರದರ್ಶಿಸಲು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ನಾವು ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ X ಹ್ಯಾಂಡಲ್ ಅನ್ನು ನೋಡಿದೆವು, ಅಲ್ಲಿ ಅವರು ಅಧಿಕೃತ ಸ್ಪಷ್ಟೀಕರಣವನ್ನು ನೀಡಿದ್ದಾರೆ.  ಸರ್ಕ್ಯೂಟ್ ಹೌಸ್‌ಗೆ ಹೋಗುವ ಮಾರ್ಗದಲ್ಲಿ ರಾಹುಲ್ ಗಾಂಧಿಯವರೊಂದಿಗೆ ಜೀಪ್ ಹತ್ತುವ ಮುನ್ನ ಸೆರೆಹಿಡಿಯಲಾದ ಚಿತ್ರ/ವಿಡಿಯೋವನ್ನು ಹಂಚಿಕೊಳ್ಳಲಾಗಿದೆ ಎಂದು ಆಗಸ್ಟ್ 24, 2025 ರಂದು, ಶಿವಕುಮಾರ್ X ನಲ್ಲಿ ಪೋಸ್ಟ್ ಮಾಡಿದ್ದಾರೆ.

“ಬಲಪಂಥೀಯ ಪರಿಸರ”ವು ಮತ ಕಳ್ಳತನದಂತಹ ಪ್ರಮುಖ ವಿಷಯಗಳ ಮೇಲೆ ಕೇಂದ್ರೀಕರಿಸುವ ಬದಲು “ಛಾಯಾಚಿತ್ರ ಕೋನಗಳು ಮತ್ತು ಆಸನ ವ್ಯವಸ್ಥೆಗಳ” ಹಿಂದೆ ಬಿದ್ದಿದ್ದಾರೆ ಎಂದು ಅವರು ಆರೋಪಿಸಿದರು.

ಅವರ ಪೋಸ್ಟ್ ಅನ್ನು ಇಲ್ಲಿ ನೋಡಿ.

 

ಡಿಕೆ ಶಿವಕುಮಾರ್ ರವರ ಪೋಸ್ಟ್‌ನಲ್ಲಿ ಲಗತ್ತಿಸಲಾದ ಫೋಟೋಗಳಲ್ಲಿ ರಾಹುಲ್ ಗಾಂಧಿಯವರು ಜೀಪಿನಲ್ಲಿ ಸಂವಿಧಾನದ ಪ್ರತಿಯನ್ನು ಹಿಡಿದಿರುವುದನ್ನು ಸ್ಪಷ್ಟವಾಗಿ ಕಾಣಬಹುದು, ಅವರ ಸುತ್ತಲೂ ಶಿವಕುಮಾರ್ ಸೇರಿದಂತೆ ಇತರ ನಾಯಕರೂ ಇದ್ದಾರೆ. ಅಂತಹ ಒಂದು ಚಿತ್ರವನ್ನು ಕೆಳಗೆ ನೋಡಿ:

ಇದಲ್ಲದೆ, ರಾಹುಲ್ ಗಾಂಧಿಯವರ ಅಧಿಕೃತ ವಾಹಿನಿಯ ಲೈವ್‌ಸ್ಟ್ರೀಮ್‌ನಿಂದ ತೆಗೆದ ವಿಸ್ತೃತ ಕ್ಲಿಪ್‌ನಲ್ಲಿ ಬಿಹಾರ ಸಂಸದ ಪಪ್ಪು ಯಾದವ್ ರವರು ಗಾಡಿಯಲ್ಲಿ ಹತ್ತಲು ಶಿವಕುಮಾರ್ ರವರಿಗೆ ಸಹಾಯ ಮಾಡುವುದನ್ನು ಕಾಣಬಹುದು. ಇದು 21:50ಕ್ಕೆ ಆರಂಭವಾಗಿ 21:55 ರ ಹೊತ್ತಿಗೆ ಶಿವಕುಮಾರ್ ರವರು ಜೀಪ್ ಏರಿರುವುದನ್ನು ನೋಡಬಹುದು.

ನೇರಪ್ರಸಾರದ ಸ್ಕ್ರೀನ್‌ಶಾಟ್ ನೋಡಿ:

ಇದಲ್ಲದೆ, ಆಗಸ್ಟ್ 24 ರಂದು, ಪ್ರಕಟವಾದ ಹೇಳಿಕೆಗಳನ್ನು “ಸುಳ್ಳು ಮತ್ತು ದಾರಿತಪ್ಪಿಸುವಂಥವು” ಎಂದು ಶಿವಕುಮಾರ್ ರವರು ತಳ್ಳಿಹಾಕಿದ್ದಾರೆ ಎಂದು PTI  ಅಧಿಕೃತ ವರದಿಯೂ ತಿಳಿಸಿದೆ. ಯಾವುದೇ ವಿಶ್ವಾಸಾರ್ಹ ಸುದ್ದಿ ಮೂಲಗಳು ಈ ಹೇಳಿಕೆಯಲ್ಲಿ ಹಂಚಿಕೊಳ್ಳಲಾದ ನಿರ್ಲಕ್ಷ್ಯದ ಕಥನವನ್ನು ಬೆಂಬಲಿಸುವುದಿಲ್ಲ.

ಮತ್ತೊಂದೆಡೆ, ದ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನಂತಹ ಅನೇಕ ವಿಶ್ವಾಸಾರ್ಹ ಸುದ್ದಿವಾಹಿನಿಗಳು ರ‍್ಯಾಲಿಯಲ್ಲಿ ಡಿ.ಕೆ. ಶಿವಕುಮಾರ್ ರವರ ಪಾತ್ರವನ್ನು ಎತ್ತಿ ತೋರಿಸುತ್ತಾ ಆತ ಜೀಪಿನ ಮೇಲಿರುವ ಚಿತ್ರವನ್ನು ತೋರಿಸಿವೆ.

ವರದಿಯ ತುಣುಕನ್ನು ಕೆಳಗೆ ವೀಕ್ಷಿಸಿ:

 

ಹೀಗಾಗಿ, ಈ ಹೇಳಿಕೆ ದಾರಿತಪ್ಪಿಸುವಂತಿದೆ ಎನ್ನಬಹುದು.

************************************************************

ಇದನ್ನೂ ಓದಿ:

ಈ ಸಿಸಿಟಿವಿ ಕ್ಲಿಪ್ ಭಾರತದಲ್ಲಿ ಕೇವಲ 49 ಸೆಕೆಂಡುಗಳಲ್ಲಿ ಯುವತಿಯನ್ನು ಅಪಹರಿಸಿರುವುದನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಕ್ಲಿಪ್‌, ರಜನಿಕಾಂತ್ ರವರು ತಮ್ಮ ಮನೆಯಲ್ಲಿ ಬೀಳುವುದು ತೋರಿಸುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸುತ್ತದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*