ಹೇಳಿಕೆ/Claim : ಪ್ಯಾಲೆಸ್ಟೀನಿಯನ್ ನಿಯೋಗಕ್ಕೆ ಅಮೆರಿಕ ವೀಸಾ ನಿರಾಕರಿಸಿದ ನಂತರ, ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು (UNGA) ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಜಿನೀವಾಕ್ಕೆ ಸ್ಥಳಾಂತರಿಸಲು ಮತ ಚಲಾಯಿಸಿತು.
ಕಡೆನುಡಿ/Conclusion :ಈ ಹೇಳಿಕೆ ಸಂಪೂರ್ಣವಾಗಿ ಸುಳ್ಳು. 80ನೇ UNGA ಅಧಿವೇಶನವು ನಿಗದಿಯಾದಂತೆ ನ್ಯೂಯಾರ್ಕ್‌ನಲ್ಲಿ ಸೆಪ್ಟೆಂಬರ್ 9, 2025 ರಂದು ಪ್ರಾರಂಭವಾಯಿತು, ಮತ್ತು ಅದರಲ್ಲಿ ಯಾವುದೇ ಮತದಾನ ನಡೆಯಲಿಲ್ಲ.
ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು–
*************************************************************************************
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯು (UNGA) ತನ್ನ ಸೆಪ್ಟೆಂಬರ್ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಜಿನೀವಾಗೆ ಸ್ಥಳಾಂತರಿಸಲು ಮತ ಚಲಾಯಿಸಿದೆ ಎಂದು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದ್ದಾರೆ. ಪರಿಶೀಲಿತ X ಬಳಕೆದಾರ ‘timand2037’ ಈ ಮುಂದಿನ ಶೀರ್ಷಿಕೆಯ ಒಂದು ಭಾಗದೊಂದಿಗೆ ಇಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: “ಪ್ಯಾಲೆಸ್ಟೀನಿಯನ್ ಹಕ್ಕುಗಳಿಗೆ ಮೀಸಲಾಗಿರುವ ಸೆಪ್ಟೆಂಬರ್ ವಿಭಾಗವನ್ನು ನಿಗದಿಪಡಿಸಲಾಗಿದೆ”
ಈ ಪೋಸ್ಟ್ ನಲ್ಲಿ ” U.S. ಪ್ಯಾಲೆಸ್ಟೀನಿಯನ್ ನಿಯೋಗವನ್ನು ನಿಷೇಧಿಸಿದ ನಂತರ UN ಅಸೆಂಬ್ಲಿಯು ಜಿನೀವಾಕ್ಕೆ ಸ್ಥಳಾಂತರಗೊಂಡಿದೆ” ಎಂಬ ಶೀರ್ಷಿಕೆಯೊಂದಿಗೆ ಒಂದು ಚಿತ್ರವೂ ಒಳಗೊಂಡಿದೆ. ಇದು ಸುಮಾರು 24,000 ಲೈಕ್‌ಗಳನ್ನು ಮತ್ತು 717,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಇಲ್ಲಿ ವೀಕ್ಷಿಸಬಹುದು.
UN General Assembly votes to move its September session from New York to Geneva after Washington refuses visas to the Palestinian delegation. There is a scheduled September segment dedicated to Palestinian rights. https://t.co/tD1rYr9hOY pic.twitter.com/h70KV3cJmL
— tim anderson (@timand2037) September 7, 2025
ಇನ್ನೂ ಹಲವಾರು ಬಳಕೆದಾರರು ಇಂತಹ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
UN General Assembly is moving to Geneva by a vote of 154 to 2.
📌 Desire is for the PA to request a protective force which would bypass the Security Council and a US Veto pic.twitter.com/D8OKkeRQ4K
— KHAL (@Hal9000_T1) September 5, 2025
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ನಡೆಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಬಂತು. ಸೆಪ್ಟೆಂಬರ್ 9, 2025 ರಂದು ಪ್ರಾರಂಭವಾದ 80 ನೇ UNGA ಅಧಿವೇಶನವು ನ್ಯೂಯಾರ್ಕ್‌ನಲ್ಲಿ ನಿಗದಿಯಾದಂತೆ ನಡೆಯಿತು. ಯು.ಎಸ್. ಪ್ಯಾಲೆಸ್ಟೀನಿಯನ್ ಅಧಿಕಾರಿಗಳಿಗೆ ವೀಸಾಗಳನ್ನು ನಿರಾಕರಿಸಿತ್ತು ಮತ್ತು ಈ ಕಾರಣ ಸ್ಥಳಾಂತರದ ಕರೆಗಳು ಕೇಳಿಬಂದ್ದಿದ್ದವಾದರೂ ಸಭೆಯನ್ನು ಸ್ಥಳಾಂತರಿಸಲು ಯಾವುದೇ ಮತ ಚಲಾಯಿಸಲಾಗಲಿಲ್ಲ.
ಜನರಲ್ ಅಸೆಂಬ್ಲಿಯಲ್ಲಿ ಅಂತಹ ಯಾವುದೇ ಮತದಾನ ನಡೆದಿಲ್ಲ ಎಂದು UN ವಕ್ತಾರರು X ವೇದಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕೆಳಗಿನ ಪೋಸ್ಟ್ ಅನ್ನು ನೋಡಿ.
📢 We’ve seen recently a high volume of misinformation regarding moving the General Assembly’s high-level session out of New York.
The UN Spokesperson clarifies that there was no such vote in the General Assembly & we are not aware of any preparations being made in that regard.
— UN Spokesperson (@UN_Spokesperson) September 8, 2025
UNGAಯ 80ನೇ ಅಧಿವೇಶನವು ಸೆಪ್ಟೆಂಬರ್ 9, 2025 ರಂದು ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾಯಿತು ಎಂದು ದೃಢೀಕರಿಸುವ ವಿಶ್ವಸಂಸ್ಥೆಯು ಪ್ರಕಟಿಸಿದ ಅಧಿಕೃತ ವರದಿಯನ್ನು ಸಹ ನಾವು ಪರಿಶೀಲಿಸಿದೆವು. “80 ನೇ ಅಧಿವೇಶನದ ಅಧ್ಯಕ್ಷರಾದ H.E. ಅನ್ನಾಲೆನಾ ಬೇರ್‌ಬಾಕ್ ರವರು ಸೆಪ್ಟೆಂಬರ್ 9, 2025ರಂದು ಮಧ್ಯಾಹ್ನ 3 ಗಂಟೆಗೆ (ನ್ಯೂಯಾರ್ಕ್ ಸ್ಥಳೀಯ ಸಮಯ) ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 80ನೇ ಅಧಿವೇಶನವನ್ನು ಉದ್ಘಾಟಿಸಿದರು” ಎಂಬುದರ ಕುರಿತು ವರದಿಯು ಸ್ಪಷ್ಟವಾಗಿ ಹೇಳುತ್ತದೆ.
📢 Annalena Baerbock @UN_PGA was sworn in on 9 Sep. as President of the 80th session of 🇺🇳#UNGA in NY.
Guided by #BetterTogether, she will work with all 193 Member States to foster unity in challenging times & strengthen the @UN for today, for tomorrow & for generations to come. pic.twitter.com/Df3btbiFf3
— UN DESA DISD (@UNDESASocial) September 12, 2025
ಅನಾಡೋಲು ಅಜಾನ್ಸಿ ನ್ಯೂಸ್ ಪ್ರಕಟಿಸಿದ ಮತ್ತೊಂದು ವರದಿಯಲ್ಲಿ, ಯಾವುದೇ ಮತದಾನ ನಡೆದಿಲ್ಲ ಮತ್ತು ಸ್ಥಳಾಂತರಗೊಳ್ಳುವ ಯಾವುದೇ ಯೋಜನೆಗಳಿಲ್ಲ ಎಂದು UN ವಕ್ತಾರ ಸ್ಟೆಫಾನ್ ಡುಜಾರಿಕ್ ಹೇಳಿರುವುದನ್ನು ಸೂಚಿಸಲಾಗಿದೆ. ಡುಜಾರಿಕ್ ರವರು ಹೇಳಿರುವ ಪ್ರಕಾರ, “ಸಾಮಾನ್ಯ ಸಭೆಯ ಉನ್ನತ ಮಟ್ಟದ ಅಧಿವೇಶನವನ್ನು ನ್ಯೂಯಾರ್ಕ್‌ನಿಂದ ಹೊರಗೆ ಸ್ಥಳಾಂತರಿಸಲು ಯಾವುದೇ ಸಿದ್ಧತೆಗಳು ನಡೆಯುತ್ತಿವೆ ಎಂಬುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ,” ವರದಿಯ ಒಂದು ತುಣುಕನ್ನು ಕೆಳಗೆ ನೋಡಿ-
ಮತ್ತೊಂದೆಡೆ, ಅಲ್ ಜಜೀರಾ ಪ್ರಕಟಿಸಿದ ಲೇಖನವೂ ಸಹ ಸಭೆ ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾಯಿತು ಎಂದು ದೃಢಪಡಿಸಿದೆ. ಲೇಖನದ ಒಂದು ತುಣುಕನ್ನು ಕೆಳಗೆ ನೋಡಿ –
ಹೀಗಾಗಿ, ಪ್ಯಾಲೇಸ್ಟಿನೀ ನಿಯೋಗವು ವೀಸಾ ನಿರಾಕರಣೆಗಳ ಸಮಸ್ಯೆಯನ್ನು ಎದುರಿಸಿದ್ದರೂ, ಸ್ಥಳಾಂತರದ ಯಾವುದೇ ದೃಢೀಕರಣವಿಲ್ಲ. UNGAಯ 80 ನೇ ಅಧಿವೇಶನವು ಈಗಾಗಲೇ ನ್ಯೂಯಾರ್ಕ್‌ನಲ್ಲಿ ಪ್ರಾರಂಭವಾಗಿದೆ ಮತ್ತು ಅಂತಹ ಯಾವುದೇ ಮತದಾನ ನಡೆದಿಲ್ಲ.
ಆದ್ದರಿಂದ ಹೇಳಿಕೆ ಸಂಪೂರ್ಣವಾಗಿ ಸುಳ್ಳು.
************************************************************************************
ಇದನ್ನೂ ಓದಿ: