Don't Miss

ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯದ ಕಟ್ಟಡದಲ್ಲಿ ‘SURRENDER’ (ಶರಣಾಗತಿ) ಎಂಬ ಪದದೊಂದಿಗೆ ಮೋದಿಯವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಚಿತ್ರದಲ್ಲಿ ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯದ ಕಟ್ಟಡದ ಮೇಲೆ “SURRENDER” (ಶರಣಾಗತಿ) ಎಂಬ ಪದದೊಂದಿಗೆ ಭಾರತೀಯ ಪ್ರಧಾನಿ ಮೋದಿಯವರ ದೈತ್ಯ ಭಾವಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ತೋರಿಸಲಾಗಿದೆ.”.

ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರವನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಮತ್ತಿದು ತಪ್ಪು ಹೇಳಿಕೆ.

ರೇಟಿಂಗ್/Rating: ತಪ್ಪು ನಿರೂಪಣೆ. —

*************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಮಾಲ್ಡೀವ್ಸ್‌ನ ರಕ್ಷಣಾ ಸಚಿವಾಲಯಕ್ಕೆ ಸಂಬಂಧಿಸಿದ್ದು ಎನ್ನಲಾಗಿರುವ ಬಹುಮಹಡಿ ಸರ್ಕಾರಿ ಕಟ್ಟಡದ ಒಂದು ಬದಿಯಲ್ಲಿ ಭಾರತೀಯ ಪ್ರಧಾನಿ ನರೇಂದ್ರ ಮೋದಿಯವರ ವೃಹತ್ ಭಾವಚಿತ್ರವನ್ನು ಪ್ರದರ್ಶಿಸುವ ಒಂದು ಚಿತ್ರವು  ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಭಾವಚಿತ್ರದ ಮೇಲೆ, “SURRENDER” ಎಂಬ ಪದವನ್ನು ದೊಡ್ಡದಾಗಿ ಬರೆಯಲಾಗಿದೆ, ಇದು ನಮ್ಮ ಈ ಭಾರತೀಯ ನಾಯಕರಿಗೆ ನೀಡಲಾಗಿರುವ ಸಾಂಕೇತಿಕ ಅವಮಾನ ಅಥವಾ ರಾಜಕೀಯ ಸಂದೇಶವನ್ನು ಸೂಚಿಸುತ್ತದೆ.

ಈ ಚಿತ್ರವನ್ನು ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಇದು ಭಾರತ ಮತ್ತು ಮಾಲ್ಡೀವ್ಸ್ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಜುಲೈ 2025 ರಲ್ಲಿ ಮಾಲ್ಡೀವ್ಸ್‌ಗೆ ಮೋದಿ ಭೇಟಿ ನೀಡಿದ ಸಮಯದಲ್ಲಿ ಈ ಬ್ಯಾನರ್ ಅನ್ನು ಅಧಿಕೃತವಾಗಿ ಸ್ಥಾಪಿಸಲಾಗಿತ್ತು ಎಂದು ಕೆಲವು ಪೋಸ್ಟ್‌ಗಳು ಆರೋಪಿಸಿವೆ, ಇದು ಆನ್‌ಲೈನ್‌ ಜಗತ್ತಿನಲ್ಲಿ ವ್ಯಾಪಕ ಟೀಕೆ ಟಿಪ್ಪಣಿಗಳನ್ನು ಹುಟ್ಟುಹಾಕಿದೆ.

ಅನುವಾದಿತ ಪೋಸ್ಟ್ ಹೀಗಿದೆ:

ಈ ಚಿತ್ರ ಕಟ್ಟಡದ್ದಲ್ಲ, ಇದು ಮನಸ್ಥಿತಿಯದ್ದು – surrender??

ಮಾಲ್ಡೀವ್ಸ್ ರಕ್ಷಣಾ ಸಚಿವಾಲಯದ ಗೋಡೆಯ ಮೇಲೆ ಭಾರತದ ಪ್ರಧಾನ ಮಂತ್ರಿಯ ಚಿತ್ರವನ್ನು ಪ್ರದರ್ಶಿಸಲಾಗಿದೆ ಮತ್ತು ಅದರ ಮೇಲೆ SURRENDER ಎಂಬ ಪದವನ್ನು ಬರೆಯಲಾಗಿದೆ??

ಹಾಗಾದರೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಸ್ಥಾನಮಾನ ಹೇಗೆ ಅಪಹಾಸ್ಯಕ್ಕೀಡಾಗಿದೆ ಎಂಬುದರ ಬಗ್ಗೆ ಇನ್ನೂ ಸಂದೇಹವಿದೆಯೇ?

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಲು ನಿರ್ಧರಿಸಿತು. ತಂಡವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, “SURRENDER” ಎಂಬ ಪದದೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವನ್ನು ತೋರಿಸುವ ವೈರಲ್ ಫೋಟೋವನ್ನು ಡಿಜಿಟಲ್ ಬದಲಾವಣೆ ಮಾಡಲಾಗಿದೆ ಎಂದು ಕಂಡುಬಂತು. ಜುಲೈ 2025 ರಲ್ಲಿ ಪ್ರಧಾನಿ ಮೋದಿಯವರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮೂಲ ಚಿತ್ರವನ್ನು ಸೆರೆಹಿಡಿಯಲಾಗಿತ್ತು, ಆ ಸಮಯದಲ್ಲಿ ಅವರ ಛಾಯಾಚಿತ್ರವನ್ನು ಅಧಿಕೃತ ರಾಜತಾಂತ್ರಿಕ ಕಾರ್ಯಕ್ರಮದ ಅಂಗವಾಗಿ ಮಾಲ್ಡೀವ್ಸ್ ರಕ್ಷಣಾ ಸಚಿವಾಲಯದ ಕಟ್ಟಡದ ಮುಂಭಾಗದಲ್ಲಿ ಪ್ರದರ್ಶಿಸಲಾಗಿತ್ತು.

ಭಾರತ ಮತ್ತು ಮಾಲ್ಡೀವ್ಸ್ ಸರ್ಕಾರಿ ಮೂಲಗಳ ಅಧಿಕೃತ ವೆಬ್‌ಸೈಟ್‌ಗಳಲ್ಲಿ ಹೆಚ್ಚಿನ ಪರಿಶೀಲನೆ ನಡೆಸಿದಾಗ ಅಧಿಕೃತ ಸರ್ಕಾರಿ ಮೂಲಗಳು ಬಿಡುಗಡೆ ಮಾಡಿದ ಚಿತ್ರದ ಯಾವುದೇ ಅಧಿಕೃತ ಆವೃತ್ತಿಯಲ್ಲಿ “SURRENDER” ಎಂಬ ಪದವು ಕಾಣಿಸಿಕೊಂಡಿಲ್ಲ ಎಂಬುದು ಕಂಡುಬಂದಿದೆ. ಎರಡೂ ಕಡೆಯ ಯಾವುದೇ ಅಧಿಕೃತ ಮೂಲಗಳು ಅಂತಹ ಚಿತ್ರವನ್ನು ಬಿಡುಗಡೆ ಮಾಡಿಲ್ಲ ಅಥವಾ ಅಂತಹ ಚಿತ್ರವನ್ನು ಅಂಗೀಕರಿಸಿಲ್ಲ ಮತ್ತು ಯಾವುದೇ ವಿಶ್ವಾಸಾರ್ಹ ಮಾಧ್ಯಮವು ಅಂತಹ ಯಾವುದೇ ಘಟನೆಯನ್ನು ವರದಿ ಮಾಡಿಲ್ಲ. ಆದ್ದರಿಂದ, ಈ ಮಾರ್ಪಾಟು ಮಾಡಿರುವ ಆವೃತ್ತಿಯು ಎರಡೂ ದೇಶಗಳ ನಡುವಿನ ಹಿಂದಿನ ದ್ವಿಪಕ್ಷೀಯ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ವೀಕ್ಷಕರನ್ನು ದಾರಿತಪ್ಪಿಸುವ ಉದ್ದೇಶಪೂರ್ವಕ ಪ್ರಯತ್ನವೆಂದು ತೋರುತ್ತದೆ, ಮತ್ತೇನೂ ಅಲ್ಲ.

ಇದಲ್ಲದೆ, ಮೂಲ ಚಿತ್ರವನ್ನು ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (MNDF) ಪ್ರಧಾನ ಕಚೇರಿಯಲ್ಲಿ ತಾತ್ಕಾಲಿಕ ಪ್ರದರ್ಶನಕ್ಕಾಗಿ ತೆಗೆಯಲಾಗಿತ್ತು. ಹತ್ತಿರದ ರಿಪಬ್ಲಿಕ್ ಸ್ಕ್ವೇರ್ ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಸರ್ಕಾರಿ ಅತಿಥಿಯಾಗಿ ಗಾರ್ಡ್ ಆಫ್ ಆನರ್ ಸ್ವೀಕರಿಸುತ್ತಿದ್ದಾಗ ಅವರ ಚಿತ್ರವನ್ನು ಪ್ರದರ್ಶಿಸಲಾಯಿತು. ಸಚಿವಾಲಯದ ಅಧಿಕೃತ X ಪೋಸ್ಟ್ ಇಲ್ಲಿದೆ.

ಆದ್ದರಿಂದ, ಈ ಹೇಳಿಕೆ ಸುಳ್ಳು ಮತ್ತು ತಪ್ಪು ನಿರೂಪಣೆಯಾಗಿದೆ.

ಇದನ್ನೂ ಓದಿ:

ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಕರಿಂದ ಪಶ್ಚಿಮ ಬಂಗಾಳ ಸರ್ಕಾರವು ಜಿಜ್ಯಾ ತೆರಿಗೆಯನ್ನು ಸಂಗ್ರಹಿಸುತ್ತಿದೆಯೇ? ಸತ್ಯ ಪರಿಶೀಲನೆ

1960ರ ಸಿಂಧೂ ನೀರಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್ ರವರ ಪಾತ್ರದ ಬಗ್ಗೆ ಅಮಿತ್ ಶಾ ಮಾತನಾಡಿದ್ದರೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*