Don't Miss

ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ಫ್ಲೈಟ್ 171 ಅಪಘಾತದ ಕೆಲವೇ ಗಂಟೆಗಳ ನಂತರ, ಒಳಗಿನ ದೃಶ್ಯದ ವೀಡಿಯೊ ಹೊರಬಂದಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  2025 ಜೂನ್ 12ರಂದು ಸಂಭವಿಸಿದ ವಿಮಾನ ಅಪಘಾತಕ್ಕೂ ಮುನ್ನ, ಎಐ-171 ಎಂಬ ಏರ್ ಇಂಡಿಯಾ ವಿಮಾನದ ಒಳಗಿನ ದೃಶ್ಯಗಳನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion:ತಪ್ಪುನಿರೂಪಣೆ. ಜನವರಿ 15, 2023 ರಂದು ನೇಪಾಳದ ಪೋಖರಾದಲ್ಲಿ ಅಪಘಾತಕ್ಕೀಡಾದ ಯೇತಿ ಏರ್ಲೈನ್ಸ್ ವಿಮಾನದೊಳಗೆ ಚಿತ್ರೀಕರಿಸಲಾದ ತುಣುಕನ್ನು ವೀಡಿಯೊ ತೋರಿಸುತ್ತದೆ.

ರೇಟಿಂಗ್/Rating: ತಪ್ಪುನಿರೂಪಣೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

2025 ಜೂನ್ 12 ರಂದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಲಂಡನ್ ಕಡೆಗೆ ಹೊರಟಿದ್ದ 242 ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತ ಏರ್ ಇಂಡಿಯಾ ಫ್ಲೈಟ್ ಎಐ171ಹಾರಿದ ಕೆಲವೇ ನಿಮಿಷಗಳಲ್ಲಿ ಅಪಘಾತಕ್ಕೊಳಗಾದ ಕೆಲವು ಗಂಟೆಗಳಲ್ಲೇ ಹಲವಾರು ಹೇಳಿಕೆಗಳು ಹೊರಬಂದಿವೆ. ಏತನ್ಮಧ್ಯೆ ಅಪಘಾತಕ್ಕೆ ಕೆಲವೇ ನಿಮಿಷಗಳ ಮೊದಲು ವಿಮಾನದ ಒಳಗೆ ಚಿತ್ರೀಕರಿಸಲಾಗಿದೆ ಎಂಬ ಹೇಳಲ್ಪಡುವ ವೀಡಿಯೊವೊಂದು   ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ವೀಡಿಯೊದಲ್ಲಿ ಪ್ರಯಾಣಿಕರು ವಿಮಾನದೊಳಗೆ ಇರುವುದನ್ನು ತೋರಿಸಲಾಗಿದೆ, ಮತ್ತು ಒಬ್ಬ ವ್ಯಕ್ತಿ ಹೊರಗಿನ ದೃಶ್ಯವನ್ನು ಸೆರೆಹಿಡಿಯಲು ಪ್ರಯತ್ನಿಸುತ್ತಿದ್ದಾನೆ. ಆದರೆ ಶೀಘ್ರದಲ್ಲೇ, ವಿಮಾನವು ನಿಯಂತ್ರಣ ಕಳೆದುಕೊಳ್ಳುತ್ತದೆ ಮತ್ತು ಪ್ರಯಾಣಿಕರು ಭಯಭೀತರಾಗುತ್ತಾರೆ, ನಂತರ ವಿಮಾನ ಅಪಘಾತಕ್ಕೊಳಗಾಗಿ, ಕ್ಯಾಮೆರಾದಲ್ಲಿ ಹೊಗೆ ಮತ್ತು ಬೆಂಕಿಯ ದೃಶ್ಯಗಳು ಕಾಣಿಸುತ್ತವೆ.

X ನಲ್ಲಿ ವೀಡಿಯೊವನ್ನು ಹಂಚಿಕೊಂಡ ಒಬ್ಬ ಬಳಕೆದಾರರು ಹಿಂದಿಯಲ್ಲಿ ಹೀಗೆ ಬರೆದಿದ್ದಾರೆ: “23 सैकेंड का ये विडीओ जिसमें सब कुछ एक सैकेंड में बदल गया, कैसे हंसी भरी विडियो एकदम से चीखों में बदल गईं। Prayers for all passenger! Death is so unpredictable! ओम् शांति.”  [ಅನುವಾದಿಸಲಾಗಿದೆ, ಅದು ಹೀಗಿದೆ: “ಒಂದು ಸೆಕೆಂಡಿನಲ್ಲಿ ಎಲ್ಲವೂ ಬದಲಾದ 23 ಸೆಕೆಂಡುಗಳ ವೀಡಿಯೊ, ಒಂದು ತಮಾಷೆಯ ವೀಡಿಯೊ ಇದ್ದಕ್ಕಿದ್ದಂತೆ ಕಿರುಚಾಟವಾಗಿ ಹೇಗೆ ಬದಲಾಯಿತು. ಎಲ್ಲಾ ಪ್ರಯಾಣಿಕರಿಗಾಗಿ ಪ್ರಾರ್ಥನೆಗಳು! ಸಾವು ತುಂಬಾ ಅನಿರೀಕ್ಷಿತ! ಓಂ ಶಾಂತಿ ಓಂ ಶಾಂತಿ.”

ಇಲ್ಲಿ ಕಂಡುಬರುವ ಅದೇ ವೀಡಿಯೊವನ್ನು ಮತ್ತೊಬ್ಬ ಬಳಕೆದಾರರು ಇಂಗ್ಲಿಷ್ನಲ್ಲಿ ಇದೇ ರೀತಿಯ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ:

 

FACT-CHECK

ಡಿಜಿಟೈ ಇಂಡಿಯಾ ತನ್ನ ವಾಟ್ಸಾಪ್ ಟಿಪ್ಲೈನ್ನಲ್ಲಿ ಒಂದು ವಿನಂತಿಯನ್ನು ಸ್ವೀಕರಿಸಿ, ವೀಡಿಯೋದ ನಿಖರತೆಯನ್ನು ಪರಿಶೀಲಿಸಿತು. ವೀಡಿಯೋದಿಂದ ಪ್ರಮುಖ ದೃಶ್ಯಗಳನ್ನು ತೆಗೆದು, ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಅದು 2023ರಲ್ಲಿ  ನೇಪಾಳಿನ ಯೆಟಿ ಏರ್ಲೈನ್ಸ್ ವಿಮಾನವು ಹಿಮಾಲಯದಲ್ಲಿ ಅಪಘಾತಕ್ಕೀಡಾದ ವೀಡಿಯೋ ಎಂಬುದು ಗೊತ್ತಾಯಿತು.

2023 ರಲ್ಲಿ ವೈರಲ್ ಆಗಿದ್ದ ಮೂಲ ವೀಡಿಯೊವನ್ನು ನೋಡಿ. ಹಲವಾರು ವಾರ್ತೆಗಳಲ್ಲಿ ಅಪಘಾತವನ್ನು ವರದಿ ಮಾಡಿದ್ದು, ದೃಶ್ಯಗಳು 2023 ಜನವರಿ 15ರಂದು ನೇಪಾಳಿನ ಪೊಖರದಲ್ಲಿ ಅಪಘಾತಕ್ಕೀಡಾದ ಯೆಟಿ ಏರ್ಲೈನ್ಸ್ ಅಪಘಾತದ ಮೊದಲು ವಿಮಾನದ ಒಳಗೆ ಚಿತ್ರೀಕರಿಸಲ್ಪಟ್ಟವು ಎಂದು ದೃಢಪಡಿಸಿವೆ.

ಜನವರಿ 15 ರಂದು ಕಠ್ಮಂಡುವಿನ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟಿದ್ದ ಯೇತಿ ಏರ್ಲೈನ್ಸ್ ವಿಮಾನ 691, ಪೋಖರಾದ ಹಳೆಯ ಮತ್ತು ಹೊಸ ವಿಮಾನ ನಿಲ್ದಾಣಗಳ ನಡುವೆ ಇರುವ ಸೇತಿ ನದಿಯ ಕಣಿವೆಗೆ ಅಪ್ಪಳಿಸಿತು, ಇದರಲ್ಲಿ ಐದು ಭಾರತೀಯರು ಸೇರಿದಂತೆ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಆದ್ದರಿಂದ ಇದು ಜೂನ್ 12, 2025 ರಂದು ಅಹಮದಾಬಾದ್ ಬಳಿ ಅಪಘಾತಕ್ಕೀಡಾದ AI-171 ದೃಶ್ಯಾವಳಿ ಎಂಬ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಕೇರಳದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಹಳೆಯ ಚಿತ್ರವನ್ನು ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಪಘಾತದ ಚಿತ್ರವೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

‘PM ಕರದಾತಾ ಕಲ್ಯಾಣ ಯೋಜನಾ’ ಎಂಬ ಯೋಜನೆಯನ್ನು ಕೇಂದ್ರವು ತೆರಿಗೆದಾರರಿಗೆ ಬಹುಮಾನರೂಪವಾಗಿ ಪ್ರಾರಂಭಿಸಿದೆಯೇ?

 

 

 

Leave a Reply

Your email address will not be published. Required fields are marked *

*