Don't Miss

ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂಬ ನಕಲಿ ವೀಡಿಯೊ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿರುವುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಭಾರತದ ರಫೇಲ್ ಜೆಟ್ ಅನ್ನು ಪಾಕಿಸ್ತಾನ ಹೊಡೆದುರುಳಿಸಿದೆ ಎಂದು ತೋರಿಸಲು ಹಳೆಯ ವೀಡಿಯೊವನ್ನು ಬಳಸಲಾಗಿದೆ.

ರೇಟಿಂಗ್/Rating: ತಪ್ಪು ನಿರೂಪಣೆ —

***************************************************************

ಸತ್ಯ ಪರಿಶೀಲನೆ ವಿವರಗಳು

ಚೀನಾದ ಕ್ಷಿಪಣಿಗಳ ಸಹಾಯದೊಂದಿಗೆ ಪಾಕಿಸ್ತಾನವು ಭಾರತೀಯ ರಫೇಲ್ ಜೆಟ್ ಗಳನ್ನು ಹೊಡೆದುರುಳಿಸಿದೆ ಎಂದು ಚಿತ್ರಿಸುವ ವೀಡಿಯೊವನ್ನು X.comನಲ್ಲಿ ಹಂಚಿಕೊಳ್ಳಲಾಗುತ್ತಿದೆ. ದ ಟೆಲಿಗ್ರಾಫ್ ನ ವರದಿಯನ್ನು ಉಲ್ಲೇಖಿಸಿ, ಈ ಹೇಳಿಕೆಯನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ವೀಡಿಯೊವನ್ನು ಇಲ್ಲಿ ನೋಡಿ:

ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಸುದ್ದಿಗಾಗಿ ಹುಡುಕಾಟ ನಡೆಸಿದಾಗ, ಮೇ 8, 2025 ರಂದು ಪೋಸ್ಟ್ ಮಾಡಲಾದ ದ ಟೆಲಿಗ್ರಾಫ್ ವರದಿಯು ಅದೇ ಶೀರ್ಷಿಕೆಯನ್ನು ಒಳಗೊಂಡಿರುವುದಾಗಿ ಕಂಡುಬಂತು, ಆದರೆ ಸತ್ಯಸಂಧವಾದ ಹೇಳಿಕೆಯ ಮೂಲವನ್ನು ಅದು ಹೊಂದಿಲ್ಲ. ಭಾರತವು ಈ ಹೇಳಿಕೆಯನ್ನು ಸ್ಪಷ್ಟವಾಗಿ ನಿರಾಕರಿಸಿದ್ದು PIB ಸತ್ಯ ಪರಿಶೀಲನಾ ಘಟಕವೂ ಕೆಳಗೆ ಕಾಣುವಂತೆ ಇದನ್ನು ನಿರಾಕರಿಸಿದೆ:

ಇದಲ್ಲದೆ, ವೀಡಿಯೊದ ಕೀಫ್ರೇಮ್‌ಗಳನ್ನು ತೆಗೆದುಕೊಂಡು, ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಫಲಿತಾಂಶಗಳನ್ನು ಹುಡುಕಿದಾಗ,  ಒಂದು ವರ್ಷ ಹಳೆಯ ಸಂಬಂಧವಿಲ್ಲದ ವೀಡಿಯೊವನ್ನು ಈ ಹೇಳಿಕೆಯನ್ನು ಬೆಂಬಲಿಸಲು ಬಳಸಲಾಗಿದೆ ಎಂಬುದು ಕಂಡುಬಂತು. ಒಂದೆಡೆ ಭಾರತ ಈ ವರದಿಯನ್ನು ನಕಲಿ ಸುದ್ದಿ ಎಂದು ಸ್ಪಷ್ಟವಾಗಿ ನಿರಾಕರಿಸಿದರೆ, ಮತ್ತೊಂದೆಡೆ ಪಾಕಿಸ್ತಾನದ ಅಧಿಕಾರಿಗಳೂ ಸಹ ತಮ್ಮ ಪತ್ರಿಕಾಗೋಷ್ಠಿಯಲ್ಲಿ ಈ ಹೇಳಿಕೆಗಳನ್ನು ನಿರಾಕರಿಸಿದರು.

ಪಾಕಿಸ್ತಾನವು ಮೂರು ಭಾರತೀಯ ರಫೇಲ್ ಜೆಟ್‌ಗಳನ್ನು ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಇಶಾಕ್ ದಾರ್ ಹೇಳಿದ್ದಾರೆಂದು ಮೂಲ ಟೆಲಿಗ್ರಾಫ್ ಲೇಖನ ಹೇಳಿದೆ. “ಭಾರತವು ಐದು ಯುದ್ಧ ವಿಮಾನಗಳನ್ನು ಕಳೆದುಕೊಂಡಿದೆ ಎಂಬ ವರದಿಗಳಿಗೆ ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಆದರೆ ರಫೇಲ್ ಅನ್ನು ಹೊಡೆದುರುಳಿಸುವಲ್ಲಿ ಚೀನಾದ ವಿಮಾನಗಳ ಸ್ಪಷ್ಟ ಪಾಲ್ಗೊಳ್ಳುವಿಕೆಯು ರಕ್ಷಣಾ ವಲಯಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು ಅದರ ತಯಾರಕ ಚೆಂಗ್ಡು ಏರ್‌ಕ್ರಾಫ್ಟ್ ಕಾರ್ಪೊರೇಷನ್‌ನ ಷೇರುಗಳನ್ನು ಶೇಕಡಾ 20 ರಷ್ಟು ಮೇಲೇರಿಸಿದೆ” ಎಂದು ಲೇಖನವು ಹೇಳುತ್ತದೆ. ಇದನ್ನೆಲ್ಲಾ ಫೇಸ್‌ಬುಕ್‌ನಲ್ಲಿನ ಪೋಸ್ಟ್‌ ಒಂದರಲ್ಲಿ ಇಲ್ಲಿ ಸಂಕ್ಷೇಪಿಸಲಾಗಿದೆ.

ದ ಟೆಲಿಗ್ರಾಫ್‌ನಲ್ಲಿ ಪ್ರಕಟವಾದ ವಾಸ್ತವಿಕ ಲೇಖನದ ಲೇಖಕ ಮೆಂಫಿಸ್ ಬಾರ್ಕರ್, ನಂತರ ಮೇ 12, 2025 ರಂದು ಭಾರತೀಯ ಪತ್ರಕರ್ತ ಆಯುಷ್ ತಿವಾರಿಯವರು (@sighyush) ಇದನ್ನು ನಿರಾಕರಿಸಿ ಮಾಡಿದ ವರದಿಯನ್ನು ರೀಪೋಸ್ಟ್ ಮಾಡಿದ್ದಾರೆ ಮತ್ತು ಅದನ್ನು “ನಕಲಿ ಸುದ್ದಿ” ಎಂದು ಕರೆದಿದ್ದಾರೆ.

ಆದ್ದರಿಂದ, ಈ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಭಾರತವು ಮಾಲ್ಡೀವ್ಸ್‌ನಿಂದ 28 ದ್ವೀಪಗಳನ್ನು “ಖರೀದಿಸಿದೆಯೇ”? ಸತ್ಯ ಪರಿಶೀಲನೆ

ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಅನರ್ಹರಾಗುವ ಮೊದಲು, ವಿನೇಶ್ ಫೋಗಟ್ 2.1 ಕೆಜಿ ಹೆಚ್ಚು ತೂಕ ಹೊಂದಿದ್ದರೇ? ಸತ್ಯ ಪರಿಶೀಲನೆ?

 

Leave a Reply

Your email address will not be published. Required fields are marked *

*