ಹೇಳಿಕೆ/Claim: ಇಂದು ಮೊದಲ ಬಾರಿಗೆ ದೆಹಲಿಯಲ್ಲಿ ಯಮುನಾ ಜೀಯವರ ಆರತಿಯನ್ನು ನೋಡಲಾಯಿತು.
ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ವಾಸುದೇವ್ ಘಾಟ್‌ನಲ್ಲಿ ಯಮುನಾ ಆರತಿಯನ್ನು ಮಾರ್ಚ್ 2024 ರಿಂದ ನಿಯಮಿತವಾಗಿ ನಡೆಸಲಾಗುತ್ತಿದೆ.
ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ —-
*******************************************************************
ಫೆಬ್ರವರಿಯಲ್ಲಿ ನಡೆದ ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಗೆಲುವಿನ ನಂತರ ದೆಹಲಿಯು ಮೊದಲ ಬಾರಿಗೆ ಯಮುನಾ ಆರತಿಗೆ ಸಾಕ್ಷಿಯಾಯಿತು ಎಂದು ಹೇಳುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ.
दिल्ली में आज पहली बार यमुना जी की आरती देखने को मिली🙏🏻
आशा यही है कि दिल्ली वालों को अब स्वच्छ यमुना में डुबकी लगाने का, किनारे घूमने का मौका मिलेगा
जय हो 🙏🙏 pic.twitter.com/yHdVvKSXYn— CA Ashutosh Jha (@caashujha) February 12, 2025
2025ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವನ್ನು ಸೋಲಿಸಿ ಭಾರತೀಯ ಜನತಾ ಪಕ್ಷವು 27 ವರ್ಷಗಳ ನಂತರ ಅಧಿಕಾರಕ್ಕೆ ಬಂದಿರುವುದು ಸುದ್ದಿಯ ಹಿನ್ನೆಲೆ. ಅನುವಾದಿತ ಹೇಳಿಕೆ ಹೀಗಿದೆ: “ಇಂದು ಮೊದಲ ಬಾರಿಗೆ, ಯಮುನಾ ಜೀಯವರ ಆರತಿಯನ್ನು ದೆಹಲಿಯಲ್ಲಿ ನೋಡಲಾಯಿತು. ಸ್ವಚ್ಛ ಯಮುನೆಯಲ್ಲಿ ಸ್ನಾನ ಮಾಡುವ ಮತ್ತು ಅದರ ದಡದಲ್ಲಿ ಅಡ್ಡಾಡುವ ಅವಕಾಶ ಇನ್ನಾದರೂ ದೆಹಲಿಯ ಜನರಿಗೆ ಸಿಗುತ್ತದೆ ಎಂಬುದು ಭರವಸೆ. ಜೈ ಹೋ.”
ವೀಡಿಯೊವನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.
ಸತ್ಯ-ಪರಿಶೀಲನೆ
ಇದರ ಸತ್ಯಾಸತ್ಯತೆಯ ಬಗ್ಗೆ ಸುಳಿವು ಸಿಕ್ಕಿ, ಡಿಜಿಟೈ ಇಂಡಿಯಾ ತಂಡವು ದೆಹಲಿಯಲ್ಲಿ ಯಮುನಾ ಆರತಿಯ ವಿಷಯದ ಕುರಿತು ಪರೀಕ್ಷಣೆ ನಡೆಸಿತು, ಈ ಸಂದರ್ಭದಲ್ಲಿ ಈ ಹೇಳಿಕೆ ತಪ್ಪುದಾರಿಗೆಳೆಯುವಂಥದ್ದು ಎಂದು ಕಂಡುಹಿಡಿದಿದೆ. ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದ ವಾಸುದೇವ್ ಘಾಟ್‌ನಲ್ಲಿ ಮಾರ್ಚ್ 2024 ರಲ್ಲೇ ಯಮುನಾ ಆರತಿಯನ್ನು ನಡೆಸಲಾಗಿತ್ತು ಮತ್ತು ಅಂದಿನಿಂದ ಪ್ರತಿ ಭಾನುವಾರ ಮತ್ತು ಮಂಗಳವಾರ ನಿಯಮಿತವಾಗಿ ಆರತಿ ನಡೆಯುತ್ತಿದೆ ಎಂದು ಸಂಗ್ರಹಿತ ಸುದ್ದಿ ವರದಿಗಳು ತೋರಿಸಿವೆ.
ದೆಹಲಿಯ ಅಂದಿನ ಲೆಫ್ಟಿನೆಂಟ್ ಗವರ್ನರ್ ಆಗಿದ್ದ ವಿನಯ್ ಕುಮಾರ್ ಸಕ್ಸೇನಾ ರವರ ಮುಂದಾಳುತ್ವದಲ್ಲಿ ದೆಹಲಿ ಅಭಿವೃದ್ಧಿ ಪ್ರಾಧಿಕಾರವು ವಾಸುದೇವ್ ಘಾಟ್ ಅನ್ನು ನಿರ್ಮಿಸಿತ್ತು. ವಾಸುದೇವ್ ಘಾಟ್ ಅನ್ನು ಮಾರ್ಚ್ 12, 2024 ರಂದು ಉದ್ಘಾಟಿಸಲಾಯಿತು ಮತ್ತು 2015 ರಲ್ಲಿ ಅಂದಿನ ಮುಖ್ಯಮಂತ್ರಿಗಳಾದ ಅರವಿಂದ್ ಕೇಜ್ರಿವಾಲ್ ರವರು ಮೊದಲ ಯಮುನಾ ಆರತಿಯನ್ನು ನಡೆಸಿದ್ದರು ಎಂದೂ ಕೆಲವು ಸುದ್ದಿ ವರದಿಗಳು ಹೇಳಿವೆ. ಯೂಟ್ಯೂಬ್ ನಲ್ಲಿ ಒಂಬತ್ತು ವರ್ಷಗಳ ಹಿಂದೆ ಅಪ್‌ಲೋಡ್ ಮಾಡಲಾದ ವೀಡಿಯೊವನ್ನು ಇಲ್ಲಿ ನೋಡಿ:
ಆದ್ದರಿಂದ, ಫೆಬ್ರವರಿ 2025ರಲ್ಲಿ ಬಿಜೆಪಿಯ ವಿಜಯದ ನಂತರ ದೆಹಲಿಯಲ್ಲಿ ಮೊದಲ ಬಾರಿಗೆ ಯಮುನಾ ಆರತಿಯನ್ನು ನಡೆಸಲಾಯಿತು ಎಂಬ ಹೇಳಿಕೆಗಳು ಸುಳ್ಳು.
ಇದನ್ನೂ ಓದಿ:
ಕೇಂದ್ರ ಸರ್ಕಾರವು ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಿದೆಯೇ? ಸತ್ಯ ಪರಿಶೀಲನೆ
ಹೊಸದಾಗಿ ಘೋಷಿಸಲಾದ 18% ಜಿಎಸ್‍ಟಿ ಎಲ್ಲಾ ಬಳಸಿದ ಕಾರುಗಳ ಮಾರಾಟಕ್ಕೆ ಅನ್ವಯಿಸುತ್ತದೆಯೇ? ಸತ್ಯ ಪರಿಶೀಲನೆ