Don't Miss

ಟ್ರಂಪ್ ಆಡಳಿತವನ್ನು ಟೀಕಿಸುವ ಖಾತೆಗಳನ್ನು ರದ್ದು ಮಾಡುವ ಕುರಿತು X ನಲ್ಲಿ ಮಸ್ಕ್ ಪೋಸ್ಟ್ ಮಾಡಿದ್ದರೇ? ಸತ್ಯ-ಪರಿಶೀಲನೆ

ಹೇಳಿಕೆ/Claim: ಟ್ರಂಪ್ ಆಡಳಿತವನ್ನು ಟೀಕಿಸುವ ಎಲ್ಲಾ ಟ್ವೀಟ್‌ಗಳನ್ನು ಅಮಾನತುಗೊಳಿಸಲಾಗುವುದು ಎಂದು ಎಲಾನ್ ಮಸ್ಕ್ X ನಲ್ಲಿ ಪೋಸ್ಟ್ ಮಾಡಿದರು.

ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಸುದ್ದಿ. ಟ್ರಂಪ್ ಆಡಳಿತವನ್ನು ಟೀಕಿಸುವ X ಖಾತೆಗಳನ್ನು ಅಮಾನತುಗೊಳಿಸಲಾಗುವುದು ಎಂಬ ಪೋಸ್ಟ್ ಅನ್ನು ಎಲಾನ್ ಮಸ್ಕ್ ಹಂಚಿಕೊಂಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ.

ರೇಟಿಂಗ್/Rating: ತಪ್ಪುದಾರಿಗೆಳೆಯುವ ಸುದ್ದಿ–  

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಪ್ರತಿಭಟಿಸುವ ಖಾತೆಗಳನ್ನು Xನಿಂದ ರದ್ದುಗೊಳಿಸಲಾಗುವುದು ಎಂದು Xನ ಮಾಲೀಕ ಮತ್ತು ಕೋಟ್ಯಾಧೀಶ ಎಲಾನ್ ಮಸ್ಕ್ ಸಂದೇಶವನ್ನು ಪೋಸ್ಟ್ ಮಾಡಿದ್ದಾರೆ ಎಂದು ಹೇಳುವ ಪೋಸ್ಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

“ಟ್ರಂಪ್ ಆಡಳಿತವನ್ನು ಪ್ರತಿಭಟಿಸುವ ಎಲ್ಲರನ್ನೂ X ನಿಂದ ಅಮಾನತುಗೊಳಿಸಲಾಗುತ್ತದೆ. ಎಲ್ಲಾ ಟ್ರಂಪ್-ವಿರೋಧಿ ನಾಟಕಗಳು ಥ್ರೆಡ್ಸ್, ರೆಡ್ಡಿಟ್, ಬ್ಲೂಸ್ಕೈ, ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಂತಹ ಉದಾರ ಪ್ರತಿಧ್ವನಿ ವೇದಿಕೆಗಳಿಗೆ ಹೋಗಬಹುದು.” ಎಂದು ಹೇಳಿಕೆ ಕಂಡುಬಂತು.

ವಾಕ್ ಸ್ವಾತಂತ್ರ್ಯವಂತೆ” ಮತ್ತು “ಟ್ವಿಟರ್ ಈಗ ರಾಜ್ಯಾಡಳಿತ ನಡೆಸುವ ಮಾಧ್ಯಮ ಎಂದು ನಿಮಗೆ ತಿಳಿಯಬೇಕೆಂಬುದು ವಾಕ್ ಸ್ವಾತಂತ್ರ್ಯದ ನಿರಂಕುಶವಾದಿಯ ಬಯಕೆ” ಎಂಬಂತಹ ಹೇಳಿಕೆಗಳೊಂದಿಗೆ ಈ ಚಿತ್ರವನ್ನು ಅನೇಕರು ಹಂಚಿಕೊಂಡಿದ್ದಾರೆ.

ಸತ್ಯ-ಪರಿಶೀಲನೆ

ಈ ಹೇಳಿಕೆ ಆತಂಕಕಾರಿ ಮತ್ತು ಯುಎಸ್ ನ ವಾಕ್ ಸ್ವಾತಂತ್ರ್ಯ ರೂಢಿಗಳಿಗೆ ವಿರುದ್ಧವಾಗಿರುವುದರಿಂದ, ಡಿಜಿಟೈ ಇಂಡಿಯಾ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮುಂದಾಯಿತು. ಮೊದಲನೆಯದಾಗಿ ಚಿತ್ರದಲ್ಲಿನ ಪೋಸ್ಟ್‌ನ ಮೇಲೆ ಸಮಯಮುದ್ರೆ ಇಲ್ಲ, ಆದರೆ ಮಸ್ಕ್‌ನ ಪ್ರೊಫೈಲ್ ಇಮೇಜ್ ಮತ್ತು “@elonmusk” ಹ್ಯಾಂಡಲ್ ಕಂಡುಬರುತ್ತದೆ.

ಇದಲ್ಲದೆ, ಚಿತ್ರದಲ್ಲಿ “ಫಾಲೋ” ಬಟನ್ ಮಾತ್ರವಿದೆ, ಆದರೆ ಮಸ್ಕ್ ರವರ ಯಾವುದೇ ಅಧಿಕೃತ ಪೋಸ್ಟ್ ನ ಮೇಲ್ಭಾಗದ ಬಲ ತುದಿಯಲ್ಲಿ xAI ಲೋಗೋ ಜೊತೆಗೆ “ಸಬ್ಸ್ಕ್ರೈಬ್” ಬಟನ್ ಅನ್ನೂ ಸಹ ಕಾಣಬಹುದು. ಇಲ್ಲಿ ಈ ದೃಶ್ಯದಲ್ಲಿ ವ್ಯತ್ಯಾಸಗಳನ್ನು ಸ್ಪಷ್ಟವಾಗಿ ಕಾಣಬಹುದು:

ನಾವು ಎಲಾನ್ ಮಸ್ಕ್ ರವರ ಅಧಿಕೃತ ಹ್ಯಾಂಡಲ್ ಅನ್ನು ಪರಿಶೀಲಿಸಿದಾಗ, ಅವರ X ಖಾತೆಯಲ್ಲಿ ಅಂತಹ ಪೋಸ್ಟ್ ಅಥವಾ ಈ ಬೆಳವಣಿಗೆಯ ಕುರಿತಾದ ಯಾವುದೇ ಸುದ್ದಿ ವರದಿಗಳಿರಲಿಲ್ಲ. ಮಸ್ಕ್ ಅಧಿಕೃತವಾಗಿ X ನಲ್ಲಿ ಅಂತಹ ಪೋಸ್ಟ್ ಅನ್ನು ಹಂಚಿಕೊಂಡಿದ್ದರೆ ಅದು ಸುಲಭವಾಗಿ ಮುಖ್ಯಾಂಶಗಳನ್ನೇರುತ್ತಿತ್ತು. ಆದ್ದರಿಂದ, ಹೇಳಿಕೆ ಸುಳ್ಳು.

ಇದನ್ನೂ ಓದಿ:

EAM ಜೈಶಂಕರ್ ಅವರನ್ನು ಟ್ರಂಪ್ ರವರ ಉದ್ಘಾಟನಾ ಸಮಾರಂಭದಿಂದ ಹೋಗಲು ಹೇಳಲಾಯಿತೇ? ಸತ್ಯ-ಪರಿಶೀಲನೆ

ಯುಎಸ್, ಕೆನಡಾ 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿವೆಯೇ? ಸತ್ಯ-ಪರಿಶೀಲನೆ

 

Leave a Reply

Your email address will not be published. Required fields are marked *

*