ಹೇಳಿಕೆ/Claim: 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡುವ ಯೋಜನೆಯನ್ನು ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ ಅನುಮೋದಿಸಿವೆ.
ಕಡೆನುಡಿ/Conclusion: ತಪ್ಪುದಾರಿಗೆಳೆಯುವ ಹೇಳಿಕೆ. ಭಾರತವು ಈಗಾಗಲೇ 18,000 ದಾಖಲೆರಹಿತ ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆದುಕೊಳ್ಳಲು ಒಪ್ಪಿಕೊಂಡಿದೆ ಆದರೆ ಯುಎಸ್ ಮತ್ತು ಕೆನಡಾದಿಂದ ಹಿಂದಿರುಗಿಸಲಾಗುತ್ತಿರುವ 1.2 ಮಿಲಿಯ ಅಕ್ರಮ ವಲಸಿಗರ ಬಗ್ಗೆ ಯಾವುದೇ ಅಧಿಕೃತ ಅಂಕಿ ಅಂಶಗಳಿಲ್ಲ.
ರೇಟಿಂಗ್: ತಪ್ಪುದಾರಿಗೆಳೆಯುವ ಹೇಳಿಕೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಯುನೈಟೆಡ್ ಸ್ಟೇಟ್ಸ್ ಮತ್ತು ಕೆನಡಾ 1.2 ಮಿಲಿಯ ಭಾರತೀಯ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಪ್ರಕ್ರಿಯೆಯನ್ನು ಪ್ರಾರಂಭಿಸಿವೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಅನ್ನು ಹಂಚಿಕೊಳ್ಳಲಾಗುತ್ತಿದೆ. ದಾಖಲೆರಹಿತ ಅಕ್ರಮ ವಲಸಿಗರನ್ನು ಗಡೀಪಾರು ಮಾಡುವ ಕುರಿತು ಯುಎಸ್ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ರವರ ಇತ್ತೀಚಿನ ನೀತಿ ಸಂಬಂಧಿ ಹೇಳಿಕೆಗಳು ಮತ್ತು ನಿರ್ದೇಶನಗಳು ಇದರ ವಿಷಯವಸ್ತು.
United States and Canada have approved the plan to deport 1.2 Million illegal Indian immigrants.#India #Canada pic.twitter.com/z1fC0cd5Hj
— Shoaib🇵🇰🇿🇦 (@shaibijutt55) January 24, 2025
ಅದೇ ಪೋಸ್ಟ್ ಅನ್ನು ಹಂಚಿಕೊಳ್ಳುತ್ತಾ, ಮತ್ತೊಬ್ಬರು ಹೀಗೆ ಬರೆದಿದ್ದಾರೆ: “ಭಾರತ ಸರ್ಕಾರವು ತನ್ನ ಉಡಾಳ ಪುತ್ರ-ಪುತ್ರಿಯರನ್ನು ಮರಳಿ ಸ್ವಾಗತಿಸಲು ಸಿದ್ಧವಾಗಿದೆ ಎಂದು ತೋರುತ್ತಿದೆ. ಯುಎಸ್ ಮತ್ತು ಕೆನಡಾದ ಹೊಸ ಗಡೀಪಾರು ಯೋಜನೆಗೆ ಧನ್ಯವಾದಗಳು. ಪ್ರಧಾನಿ ಮೋದಿಯವರು ತಮ್ಮ ‘ಮೇಕ್ ಇನ್ ಇಂಡಿಯಾ’ ಅಭಿಯಾನವನ್ನು ಬೆಂಬಲಿಸಲು ಇನ್ನೂ 1.2 ಮಿಲಿಯ ನಾಗರಿಕರನ್ನು ಸ್ವಾಗತಿಸಲು ಉತ್ಸುಕರಾಗಿರಬೇಕು”.
ಸತ್ಯ ಪರಿಶೀಲನೆ ವಿವರಗಳು:
ಪ್ಯೂ ರಿಸರ್ಚ್‌ನ ಅಂದಾಜಿನ ಪ್ರಕಾರ, ಸುಮಾರು 725,000 ಭಾರತೀಯರು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಾಸಿಸುತ್ತಿರುವ ಅನಧಿಕೃತ ವಲಸಿಗರು. ಭಾರತವು ಈಗಾಗಲೇ ಯುನೈಟೆಡ್ ಸ್ಟೇಟ್ಸ್‌ನಿಂದ 18,000 ದಾಖಲೆರಹಿತ ವಲಸಿಗರನ್ನು ಸ್ವೀಕರಿಸುವ ಯೋಜನೆಯನ್ನು ಪ್ರಕಟಿಸಿದೆ, ಆದರೆ ಕೆನಡಾದಲ್ಲಿ ನೆಲೆಸಿರುವ ಭಾರತೀಯ ಅಕ್ರಮ ವಲಸಿಗರ ಬಗ್ಗೆ ಅಂತಹ ಯಾವುದೇ ಅಂಕಿಅಂಶಗಳು ಲಭ್ಯವಿಲ್ಲ.
ಭಾರತದ ವಿದೇಶಾಂಗ ಸಚಿವರಾದ ಎಸ್. ಜೈಶಂಕರ್ ರವರು ಸಹ ಯುಎಸ್ ನಿಂದ ಭಾರತೀಯರ ಕಾನೂನುಬದ್ಧ ವಾಪಸಾತಿಗೆ ಭಾರತದ ಮುಕ್ತವಾಗಿರುವುದರ ಬಗ್ಗೆ ಹೇಳಿಕೆ ನೀಡಿದ್ದಾರೆ (ಕೆಳಗಿನ ವೀಡಿಯೊ ನೋಡಿ) ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂ.ಇ.ಎ) ಅಕ್ರಮ ವಲಸೆಯನ್ನು ವಿರೋಧಿಸುವಾಗ ಕಾನೂನು ಚಲನಶೀಲತೆಗೆ ಬೆಂಬಲವನ್ನು ದೃಢಪಡಿಸಿದೆ.
ಕೆನಡಾಕ್ಕೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ಅಂಕಿ ಅಂಶಗಳು ಲಭ್ಯವಿಲ್ಲ. ಪ್ಯೂ ರಿಸರ್ಚ್ ಅಂಕಿಅಂಶಗಳು ಸಹ ಅಂದಾಜುಗಳೇ ವಿನಃ ನಿರ್ಣಾಯಕವಲ್ಲ. ಆದಾಗ್ಯೂ, ಹೊಸ ವರದಿಗಳು MEA ವಕ್ತಾರ ರಣಧೀರ್ ಜೈಸ್ವಾಲ್ ಅವರ ಈ ಹೇಳಿಕೆಯನ್ನು ಉಲ್ಲೇಖಿಸಿವೆ: “ವಲಸೆ ಮತ್ತು ಚಲನಶೀಲತೆಯ ಕುರಿತು ಭಾರತ-ಯುಎಸ್ ಸಹಕಾರದ ಭಾಗವಾಗಿ, ಎರಡೂ ಕಡೆಯವರು ಅಕ್ರಮ ವಲಸೆಯನ್ನು ತಡೆಯುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ. ಭಾರತದಿಂದ ಯುಎಸ್‌ಗೆ ಕಾನೂನುಬದ್ಧ ವಲಸೆಗೆ ಹೆಚ್ಚಿನ ಮಾರ್ಗಗಳನ್ನು ಸೃಷ್ಟಿಸಲು ಇದನ್ನು ಮಾಡಲಾಗುತ್ತಿದೆ.”
ಇದಲ್ಲದೆ, ಯುಎಸ್ ಕಸ್ಟಮ್ಸ್ ಮತ್ತು ಬಾರ್ಡರ್ ಪ್ರೊಟೆಕ್ಷನ್ ಮಾಹಿತಿಯ ಅನುಸಾರ, 2024 ರ ಆರ್ಥಿಕ ವರ್ಷದಲ್ಲಿ ಯುಎಸ್ ಗಡಿ ಗಸ್ತು ಅಧಿಕಾರಿಗಳು ಎದುರಿಸಿದ ಎಲ್ಲಾ ಕಾನೂನುಬಾಹಿರ ಗಡಿದಾಟುವಿಕೆಗಳಲ್ಲಿ ಯುಎಸ್ ಗೆ ಭಾರತದ ದಾಖಲೆರಹಿತ ವಲಸಿಗರ ಸಂಖ್ಯೆ ಸುಮಾರು 3% ರಷ್ಟಿದೆ. ಆದ್ದರಿಂದ, ಸರ್ಕಾರಿ ಮೂಲಗಳಿಗೆ ಅಧಿಕೃತ ಅಂಕಿಅಂಶಗಳನ್ನು ಬಿಡುಗಡೆಯಾಗುವವರೆಗೆ ಯುಎಸ್ ಮತ್ತು ಕೆನಡಾದಲ್ಲಿ 1.2 ಮಿಲಿಯದ ಸಂಖ್ಯೆ ಅನಧಿಕೃತವಾಗಿಯೇ ಉಳಿದಿದೆ. ಸದ್ಯಕ್ಕೆ, 18,000 ದಾಖಲೆರಹಿತ ಅಕ್ರಮ ವಲಸಿಗರನ್ನು ಗಡಿಪಾರು ಮಾಡುವ ಸಾಧ್ಯತೆಯಿದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಹದ್ದು.
ಇದನ್ನೂ ಓದಿ: