Don't Miss

ಹೊಸದಾಗಿ ಘೋಷಿಸಲಾದ 18% ಜಿಎಸ್‍ಟಿ ಎಲ್ಲಾ ಬಳಸಿದ ಕಾರುಗಳ ಮಾರಾಟಕ್ಕೆ ಅನ್ವಯಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಎಲ್ಲಾ ಹಳೆಯ ಕಾರುಗಳ ಮಾರಾಟಗಳ ಮೇಲೆ 18% ಜಿಎಸ್‌ಟಿ ವಿಧಿಸಲಾಗಿದೆ.

ಕಡೆನುಡಿ/Conclusion:  ತಪ್ಪುದಾರಿಗೆಳೆಯುವ ಹೇಳಿಕೆ. ವ್ಯಕ್ತಿಯಿಂದ ವ್ಯಕ್ತಿಗೆ ಹಳೆಯ ಕಾರುಗಳ ಮಾರಾಟದಲ್ಲಿ ಯಾವುದೇ  ಜಿಎಸ್‌ಟಿ ಒಳಪಡುವುದಿಲ್ಲ. ಆದರೆ ಹಳೆಯ ಕಾರುಗಳನ್ನು ಮರುಮಾರಾಟ ಮಾಡುವ ವಿತರಕರು ಅಥವಾ ಸವಕಳಿಯನ್ನು ಪಡೆದವರು ತಮ್ಮ ಹಳೆಯ ಕಾರುಗಳನ್ನು ಮಾರ್ಜಿನ್‌ನಲ್ಲಿ ಮಾರಾಟ ಮಾಡುವಾಗ 18%ಕ್ಕೆ ಒಳಪಡುತ್ತಾರೆ.

ರೇಟಿಂಗ್/Rating: ತಪ್ಪುದಾರಿಗೆಳೆಯುವ ಹೇಳಿಕೆ.

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ರವರು ಹಳೆಯ ಅಥವಾ ಬಳಸಿದ ಕಾರುಗಳ ಮಾರಾಟದ ಮೇಲಿನ ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್‌ಟಿ) 12% ರಿಂದ 18% ಕ್ಕೆ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ ಎನ್ನುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಘೋಷಣೆಯ ನಂತರ ಕೂಡಲೆ, ಹಣಕಾಸು ಸಚಿವರ ಪತ್ರಿಕಾಗೋಷ್ಠಿಯನ್ನು ಹಿಂದೆ ಸಾಮಾಜಿಕ ಮಾಧ್ಯಮವು ಹೇಳಿಕೆಗಳು ಮತ್ತು ಪ್ರತಿವಾದಗಳಿಂದ ತುಂಬಿದೆ.

ಹೇಳಿಕೆ ಹೀಗಿದೆ:

“ಸೀತಾರಾಮನ್ ರವರ ಅನುಸಾರ: ನಾನು ನನ್ನ ಡೀಸೆಲ್ ಕಾರನ್ನು 2014 ರಲ್ಲಿ ಖರೀದಿಸಿದೆ: ರೂ. 24 ಲಕ್ಷಗಳು 

ನಾನು ನನ್ನ ಡೀಸೆಲ್ ಕಾರನ್ನು 2024 ರಲ್ಲಿ ಮಾರಿದೆ : ರೂ 3 ಲಕ್ಷ 2024 

ಆದ್ದರಿಂದ, ನಾನು 21 ಲಕ್ಷಗಳ ಮೇಲೆ 18% GST ಪಾವತಿಸಬೇಕಾಗಿದೆ! (ಆಕೆಯ ಅನುಸಾರ ಮಾರ್ಜಿನ್)”

ಇದೇ ರೀತಿಯ ಹೇಳಿಕೆಗಳೊಂದಿಗೆ ಇದನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

ಸತ್ಯ ಪರಿಶೀಲನೆ ವಿವರಗಳು:

ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆ ವೈರಲ್ ಆಗುತ್ತಿದ್ದಂತೆ, ವಿತ್ತ ಸಚಿವರು ಹೇಳಿದ್ದಕ್ಕಿಂತ ಭಿನ್ನವಾದ ವಿವರಣೆಯನ್ನು ನೀಡುವವರು ಸಾಮಾಜಿಕ ಮಾಧ್ಯಮದಲ್ಲಿ ಡಿಜಿಟೈ ಇಂಡಿಯಾ ತಂಡಕ್ಕೆ ಕಂಡುಬಂದರು. ತಮ್ಮ ಬ್ರೀಫಿಂಗ್‌ನಲ್ಲಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮರುಮಾರಾಟದ “ಮಾರ್ಜಿನ್ ಮೌಲ್ಯ” ದ ಮೇಲಿನ ತೆರಿಗೆಯನ್ನು ಉಲ್ಲೇಖಿಸಿ ವಿವರಿಸಿದ್ದರು, ಆದರೆ ತಮ್ಮ ಬಳಸಿದ ಕಾರುಗಳನ್ನು ಮಾರಾಟ ಮಾಡುವ ವ್ಯಕ್ತಿಗಳು ತೆರಿಗೆಗೆ ಪಾತ್ರರಾಗುತ್ತಾರೆ ಎಂದು ತಪ್ಪಾಗಿ ಸೂಚಿಸಿದ್ದರು.

ಸುದ್ದಿ ವರದಿಗಳಿಗಾಗಿ ನಾವು ಹುಡುಕಾಟ ನಡೆಸಿದಾಗ ತೆರಿಗೆಯು ನಿಜವಾಗಿ ಬಳಸಿದ ವಾಹನಗಳ ಮರುಮಾರಾಟದಲ್ಲಿ ತೊಡಗಿರುವ ವ್ಯವಹಾರ ಸಂಸ್ಥೆಗಳಿಗೆ ಅನ್ವಯಿಸುತ್ತದೆ ಹೊರತು ಖಾಸಗಿ ಮಾರಾಟಗಾರರಿಗಲ್ಲ ಎಂದು ಬಹಿರಂಗವಾಯಿತು.

ಹಾಗೆಯೇ, ಪಿ.ಐ.ಬಿ ಯಲ್ಲಿ ಭಾರತ ಸರ್ಕಾರದ ಅಧಿಕೃತ ಪತ್ರಿಕಾ ಪ್ರಕಟಣೆಗಾಗಿ ನಾವು ಹುಡುಕಾಡಿದೆವು. “ಸರಕು ಮತ್ತು ಸೇವೆಗಳಿಗೆ ಸಂಬಂಧಿಸಿದ ಇತರ ಬದಲಾವಣೆಗಳು” ಭಾಗದಡಿಯಲ್ಲಿರುವ ಹೇಳಿಕೆಯು ಹೇಳಿದೆ:

“18% ಕ್ಕೆ ನಿಗದಿಪಡಿಸಿದವುಗಳನ್ನು ಹೊರತುಪಡಿಸಿ ಎಲೆಕ್ಟ್ರಿಕ್ ವಾಹನಗಳೂ ಸೇರಿದಂತೆ ಎಲ್ಲಾ ಹಳೆಯ ಮತ್ತು ಬಳಸಿದ ವಾಹನಗಳ ಮಾರಾಟದ ಮೇಲೆ ಜಿಎಸ್‍ಟಿ ದರವನ್ನು 12% ದಿಂದ 18 % ಕ್ಕೆ ಹೆಚ್ಚಿಸಲು – 1200 ಸಿಸಿ ಅಥವಾ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಮತ್ತು 4000 ಮಿಮೀ ಅಥವಾ ಹೆಚ್ಚಿನ ಹಳೆಯ ಮತ್ತು ಬಳಸಿದ ಪೆಟ್ರೋಲ್ ವಾಹನಗಳ; 1500 ಸಿಸಿ ಅಥವಾ ಹೆಚ್ಚಿನ  ಎಂಜಿನ್ ಸಾಮರ್ಥ್ಯದ ಮತ್ತು 4000 ಮಿಮೀ ಉದ್ದದ ಡೀಸೆಲ್ ವಾಹನಗಳ ಮತ್ತು ಎಸ್ ಯು ವಿ ಗಳ ಮಾರಾಟ.[ಗಮನಿಸಿ: ಜಿಎಸ್‍ಟಿ ಯು ಸರಬರಾಜುದಾರರ ಮಾರ್ಜಿನ್ ಅನ್ನು ಪ್ರತಿನಿಧಿಸುವ ಮೌಲ್ಯದ ಮೇಲೆ ಮಾತ್ರ ಅನ್ವಯಿಸುತ್ತದೆ, ಅಂದರೆ, ಖರೀದಿ ಬೆಲೆ ಮತ್ತು ಮಾರಾಟದ ಬೆಲೆ (ಸವಕಳಿಯನ್ನು ಕ್ಲೈಮ್ ಮಾಡಿದರೆ ಸವಕಳಿ ಮೌಲ್ಯ) ನಡುವಿನ ವ್ಯತ್ಯಾಸ,  ಇದು ವಾಹನದ ಮೌಲ್ಯದ ಮೇಲೆ ಅನ್ವಯಿಸುವುದಲ್ಲ. ಅಲ್ಲದೆ, ನೋಂದಾಯಿತರಾಗಿರದ ವ್ಯಕ್ತಿಗಳ ಮೇಲೂ ಇದು ಅನ್ವಯಿಸುವುದಿಲ್ಲ.]”

ಮೂಲಭೂತವಾಗಿ, ತೆರಿಗೆಯು ಮೂರು ವಿಶೇಷಣಗಳನ್ನು ಆಧರಿಸಿದೆ:

  1. ಹಳೆಯ ಕಾರುಗಳನ್ನು ಮಾರಾಟ ಮಾಡುವ ನೋಂದಾಯಿತರಾಗಿರದ ವ್ಯಕ್ತಿಗಳು ಅಥವಾ ಖಾಸಗಿ ವ್ಯಕ್ತಿಗಳು ಮೊದಲಿನಂತೆ 12% ಜಿಎಸ್‌ಟಿಗೆ ಒಳಗಾಗುತ್ತಾರೆ ಮತ್ತು ಹೆಚ್ಚಿದ 18% ಜಿಎಸ್‌ಟಿಗೆ ಪಾತ್ರರಾಗಿರುವುದಿಲ್ಲ.
  2. ಹಳೆಯ ಕಾರುಗಳ ಮೇಲೆ ಸವಕಳಿಯನ್ನು ಕ್ಲೈಮ್ ಮಾಡಿದ ಸಂಸ್ಥೆಗಳು, ಅವುಗಳನ್ನು ‘ಸರಬರಾಜುದಾರರ ಮಾರ್ಜಿನ್’ ಅಥವಾ ಖರೀದಿ ಬೆಲೆ ಮತ್ತು ಮಾರಾಟದ ಬೆಲೆಯ ನಡುವಿನ ವ್ಯತ್ಯಾಸದ ಮೇಲೆ ಮಾರಾಟ ಮಾಡಿದಾಗ ಈ ಜಿಎಸ್‌ಟಿಗೆ ಪಾತ್ರರಾಗುತ್ತಾರೆ ಮತ್ತಿದು ವಾಹನದ ಮೌಲ್ಯದ ಮೇಲೆ ಅಲ್ಲ.
  3. ಹಳೆಯ ಕಾರುಗಳನ್ನು ಖರೀದಿಸಿ ಮಾರಾಟ ಮಾಡುವ ಕಂಪನಿಗಳು ಈ 18% ಜಿಎಸ್‌ಟಿಗೆ ಒಳಗಾಗುತ್ತಾರೆ.

ಈ ವಿಡಿಯೋದಲ್ಲಿ ಹಣಕಾಸು ಸಚಿವರ ವಿವರಣೆಯನ್ನು ನೋಡಿ:

ಮುಂದುವರೆದಂತೆ ಉದಾಹರಣೆ ತೋರಿಸುವಂತೆ, ನೀವು 12 ಲಕ್ಷ ರೂಪಾಯಿಗಳಿಗೆ ಕಾರನ್ನು ಖರೀದಿಸಿದರೆ ಮತ್ತು ಅದನ್ನು 9 ಲಕ್ಷ ರೂಪಾಯಿಗಳಿಗೆ ಮತ್ತೊಬ್ಬ ವ್ಯಕ್ತಿಗೆ ಮಾರಾಟ ಮಾಡಿದರೆ, ಯಾವುದೇ ಜಿಎಸ್‌ಟಿ ಅನ್ವಯಿಸುವುದಿಲ್ಲ. ಆದರೆ ನೀವು 9 ಲಕ್ಷ ರೂಪಾಯಿಗಳಿಗೆ ಕಾರು ಖರೀದಿಸಿ 10 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡುವ ಡೀಲರ್ ಆಗಿದ್ದರೆ, ಶೇ.18ರಷ್ಟು ಜಿಎಸ್‌ಟಿಯು ರೂ.1 ಲಕ್ಷ ಮಾರ್ಜಿನ್‌ಗೆ ಮಾತ್ರ ಅನ್ವಯಿಸುತ್ತದೆ.

ಆದ್ದರಿಂದ, ಎಲ್ಲಾ ಹಳೆಯ ಕಾರುಗಳ ಮಾರಾಟದಾದ್ಯಂತ ಜಿಎಸ್‌ಟಿ ಹೆಚ್ಚಿದೆ ಎಂಬ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*