Don't Miss

ಗೌತಮ್ ಅದಾನಿ ಯುಎಸ್ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:ಯುಎಸ್ ಅಧಿಕಾರಿಗಳು ಅದಾನಿ ಗ್ರೂಪ್ ಅಧ್ಯಕ್ಷರಾದ ಗೌತಮ್ ಅದಾನಿಯವರನ್ನು ಬಂಧಿಸುತ್ತಿರುವುದನ್ನು ಚಿತ್ರವು ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಹೇಳಿಕೆಯಂತೆ, ಅದಾನಿಯವರನ್ನು ಬಂಧಿಸಲಾಗಿಲ್ಲ. ಈ ಚಿತ್ರವು AI- ರಚಿತವಾಗಿದೆ.

ರೇಟಿಂಗ್/Rating: ತಪ್ಪು ನಿರೂಪಣೆ. —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಬುಧವಾರದಂದು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್‌ಚೇಂಜ್ ಕಮಿಷನ್ ನಿಂದ $250 ಮಿಲಿಯ ಲಂಚದ ಯೋಜನೆಯಲ್ಲಿ ಅದಾನಿ ಸಮೂಹದ ಅಧ್ಯಕ್ಷರಾದ ಗೌತಮ್ ಅದಾನಿಯ ಮೇಲೆ ದೋಷಾರೋಪಣೆ ಮಾಡಲಾಗಿರುವ ವಿಷಯ ದೊಡ್ಡ ಸುದ್ದಿಯಾದ ನಂತರವೇ, ಅದಾನಿಯವರನ್ನು ಯುಎಸ್ ಪೋಲೀಸರು ಕರೆದೊಯ್ಯುತ್ತಿರುವ ಚಿತ್ರವನ್ನು ಹೊಂದಿರುವ ಸಾಮಾಜಿಕ ಮಾಧ್ಯಮದ ಹೇಳಿಕೆಯು ವೈರಲ್ ಆಗುತ್ತಿದೆ.

 

ಶೀರ್ಷಿಕೆಯು ಹೀಗಿದೆ: “ಕಾನ್ ಮ್ಯಾನ್ ಅದಾನಿ ಅರೆಸ್ಟೆಡ್”. ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು, ಆದರೆ ಅದೇ ಚಿತ್ರವನ್ನು ಅದಾನಿ ವಿರುದ್ಧ ಬಂಧನದ ವಾರಂಟ್ ಹೊರಡಿಸಲಾಗಿದೆ ಎಂಬ ವಿಭಿನ್ನ ಹೇಳಿಕೆಯೊಂದಿಗೂ ಬಳಸಲಾಗಿದೆ.

FACT-CHECK

ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ವಿನಂತಿ ಬಂದಾಗ, ತಂಡವು ಮೊದಲನೆಯದಾಗಿ ಬಂಧನಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಪರಿಶೀಲಿಸುವ ಮೂಲಕ ವಿಷಯದ ಪ್ರಾಮಾಣಿಕತೆಯನ್ನು ಪರಿಶೀಲಿಸಿತು. ಲಂಚ ಪ್ರಕರಣದಲ್ಲಿ ಯುಎಸ್ ಎಸ್.ಇ.ಸಿ ಅದಾನಿಯನ್ನು ಆರೋಪಿಯಾಗಿಸಿದ್ದು, ಅದಾನಿ ಮತ್ತು ಆತನ ಸೋದರಳಿಯ ಸಾಗರ್ ಅದಾನಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ಸುದ್ದಿಯನ್ನು ರಾಯಿಟರ್ಸ್ ಇಲ್ಲಿ ಮತ್ತು ದ ಹಿಂದೂ ಇಲ್ಲಿ ವರದಿ ಮಾಡಿದೆ. ಯುಎಸ್ ಅಭಿಯೋಜಕರು ವಾರಂಟುಗಳನ್ನು ವಿದೇಶಿ (ಭಾರತ) ಕಾನೂನು ಜಾರಿ ಸಂಸ್ಥೆಗಳಿಗೆ ಹಸ್ತಾಂತರಿಸುವ ಯೋಜನೆ ಹೊಂದಿರುವುದರಿಂದ, ಸಾಮಾನ್ಯ ಕಾರ್ಯವಿಧಾನದನುಸಾರದ ನಿಯಮಗಳನ್ನು ಅನುಸರಿಸುತ್ತದೆ ಮತ್ತು ಇದಕ್ಕೆ ಸಮಯ ಹಿಡಿಯಬಹುದು.

ಏತನ್ಮಧ್ಯೆ, ಅದಾನಿ ಸಮೂಹವು ಆರೋಪಗಳನ್ನು ನಿರಾಕರಿಸಿ ಪತ್ರಿಕಾ ಪ್ರಕಟಣೆಯೊಂದನ್ನು ಬಿಡುಗಡೆ ಮಾಡಿದೆ:

ಹೇಳಿಕೆಯಲ್ಲಿ ಹೀಗೆ ಹೇಳಲಾಗಿದೆ: “ಅಮೆರಿಕದ ನ್ಯಾಯವಿಭಾಗವು ಸ್ವಯಂ ಹೇಳಿರುವಂತೆ, ದೋಷಾರೋಪಣೆಯಲ್ಲಿನ ಆರೋಪಗಳು ಆಪಾದನೆಗಳಾಗಿವೆ ಮತ್ತು ತಪ್ಪಿತಸ್ಥರೆಂದು ಸಾಬೀತಾಗದ ಹೊರತು ಆರೋಪಿಗಳನ್ನು ನಿರಪರಾಧಿಗಳೆಂದು ಭಾವಿಸಲಾಗುತ್ತದೆ.” “ಸಾಧ್ಯವಿರುವ ಎಲ್ಲ ಕಾನೂನು ನೆರವನ್ನು ಕೋರಲಾಗುವುದು.” ನವೆಂಬರ್ 21, 2024ರ, ಗುರುವಾರದವರೆಗೆ, X ಪೋಸ್ಟ್‌ನಲ್ಲಿ ಹೇಳಿದಂತೆ ಅದಾನಿ ಅಥವಾ ಆತನ ಸೋದರಳಿಯನನ್ನು ಬಂಧಿಸಲಾಗಿರಲಿಲ್ಲ.

ನಂತರ, ನಾವು ಚಿತ್ರವನ್ನು ಪರಿಶೀಲಿಸಿದಾಗ ಚಿತ್ರದಲ್ಲಿನ ವೈಪರೀತ್ಯಗಳನ್ನು ಕಂಡು ಅದು AI ಮೂಲಕ ರಚಿಸಲ್ಪಟ್ಟದ್ದೆಂದು ಕಂಡುಹಿಡಿದಿದ್ದೇವೆ. ಒಬ್ಬ ಅಧಿಕಾರಿಯು ಆರು ಕೈ ಬೆರಳುಗಳನ್ನು ಹೊಂದಿರುವುದು ಕಾಣಿಸುತ್ತದೆ, ಅದು AI ರಚಿತವಾಗಿರುವ ಸಾಧ್ಯತೆಯನ್ನು ಸೂಚಿಸುತ್ತದೆ. ಇಲ್ಯುಮಿನಾರ್ಟಿಯಲ್ಲಿ ಪರಿಶೀಲನೆ ಮಾಡಿದಾಗ, ಇದು AI ರಚಿತವಾದ ಚಿತ್ರವಾಗಿರುವ 92.8% ಸಂಭವನೀಯತೆಯಿರುವುದಾಗಿ ತೋರಿಸಿದೆ.

ಆದ್ದರಿಂದ, ಯುಎಸ್ ಪೊಲೀಸ್ ಅಧಿಕಾರಿಗಳಿಂದ ಗೌತಮ್ ಅದಾನಿಯ ಬಂಧನವನ್ನು ತೋರಿಸುವ ಛಾಯಾಚಿತ್ರವು AI- ರಚಿತ ಮತ್ತು ಸುಳ್ಳಾಗಿದೆ.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

 

Leave a Reply

Your email address will not be published. Required fields are marked *

*