Don't Miss

ಕಾಮಲಾ ಹ್ಯಾರಿಸ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಟೆಲಿಪ್ರಾಂಪ್ಟರ್ ಬಳಸಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಕಮಲಾ ಹ್ಯಾರಿಸ್ ಯುನಿವಿಷನ್ ಟೌನ್ ಹಾಲ್ ನಲ್ಲಿ ಕಾಣಿಸಿಕೊಂಡಾಗ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುತ್ತಿದ್ದಾರೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಟೌನ್ ಹಾಲ್ ನಿಯಂತ್ರಕರಿಗೆ ಸಹಾಯ ಮಾಡಲು ಟೆಲಿಪ್ರಾಂಪ್ಟರ್ ಸ್ಪ್ಯಾನಿಷ್‌ನಲ್ಲಿ ಬರೆದ ಪಠ್ಯವನ್ನು ತೋರಿಸುತ್ತದೆ, ಹ್ಯಾರಿಸ್‌ಗಾಗಿ ಅಲ್ಲ.

ರೇಟಿಂಗ್: ತಪ್ಪು ನಿರೂಪಣೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಯುನಿವಿಷನ್ ಟೌನ್ ಹಾಲ್ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಟೆಲಿಪ್ರೊಂಪ್ಟರ್ ಅನ್ನು ಬಳಸುತ್ತಿದ್ದರು ಎಂದು ಹೇಳುವ ವೀಡಿಯೊವನ್ನು X ನಲ್ಲಿ ಹಂಚಿಕೊಳ್ಳಲಾಗಿದೆ

ಹ್ಯಾರಿಸ್ ಮಾತನಾಡುತ್ತಿರುವಾಗ ಕ್ಯಾಮೆರಾ ಅವರ ಹಿಂಬದಿಯಲ್ಲಿ ತಿರುಗಿದಾಗ ಟೆಲಿಪ್ರೊಂಪ್ಟರ್ ಅನ್ನು ತೋರಿಸುತ್ತದೆ, ಅದರಲ್ಲಿನ ಪಠ್ಯ ಓದಲು ಸಾಧ್ಯವಾಗದಷ್ಟು ಚಿಕ್ಕದು, ಇದನ್ನು ಬಹುತೇಕವಾಗಿ ಟ್ರಂಪ್ ಅಭಿಯಾನ  ಹಂಚಿಕೊಂಡಿದೆ .”ದ ಟೆಲಿಪ್ರೊಂಪ್ಟರ್ ” ಎಂಬ ಶೀರ್ಷಿಕೆಯೊಂದಿಗೆ ಈ ಪೋಸ್ಟ್ ಅನ್ನು X ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಸತ್ಯ ಪರಿಶೀಲನೆ

ವೀಡಿಯೊದ ಕೊನೆಯ ಕ್ಷಣದಲ್ಲಿ, ಟೆಲಿಪ್ರಾಂಪ್ಟರ್ ನಿಂತುಹೋಗುವುದು ಕಂಡುಬರುತ್ತದೆ, ಆದರೆ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುವವರು ಸಾಮಾನ್ಯವಾಗಿ ನಿಲ್ಲಿಸುವಂತೆ, ಹ್ಯಾರಿಸ್ ಮಾತನಾಡುವುದನ್ನು ನಿಲ್ಲಿಸಲಿಲ್ಲ. ಟೆಲಿಪ್ರಾಂಪ್ಟರ್ ನಿಂತ ನಂತರ ಪುನಃ ಆನ್‌ ಆಗುವುದಿಲ್ಲ, ಆದರೆ ಹ್ಯಾರಿಸ್ ರವರು ಅದರ ನೆರವಿಲ್ಲದೆ ಮಾತನಾಡುವುದನ್ನು ಮುಂದುವರೆಸುವುದನ್ನು ಯುನಿವಿಷನ್ ಅಪ್ಲೋಡ್ ಮಾಡಿದ ಮೂಲ ಯೂಟ್ಯೂಬ್ ವೀಡಿಯೊದ 6ನೇ ನಿಮಿಷದಲ್ಲಿರುವ ವೀಡಿಯೊ ಕ್ಲಿಪ್ ತೋರಿಸುತ್ತದೆ.

ಆರೋಪಗಳು ಕಾಣಿಸಿಕೊಂಡಾಗ, ಯೂನಿವಿಷನ್ ಹೇಳಿಕೆಯನ್ನು ನಿರಾಕರಿಸಿತು ಮತ್ತು ಟೆಲಿಪ್ರೊಂಪ್ಟರ್ ಸ್ಪ್ಯಾನಿಷ್ ನಲ್ಲಿತ್ತೆಂದು ಹೇಳುತ್ತದೆ. ಟೌನ್ ಹಾಲ್ ನಿಯಂತ್ರಕ, ಎನ್ರಿಕೆ ಅಸೆವೆಡೊ, ಟೆಲಿಪ್ರಾಂಪ್ಟರ್ ತಮಗೆ ಸ್ಪ್ಯಾನಿಷ್‌ನಲ್ಲಿ ನಿಯಂತ್ರಣ ಮಾಡಲು ನೆರವಿಗೆ ಇಡಲಾಗಿತ್ತು, ಹ್ಯಾರಿಸ್‌ಗಾಗಿ ಅಲ್ಲ, ಎಂದು ಹೇಳಿದರು.

ಯುನಿವಿಷನ್ ನ್ಯೂಸ್ ಅಧ್ಯಕ್ಷರಾದ ಡ್ಯಾನಿಯಲ್ ಕೋರೊನೇಲ್ ಕೂಡ X ಪೋಸ್ಟ್‌ನಲ್ಲಿನ ಈ ಹೇಳಿಕೆಯನ್ನು ನಿರಾಕರಿಸಿದರು.

“ಅದು ನಿಜವಲ್ಲ. ಸ್ಪ್ಯಾನಿಷ್‌ನಲ್ಲಿ ಬರೆದ ಪಠ್ಯವನ್ನು ತೋರಿಸುವ ಟೆಲಿಪ್ರಾಂಪ್ಟರ್, ಟೌನ್ ಹಾಲ್ ನಿಯಂತ್ರಕರಿಗಾಗಿ ಒಂದು ಆಧಾರ ಅಂಶವಾಗಿತ್ತು. ನಾನು ನಿಮಗೆ ಇದನ್ನು ನೇರ ತಿಳುವಳಿಕೆಯೊಂದಿಗೆ ಹೇಳಬಹುದು, ಏಕೆಂದರೆ ನಾನು ಟೆಲಿವಿಜನ್ ಕಾರ್ಯಕ್ರಮದ ಉಸ್ತುವಾರಿಯಾಗಿದ್ದೆ,” ಎಂದು ಕೋರೊನೇಲ್ ಟ್ವೀಟ್ ಮಾಡಿದ್ದರು.

ಆದ್ದರಿಂದ, ಹ್ಯಾರಿಸ್ ಟೆಲಿಪ್ರಾಂಪ್ಟರ್‌ನಿಂದ ಮಾತನಾಡುತ್ತಿದ್ದಾರೆ ಎಂಬ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಹೈದರಾಬಾದ್‌ನಲ್ಲಿ ಈ ಅಪಾಯಕಾರಿ ರೀಲ್‌ಗಾಗಿ ಯುವಕ ಬಸ್‌ನ ಮುಂದೆ ಮಲಗಿರುವುದನ್ನು ಈ ವೀಡಿಯೊ ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*