ಹೇಳಿಕೆ/Claim: ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ‘ತೌಬಾ ತಾಬಾ’ ಎಂಬ ಬಾಲಿವುಡ್ ಹಾಡಿಗೆ ನೃತ್ಯ ಮಾಡುತ್ತಿದ್ದಾರೆ.
ಕಡೆನುಡಿ/Conclusion: ತಪ್ಪು ನಿರೂಪಣೆ. ವೀಡಿಯೊದಲ್ಲಿ, ‘ತೌಬಾ ತೌಬಾ’ ಹಾಡಿಗೆ ನೃತ್ಯ ಮಾಡುತ್ತಿರುವ ವ್ಯಕ್ತಿಯು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅಲ್ಲ, ಅದು ನೃತ್ಯ ಸಂಯೋಜಕ ಕಿರಣ್ ಜೋಪಾಲೆ.
ರೇಟಿಂಗ್:ತಪ್ಪು ನಿರೂಪಣೆ—
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಲಾಂಗ್ ಫಾರ್ಮ್ಯಾಟ್ ಕ್ರಿಕೆಟ್ ನಲ್ಲಿ 800 ವಿಕೆಟ್ಗಳು, ಒಡಿಐ-ಗಳಲ್ಲಿ 534 ವಿಕೆಟ್ಗಳು ಮತ್ತು ಟಿ20 ಗಳಲ್ಲಿ 13 ವಿಕೆಟ್ಗಳನ್ನು ಪಡೆದ ದಾಖಲೆಗೆ ಹೆಸರುವಾಸಿಯಾಗಿರುವ ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು 2015ರಿಂದೀಚೆಗೆ ಸನ್ರೈಸರ್ಸ್ ಹೈದರಾಬಾದ್ನ ಬೌಲಿಂಗ್ ಕೋಚ್ ಮತ್ತು ಮಾರ್ಗದರ್ಶಕರಾಗಿದ್ದರು. ಈ ಮಾಜಿ ಕ್ರಿಕೆಟಿಗರು 800 ಎಂಬ ಶೀರ್ಷಿಕೆಯ ತಮ್ಮ ಬಯೋಪಿಕ್ ನಿರ್ಮಿಸುತ್ತಿದ್ದಾರೆ ಎಂಬ ಸುದ್ದಿಯ ನಡುವೆ, ಈತ ‘ತೌಬಾ, ತೌಬಾ’ ಎಂಬ ಪ್ರಸಿದ್ಧ ಬಾಲಿವುಡ್ ಹಾಡಿಗೆ ಹೆಜ್ಜೆ ಹಾಕುತ್ತಿರುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮದ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಹೇಳಿಕೆ ಹೀಗಿದೆ – ” SRH ಬೌಲಿಂಗ್ ಕೋಚ್ ಮುತ್ತಯ್ಯ ಮುರಳೀಧರನ್ ತೌಬಾ ತೌಬಾಗೆ ಮೈ ಕುಣಿಸುತ್ತಿರುವುದು”.
SRH Bowling Coach Muttaiah Muralidharan Vibing To Tauba Tauba
pic.twitter.com/utaTMzTBqw
— Johnnie Walker
(@Johnnie5ir) July 30, 2024
ಈ ವೀಡಿಯೊವನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.
FACT CHECK
ಡಿಜಿಟೈ ಇಂಡಿಯಾ ತಂಡದ ನಾವು ಸತ್ಯ-ಪರಿಶೀಲನೆಗಾಗಿ ಇದನ್ನು ಕೈಗೆತ್ತಿಕೊಂಡು ಯೂಟ್ಯೂಬ್ನಲ್ಲಿ ಮೂಲ ವೀಡಿಯೊವನ್ನು ಹುಡುಕಿದೆವು. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೀಡಿಯೊವನ್ನು ನೃತ್ಯ ಸಂಯೋಜಕರಾದ ಕಿರಣ್ ಜೋಪಾಲೆ ಅಪ್ಲೋಡ್ ಮಾಡಿದ್ದಾರೆ, ಈತನ ಯುಟ್ಯೂಬ್ ವಾಹಿನಿಯು 1.1 ಮಿಲಿಯಕ್ಕಿಂತಲೂ ಹೆಚ್ಚು ಸಬ್ಸ್ಕೈಬರ್ ಗಳನ್ನು ಹೊಂದಿದೆ ಮತ್ತು ಇದನ್ನು ಫೇಸ್ಬುಕ್ ನಲ್ಲಿ ಇಲ್ಲಿ ನೋಡಬಹುದು.
ಹಲವಾರು ವೀಡಿಯೊಗಳನ್ನು ಹೊಂದಿರುವ ಕಿರಣ್, ಬಾಲಿವುಡ್ ಹಾಡುಗಳಿಗೆ ಸಂಬಂಧಿತ ಕಾರ್ಯಾಗಾರಗಳನ್ನು ನಡೆಸುತ್ತಾರೆ ಮತ್ತುಈ ವೀಡಿಯೊ ಅವುಗಳಲ್ಲಿ ಒಂದಾಗಿದೆ. ಆದ್ದರಿಂದ, ವೀಡಿಯೊದಲ್ಲಿ ಕುಣಿಯುತ್ತಿರುವ ವ್ಯಕ್ತಿಯು ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ (ಮುತ್ತಯ್ಯ ಮುರಳೀಥರನ್ ಎಂದೂ ಬರೆಯಲ್ಪಡುತ್ತದೆ) ಎಂಬ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಎನ್ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ