ಹೇಳಿಕೆ/Claim: ಹಸುವಿನ ತಲೆ ಮತ್ತು ದೇಹದ ಉಳಿದ ಭಾಗವು ಸೀಲ್ ನಂತಿರುವ ವಿಚಿತ್ರವಾದ ಸಮುದ್ರ ಪ್ರಾಣಿಯೊಂದನ್ನು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ಈ ಹೇಳಿಕೆಯು ಸುಳ್ಳು. ಈ ವೀಡಿಯೊ AI ರಚಿತವಾಗಿದೆ.
ರೇಟಿಂಗ್: ಸಂಪೂರ್ಣವಾಗಿ ತಪ್ಪು—
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು, ವಿಚಿತ್ರವಾದ ಸಮುದ್ರ ಪ್ರಾಣಿಯೊಂದರ ವೀಡಿಯೊಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಪ್ರಾಣಿಯ ತಲೆ ಹಸುವನ್ನು ಮತ್ತು ದೇಹದ ಉಳಿದ ಭಾಗವು ಸೀಲ್ ಅನ್ನು ಹೋಲುತ್ತದೆ. ಡಿಜಿಟೈ ಇಂಡಿಯಾ ತಂಡದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ಈ ಕೆಳಗಿಮ ಹಿಂದಿ ಶೀರ್ಷಿಕೆಯೊಂದಿಗೆ ಕೋರಿಕೆ ಬಂತು:
“समुद्री गाय आपने लोगो ने देखी हैं मैने तो पहली बार देखी हैं जय गऊ मां” [ಅನುವಾದ ಹೀಗಿದೆ: “ನೀವು ಸಮುದ್ರ ಹಸುಗಳನ್ನು ನೋಡಿದ್ದೀರಾ? ನಾನು ಮೊದಲ ಬಾರಿಗೆ ನೋಡುತ್ತಿದ್ದೇನೆ, ಜೈ ಗೋಮಾತೆ.”]
ಕೆಲವು ವೀಡಿಯೊಗಳನ್ನು ಇಲ್ಲಿ ನೋಡಬಹುದು:
FACT-CHECK
ಡಿಜಿಟೈ ಇಂಡಿಯಾ ತಂಡವು ವೀಡಿಯೊದಿಂದ ಕೆಲವು ಚಿತ್ರಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಲ್ಲಿ ಪರಿಶೀಲಿಸಿದಾಗ, ಫಲಿತಾಂಶಗಳಲ್ಲಿ ವಿಭಿನ್ನ ಶೀರ್ಷಿಕೆಗಳೊಂದಿಗೆ ಪೋಸ್ಟ್ ಮಾಡಲಾದ ಅನೇಕ ವೀಡಿಯೊಗಳ ಲಿಂಕ್‌ಗಳು ಕಂಡುಬಂದವು.
ಮೊದಲನೆಯದಾಗಿ, ವೀಡಿಯೊವನ್ನು ನೋಡುವಾಗ, ಪ್ರಾಣಿಯ ಕಣ್ಣುಗಳು ಅಲುಗಾಡುತ್ತಲೇ ಇಲ್ಲ ಎಂಬುದನ್ನು ಗಮನಿಸಬಹುದು, ಮತ್ತು ಸೂಕ್ಷ್ಮವಾಗಿ ನೋಡಿದರೆ, ಹಸುವಿನ ಹಿಂದೆ ನಡೆಯುತ್ತಿರುವ ಮನುಷ್ಯ 2 ಕಾಲುಗಳಿಂದ ನಡೆಯುತ್ತಾನೆ ಮತ್ತು ಇದ್ದಕ್ಕಿದ್ದಂತೆ ಹೆಚ್ಚಿನ ಒಂದು ಶೂ/ಕಾಲು ಕಾಣುತ್ತದೆ, ಇದು AI-ರಚಿತ ಚಿತ್ರಗಳಲ್ಲಿ ಕಂಡುಬರುವ ಜ್ಞಾತ ಸಮಸ್ಯೆ.
ಎರಡನೆಯದಾಗಿ, ಚಿತ್ರವು AI- ರಚಿತವೋ ಅಥವಾ ಮಾನವ-ರಚಿತವೋ ಎಂದು ಪರಿಶೀಲಿಸುವ “ಇಸ್ ಇಟ್ AI” ಎಂಬ AI ಇಮೇಜ್ ಡಿಟೆಕ್ಟರ್ ಟೂಲ್ ನಲ್ಲಿ ನಾವು ಚಿತ್ರವನ್ನು ಪರಿಶೀಲಿಸಿದಾಗ, ಕೆಳಗೆ ಕಾಣುವಂತೆ ” ಈ ಚಿತ್ರವು AI- ರಚಿತವಾಗಿರುವ ಸಾಧ್ಯತೆ ಅತ್ಯಧಿಕ” ಎಂಬ ಫಲಿತಾಂಶ ಒದಗಿತು:
ಇನ್ನೊಂದು ಚಿತ್ರವನ್ನು ಪರಿಶೀಲಿಸಿದಾಗಲೂ ಇದೇ ಫಲಿತಾಂಶ ದೊರಕಿತು. ಕೆಳಗೆ ನೋಡಿ:
ಚಿತ್ರಗಳನ್ನು ಆರಂಭದಿಂದ ರಚಿಸಲು AI ಚಿತ್ರ ಉತ್ಪಾದಕಗಳು ತರಬೇತಿ ಪಡೆದ ಕೃತಕ ನರ ಜಾಲಗಳನ್ನು ಬಳಸಿಕೊಳ್ಳುತ್ತವೆ. ಈ ಉತ್ಪಾದಕಗಳು ನೈಸರ್ಗಿಕ ಭಾಷೆಯಲ್ಲಿ ಒದಗಿಸಲಾದ ಲಿಖಿತ ಇನ್‌ಪುಟ್‌ನ ಆಧಾರದ ಮೇಲೆ ಮೂಲ, ನೈಜ ದೃಶ್ಯಗಳನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುತ್ತವೆ.
ಸಮಯದೊಂದಿಗೆ AI-ರಚಿತ ಚಿತ್ರಗಳು ಉತ್ತಮಗೊಳ್ಳುತ್ತಲೇ ಇವೆ, ಆದರೆ ನೀವು ಕಂಡುಹಿಡಿಯಬಹುದಾದಂತಹ ಕೆಲವು ಚಿಹ್ನೆಗಳು ಇವೆ.
-
ಕೈಗಳು ಮತ್ತು ಕಾಲುಗಳು.
-
ಪದಗಳು. …
-
ಕೂದಲು. …
-
ಸಮ್ಮಿತಿ. …
-
ಮೇಲ್ವಿನ್ಯಾಸ …
-
ರೇಖಾಗಣಿತ. …
-
ಸ್ಥಿರತೆ. ..
ಇದಕ್ಕೆ ವಿರುದ್ಧವಾಗಿ, ಮಾನವ ರಚಿತ ಚಿತ್ರಗಳು, ಫೋಟೋಗಳು, ಪಠ್ಯ, ಗ್ರಾಫಿಕ್ ಇತ್ಯಾದಿಗಳನ್ನು ಬಳಸಿಕೊಂಡು ಮಾನವ ರಚಿಸುವ ನೈಜ ಚಿತ್ರಗಳು, ಇವುಗಳಲ್ಲಿ AI- ರಚಿತ ಚಿತ್ರಗಳಲ್ಲಿ ಕಂಡುಬರುವ ಯಾವುದೇ ವಿರೂಪತೆ ಇರುವುದಿಲ್ಲ. ಇದಲ್ಲದೆ, ವೈಜ್ಞಾನಿಕವಾಗಿ ಸಿರೆನಿಯಾ ಅಥವಾ ಸಿರೇನಿಯನ್ಸ್ ಎಂದು ಕರೆಯಲ್ಪಡುವ ಸಮುದ್ರ ಹಸುಗಳು, ಜೌಗು ಪ್ರದೇಶಗಳಲ್ಲಿ, ನದಿಗಳಲ್ಲಿ, ನದೀಮುಖಗಳಲ್ಲಿ, ಸಮುದ್ರೀಯ ಜೌಗು ಪ್ರದೇಶಗಳಲ್ಲಿ ಮತ್ತು ಕರಾವಳಿ ಸಮುದ್ರೀಯ ನೀರಿನಲ್ಲಿ ವಾಸಿಸುವ ಜಲಚರ, ಸಸ್ಯಾಹಾರಿ ಸಸ್ತನಿ ಪ್ರಾಣಿಗಳ ಜಾತಿ. ನಾವು ದಿನನಿತ್ಯ ನೋಡುವ ಗೋವಿನ ಸಾಮಾನ್ಯ ಗ್ರಹಿಕೆಗೂ ಇವುಗಳಿಗೂ ಯಾವುದೇ ಸಂಬಂಧವಿಲ್ಲ.
ಆದ್ದರಿಂದ, ಸಮುದ್ರ ಹಸುವಿನ ಬಗೆಗಿನ ಚಿತ್ರದಲ್ಲಿನ ಮೇಲಿನ ಹೇಳಿಕೆಯು ಸುಳ್ಳು.
**********************************************************************************
ಇದನ್ನೂ ಓದಿ:
ಸೈನಿಕರ (ಅಗ್ನಿವೀರರ) ನೇಮಕಾತಿಗಾಗಿರುವ ಅಗ್ನಿಪಥ್ ಯೋಜನೆಯನ್ನು ಪುನರಾರಂಭಿಸಲಾಗಿದೆಯೇ? ಸತ್ಯ ಪರಿಶೀಲನೆ
ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ