ಹೇಳಿಕೆ/Claim: ಇದೀಗ ಭಾರೀ ಮಳೆಗಳಿಂದಾಗಿ ಕೊಚ್ಚಿ ಹೋಗುತ್ತಿರುವ ವಾಹನಗಳಿಂದ ಆವೃತ್ತ ಮುಂಬೈ ರಸ್ತೆಗಳನ್ನು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion:ಈ ಹೇಳಿಕೆ ಸುಳ್ಳು. ಆಗಸ್ಟ್ 2020ರ ಹಳೆಯ ವೀಡಿಯೊವನ್ನು ಇತ್ತೀಚಿನದೆಂದು ಹಂಚಿಕೊಳ್ಳಲಾಗಿದೆ.
ರೇಟಿಂಗ್: ತಪ್ಪು ನಿರೂಪಣೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಮುಂಬೈ ಮಳೆಯು ಒಂದು ವಾರದಲ್ಲಿ ಎರಡನೇ ಬಾರಿಗೆ ಮುಖ್ಯಾಂಶಗಳಲ್ಲಿ ಪ್ರಸಾರವಾಗುತ್ತಿದ್ದಂತೆ, ಭಾರೀ ಪ್ರಮಾಣದಲ್ಲಿ ನೀರು ತುಂಬಿಕೊಂಡಿರುವ ರಸ್ತೆಗಳಲ್ಲಿ ವಾಹನಗಳು ಕೊಚ್ಚಿ ಹೋಗುತ್ತಿರುವ ಒಂದು ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವೀಡಿಯೊದೊಂದಿಗಿರುವ ಹೇಳಿಕೆಯು ಮುಂಬೈಯಲ್ಲಿನ ಪ್ರಸ್ತುತ ಪರಿಸ್ಥಿತಿಯು ಹದಗೆಟ್ಟಿದೆಯೆಂದು ಹೇಳುತ್ತಾ ರಾಜ್ಯ ಸರ್ಕಾರವನ್ನು ಪ್ರಶ್ನಿಸುತ್ತದೆ.
Mumbai Rains From “What a Lovely to Vaat Lavali” in just 30 min 😜
गतिमान सरकार वाट लावली जोरदार pic.twitter.com/15xCFH6FKk
— भाऊ गॅंग Office (@BhauGangOffice) July 9, 2024
ಹೇಳಿಕೆ ಹೀಗಿದೆ: ಕೇವಲ 30 ನಿಮಿಷಗಳಲ್ಲಿ “ವಾಟ್ ಎ ಲವ್ಲಿ ಇಂದ ವಾಟ್ ಲವ್ಲಿ”ಗೆ ಮುಂಬೈ ಮಳೆಗಳು. ಸಂದರ್ಭ ಮುಂಬೈಯಲ್ಲಿ ಪ್ರಸ್ತುತ ಭಾರೀ ಮಳೆಯಾಗುತ್ತಿದ್ದು, ಭಾರತ ಹವಾಮಾನ ಇಲಾಖೆಯು (IMD) ನಗರ ಮತ್ತು ಥಾಣೆ, ನವಿ ಮುಂಬೈ, ಪನ್ವೆಲ್ ಮತ್ತು ರತ್ನಗಿರಿ-ಸಿಂಧುದುರ್ಗ ಕೂಡ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಲ್ಲಿ “ರೆಡ್ ಅಲರ್ಟ್” ಘೋಷಿಸಿದೆ.
FACT CHECK
ಡಿಜಿಟೈ ಇಂಡಿಯಾ ಪ್ರಮುಖ ಚಿತ್ರಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಪರಿಶೀಲಿಸಿದಾಗ, 2020 ರಲ್ಲಿ ನಗರವು ಭಾರಿ ಪ್ರವಾಹಕ್ಕೆ ಒಳಗಾದಾಗ ಸುದ್ದಿ ಟಿವಿ ವಾಹಿನಿಗಳು ವರದಿ ಮಾಡಿದ್ದ ಇದೇ ರೀತಿಯ ವೀಡಿಯೊಗಳನ್ನು ಫಲಿತಾಂಶಗಳು ಸೂಚಿಸಿದವು. ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಲಾದ ಮೂಲ ವೀಡಿಯೊವನ್ನು ಇಲ್ಲಿ ನೋಡಿ:
ಈ ವೀಡಿಯೊ, ಆಗಸ್ಟ್ 2020ರ ಸಮಯದಲ್ಲಿ ದಕ್ಷಿಣ ಮುಂಬೈಯ ಅನೇಕ ಭಾಗಗಳು ಪ್ರವಾಹದಿಂದ ಪೀಡಿತವಾಗಿದ್ದಾಗಿನದ್ದು ಎಂದು ಸುದ್ದಿ ವರದಿಗಳು ಸಹ ದೃಢಪಡಿಸಿವೆ. ನಗರದಲ್ಲಿ ಗಂಟೆಗೆ 70 ಕಿಮೀ ವೇಗದ ಬಿರುಗಾಳಿಗಳು ಕಂಡುಬಂದಿದ್ದವು ಹಾಗೂ ಈ ಸಮಯದಲ್ಲಿ ನೂರಾರು ಮರಗಳು ನೆಲಕ್ಕುರುಳಿದ್ದವು ಮತ್ತು ಹಲವು ರಸ್ತೆಗಳು ಜಲಾವೃತಗೊಂಡಿದ್ದವು ಎಂದು ವರದಿಗಳು ತಿಳಿಸಿವೆ.
ಆದ್ದರಿಂದ, ಈಗ ಹಂಚಿಕೊಳ್ಳಲಾಗುತ್ತಿರುವ ವೀಡಿಯೊ ಆಗಸ್ಟ್ 2020ರಲ್ಲಿ ಮುಂಬೈಯ ಕವಾಸ್ಜಿ ಪಟೇಲ್ ಟ್ಯಾಂಕ್ ರಸ್ತೆಯಲ್ಲಿ ಚಿತ್ರೀಕರಿಸಲಾದ ವೀಡಿಯೊ.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ