Don't Miss

ಪ್ರತಿಭಟನೆಯ ನಡುವೆಯೂ ಡಿಎಂಕೆ ಸರ್ಕಾರ ಗಣೇಶ ಮಂದಿರವನ್ನು ಕೆಡವಿದೆಯೇ? ವೀಡಿಯೋದೊಂದಿಗೆ ಸತ್ಯ ಪರಿಶೀಲನೆ

ಹೇಳಿಕೆ/Claim: ವ್ಯಾಪಕ ಪ್ರತಿಭಟನೆಯ ಹೊರತಾಗಿಯೂ ತಮಿಳುನಾಡಿನ DMK ಸರ್ಕಾರವು ಗಣೇಶ ದೇವಸ್ಥಾನವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ದೇವಾಲಯವನ್ನು ಕೆಡವುತ್ತಿರುವ ವೀಡಿಯೊವನ್ನು ತೋರಿಸಲಾಗುತ್ತಿದೆ.

ಕಡೆನುಡಿ/Conclusion: ಹೇಳಿಕೆ ಸುಳ್ಳು. ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿರುವ  ನಾಲ್ಕು ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ತಮಿಳುನಾಡಿನ ಕಲ್ಲಲುರಿಚಿಯಲ್ಲಿ ನೀರಾವರಿ ಕಾಲುವೆಯನ್ನು ಅತಿಕ್ರಮಿಸಿದ್ದ 36 ಕಟ್ಟಡಗಳನ್ನು ಕೆಡವುವ ಕಾರ್ಯಾಚರಣೆಯ ಭಾಗವಾಗಿ ಪುರಸಭೆಯ ಅಧಿಕಾರಿಗಳು ದೇವಾಲಯವದ ಕೆಡವುವಿಕೆಯನ್ನು ಆರಂಭಿಸಿದರು.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ–

ಸತ್ಯ ಪರಿಶೀಲನೆ ವಿವರಗಳು

ವ್ಯಾಪಕ ವಿರೋಧದ ಹೊರತಾಗಿಯೂ ತಮಿಳುನಾಡಿನ ಡಿಎಂಕೆ ಸರ್ಕಾರವು ಗಣಪತಿ ದೇವಾಲಯವನ್ನು ಕೆಡವಿದೆ ಎಂಬ ಹೇಳಿಕೆಯೊಂದಿಗೆ ರಸ್ತೆ ಬದಿಯ ಒಂದು ದೇವಾಲಯವನ್ನು ಕೆಡವಲಾಗುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೇಳಿಕೆ ಹೀಗಿದೆ: “ತಮಿಳುನಾಡಿನ ಡಿಎಂಕೆ ಸರ್ಕಾರವು ವ್ಯಾಪಕ ಪ್ರತಿಭಟನೆಗಳನ್ನು ನಿರ್ಲಕ್ಷಿಸಿ, ಗಣೇಶನ ದೇವಾಲಯವನ್ನು ಕೆಡವಿದೆ. ಇದು ಆಕ್ರಮಿತ ಭೂಮಿಯಲ್ಲಿರುವುದಾಗಿ ಹೇಳಿ, ಅವರು ಅದರ ಸುತ್ತಲೂ ಇತರ ಕಟ್ಟಡಗಳಿದ್ದರೂ ದೇವಾಲಯವನ್ನು ಪ್ರತ್ಯೇಕವಾಗಿ ಕೆಡವಿದರು. ಚುನಾವಣೆಯ ನಂತರ ನಡೆಸಲಾದ ಈ ಕೆಡವುವಿಕೆಯು ಅವರ ಹಿಂದೂ ವಿರೋಧಿ ಪಕ್ಷಪಾತವನ್ನು ಬಹಿರಂಗಗೊಳಿಸುತ್ತದೆ.”

ಇದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಹಾಗೂ ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.

ಈ ಸುದ್ದಿಯನ್ನು ಇಲ್ಲಿ ಕಾಣುವಂತೆ ABP ನ್ಯೂಸ್ ತೆಲುಗಿನಲ್ಲಿಯೂ ಪ್ರಸಾರಪಡಿಸಿದೆ:

ಸತ್ಯ ಪರಿಶೀಲನೆ :

ಈ ವೀಡಿಯೊದ ಸತ್ಯ ಪರಿಶೀಲನೆ ಮಾಡುವಂತೆ ಡಿಜಿಟೈ ಇಂಡಿಯಾ ತಂಡವು ವಿನಂತಿಯನ್ನು ಸ್ವೀಕರಿಸಿದಾಗ, ನಾವು ಮೊದಲು ವೀಡಿಯೊದ ಪ್ರಮುಖ ಫ್ರೇಮ್ ಗಳನ್ನೂ ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ನಲ್ಲಿ ಹುಡುಕಿದೆವು. ವೀಡಿಯೊ ಸರಿಯಾಗಿದೆ ಆದರೆ ಹೇಳಿಕೆ ನಿಜವಲ್ಲ ಎಂದು ಫಲಿತಾಂಶಗಳು ತೋರಿಸಿದವು.

ನೀರಾವರಿ ಕಾಲುವೆಯ ಉದ್ದಕ್ಕೂ ಇರುವ ಹಲವಾರು ಕಟ್ಟಡಗಳು ಮತ್ತು ದೇವಾಲಯಗಳು ಸೇರಿದಂತೆ 36 ಒತ್ತುವರಿಗಳನ್ನು ಖಾಲಿ ಮಾಡುವಂತೆ ಮದ್ರಾಸ್ ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಕಲ್ಲಕುರಿಚಿಯ ಗಾಂಧಿ ರಸ್ತೆಯಲ್ಲಿರುವ ಪಿಳ್ಳೈಯಾರ್ (ವಿನಾಯಕ) ದೇವಸ್ಥಾನವನ್ನು ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ ಎಂದು ಸುದ್ದಿ ವರದಿಗಳು ತಿಳಿಸಿವೆ.

ನಾವು ಮತ್ತಷ್ಟು ಹುಡುಕಿದಾಗ, ಈ ಕೆಡವುವಿಕೆಯ ಕುರಿತು ಅಧಿಕೃತ ವಿವರಣೆಯನ್ನು ತಮಿಳುನಾಡು ಸರ್ಕಾರದ DIPR ನೀಡಿರುವುದು ಕಂಡುಬಂತು:

ಕಲ್ಲಕುರುಚಿಯ ಗಾಂಧಿ ರಸ್ತೆಯಲ್ಲಿರುವ ದೇವಾಲಯಗಳನ್ನು ಕೆಡವುವ ಕ್ರಮವು, ಮದ್ರಾಸ್ ಉಚ್ಚ ನ್ಯಾಯಾಲಯದಲ್ಲಿ 2020 ರಲ್ಲಿ ದಾಖಲಿಸಲಾದ ಪ್ರಕರಣವನ್ನು ಆಧರಿಸಿದೆ ಎಂದು ಅಧಿಕಾರಿಗಳು ವಿವರಿಸಿದರು, ಈ ಆದೇಶದಲ್ಲಿ ನೀರಾವರಿ ಕಾಲುವೆಯ ಉದ್ದಕ್ಕೂ ಅಕ್ರಮವಾಗಿ ನಿರ್ಮಿಸಲಾದ ಖಾಸಗಿ ಕಟ್ಟಡಗಳು, ಮನೆಗಳು, ಔಷಧಿ ಅಂಗಡಿ ಮತ್ತು ದೇವಸ್ಥಾನವೂ ಸೇರಿದಂತೆ 36 ಕಟ್ಟಡಗಳನ್ನು ತೆಗೆದುಹಾಕಲು ನ್ಯಾಯಾಲಯ ಆದೇಶಿಸಿದೆ.

ತಮಿಳುನಾಡಿನಲ್ಲಿ 2020ರಲ್ಲಿ AIADMK ನೇತೃತ್ವದ ಸರ್ಕಾರವು ಅಧಿಕಾರದಲ್ಲಿತ್ತು. DMK ಮೇ 2021 ರಲ್ಲಿ ಅಧಿಕಾರಕ್ಕೆ ಬಂದಿತು. ಯಾವ ಪಕ್ಷದ ಸರ್ಕಾರವು ಅಧಿಕಾರದಲ್ಲಿದ್ದರೂ ನ್ಯಾಯಾಲಯದ ಆದೇಶಗಳನ್ನು ಕೈಗೊಳ್ಳಲಾಗುತ್ತದೆ. ಹಾಗಾಗಿ, ಇದು DMK ಸರ್ಕಾರದ ನಡೆ ಎಂಬ ಹೇಳಿಕೆ ನಿಜವಲ್ಲ.

ಇದನ್ನೂ ಓದಿ:

ನಾಳೆಯಿಂದ ಉಚಿತ ವಿದ್ಯುತ್ ಅನುದಾನ ನಿಲ್ಲುತ್ತದೆ ಎಂದು ದೆಹಲಿ ಸಚಿವೆ ಅತಿಶಿ ಹೇಳಿದ್ದಾರಾ? ಸತ್ಯ ಪರಿಶೀಲನೆ

ಅನೇಕ ದೇಶಗಳಲ್ಲಿ ಭಾರತೀಯ ತರಕಾರಿಗಳನ್ನು ನಿಷೇಧಿಸಲಾಗಿದೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*