Don't Miss

ಸ್ಯಾಂಟಿಯಾಗೊ ಏರ್ಲೈನ್ಸ್ 513 ವಿಮಾನವು 1954 ರಲ್ಲಿ ಟೇಕ್ ಆಫ್ ಮತ್ತು 1989ರಲ್ಲಿ ಮನುಷ್ಯರ ಅಸ್ಥಿಪಂಜರಗಳೊಂದಿಗೆ ಲ್ಯಾಂಡ್? ಸತ್ಯ ಪರಿಶೀಲನೆ

ಹೇಳಿಕೆ/Claim:  1954 ರಲ್ಲಿ ಸ್ಯಾಂಟಿಯಾಗೊ ಏರ್ಲೈನ್ಸ್ ವಿಮಾನ 513 ಆಚೆನ್ನಿಂದ ಹೊರಟು 35 ವರ್ಷಗಳ ನಂತರ 1989ರಲ್ಲಿ ಪೋರ್ಟೊ ಅಲೆಗ್ರೆಯಲ್ಲಿ ಮಾನವ ಅಸ್ಥಿಪಂಜರಗಳೊಂದಿಗೆ ಬಂದಿಳಿಯಿತು.

ಕಡೆನುಡಿ/Conclusion: ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳು ನಗರ ಪುರಾಣಗಳು ಮತ್ತು ಪಿತೂರಿಗಳ ಸಿದ್ಧಾಂತಗಳ ವಿಷಯವಸ್ತುವಾಗಿದೆ. ಸ್ಯಾಂಟಿಯಾಗೊ ಏರ್ಲೈನ್ಸ್ ಅಸ್ತಿತ್ವದಲ್ಲಿತ್ತು ಎಂದು ಸಾಬೀತುಪಡಿಸುವ ಯಾವುದೇ ದಾಖಲೆಗಳಿಲ್ಲ. ಆಚೆನ್ ವಿಮಾನ ನಿಲ್ದಾಣದಲ್ಲಿ ಎಂದೂ ಯಾವುದೇ ಟ್ರಾನ್ಸ್ ಅಟ್ಲಾಂಟಿಕ್ ವಿಮಾನಗಳು ಇರಲಿಲ್ಲ. ಈ ಹೇಳಿಕೆಗಳು ಭೌತಶಾಸ್ತ್ರ ಮತ್ತು ಜೀವಶಾಸ್ತ್ರದ ನಿಯಮಗಳನ್ನು ಉಲ್ಲಂಘಿಸುತ್ತವೆ. ಈ ಘಟನೆಯ ಕುರಿತು ಯಾವುದೇ ವಿಶ್ವಾಸಾರ್ಹ ಅಥವಾ ಪರಿಶೀಲಿತ ಮಾಹಿತಿಯು ಆನ್ಲೈನ್ ವೇದಿಕೆಯಲ್ಲಿ ಲಭ್ಯವಿಲ್ಲ.

ರೇಟಿಂಗ್:ಸಂಪೂರ್ಣವಾಗಿ ಸುಳ್ಳು-Five rating

ಸತ್ಯ ಪರಿಶೀಲನೆ ವಿವರಗಳು:

1954 ರಲ್ಲಿ ಪಶ್ಚಿಮ ಜರ್ಮನಿಯ ಆಚೆನ್ನಿಂದ ಬ್ರೆಜಿಲ್ ನ ಪೋರ್ಟೊ ಅಲೆಗ್ರೆಗೆ ಸ್ಯಾಂಟಿಯಾಗೊ ಏರ್ಲೈನ್ಸ್ ನ 513 ವಿಮಾನವು ಟೇಕ್ ಆಫ್ ಆಗಿತ್ತು ಎಂದು ವೈರಲ್ ವೀಡಿಯೊ ಹೇಳುತ್ತದೆ. 18 ಗಂಟೆಗಳಲ್ಲಿ ಪೂರ್ಣಗೊಳ್ಳಬೇಕಿದ್ದ ಪ್ರಯಾಣವು 35 ವರ್ಷ ತೆಗೆದುಕೊಂಡಿತು. ವಿಮಾನವು 1989ರಲ್ಲಿ ಪೋರ್ಟೊ ಅಲೆಗ್ರೆ ವಿಮಾನ ನಿಲ್ದಾಣದಲ್ಲಿ ಇಳಿಯಿತು ಎಂದು ಸಹ ವೀಡಿಯೊ ಹೇಳುತ್ತದೆ. ಆದರೆ ಅಧಿಕಾರಿಗಳು ವಿಮಾನವನ್ನು ತೆರೆದಾಗ, ಪ್ರಯಾಣಿಕರ ಆಸನಗಳಲ್ಲಿ ಅಸ್ಥಿಪಂಜರಗಳು ಕಂಡುಬಂದವು, ಕಾಕ್ಪಿಟ್ ನಲ್ಲಿ ಕೂಡ.

ಡಿಜಿಟೈ ಇಂಡಿಯಾ ತಂಡಕ್ಕೆ ಈ ವೈರಲ್ಚಿ ವೀಡಿಯೊ ಸತ್ಯ-ಪರಿಶೀಲನೆಗಾಗಿ ವಾಟ್ಸಾಪ್‌ ಮೂಲಕ ದೊರಕಿತು.

ಈ ವೈರಲ್ ವೀಡಿಯೊದ ಮೂಲವನ್ನು ಕಂಡುಹಿಡಿಯಲು ತಂಡವು ಸಾಮಾಜಿಕ ಜಾಲತಾಣಗಳನ್ನು ಹುಡುಕಿದಾಗ, ಈ ವೀಡಿಯೊ 2023ರ ಆಗಸ್ಟ್ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎಂದು ನಾವು ಗಮನಿಸಿದೆವು. ಭಾರತದಲ್ಲಿ ಸರಕಾರವು ನಿಷೇಧಿಸಿರುವ ವೀಡಿಯೊ ಹಂಚಿಕೆ ವೇದಿಕೆಯಾದ ಟಿಕ್ಟಾಕ್ನಲ್ಲಿ ತಾವು ಈ ವೀಡಿಯೊವನ್ನು ಕಂಡಿರುವುದಾಗಿ ಒಂದು ವೈರಲ್ ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.

FACT CHECK

ವೀಡಿಯೊದಲ್ಲಿ ಮಾಡಲಾದ ಹೇಳಿಕೆಗಳನ್ನು ಪರಿಶೀಲಿಸುವ ಸಲುವಾಗಿ ಸ್ಯಾಂಟಿಯಾಗೊ ಏರ್ಲೈನ್ಸ್ ಕುರಿತಾದ ವಿವರಗಳನ್ನು ಅರಿಯಲು ನಾವು ಗೂಗಲ್ ನಲ್ಲಿ ಹುಡುಕಿದೆವು. ಈ ಏರ್ಲೈನ್ ಬಗ್ಗೆ ಉಲ್ಲೇಖಿವಿದ್ದ ಯಾವುದೇ ವಿಶ್ವಾಸಾರ್ಹ ದಾಖಲೆಯು ಡಿಜಿಟಿ ಇಂಡಿಯಾ ತಂಡಕ್ಕೆ ಸಿಗಲಿಲ್ಲ. ಹಿಂದೆ ಸ್ಯಾಂಟಿಯಾಗೊ ಏರ್ಲೈನ್ಸ್ ಎಂದು ಕರೆಯಲ್ಪಡುತ್ತಿದ್ದ ಈಗಿನ ಯಾವುದೇ ಏರ್ಲೈನ್ನ ದಾಖಲೆಗಳಿಲ್ಲ.

ನಂತರ, ನಾವು ಆಚೆನ್ ನಗರದತ್ತ ನೋಡಿದೆವು. ಆಚೆನ್ ಎಂಬುದು ಪಶ್ಚಿಮ ಜರ್ಮನಿಯಲ್ಲಿರುವ ಒಂದು ನಗರ. ಇದು ಪಶ್ಚಿಮಕ್ಕೆ ಬೆಲ್ಜಿಯಂ ಮತ್ತು ನೆದರ್ಲ್ಯಾಂಡ್ಸ್ ಗಡಿಯಾಗಿದೆ. ಈ ನಗರದಲ್ಲಿ ಕೇವಲ ಒಂದು ವಿಮಾನ ನಿಲ್ದಾಣವಿದೆ, ಅದು ಮಾಸ್ಟ್ರಿಚ್ ಆಚೆನ್ ವಿಮಾನ ನಿಲ್ದಾಣ. ನಾವು ಅದರ ಇತಿಹಾಸ ಮತ್ತು ಅದರ ಪ್ರಸ್ತುತ ಮಾಹಿತಿಯನ್ನು ನೋಡಿದಾಗ, ಈ ವಿಮಾನ ನಿಲ್ದಾಣದಲ್ಲಿ ಯಾವುದೇ ಅಂತಾರಾಷ್ಟ್ರೀಯ ವಿಮಾನಗಳ ನಿರ್ಗಮನ ಅಥವಾ ಆಗಮನವಿಲ್ಲ ಎಂಬುದನ್ನು ನಾವು ಕಂಡುಕೊಂಡೆವು. ವೈರಲ್ ವೀಡಿಯೊದ ಅನುಸಾರ, ಸ್ಯಾಂಟಿಯಾಗೊ ಏರ್ಲೈನ್ ವಿಮಾನವು ಅಟ್ಲಾಂಟಿಕ್ ಮಹಾಸಾಗರವನ್ನು ದಾಟುತ್ತಾ ಆಚೆನ್ ಮತ್ತು ಪೋರ್ಟೊ ಅಲೆಗ್ರೆ ನಡುವೆ ಹಾರುತ್ತಿತ್ತು. ಇದೊಂದು ಅಂತಾರಾಷ್ಟ್ರೀಯ ಮಾರ್ಗ. ಆಚೆನ್ಗೆ ಅಂತಾರಾಷ್ಟ್ರೀಯ ವಿಮಾನಗಳಿವೆ ಎಂದು ತೋರಿಸುವ ಯಾವುದೇ ಮಾಹಿತಿ ಲಭ್ಯವಿಲ್ಲ.

ನಾವು ಮತ್ತಷ್ಟು ಹುಡುಕಾಡಿದಾಗ, ಈ ಘಟನೆಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಮೂಲವು ನಮಗೆ ದೊರೆತಿಲ್ಲ. ಇಂತಹ ಘಟನೆ ನಡೆದದ್ದೇ ಆದರೆ ಮಾಧ್ಯಮಗಳು ಈ ಸುದ್ದಿಯನ್ನು ವ್ಯಾಪಕವಾಗಿ ವರದಿ ಮಾಡುತ್ತಿದ್ದವು. 1989ರಲ್ಲಿ, ಕ್ಯಾಮೆರಾಗಳು ಮತ್ತು ವೀಡಿಯೊಗಳು ಇದ್ದೇ ಇದ್ದವು. ಅವುಗಳಲ್ಲಿ ಈ ಘಟನೆಯನ್ನು ಸೆರೆಹಿಡಿಯಲಾಗಿರುತ್ತಿತ್ತು. ಅಷ್ಟೇ ಅಲ್ಲದೆ, ಇದನ್ನು ವಿಜ್ಞಾನಿಗಳು ಕೂಡ ಅಧ್ಯಯನ ಮಾಡಿರುತ್ತಿದ್ದರು. ಆದರೆ, ಈ ವಿಷಯದಲ್ಲಿರುವ ಹೇಳಿಕೆಯನ್ನು ಪುಷ್ಠಿಕರಿಸುವ ಯಾವುದೇ ವೈಜ್ಞಾನಿಕ ಅಧ್ಯಯನವಿಲ್ಲ.

ಈ ವೀಡಿಯೊದಲ್ಲಿ ವರ್ಮ್ಹೋಲ್ ಮತ್ತು ಕಪ್ಪು ಕುಳಿಯ ಉಲ್ಲೇಖವಿದೆ. ನಾಸಾ ಹೇಳಿರುವಂತೆ, ಕಪ್ಪು ಕುಳಿಯೆಂದರೆ “ಕಪ್ಪು ಕುಳಿಯು ಬಾಹ್ಯಾಕಾಶದಲ್ಲಿರುವ ಒಂದು ಸ್ಥಳ. ಇಲ್ಲಿ ಗುರುತ್ವಾಕರ್ಷಣೆಯು ಎಷ್ಟು ಬಲವಾಗಿರುತ್ತದೆಯೆಂದರೆ, ಬೆಳಕು ಸಹ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಗುರುತ್ವಾಕರ್ಷಣೆಯು ಅಷ್ಟು ಪ್ರಬಲವಾಗಿರುವುದು ಏಕೆಂದರೆ ಮ್ಯಾಟರ್ ಅನ್ನು ಒಂದು ಸಣ್ಣ ಜಾಸ್ಥಳದೊಳಗೆ ಹಿಡಿದಿಡಲಾಗಿರುತ್ತದೆ. ಒಂದು ನಕ್ಷತ್ರವು ಕೊನೆಗೊಳ್ಳುತ್ತಿರುವಾಗ ಇದು ಸಂಭವಿಸಬಹುದು. ಯಾವುದೇ ಬೆಳಕು ಹೊರಬರಲು ಸಾಧ್ಯವಿರದ ಕಾರಣ ಜನರು ಕಪ್ಪು ಕುಳಿಗಳನ್ನು ನೋಡಲಾಗುವುದಿಲ್ಲ. ಅವು ಅಗೋಚರವಾಗಿರುತ್ತವೆ.” ನಾಸಾ ದೂರದರ್ಶಕಗಳು ಅತ್ಯಂತ ದೂರದ ಕಪ್ಪು ಕುಳಿಯನ್ನು ಕಂಡುಹಿಡಿದಿವೆ.

ಮತ್ತೊಂದೆಡೆ, ಬ್ರಿಟಾನಿಕಾದಲ್ಲಿ ವರ್ಮ್ಹೋಲ್ ಅನ್ನು “ಇದು ಕಪ್ಪು ಕುಳಿ ಮತ್ತು ಬಿಳಿ ಕುಳಿಗಳ ನಡುವೆ ಸಂಪರ್ಕ ಕಲ್ಪಿಸುವ ಬಾಹ್ಯಾಕಾಶ-ಸಮಯದಲ್ಲಿರುವ ಕಾಲ್ಪನಿಕ ಮಾರ್ಗ” ಎಂದು ವಿವರಿಸಿದೆ. ಆಲ್ಬರ್ಟ್ ಐನ್ಸ್ಟೈನ್ ಅವರ ಸಿದ್ಧಾಂತವು ವರ್ಮ್ಹೋಲ್ ಗಳ ಅಸ್ತಿತ್ವವನ್ನು ಪ್ರವಾದಿಸುತ್ತದೆ. ಆದರೆ ವಿಜ್ಞಾನಿಗಳು ಈವರೆಗೆ ಅವುಗಳನ್ನು ಕಂಡುಹಿಡಿದಿಲ್ಲ.

ವೀಡಿಯೊದಲ್ಲಿ ಮಾಡಿರುವ ಹೇಳಿಕೆಗಳು ಪಿತೂರಿ ಸಿದ್ಧಾಂತಗಳು ಮತ್ತು ನಗರ ಪುರಾಣಗಳೂ ಆಗಿವೆ.

ಇದನ್ನೂ ಓದಿ: 

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಲಾಸ್ ಏಂಜಲೀಸ್ನಲ್ಲಿ ಬ್ಲ್ಯಾಕ್ ಫ್ರೈಡೆಯಂದು ನೈಕಿ ಅಂಗಡಿಯಲ್ಲಿ ದರೋಡೆಯಾಗಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*