Don't Miss

1960ರ ಸಿಂಧೂ ನೀರಿನ ಮಾತುಕತೆಯಲ್ಲಿ ಸರ್ದಾರ್ ಪಟೇಲ್ ರವರ ಪಾತ್ರದ ಬಗ್ಗೆ ಅಮಿತ್ ಶಾ ಮಾತನಾಡಿದ್ದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಸರ್ದಾರ್ ಪಟೇಲರು 1950ರಲ್ಲಿ ನಿಧನರಾಗಿದ್ದರೂ,1960 ರಲ್ಲಿ ಸಿಂಧೂ ನೀರಿನ ಮಾತುಕತೆಯ ಸಮಯದಲ್ಲಿ ಅವರು ಪ್ರತಿಭಟಿಸಿದರು ಎಂದು ಗೃಹ ಸಚಿವ ಅಮಿತ್ ಶಾ ಹೇಳಿರುವ ಒಂದು ವೈರಲ್ ಕ್ಲಿಪ್.

ಕಡೆನುಡಿ/Conclusion: ತಪ್ಪು ನಿರೂಪಣೆ. ಅಮಿತ್ ಶಾರವರು 1960 ರಲ್ಲಿ ಸರ್ದಾರ್ ಪಟೇಲರ ಪಾಲ್ಗೊಳ್ಳುವಿಕೆಯನ್ನು ಉಲ್ಲೇಖಿಸಲಿಲ್ಲ, ಅವರು ಮಾತಾಡುತ್ತಿದ್ದುದು 1948 ರ ಮೊದಲ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪಟೇಲರ ಪಾತ್ರದ ಕುರಿತು, ನಂತರ ಅವರು 1960ರ ಸಿಂಧೂ ನೀರಿನ ಮಾತುಕತೆಯ ಬಗ್ಗೆ ಪ್ರತ್ಯೇಕ ಉಲ್ಲೇಖ ಮಾಡಿದರು. ಸದಸ್ಯರೊಬ್ಬರು ಅವರನ್ನು ಅಡ್ಡಿಪಡಿಸಿದಾಗ, 1960 ರಲ್ಲಿ ಸರ್ದಾರ್ ಪಟೇಲರು ಪ್ರತಿಭಟಿಸಿದರು ಎಂದು ಅಮಿತ್ ಶಾ ಹೇಳಿಕೊಂಡಿದ್ದಾರೆ ಎಂಬಂತೆ ಕಾಣುತ್ತದೆ.

ರೇಟಿಂಗ್/Rating: ತಪ್ಪು ನಿರೂಪಣೆ. —

*****************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಗೃಹ ಸಚಿವ ಅಮಿತ್ ಶಾರವರು ಸಂಸತ್ತಿನಲ್ಲಿ ಭಾಷಣ ಮಾಡುವಾಗ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪೋಸ್ಟ್‌ಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲಾಗಿದೆ. ಮಳೆಗಾಲದ ಅಧಿವೇಶನದ 7 ನೇ ದಿನದಂದು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಅವರ ಭಾಷಣದಲ್ಲಿ ಅವರು ಜವಾಹರಲಾಲ್ ನೆಹರು ರವರ ವೈಫಲ್ಯವನ್ನು ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲರನ್ನು ಪ್ರಸ್ತಾಪಿಸುವುದನ್ನು ವೀಡಿಯೊ ತೋರಿಸುತ್ತದೆ. ಹಲವಾರು ಬಳಕೆದಾರರು ಈ ಕ್ಷಣವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡು, ಸರ್ದಾರ್ ಪಟೇಲರು 1950 ರಲ್ಲಿ ಮರಣಹೊಂದಿದರೂ ಸಹ 1960 ರಲ್ಲಿ ಪ್ರತಿಭಟಿಸಿರುವ ಬಗ್ಗೆ ಅಮಿತ್ ಶಾರವರು ಮಾತನಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಸುಪ್ರಿಯಾ ಶ್ರಿನಾತೆ X ನಲ್ಲಿ ಹೀಗೆ ಪೋಸ್ಟ್ ಮಾಡಿದ್ದಾರೆ: “सरदार पटेल जी का निधन 1950 में ही हो गया था. तो फि र 1960 में सरदार पटेल जी ने विरोध कैसे किया? अमित शाह जी आज अपने ही लिखेWhatsApp फॉरवर्ड पढ़ रहे थे.”

ಕನ್ನಡದ ಅನುವಾದ ಹೀಗಿದೆ: “ಸರ್ದಾರ್ ಪಟೇಲರು 1950 ರಲ್ಲಿಯೇ ನಿಧನರಾಗಿದ್ದರು. ಹಾಗಾದರೆ ಸರ್ದಾರ್ ಪಟೇಲರು 1960 ರಲ್ಲಿ ಹೇಗೆ ಪ್ರತಿಭಟಿಸಿದರು? ಅಮಿತ್ ಶಾ ಜಿ ಇಂದು ತಮ್ಮದೇ ವಾಟ್ಸಾಪ್ ಫಾರ್ವರ್ಡ್ ಅನ್ನು ಓದುತ್ತಿದ್ದರೇನೋ”.

ಪೋಸ್ಟ್‌ನ ಲಿಂಕ್ ಅನ್ನು ಇಲ್ಲಿ ನೋಡಿ.

 

ಇತರ ಬಳಕೆದಾರರು ಸಹ ಇದೇ ರೀತಿಯ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ, ಉದಾಹರಣೆಗೆ X ಬಳಕೆದಾರ ಅಲೋಕ್ ಶರ್ಮಾ ಎಂಬವರು ಅಮಿತ್ ಶಾರವರ ಸುಳ್ಳು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಪೋಸ್ಟ್‌ನ ಲಿಂಕ್ ಅನ್ನು ಇಲ್ಲಿ ನೋಡಿ.

 

ಕನ್ನಡದ ಅನುವಾದ ಹೀಗಿದೆ: “ಸರ್ದಾರ್ ಪಟೇಲರು 1950 ರಲ್ಲಿಯೇ ನಿಧನರಾದರು. ಹಾಗಾದರೆ ಸರ್ದಾರ್ ಪಟೇಲರು 1960ರಲ್ಲಿ ಹೇಗೆ ಪ್ರತಿಭಟಿಸಿದರು? ಅಮಿತ್ ಶಾರವರು ಸುಳ್ಳು ಹೇಳುತ್ತಾ ಸಿಕ್ಕಿಬಿದ್ದರು!”

ಸತ್ಯ ಪರಿಶೀಲನೆ:

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿ ಗೃಹ ಸಚಿವ ಅಮಿತ್ ಶಾರವರ ಭಾಷಣವನ್ನು ವೀಕ್ಷಿಸಿತು. ಈ ಹೇಳಿಕೆ ನಿಜವಲ್ಲ ಮತ್ತು ಭಾಷಣದ ಸಮಯದಲ್ಲಿ ಪ್ರತಿಪಕ್ಷಗಳ ಪ್ರಶ್ನೆಯಿಂದ ಉಂಟಾದ ಅಡ್ಡಿಯಿಂದಾಗಿ ತಪ್ಪು ಅಭಿಪ್ರಾಯ ಉಂಟಾಯಿತು ಎಂದು ನಮಗೆ ತಿಳಿದುಬಂತು.

ಇಂಡಿಯಾಟುಡೇ ಅಪ್‌ಲೋಡ್ ಮಾಡಿದ ಅಮಿತ್ ಶಾ ರವರ ಸಂಪೂರ್ಣ ಭಾಷಣದ ಲಿಂಕ್ ಅನ್ನು ಇಲ್ಲಿ ಕಾಣಬಹುದು:

ಮೇಲಿನ ವೀಡಿಯೊದ 41 ನಿಮಿಷಗಳ ಸಮಯಕ್ಕೆ, ಅಮಿತ್ ಶಾರವರು 1948ರ ಮೊದಲ ಭಾರತ-ಪಾಕಿಸ್ತಾನ ಯುದ್ಧದ ವಿಷಯವನ್ನು ಪ್ರಸ್ತಾಪಿಸುತ್ತಾರೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ಮೇಲುಗೈ ಸಾಧಿಸಿತ್ತು ಆದರೆ ಸರ್ದಾರ್ ಪಟೇಲರು ನಿರಾಕರಿಸುತ್ತಲೇ ಇದ್ದರು ಮತ್ತು ಅಂತಿಮವಾಗಿ ಜವಾಹರಲಾಲ್ ನೆಹರುರವರು ಏಕಪಕ್ಷೀಯ ಕದನ-ವಿರಾಮವನ್ನು ಘೋಷಿಸಿದರು ಎಂದು ಅವರು ಉಲ್ಲೇಖಿಸುತ್ತಾರೆ.

ಇದರ ನಂತರ, ಅಮಿತ್ ಶಾರವರು ಸ್ಪೀಕರ್ ಅವರನ್ನು ಉದ್ದೇಶಿಸಿ ಮಾತನಾಡುತ್ತಾ, ತಾವು ಇತಿಹಾಸದ ವಿದ್ಯಾರ್ಥಿಯಾಗಿದ್ದರೆಂದು ಹೇಳಿದರು ಮತ್ತು PoKಯ(ಪಾಕಿಸ್ತಾನ ಆಕ್ರಮಿತ ಕಾಶ್ಮೀರ) ಅಸ್ತಿತ್ವವು ಜವಾಹರಲಾಲ್ ನೆಹರು ಘೋಷಿಸಿದ ಏಕಪಕ್ಷೀಯ ಕದನ-ವಿರಾಮದ ಪರಿಣಾಮವಾಗಿದೆ ಎಂದು ಹೇಳಿದರು.

ಸದನದಲ್ಲಿ ಗದ್ದಲವಿತ್ತು ಆದರೆ ಅಮಿತ್ ಶಾ “1960 ರಲ್ಲಿ…” ಎಂದು ಬರೆದಿರುವ ಕಾಗದವನ್ನು ನೋಡುತ್ತಾ ಮಾತನಾಡುತ್ತಲೇ ಇದ್ದರು ಮತ್ತು ವಿರೋಧ ಪಕ್ಷದ ಸದಸ್ಯರೊಬ್ಬರು “ಸರ್ದಾರ್ ಪಟೇಲರೂ ಸಹ ಪ್ರತಿಭಟಿಸಿದರು” ಎಂದು (1948 ರ ವಿಷಯವನ್ನು ಉಲ್ಲೇಖಿಸಿ),ಅವರ ಮಾತಿಗೆ ಅಡ್ಡಿಪಡಿಸುತ್ತಾರೆ,  ಇದಕ್ಕೆ ಅಮಿತ್ ಶಾರವರ ಪ್ರತಿಕ್ರಿಯೆ ಹೀಗಿದೆ: “ಸರ್ದಾರ್ ಪಟೇಲ್ ತಮ್ಮ ಕಾರನ್ನು ತೆಗೆದುಕೊಂಡು ಆಕಾಶವಾಣಿಗೆ ಹೋದರು, ಘೋಷಣೆ ಮಾಡಲು ನಿರಾಕರಿಸಿದರು ಮತ್ತು ಬಾಗಿಲು ಮುಚ್ಚಿದರು.”

ನಂತರ, ಅಮಿತ್ ಶಾರವರು 1960 ರ ಸಿಂಧೂ ಜಲ ಒಪ್ಪಂದದ ಕುರಿತು ತಮ್ಮ ಭಾಷಣವನ್ನು ಮುಂದುವರಿಸುತ್ತಾ, ನೆಹರೂರವರು ಭಾರತದ 80% ನೀರನ್ನು ಪಾಕಿಸ್ತಾನಕ್ಕೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರತಿಕ್ರಿಯೆಯನ್ನು ಹೇಳಿಕೆಯಲ್ಲಿ ಸಂದರ್ಭಬಾಹಿರವಾಗಿ ಬಳಸಲಾಗಿದೆ. ಈ ಮೂಲಕ ಅಮಿತ್ ಶಾರವರು 1960ರಲ್ಲಿ ಸರ್ದಾರ್ ಪಟೇಲರು ಪ್ರತಿಭಟನೆ ನಡೆಸಿದರೆಂದು ಮಾತನಾಡುತ್ತಿದ್ದಾರೆ ಎಂದು ಬಿಂಬಿಸಲಾಗಿದೆ, ಇದು ನಿಜವಲ್ಲ. ಅವರು 1948ರಲ್ಲಿ ಪಟೇಲರ ಪಾತ್ರವನ್ನು ಉಲ್ಲೇಖಿಸುತ್ತಿದ್ದರು ಮತ್ತು 1960ರ ದಶಕದಲ್ಲಿ ಸಿಂಧೂ ಜಲ ಒಪ್ಪಂದದ ಸಮಯದಲ್ಲಿ ಅಲ್ಲ, ಏಕೆಂದರೆ 1950 ರಲ್ಲಿ ಪಟೇಲರಾಗಲೇ ನಿಧನರಾಗಿದ್ದರು. ಹೇಳಿಕೆಯಲ್ಲಿರುವ ವೀಡಿಯೊವನ್ನು ಸಂದರ್ಭಬಾಹಿರವಾಗಿ ಪರಿಗಣಿಸಲಾಗಿದೆ, ಆದ್ದರಿಂದ ಅದು ನಿಖರವಾದುದಲ್ಲ.

 

Leave a Reply

Your email address will not be published. Required fields are marked *

*