ಹೇಳಿಕೆ/Claim: ಸೋಫಾದಲ್ಲಿ ಕುಳಿತಿದ್ದಕ್ಕಾಗಿ ದಲಿತ ವ್ಯಕ್ತಿಯನ್ನು ಥಳಿಸಲಾಗುತ್ತಿದೆ ಎಂದು ವೀಡಿಯೊ ಹೇಳುತ್ತದೆ.
ಕಡೆನುಡಿ/Conclusion: ದಾರಿತಪ್ಪಿಸುವ ಹೇಳಿಕೆ. ವಾಸ್ತವವಾಗಿ, ಮಹಾರಾಷ್ಟ್ರದ ಲಾತೂರ್‌ನಲ್ಲಿ ಛಾವ ಸಂಘಟನಾ ಸದಸ್ಯರ ವಿರುದ್ಧ ಸೂರಜ್ ಚವಾಣ್ ಮತ್ತು ಆತನ ಸಹಚರರ ನಡುವಿನ ದೈಹಿಕ ಚಕಮಕಿಯನ್ನು ಈ ವೀಡಿಯೊ ಚಿತ್ರಿಸುತ್ತದೆ.
ರೇಟಿಂಗ್/Rating: ದಾರಿತಪ್ಪಿಸುವ ಹೇಳಿಕೆ.– ![]()
****************************************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಸೋಫಾದಲ್ಲಿ ಕುಳಿತಿದ್ದಕ್ಕಾಗಿ ದಲಿತ ವ್ಯಕ್ತಿಯ ಮೇಲೆ ಜಾತ್ಯಾಧಾರಿತ ಹಲ್ಲೆ ನಡೆದಿರುವುದೆಂದು ಹೇಳುವ ವೀಡಿಯೊವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿರುವ ಪುರುಷರು ಜಗಳ ಮತ್ತು ದೈಹಿಕ ಘರ್ಷಣೆಯಲ್ಲಿ ತೊಡಗಿದ್ದಾರೆ, ಇದು ಅನೇಕರ ಗಮನ ಸೆಳೆದಿದೆ.
ಈ ಹೇಳಿಕೆಗಳನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ, ಉದಾಹರಣೆಗೆ ‘ಮುಖೇಶ್ ಮೀನಾ’ ಎಂಬ ಹ್ಯಾಂಡಲ್ ಈ ಘಟನೆ ರಾಜಸ್ಥಾನದ್ದು ಎಂದು ಹೇಳುತ್ತದೆ. ಆತ ರಾಜಸ್ಥಾನದ ವಿವಿಧ ರಾಜಕೀಯ ನಾಯಕರನ್ನು ಟ್ಯಾಗ್ ಮಾಡಿ ಬಿಜೆಪಿಗೆ ಛೀಮಾರಿ ಹಾಕುತ್ತಾ ಹೇಳಿರುವುದೇನೆಂದರೆ- “दि न दहाड़ेसवि धान क धज्जि याँउड़ रह हैबीजेपी के राज मएक दलि त नेताजी सोफे पर बराबर बठै गया और उनको सभी उच जाती के नेतागण नेवह पर सजा देनी शुकर द । इस देश मएक दलि त यक्ति को सोफे पर बठै नेका अधि कार नहं है.”
ಅನುವಾದ ಹೀಗಿದೆ: “ಹಾಡು ಹಗಲಿನಲ್ಲಿ, ಬಿಜೆಪಿಯ ಆಡಳಿತದಲ್ಲಿ ಸಂವಿಧಾನ ಚಿಂದಿಯಾಗುತ್ತಿದೆ. ಒಬ್ಬ ದಲಿತ ನಾಯಕ ಸೋಫಾದಲ್ಲಿ ಸಮಾನನಾಗಿ ಕುಳಿತ ಮತ್ತು ಎಲ್ಲಾ ಮೇಲ್ಜಾತಿಯ ನಾಯಕರು ಅಲ್ಲಿಯೇ ಆತನನ್ನು ಶಿಕ್ಷಿಸಲಾರಂಭಿಸಿದರು. ಈ ದೇಶದಲ್ಲಿ, ಒಬ್ಬ ದಲಿತ ವ್ಯಕ್ತಿಗೆ ಸೋಫಾದಲ್ಲಿ ಕುಳಿತುಕೊಳ್ಳುವ ಹಕ್ಕಿಲ್ಲ.”
ಹಂಚಿಕೊಂಡಿರುವ ಟ್ವೀಟ್‌ನ ಲಿಂಕ್ ಅನ್ನು ಇಲ್ಲಿ ನೋಡಿ- – https://x.com/MukeshMeena_7/status/1948802174064230906
दिन दहाड़े सविधान की धज्जियाँ उड़ रही है बीजेपी के राज में
एक दलित नेताजी सोफे पर बराबर बैठ गया और उनको सभी उच्च जाती के नेतागणों ने वही पर सजा देनी शुरू कर दी ।
इस देश में एक दलित व्यक्ति को सोफे पर बैठने का अधिकार नहीं है #hilights #Rajasthantak @HansrajMeena @NareshMeena__ pic.twitter.com/M2GLcXTInr
— MUKESH MEENA 🇮🇳 (@MukeshMeena_7) July 25, 2025
ಮತ್ತೊಂದು ಸಂದರ್ಭದಲ್ಲಿ, ‘ಡಿ.ಎಸ್. ಸಿರ್ವಾಲಿಯಾ’ ಎಂಬ ಬಳಕೆದಾರರು ಜುಲೈ 23, 2025 ರ ಪೋಸ್ಟ್ ಮೂಲಕ ಯಾದವರನ್ನು ದೂಷಿಸಿದ್ದಾರೆ. ಸೋಫಾದಲ್ಲಿ ಕುಳಿತಿದ್ದ ದಲಿತ ಒಬ್ಬ ನಾಯಕ ಯಾದವರೊಂದಿಗೆ ಸರಿ ಕೂರಲಿಲ್ಲ ಮತ್ತು SPA PDA ನಾಯಕರು ಆ ವ್ಯಕ್ತಿಯನ್ನು ಗುಂಪುಗೂಡಿ ಹೊಡೆದರು ಎಂದು ಆತ ಹಿಂದಿಯಲ್ಲಿ ಹೇಳಿದ್ದಾರೆ. ಈ ಪೋಸ್ಟ್ 44,600 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ.
ಟ್ವೀಟ್‌ನ ಲಿಂಕ್ ಅನ್ನು ಇಲ್ಲಿ ನೋಡಿ –– https://x.com/DR_Ambedkarji/status/1947978896068272490
एक दलितनेता सोफे पर बैठ गया तो यादवों को अच्छा नहीं लगा
और सपा PDA के नेताओं ने SC नेता को मिलकर मार पीट कर दिया
अकेले SC नेता पर यह लठत यादव नेता बहादुरी दिखा रहे
यादवो भूलना मत वक्त बदलते देर नहीं लगतीबसपा govt में कानून का हंटर बड़ा मोटा है
खाल भी उधेड़ देंगे 😠 pic.twitter.com/EYlS6vmtY9
— D.S Sirwalia 🇮🇳 (@DR_Ambedkarji) July 23, 2025

ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾದ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ಬಂತ ವಿನಂತಿಯ ಮೇರೆಗೆ ಈ ಹೇಳಿಕೆಗಳನ್ನು ತನಿಖೆ ಮಾಡಲು ನಿರ್ಧರಿಸಿ ಸಮಸ್ಯೆಯ ಮೂಲ ಕಾರಣವನ್ನು ಪರಿಶೀಲಿಸಿತು. ಈ ದೃಶ್ಯಾವಳಿಗಳು ವಾಸ್ತವವಾಗಿ ಬೇರೆ ಘಟನೆಯಿಂದ ಬಂದಿವೆ ಎಂದು ಆಳವಾದ ತನಿಖೆಯಿಂದ ತಿಳಿದುಬಂತು. ಈ ವೀಡಿಯೊ ರಾಜಸ್ಥಾನ ಅಥವಾ ಉತ್ತರ ಪ್ರದೇಶದ್ದಲ್ಲ ಮತ್ತು ಇದಕ್ಕೂ ದಬ್ಬಾಳಿಕೆಗೊಳಗಾದ ದಲಿತರಿಗೆ ಸಂಬಂಧಿಸಿದ್ದೂ ಅಲ್ಲ.
ಮೂಲ ಘಟನೆಯು ವಾಸ್ತವವಾಗಿ ಮಹಾರಾಷ್ಟ್ರದ ಲಾತೂರ್‌ನಲ್ಲಿ ಆಗಿರುವಂಥದ್ದು, ಅಜಿತ್ ಪವಾರ್ ರವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ರಾಜ್ಯ ಯುವ ಅಧ್ಯಕ್ಷರಾದ ಸೂರಜ್ ಚವಾಣ್ ಮತ್ತು ಛಾವಾ ಕಾರ್ಯಕರ್ತರ ಸದಸ್ಯರು ಇದರಲ್ಲಿ ಭಾಗಿಯಾಗಿದ್ದಾರೆ. ಛಾವಾ ಸಂಘಟನೆಯ ಸದಸ್ಯರು NCP ರಾಜ್ಯ ಘಟಕದ ಮುಖ್ಯಸ್ಥ ಸುನಿಲ್ ತಟ್ಕರೆ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ ಚವಾಣ್ ಮತ್ತು ಅವರ ಸಹಚರರು ಛಾವಾ ಸಂಘಟನೆಯ ಸದಸ್ಯರ ಮೇಲೆ ಹಲ್ಲೆ ನಡೆಸುತ್ತಿರುವುದನ್ನು ವೀಡಿಯೊ ಸ್ಪಷ್ಟವಾಗಿ ತೋರಿಸುತ್ತದೆ.
ಛಾವಾ ಕಾರ್ಯಕರ್ತರು ಒಂದು ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ತಟ್ಕರೆಯವರ ಮೇಲೆ ಕಾರ್ಡ್‌ಗಳನ್ನು ಎಸೆದು ಪ್ರತಿಭಟಿಸುತ್ತಾ NCP ನಾಯಕರ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿದ್ದರು.
ಜುಲೈ 20, 2025ರ ಚೀಟಿಗಳನ್ನು ಎಸೆಯುವ ವೀಡಿಯೊದ ಲಿಂಕ್ ಅನ್ನು ಇಲ್ಲಿ ನೋಡಿ.

ಕೃಷಿ ಸಚಿವರಾದ ಮಾಣಿಕ್ ರಾವ್ ಕೊಕಟೆ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿಷ್ಕ್ರಿಯತೆ ತೋರಿದ್ದಕ್ಕೆ ಛಾವ ಸಂಘಟನೆಯ ಹೀಗೆ ಆಕ್ರೋಶ ತೋರಿದ್ದರು ಮತ್ತಿದು ತೀವ್ರ ಘರ್ಷಣೆಗೆ ಕಾರಣವಾಯಿತು. ಮಾಣಿಕ್ ರಾವ್ ಕೊಕಟೆಯವರು ವಿಧಾನಸಭೆಯಲ್ಲಿ ತಮ್ಮ ಮೊಬೈಲ್ ವಸತಿಯಲ್ಲಿ ರಮ್ಮಿ ಆಡುತ್ತಿರುವುದು ಕಂಡುಬಂದ ಕಾರಣ ಈ ಚೀಟಿಗಳು ಸಾಂಕೇತಿಕವಾಗಿದ್ದವು.
ಈ ಘರ್ಷಣೆಯ ನಂತರವೇ, ಸೂರಜ್ ಚವಾಣ್ ಮತ್ತು ಅವರ ಸಹಚರರು ಛಾವಾ ಸಂಘಟನೆಯ ಕಾರ್ಯಕರ್ತರನ್ನು ಥಳಿಸಿದರು ಮತ್ತು ಇದಕ್ಕೆ ಪೊಲೀಸ್ ಹಸ್ತಕ್ಷೇಪ ಬೇಕಾಯಿತು. ಆ ಮೂಲ ಹೇಳಿಕೆಯು ವಿವಿಧ ಸುದ್ದಿ ವಾಹಿನಿಗಳಲ್ಲಿ ಸೆರೆಹಿಡಿಯಲಾದ ಈ ಘಟನೆಯನ್ನು ಚಿತ್ರಿಸುತ್ತದೆ.
ಎಬಿಪಿ ಮಾಝಾ ವರದಿಯು ಈ ಘಟನೆಯ ಬಗ್ಗೆ ಬರೆದಿದ್ದು, ಲಾತೂರ್ ನಗರದ ವಿವೇಕಾನಂದ ಪೊಲೀಸ್ ಠಾಣೆಯಲ್ಲಿ ಸೂರಜ್ ಚವಾಣ್ ವಿರುದ್ಧ ಹೇಗೆ ಪ್ರಕರಣ ದಾಖಲಾಗಿದೆ ಎಂಬುದನ್ನು ಎತ್ತಿ ತೋರಿಸುತ್ತದೆ. ಅದರ ಚಿತ್ರವನ್ನು ಈ ಕೆಳಗೆ ಕಾಣಬಹುದು:

ಈ ಘಟನೆಯು ಗಮನಾರ್ಹ ಆಕ್ರೋಶವನ್ನು ಹುಟ್ಟುಹಾಕಿದ ನಂತರ, ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಅಜಿತ್ ಪವಾರ್ ರವರು ಈ ಯುವ ಘಟಕದ ಹುದ್ದೆಗೆ ತಕ್ಷಣ ರಾಜೀನಾಮೆ ನೀಡುವಂತೆ ಸೂರಜ್ ಚವಾಣ್ ಅವರನ್ನುಆದೇಶಿಸಿದರು. “ನಿನ್ನೆ ಲಾತೂರ್‌ನಲ್ಲಿ ನಡೆದ ಅತ್ಯಂತ ಗಂಭೀರ ಮತ್ತು ಖಂಡನೀಯ ಘಟನೆಯ ಹಿನ್ನೆಲೆಯಲ್ಲಿ, ನ್ಯಾಷನಲಿಸ್ಟ್ ಯುವ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಸೂರಜ್ ಚವಾಣ್ ರವರಿಗೆ ತಮ್ಮ ಹುದ್ದೆಗೆ ತಕ್ಷಣ ರಾಜೀನಾಮೆ ನೀಡುವಂತೆ ನಾನು ಸ್ಪಷ್ಟ ಸೂಚನೆ ನೀಡಿದ್ದೇನೆ” ಎಂಬ ಪವಾರ್ ರವರ ಹೇಳಿಕೆಯನ್ನು NDTV ವರದಿ ಮಾಡಿದೆ.
ಅಧಿಕೃತ X ಪೋಸ್ಟ್ ಅನ್ನು ಕೆಳಗೆ ನೋಡಿ – https://x.com/AjitPawarSpeaks/status/1947197197684183547.
काल लातूरमध्ये घडलेल्या अत्यंत गंभीर आणि निषेधार्ह घटनेच्या पार्श्वभूमीवर, मी राष्ट्रवादी युवक काँग्रेसचे प्रदेशाध्यक्ष सूरज चव्हाण यांना त्यांच्या पदाचा त्वरित राजीनामा द्यायच्या स्पष्ट सूचना दिल्या आहेत.
पक्षाच्या मूल्यांच्या विरोधात जाऊन केले जाणारे वर्तन कोणत्याही स्थितीत…
— Ajit Pawar (@AjitPawarSpeaks) July 21, 2025
ಹೀಗಾಗಿ, ಇದು ಸೋಫಾದಲ್ಲಿ ಕುಳಿತಿದ್ದಕ್ಕಾಗಿ ದಲಿತ ವ್ಯಕ್ತಿಯನ್ನು ಥಳಿಸುವುದರ ಬಗೆಗಿನ ವೀಡಿಯೊ ಎಂಬ ಮೂಲ ಹೇಳಿಕೆ ಸುಳ್ಳು.
Digiteye Kannada Fact Checkers