ಹೇಳಿಕೆ/Claim: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸಾಮಾಜಿಕ ಜಾಲತಾಣದ ಪೋಸ್ಟ್‌ನಲ್ಲಿ ಅವರು ನಿಧನರಾದರು ಎಂದು ಹೇಳಲಾಗಿದೆ.
ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಮೆಟಾದ AI ಮೂಲಕ ಉತ್ಪತಿಯಾದ ಕನ್ನಡದಿಂದ ಆಂಗ್ಲ ಭಾಷೆಯ ಅನುವಾದದಿಂದಾಗಿ ಈ ಅಪಾರ್ಥ ಉಂಟಾಯಿತು.
ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ —
*************************************************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಕರ್ನಾಟಕದ ಮುಖ್ಯಮಂತ್ರಿಗಳ ಅಧಿಕೃತ ಫೇಸ್‌ಬುಕ್ ಪುಟದ ಪೋಸ್ಟ್ ಅನ್ನು ತೋರಿಸುವ ಸ್ಕ್ರೀನ್‌ಶಾಟ್ ಆನ್‌ಲೈನ್ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪೋಸ್ಟ್‌ನಲ್ಲಿರುವ ಆಂಗ್ಲ ಭಾಷೆ ವಿಚಿತ್ರವಾಗಿದೆ. ಅದು ಸಿಎಂ ಸಿದ್ದರಾಮಯ್ಯ ನಿಧನರಾದರು ಎಂದು ಹೇಳುತ್ತದೆ, ಮತ್ತು ನಂತರವೇ ನಟಿ ಬಿ. ಸರೋಜಾ ದೇವಿಯವರಿಗೆ ಅಂತಿಮ ನಮನ ಸಲ್ಲಿಸುವ ಬಗ್ಗೆ ಅಸಂಬದ್ಧ ವಾಕ್ಯಗಳನ್ನು ಒಳಗೊಂಡಿದೆ.
ಆ ಪೋಸ್ಟ್ ಹೀಗಿದೆ: “ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ನಿಧನರಾದರು, ಸರೋಜಾದೇವಿ ಅವರ ಪಾರ್ಥಿವ ಶರೀರದ ದರ್ಶನ ಪಡೆದು ತಮ್ಮ ಅಂತಿಮ ನಮನ ಸಲ್ಲಿಸಿದರು, ಬಹುಭಾಷಾ ತಾರೆ, ಹಿರಿಯ ನಟಿ ಬಿ.”
ಫೇಸ್‌ಬುಕ್ ಬಳಕೆದಾರ ಕೇಶವ ಅಯ್ಯಂಗಾರ್ ರವರು ಈ ಪೋಸ್ಟ್ ಅನ್ನು ಕೆಳಗೆ ಹಂಚಿಕೊಳ್ಳುತ್ತಾ, ಮುಖ್ಯಮಂತ್ರಿ ಕಚೇರಿಗೆ ಆಂಗ್ಲ ಭಾಷಾ ಶಿಕ್ಷಕರ ಅಗತ್ಯವಿದೆ ಎಂದು ವ್ಯಂಗ್ಯಾತ್ಮಕವಾಗಿ ಸೂಚಿಸಿದ್ದಾರೆ. ವಿವಿಧ ವಾಹಿನಿಗಳು ಹಂಚಿಕೊಂಡ ಈ ಸುದ್ದಿಯು ಆನ್‌ಲೈನ್‌ನಲ್ಲಿ ಗೊಂದಲ ಮತ್ತು ಅಪಹಾಸ್ಯಕ್ಕೆ ಕಾರಣವಾಗಿದೆ. ಫೇಸ್‌ಬುಕ್ ಪೋಸ್ಟ್‌ನ ಲಿಂಕ್ ಮತ್ತು ಸ್ಕ್ರೀನ್‌ಶಾಟ್ ಗಳನ್ನು ಕೆಳಗೆ ಕಾಣಬಹುದು.
https://www.facebook.com/keshav.iyengar.56/posts/cms-office-needs-english-teachers/4033465863534806/
FACT CHECK
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇನ್ನೂ ಜೀವಂತವಾಗಿದ್ದಾರೆ. ವಾಸ್ತವಾಂಶವೆಂದರೆ, ಅವರು ಇತ್ತೀಚೆಗೆ ನಿಧನರಾದ ಪ್ರಸಿದ್ಧ ಬಹುಭಾಷಾ ನಟಿ ದಿವಂಗತ ಬಿ. ಸರೋಜಾ ದೇವಿಯವರಿಗೆ ಅಂತಿಮ ನಮನ ಸಲ್ಲಿಸಿದರು. ಡಿಜಿಟೈ ಇಂಡಿಯಾ ಈ ಸುದಿಯನ್ನು ಪರಿಶೀಲಿಸಿತು ಮತ್ತು ಕನ್ನಡದಿಂದ ಆಂಗ್ಲ ಭಾಷೆಗೆ AI- ಮೂಲಕ ಉತ್ಪತ್ತಿಯಾದ ಸ್ವಯಂ ಅನುವಾದದಿಂದಾಗಿ ಈ ದೊಡ್ಡ ತಪ್ಪಾಯಿತು ಎಂದು ತಿಳಿದುಬಂತು.
“ಈ ಅನುವಾದವನ್ನು ರೇಟ್ ಮಾಡಿ” ಎನ್ನುವ, ಶೀರ್ಷಿಕೆಯ ನಂತರ ಕಾಣುವ ಮೇಲಿನ ಸ್ಕ್ರೀನ್‌ಶಾಟ್‌ನಲ್ಲಿಯೂ ಈ ತಪ್ಪನ್ನು ಕಾಣಬಹುದು. ಮೂಲ ಫೇಸ್‌ಬುಕ್ ಪೋಸ್ಟ್ ಅನ್ನು ಸಿಎಂ ಸಿದ್ದರಾಮಯ್ಯನವರ ಅಧಿಕೃತ ಖಾತೆಯಿಂದ ತೆಗೆಯಲಾಗಿದ್ದರೂ, ಶೀಘ್ರದಲ್ಲೇ ಸ್ಪಷ್ಟೀಕರಣ ಪೋಸ್ಟ್ ಅನ್ನೂ ಬಿಡುಗಡೆ ಮಾಡಲಾಯಿತು.
ಸಿಎಂ ಸಿದ್ದರಾಮಯ್ಯನವರ ತಂಡವು ಫೇಸ್‌ಬುಕ್ ಮತ್ತು Xಗಳಲ್ಲಿ, ಕನ್ನಡದಿಂದ ಆಂಗ್ಲ ಭಾಷೆಯಲ್ಲಿ ತಪ್ಪಾಗಿ ಅನುವಾದವಾದದ್ದನ್ನು ಟೀಕಿಸಿದರು. “ಅಧಿಕೃತ ಸಂವಹನಗಳ ವಿಷಯಕ್ಕೆ ಬಂದಾಗ ಇಂತಹ ಪ್ರಕರಣಗಳು ವಿಶೇಷವಾಗಿ ಅಪಾಯಕಾರಿ” ಎಂದು ಅವರು ಮುಂದುವರಿದು ಹೇಳಿದರು.
Faulty auto-translation of Kannada content on @Meta platforms is distorting facts & misleading users. This is especially dangerous when it comes to official communications.
My Media Advisor Shri K V Prabhakar has formally written to Meta urging immediate correction.
Social… pic.twitter.com/tJBp38wcHr
— Siddaramaiah (@siddaramaiah) July 17, 2025
ತಮ್ಮ ಮಾಧ್ಯಮ ಸಲಹೆಗಾರರಾದ ಶ್ರೀ ಕೆ ವಿ ಪ್ರಭಾಕರ ಅವರು ಮೆಟಾಗೆ ಇಮೇಲ್ ಕಳುಹಿಸಿದ್ದಾರೆ, ಮತ್ತು ಈ ವಿಷಯದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ ಎಂದೂ ಸಹ ಸಿಎಂ ಸಿದ್ದರಾಮಯ್ಯನವರು ಹೇಳಿದರು. ಮುಖ್ಯಮಂತ್ರಿಗಳು ಹಂಚಿಕೊಂಡ ದೂರಿನ ಚಿತ್ರವನ್ನು ಕೆಳಗೆ ನೋಡಿ:
ಡೆಕ್ಕನ್ ಹೆರಾಲ್ಡ್ ನಂತಹ ಇತರ ಸುದ್ದಿ ಮಾಧ್ಯಮಗಳು ಬಿ. ಸರೋಜಾ ದೇವಿಯವರು ಜುಲೈ 14, 2025 ರಂದು ನಿಧನರಾದರು ಮತ್ತು ಸಿಎಂ ಸಿದ್ದರಾಮಯ್ಯನವರು ಗೌರವ ಸಲ್ಲಿಸಲು ಭೇಟಿ ನೀಡಿದ್ದರು ಎಂದು ವರದಿ ಮಾಡಿವೆ. ವರದಿಯ ಲಿಂಕ್ ಅನ್ನು ಇಲ್ಲಿ ನೋಡಿ.
ಹಿಂದೂಸ್ತಾನ್ ಟೈಮ್ಸ್ ನ ಮತ್ತೊಂದು ವರದಿಯು ಸಿಎಂ ಸಿದ್ದರಾಮಯ್ಯನವರು ತಮ್ಮ ಮಾಧ್ಯಮ ಸಲಹೆಗಾರರಿಗೆ ತಪ್ಪು ಅನುವಾದದ ಕುರಿತು ಮೆಟಾಗೆ ದೂರು ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ದೃಢೀಕರಿಸುತ್ತದೆ. ವರದಿಯ ಲಿಂಕ್ ಅನ್ನು ಇಲ್ಲಿ ನೋಡಿ ಮತ್ತು ಸಂಬಂಧಿತ ಚಿತ್ರವನ್ನೂ ಕೆಳಗೆ ಕಾಣಬಹುದು.
ಜುಲೈ 18, 2025 ರಂದು, ಮೆಟಾದಿಂದ ಮುಖ್ಯಮಂತ್ರಿಯವರನ್ನು ಕ್ಷಮೆಯಾಚಿಸಲಾಯಿತು. ತಮ್ಮ ಅನುವಾದ ವ್ಯವಸ್ಥೆಯಲ್ಲಿನ ದೋಷವನ್ನು ಒಪ್ಪಿಕೊಂಡು, ಮೆಟಾ ವಕ್ತಾರರು ತಮ್ಮ ಹೇಳಿಕೆಯಲ್ಲಿ ಹೀಗೆ ಹೇಳಿದ್ದಾರೆ: “ಈ ತಪ್ಪು ಕನ್ನಡ ಅನುವಾದಕ್ಕೆ ಕಾರಣವಾದ ಸಮಸ್ಯೆಯನ್ನು ನಾವು ಸರಿಪಡಿಸಿದ್ದೇವೆ. ಇದು ಸಂಭವಿಸಿದ್ದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ.” ಇದನ್ನು ಹಿಂದೂಸ್ತಾನ್ ಟೈಮ್ಸ್ ಇಲ್ಲಿ ವರದಿ ಮಾಡಿದೆ.
ಕೆಳಗೆ ಕಾಣುವಂತೆ ಪಿಟಿಐ ವರದಿಯು ಇದನ್ನು ದೃಢಪಡಿಸುತ್ತದೆ:
ಆದ್ದರಿಂದ, ಸಿಎಂ ಸಿದ್ದರಾಮಯ್ಯ ನಿಧನರಾದರು ಎಂಬ ಹೇಳಿಕೆ ಸಂಪೂರ್ಣವಾಗಿ ಸುಳ್ಳು.
ಇದನ್ನೂ ಓದಿ:
ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿಯವರ ಡೀಪ್‌ಫೇಕ್ ಕ್ಲಿಪ್ ವೈರಲ್; ಸತ್ಯ ಪರಿಶೀಲನೆ