Don't Miss

ಪಂಜಾಬ್‌ನಲ್ಲಿ ಪ್ರವಾಹ ಪೀಡಿತ ಕುಟುಂಬಗಳಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ನೀಡಿದ್ದಾರೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಪಂಜಾಬ್‌ನಲ್ಲಿ ಪ್ರವಾಹದಿಂದ ಹಾನಿಗೊಳಗಾದ ಕುಟುಂಬಗಳಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ನೀಡುತ್ತಿದ್ದಾರೆ.

ಕಡೆನುಡಿ/Conclusion: ಈ ಹೇಳಿಕೆ ಸುಳ್ಳು. ಯುವರಾಜ್ ಸಿಂಗ್ ಅಥವಾ ಅವರ ಫೌಂಡೇಶನ್ ‘ಯೂವೀಕ್ಯಾನ್’ ಟ್ರ್ಯಾಕ್ಟರ್‌ಗಳಿಗಾಗಿ 42 ಕೋಟಿ ರೂ. ಮೌಲ್ಯದ ದೇಣಿಗೆಯ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ರೇಟಿಂಗ್/Rating: ಸುಳ್ಳು. Five rating

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಸೆಪ್ಟೆಂಬರ್ 2025 ರಲ್ಲಿ, ಮಾಜಿ ಭಾರತೀಯ ಕ್ರಿಕೆಟಿಗ ಯುವರಾಜ್ ಸಿಂಗ್ ₹42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ಸಂತ್ರಸ್ತರ ಕುಟುಂಬಗಳಿಗೆ ದಾನ ಮಾಡುತ್ತಿದ್ದರೆಂಬ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ ಬಂತು. ಪಂಜಾಬ್‌ನಲ್ಲಿ ಉಂಟಾದ ತೀವ್ರ ಪ್ರವಾಹದ ನಡುವೆ ಸಾವಿರಾರು ಜನ ನಿರಾಶ್ರಿತರಾಗಿ ವ್ಯಾಪಕ ಕೃಷಿ ಹಾನಿ ಸಂಭವಿಸಿದ ಘಟನೆಯನ್ನನುಸರಿಸಿ ಈ ಹೇಳಿಕೆ ಹೊರಬಂದಿತ್ತು.

Kaif React’ ಎಂಬ ಫೇಸ್‌ಬುಕ್ ಬಳಕೆದಾರರು ಇಂತಹ ಹೇಳಿಕೆಯನ್ನು ಈ ಮುಂದಿನ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ: “… ಯುವರಾಜ್ ರವರು ಪೀಡಿತ ಸಮುದಾಯಗಳನ್ನು ಪುನರ್ನಿರ್ಮಿಸಲು ಮತ್ತು ಬೆಂಬಲಿಸಲು ಅತ್ಯದ್ಭುತ 42 ಕೋಟಿ ಮೌಲ್ಯದ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡುತ್ತಿದ್ದಾರೆ…” ಪೋಸ್ಟ್ ಅನ್ನು ಕೆಳಗೆ ನೋಡಿ:

‘legendsfan2’ ಎಂಬ ಇನ್‌ಸ್ಟಾಗ್ರಾಮ್‌ ಬಳಕೆದಾರರೂ ಸೇರಿದಂತೆ ಇತರ ಅನೇಕ ಬಳಕೆದಾರರು ಇದೇ ರೀತಿಯ ಹೇಳಿಕೆಯನ್ನು ಒಂದು ಚಿತ್ರದೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಯುವರಾಜ್ ಸಿಂಗ್ ಪಕ್ಕದಲ್ಲಿ ಟ್ರ್ಯಾಕ್ಟರ್‌ಗಳೊಂದಿಗೆ ಜನರ ಗುಂಪಿನೊಂದಿಗೆ ನಿಂತಿರುವುದನ್ನು ತೋರಿಸುತ್ತದೆ ಎನ್ನಲಾಗಿದೆ. ಪೋಸ್ಟ್ ಅನ್ನು ಇಲ್ಲಿ ಮತ್ತು ಚಿತ್ರವನ್ನು ಕೆಳಗೆ ನೋಡಿ:

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಕೊಂಡಿತು.

ಪಂಜಾಬ್ ಪ್ರವಾಹದಿಂದ ಪೀಡಿತ ಜನರ ಬಗ್ಗೆ ಯುವರಾಜ್ ಸಿಂಗ್ ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಹಾಗೆಯೇ – ಪಂಜಾಬ್ ನನ್ನ ಮನೆ ಮತ್ತು ಆತ್ಮ ಮತ್ತು ಈ ಪ್ರವಾಹಗಳು ನೋವು ತಂದಿವೆ ಎಂದು ಸಾಮಾಜಿಕ ಮಾಧ್ಯಮ X ವೇದಿಕೆಯಲ್ಲಿ ಹೃತ್ಪೂರ್ವಕ ಸಂದೇಶವನ್ನು ಹಂಚಿಕೊಳ್ಳುತ್ತಾ ಪ್ರವಾಹ ಪೀಡಿತರನ್ನು ಬೆಂಬಲಿಸಲು ತಾವು ಎಲ್ಲವನ್ನೂ ಮಾಡುವುದಾಗಿ ಹೇಳಿದ್ದಾರೆ. ಪೋಸ್ಟ್ ಅನ್ನು ಕೆಳಗೆ ನೋಡಿ:

 

ಈ ಸುದ್ದಿಯ ಬಗ್ಗೆ ತಿಳಿಯಲು ನಾವು ಮೊದಲು “ಯುವರಾಜ್ ಸಿಂಗ್ 600 ಟ್ರ್ಯಾಕ್ಟರ್‌ಗಳನ್ನು ದಾನ ಮಾಡಿದರು” ಎಂಬ ಶಬ್ದಾವಳಿಯೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ಯಾವುದೇ ವಿಶ್ವಾಸಾರ್ಹ ಮಾಧ್ಯಮವು ಇಷ್ಟು ದೊಡ್ಡ ದೇಣಿಗೆಯನ್ನು ವರದಿ ಮಾಡಿಲ್ಲ, ಅಂತಹ ಹೇಳಿಕೆಗಳನ್ನು ಅಸ್ಪಷ್ಟ ಖಾತೆಗಳಿಂದ ಹರಡಲಾಗುತ್ತಿದೆ.

ಆತನ ಫೌಂಡೇಶನ್, ‘ಯೂವೀಕ್ಯಾನ್’ ನ ವೆಬ್‌ಸೈಟ್ ಪರಿಶೀಲಿಸಿದಾಗ, ನಮಗೆ ಇದರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಅವರ ಮೌಲ್ಯಗಳು ಮತ್ತು ಧ್ಯೇಯದಲ್ಲಿ ಕಂಡುಬರುವಂತೆ, ಅವರು ಮುಖ್ಯವಾಗಿ ಕ್ಯಾನ್ಸರ್ ಜಾಗೃತಿ, ಸ್ಕ್ರೀನಿಂಗ್, ಚಿಕಿತ್ಸೆಗಳು ಮತ್ತು ಕ್ಯಾನ್ಸರ್ ನಿಂದ ಪಾರಾಗಿ ಬದುಕುಳಿದವರ ಸಬಲೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಅವರ ವೆಬ್‌ಸೈಟ್‌ನ ಒಂದು ವಿಭಾಗವನ್ನು ಇಲ್ಲಿ ನೋಡಿ:

ನಂತರ ನಾವು ಈ ವಹಿವಾಟಿನ ಕುರಿತು ಯಾವುದೇ ಮಾಹಿತಿಗಾಗಿ ಯುವರಾಜ್ ಸಿಂಗ್ ಅವರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಪರಿಶೀಲಿಸಿದೆವು. ಸೆಪ್ಟೆಂಬರ್ 7, 2025 ರಂದು, ಆತ IAS ಸಾಕ್ಷಿ ಸಾಹ್ನಿಯವರನ್ನು ತಮ್ಮ ಇನ್‌ಸ್ಟಾಗ್ರಾಮ್ ಮತ್ತು  X ಖಾತೆಯಲ್ಲೆರಡೂ ಸ್ಥಳಗಳಲ್ಲಿ ಪಂಜಾಬ್ ಪ್ರವಾಹದ ಸಮಯದಲ್ಲಿ ಜನರಿಗೆ ಸಹಾಯ ಮಾಡಿದ್ದಕ್ಕಾಗಿ ಶ್ಲಾಘಿಸಿದರು. ಆದರೆ, ಟ್ರ್ಯಾಕ್ಟರ್‌ಗಳ ಬಗ್ಗೆ ಅಥವಾ ₹42 ಕೋಟಿ ಮೌಲ್ಯದ ದೇಣಿಗೆಗಳ ಬಗ್ಗೆ ಯಾವುದೇ ಉಲ್ಲೇಖ ಅಥವಾ ಹೇಳಿಕೆ ಇರಲಿಲ್ಲ.

ಕೆಳಗೆ ಆತನ ಇನ್‌ಸ್ಟಾಗ್ರಾಮ್ ಖಾತೆಯಿಂದ ಪೋಸ್ಟ್ ಮತ್ತು ಸ್ಕ್ರೀನ್‌ಶಾಟ್ ನೋಡಿ.

 

View this post on Instagram

 

A post shared by Yuvraj Singh (@yuvisofficial)

ಯುವರಾಜ್ ಸಿಂಗ್ ಬ್ಯಾನರ್ ಹಿಡಿದಿರುವ ಹೇಳಿಕೆಯಲ್ಲಿ ಹಂಚಿಕೊಂಡಿರುವ ಚಿತ್ರದ ಕುರಿತು ನೋಡುವುದಾದರೆ, ಅದು AI ರಚಿತವಾದ ಚಿತ್ರ. ಬ್ಯಾನರ್‌ನಲ್ಲಿ “ಯುವಜ್”, “ಪನಾಬ್”, “ಅಫಾಕ್ಟೆಡ್” ನಂತಹ ಅನೇಕ ಲೇಖನದ ತಪ್ಪುಗಳಿವೆ. ತಪ್ಪುಗಳನ್ನು ಕೆಳಗೆ ನೋಡಿ:

ನಾವು ಆ ಚಿತ್ರವನ್ನು AI ಟೂಲ್ ಚೆಕರ್ ನಲ್ಲಿ ರನ್ ಮಾಡಿ ನೋಡಿದೆವು ಮತ್ತು ಫಲಿತಾಂಶಗಳು 99% AI ಸಂಭವನೀಯತೆಯನ್ನು ತೋರುತ್ತವೆ. ಫಲಿತಾಂಶಗಳನ್ನು ಕೆಳಗೆ ನೋಡಿ-

ಪಂಜಾಬ್ ಪ್ರವಾಹ ಪೀಡಿತ ಜನರಿಗೆ ಯುವರಾಜ್ ಸಿಂಗ್ 42 ಕೋಟಿ ರೂ. ಮೌಲ್ಯದ ಯಾವುದೇ ದೇಣಿಗೆ ನೀಡಿಲ್ಲ. ಅವರು ತಮ್ಮ ಬೆಂಬಲ ಮತ್ತು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರಾದರೂ, ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿರುವ ಚಿತ್ರಗಳು ಮತ್ತು ಹೇಳಿಕೆಗಳು ನಕಲಿ ಮತ್ತು AI ರಚಿತವಾಗಿವೆ.

ಹೀಗಾಗಿ, ಹೇಳಿಕೆ ಸಂಪೂರ್ಣವಾಗಿ ಸುಳ್ಳು.

********************************************************************************

ಇದನ್ನೂ ಓದಿ:

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*