Don't Miss

ನಿವೃತ್ತ ಸರ್ಕಾರಿ ನೌಕರರಿಗೆ DA (ಡಿಯರ್ನೆಸ್ ಅಲೌವೆನ್ಸ್/ ತುಟ್ಟಿ ಭತ್ಯೆ) ಹೆಚ್ಚಳವನ್ನು ಸರ್ಕಾರ ನಿಲ್ಲಿಸಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಹಣಕಾಸು ಕಾಯ್ದೆ 2025ರ ಅಡಿಯಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ DA ಹೆಚ್ಚಳ ಮತ್ತು ವೇತನ ಆಯೋಗದ ಸೌಲಭ್ಯಗಳು ನೀಡುವುದನ್ನು ನಿಲ್ಲಿಸುತ್ತಾರೆ.

ಕಡೆನುಡಿ/Conclusion : ಈ ಹೇಳಿಕೆ ಸುಳ್ಳು. ಇದನ್ನು ಪತ್ರಿಕಾ ಮಾಹಿತಿ ಬ್ಯೂರೋ (PIB) ಅಧಿಕೃತವಾಗಿ ತಳ್ಳಿಹಾಕಿದ್ದು, ಇದನ್ನು ನಕಲಿ ಎಂದು ಘೋಷಿಸಿದೆ. ವಾರ್ಷಿಕ ಬಜೆಟ್ ಚಕ್ರದಲ್ಲಿ ಜಾರಿಗೆ ತರಲಾದ ಹಣಕಾಸು ಕಾಯ್ದೆ 2025, ಗಳಿಸಿದ ಪ್ರಯೋಜನಗಳನ್ನು ಕಳೆದುಕೊಳ್ಳದೆ ನಿಯಮಿತ ಆಡಳಿತಾತ್ಮಕ ಬದಲಾವಣೆಗಳನ್ನು ಮಾತ್ರ ಜಾರಿಗೆ ತರುತ್ತದೆ.

ರೇಟಿಂಗ್/Rating : ಸಂಪೂರ್ಣವಾಗಿ ಸುಳ್ಳು —

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಇತ್ತೀಚೆಗೆ, ನಿವೃತ್ತ ಸರ್ಕಾರಿ ನೌಕರರಿಗೆ ಹಣಕಾಸು ಕಾಯ್ದೆ 2025ರ ಅಡಿಯಲ್ಲಿ DA ಹೆಚ್ಚಳ ಮತ್ತು ವೇತನ ಆಯೋಗದ ಅನುಕೂಲಗಳನ್ನು ನೀಡಲಾಗುವುದಿಲ್ಲ ಎಂಬುದರ ಬಗ್ಗೆ ವಿವಿಧ ಹೇಳಿಕೆಗಳು ಬಂದಿವೆ. ಫೇಸ್‌ಬುಕ್ ಬಳಕೆದಾರ ‘ದೇವೀಂದರ್ ಕುಮಾರ್ ಚೋಪ್ರಾ’ ಅಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ, “ನಿವೃತ್ತ ಸರ್ಕಾರಿ ನೌಕರರ ನಿವೃತ್ತಿಯ ನಂತರದ ನಿರ್ಣಾಯಕ ಪ್ರಯೋಜನಗಳನ್ನು ಹಿಂತೆಗೆದುಕೊಳ್ಳುವ ಹಣಕಾಸು ಕಾಯ್ದೆ 2025…” ಎಂದು ಬರೆಯುತ್ತಾರೆ. ಪಿಂಚಣಿದಾರರಿಗೆ ಈ ಆರ್ಥಿಕ ಸವಲತ್ತುಗಳನ್ನು ನಿರ್ವಹಿಸಲು ಸರ್ಕಾರ ಇನ್ನು ಮುಂದೆ ಜವಾಬ್ದಾರರಾಗಿರುವುದಿಲ್ಲ, ಇದು ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಸಂದೇಶವು ಆರೋಪಿಸುತ್ತದೆ. ಈ ಪೋಸ್ಟ್ ಅನ್ನು ಕೆಳಗೆ ನೋಡಿ-

“ಈ ಕ್ರಮವು ನಿವೃತ್ತ ನೌಕರರ ಸೇವಾ ನಂತರದ ಭದ್ರತೆಯನ್ನು ದುರ್ಬಲಗೊಳಿಸುತ್ತದೆ. ದೀರ್ಘಾವಧಿಯ ಪರಿಣಾಮದ ಬಗ್ಗೆ ಒಕ್ಕೂಟಗಳು ಈಗ ಗಂಭೀರ ಕಳವಳಗಳನ್ನು ವ್ಯಕ್ತಪಡಿಸುತ್ತಿವೆ” ಎಂದು ಉಲ್ಲೇಖಿಸಿ ಮತ್ತೊಬ್ಬ ಬಳಕೆದಾರರು ನವೆಂಬರ್ 10 ರಂದು Xನಲ್ಲಿ ಇದೇ ರೀತಿಯ ಹೇಳಿಕೆಯನ್ನು  ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಅನ್ನು ಕೆಳಗೆ ಮತ್ತು ಇಲ್ಲಿ ನೋಡಿ.

ಹೆಚ್ಚುತ್ತಿರುವ ಜೀವನ ವೆಚ್ಚವನ್ನು ಸರಿದೂಗಿಸಲು ಕೇಂದ್ರ ಸರ್ಕಾರಿ ನೌಕರರ ಮೂಲ ವೇತನಕ್ಕೆ ಹಣದುಬ್ಬರ-ಸಂಬಂಧಿತ ಹೊಂದಾಣಿಕೆ DA. ನಿವೃತ್ತ ಉದ್ಯೋಗಿಗಳಿಗೆ (ಪಿಂಚಣಿದಾರರು), ಇದು ಡಿಯರ್‌ನೆಸ್ ರಿಲೀಫ್ (DR) ಎಂದಾಗುತ್ತದೆ, ಇದು ಪಿಂಚಣಿಗಳಿಗೆ ಅನ್ವಯಿಸಲಾದ ಸರಿಸುಮಾರು ಅದೇ ಶೇಕಡಾವಾರು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ಸುಳ್ಳು ಎಂದು ಕಂಡುಹಿಡಿಯಿತು. ಪತ್ರಿಕಾ ಮಾಹಿತಿ ಬ್ಯೂರೋ (PIB) ಅಂತಹ ಸೂಚನೆಗಳು ಮತ್ತು ಹೇಳಿಕೆಗಳನ್ನು ತಳ್ಳಿಹಾಕಿತು. ವಾಸ್ತವದಲ್ಲಿ, ನಿಯಮ 37(29C)ರ ಕಿರಿದಾದ ವಿಷಯವನ್ನು ಮಾತ್ರ ತಿದ್ದುಪಡಿ ಮಾಡಲಾಗಿದೆ, DA/DR ಮತ್ತು ವೇತನ ಆಯೋಗದ ಸವಲತ್ತುಗಳು ಬದಲಾಗಿಲ್ಲ.

ಹೇಳಿಕೆಯ ಬಗ್ಗೆ ತಿಳಿದುಕೊಳ್ಳಲು ನಾವು ಮೊದಲು “ನಿವೃತ್ತ ಉದ್ಯೋಗಿಗಳಿಗೆ DA ಹೆಚ್ಚಳ ಮತ್ತು ವೇತನ ಆಯೋಗದ ಸವಲತ್ತುಗಳನ್ನು ರದ್ದುಗೊಳಿಸಲಾಗಿದೆ” ಎಂಬ ಪದಗುಚ್ಛದೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದೆವು. ನಮ್ಮ ಹುಡುಕಾಟದಲ್ಲಿ ನವೆಂಬರ್ 13, 2025 ರಂದು ಸಂದೇಶವನ್ನು “ನಕಲಿ” ಎಂದು ಸ್ಪಷ್ಟವಾಗಿ ತೋರಿಸಿರುವ ಪತ್ರಿಕಾ ಮಾಹಿತಿ ಬ್ಯೂರೋದ ಅಧಿಕೃತ ಹ್ಯಾಂಡಲ್‌ನ ಪೋಸ್ಟ್‌ ನಮಗೆ ದೊರಕಿತು.

ಚರ್ಚೆಯಲ್ಲಿರುವ ತಿದ್ದುಪಡಿಯು ಕೇಂದ್ರ ನಾಗರಿಕ ಸೇವೆಗಳ (ಪಿಂಚಣಿ) ನಿಯಮಗಳು, 2021ರ ನಿಯಮ 37(29C) ಅನ್ನು ಮಾರ್ಪಡಿಸುತ್ತದೆ. ಇದು ಸಾರ್ವಜನಿಕ ವಲಯದ ಉದ್ಯಮಗಳಲ್ಲಿ (PSUಗಳು) ಸೇರಿದ, ಮತ್ತು ನಂತರ ಸೇವೆಯಲ್ಲಿ ದುಷ್ಕೃತ್ಯಕ್ಕಾಗಿ ವಜಾಗೊಳಿಸಲಾಗಿರುವ ಅಥವಾ ತೆಗೆದುಹಾಕಲಾಗಿರುವ ಮಾಜಿ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯಿಸುತ್ತದೆ. ಅಂತಹ ಸಂದರ್ಭಗಳಲ್ಲಿ, ಸರ್ಕಾರ ಮತ್ತು PSU ಎರಡರ ಅಡಿಯಲ್ಲಿಯ ಸೇವೆಗಾಗಿ ಅವರ ನಿವೃತ್ತಿ ಪ್ರಯೋಜನಗಳನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು, ಇದು ಸಂಬಂಧಿತ ಸಚಿವಾಲಯದ ಪರಿಶೀಲನೆಗೆ ಒಳಪಟ್ಟಿರುತ್ತದೆ. ತಿದ್ದುಪಡಿಯನ್ನು ಇಲ್ಲಿ ನೋಡಿ

ಇದರ ನಂತರ, ನಾವು ಮತ್ತಷ್ಟು ಆಳಕ್ಕೆ ಹೊಕ್ಕಾಗ, ಈ ಹೇಳಿಕೆಯ ಕುರಿತು ಎಕನಾಮಿಕ್ ಟೈಮ್ಸ್ ಪ್ರಕಟಿಸಿದ ವರದಿಗಳು ಕಂಡುಬಂದವು. ಪಿಂಚಣಿದಾರರಿಗೆ DR(DA ಅಲ್ಲ) ಅನ್ವಯಿಸುವ ಬಗ್ಗೆ ಮತ್ತು ಅದು ಸುರಕ್ಷಿತವಾಗಿದೆ ಮತ್ತು 2021 ರ CCS (ಪಿಂಚಣಿ) ನಿಯಮಗಳ ನಿಯಮ 37ರ ತಿದ್ದುಪಡಿಯ ನಂತರವೂ ಬದಣಾವಣೆಯಾಗುವುದಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ವರದಿಯ ಒಂದು ವಿಭಾಗವನ್ನು ಕೆಳಗೆ ನೋಡಿ –

ಆದ್ದರಿಂದ, ಹೇಳಿಕೆ ಸುಳ್ಳು.

******************************************************
ಇದನ್ನೂ ಓದಿ:

ಪಾರದರ್ಶಕತೆಯ ಕೊರತೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ PM CARES ನಿಧಿಯಿಂದ ತನ್ನ $50,000 ದೇಣಿಗೆಯನ್ನು UNICEF ಗೆ ಮರುನಿರ್ದೇಶಿಸಿದ್ದಾರೆಯೇ? ಸತ್ಯ ಪರಿಶೀಲನೆ

ಭಾರತವು ಅಮೆರಿಕಕ್ಕೆ ಜೆನೆರಿಕ್ ಔಷಧಿಗಳ ರಫ್ತು ಮಾಡುವುದನ್ನು ಕಡಿಮೆ ಮಾಡುತ್ತಿದೆ ಎಂದು ರಜತ್ ಶರ್ಮಾ ವರದಿ ಮಾಡುತ್ತಿರುವ ಕ್ಲಿಪ್; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*