Don't Miss

ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಕರಿಂದ ಪಶ್ಚಿಮ ಬಂಗಾಳ ಸರ್ಕಾರವು ಜಿಜ್ಯಾ ತೆರಿಗೆಯನ್ನು ಸಂಗ್ರಹಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಪಶ್ಚಿಮ ಬಂಗಾಳ ಸರ್ಕಾರವು ಶ್ರಾವಣ ಮಾಸದಲ್ಲಿ ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಕರಿಂದ ತೆರಿಗೆಯನ್ನು ಸಂಗ್ರಹಿಸುತ್ತಿದೆ..

ಕಡೆನುಡಿ/Conclusion: ದಾರಿತಪ್ಪಿಸುವ ಸುದ್ದಿ. ಪಶ್ಚಿಮ ಬಂಗಾಳ ಸರ್ಕಾರವು ಯಾವುದೇ ತೆರಿಗೆಯನ್ನು ಸಂಗ್ರಹಿಸುತ್ತಿಲ್ಲ ಮತ್ತು ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳು 10 ರೂಪಾಯಿಗಳನ್ನು ಸಂಗ್ರಹಿಸಿದವಷ್ಟೇ.

ರೇಟಿಂಗ್/Rating: ದಾರಿತಪ್ಪಿಸುವ ಸುದ್ದಿ–

***********************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಗಂಗಾ ಘಾಟಿಗಳಿಗೆ ಭೇಟಿ ನೀಡುವಾಗ ತೆರಿಗೆ ವಿಧಿಸಲಾಗಿದೆ ಎಂದು ಹೇಳಲಾದ ಹಿಂದೂ ತೀರ್ಥಯಾತ್ರಿಕರ ವೀಡಿಯೊಗಳನ್ನು ಹಲವಾರು ಬಳಕೆದಾರರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಹೇಳಿಕೆಯನ್ನು ಬೆಂಬಲಿಸಲು, ಗಂಗೆಯಲ್ಲಿ ಸ್ನಾನ ಮಾಡಲು ₹10 ಪಾವತಿಸಬೇಕೆಂದು ವ್ಯಂಗ್ಯಾತ್ಮಕ ಹೇಳಿಕೆಯೊಂದಿಗೆ ವ್ಯಕ್ತಿಯೊಬ್ಬರು ಟಿಕೆಟ್ ಹಿಡಿದ ವೀಡಿಯೊವನ್ನೂ ಬಳಸಲಾಗಿದೆ.

ಪರಿಶೀಲಿತ X ಬಳಕೆದಾರ ‘HinduVoice_in’ ಇಂತಹ ಒಂದು ಹೇಳಿಕೆಯನ್ನು “#WestBengal. ಸರ್ಕಾರವು ತಾರಕೇಶ್ವರ ಶಿವ ದೇವಾಲಯಕ್ಕೆ ಹೋಗುವ ಮುನ್ನ ಪ್ರತಿಯೊಬ್ಬ ಭಕ್ತರು ಗಂಗಾ ನದಿಯಲ್ಲಿ ಸ್ನಾನ ಮಾಡಲು ₹10 ಶುಲ್ಕ ವಿಧಿಸುತ್ತಿದೆ. ಗಂಗಾ ನದಿಯ ಘಾಟಿಯನ್ನು ಪ್ರವೇಶಿಸಲು ಲಕ್ಷಾಂತರ ಭಕ್ತರಿಂದ ಈ ಹಣವನ್ನು ಪಡೆಯಲಾಗುತ್ತಿದೆ” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಟ್ವೀಟ್ ಅನ್ನು ಇಲ್ಲಿ ನೋಡಿ.

ಮತ್ತೊಬ್ಬ ಪರಿಶೀಲಿತ X ಬಳಕೆದಾರರು ಪಶ್ಚಿಮ ಬಂಗಾಳದ ಹಿಂದೂಗಳ ಮೇಲೆ ಜಿಜ್ಯಾ ತೆರಿಗೆಯನ್ನು ವಿಧಿಸಲಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ. ಆಕೆಯ ಪೋಸ್ಟ್ ಗೆ 20,000 ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು ಸುಮಾರು 2,2000 ಲೈಕ್‌ಗಳು ದೊರಕಿವೆ. ಟ್ವೀಟ್ ಅನ್ನು ಇಲ್ಲಿ ನೋಡಿ.

ಕೇಂದ್ರ ರಾಜ್ಯ ಶಿಕ್ಷಣ ಸಚಿವ ಮತ್ತು ಪಶ್ಚಿಮ ಬಂಗಾಳದ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷರಾದ ಸುಕಾಂತ ಮಜುಂದಾರ್ ಕೂಡ ಈ ಹೇಳಿಕೆಯನ್ನು ನೀಡಿದ್ದಾರೆ. ಧಾರ್ಮಿಕ ಆಚರಣೆಗಳ ಸಮಯದಲ್ಲಿ ಬಲವಂತವಾಗಿ ಅಂತಹ ಶುಲ್ಕಗಳನ್ನು ಸಂಗ್ರಹಿಸಿದ್ದಕ್ಕಾಗಿ ಆತ TMC ಸರ್ಕಾರವನ್ನು ಟೀಕಿಸಿದರು ಮತ್ತು ಅವರನ್ನು ಹಿಂದೂ ವಿರೋಧಿಗಳೆಂದು ಕರೆದರು. ಟ್ವೀಟ್ ಅನ್ನು ಇಲ್ಲಿ ನೋಡಿ.

FACT CHECK

ಡಿಜಿಟೈ ಇಂಡಿಯಾ ಈ ಹೇಳಿಕೆಯ ವಾಸ್ತವತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸಿತು. ಆ ವ್ಯಕ್ತಿಯ ಬಳಿ ಇರುವ ಟಿಕೆಟ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಪಶ್ಚಿಮ ಬಂಗಾಳ ಸರ್ಕಾರದ ಯಾವುದೇ ಲೋಗೋ ಅಥವಾ ಲಾಂಛನ ಇರಲಿಲ್ಲ.

ಟಿಕೆಟ್‌ನಲ್ಲಿ ಬಂಗಾಳಿ ಭಾಷೆಯಲ್ಲಿ ಹೀಗೆ ಬರೆಯಲಾಗಿದೆ: উন্নয়ন পরিষেবা দশ টাকা, ಇದರರ್ಥ ‘ಅಭಿವೃದ್ಧಿ ಸೇವೆ 10 ಟಾಕಾ’. ಔರಂಗಜೇಬನ ಕಾಲದ ಜಿಜ್ಯಾ ತೆರಿಗೆಯನ್ನು ಹಿಂದೂಗಳ ಮೇಲೆ ವಿಧಿಸಲಾಗಿದೆ ಎಂಬ ಹೇಳಿಕೆಗಳನ್ನು ಬಿಟ್ಟುಬಿಡಿ, ಇದು ಯಾವುದೇ ರೀತಿಯಲ್ಲಿ “ತೆರಿಗೆ” ಕೂಡ ಅಲ್ಲ. ಪಶ್ಚಿಮ ಬಂಗಾಳ ಸರ್ಕಾರ ಅಥವಾ ಯಾವುದೇ ಪುರಸಭೆಯೂ ಇದರಲ್ಲಿ ಭಾಗಿಯಾಗಿಲ್ಲ.

ನಂತರ ನಾವು ಬೈದ್ಯಾಬಾತಿ ನಿಮೈ ತೀರ್ಥ ಘಾಟಿಗೆ ಭೇಟಿ ನೀಡುವ ತೀರ್ಥಯಾತ್ರಿಗಳ ಮೇಲೆ ವಿಧಿಸಲಾಗುವ ಇಂತಹ ಶುಲ್ಕಗಳ ಕುರಿತು ಪುರಾವೆಗಳನ್ನು ಹುಡುಕಲು ಕೀವರ್ಡ್ ಹುಡುಕಾಟದ ಜೊತೆಗೆ ರಿವರ್ಸ್ ಇಮೇಜ್ ಹುಡುಕಾಟವನ್ನೂ ನಾವು ನಡೆಸಿದೆವು. ನಮ್ಮ ಹುಡುಕಾಟದ ಫಲಿತಾಂಶವಾಗಿ ನಮಗೆ 4 ಆಗಸ್ಟ್ 2025 ರಂದು ಪಶ್ಚಿಮ ಬಂಗಾಳ ಪೊಲೀಸರ ಈ ಅಧಿಕೃತ ಪೋಸ್ಟ್‌ ನಮಗೆ ದೊರಕಿತು.

ಬಂಗಾಳಿ ಭಾಷೆಯಲ್ಲಿರುವ ಈ ಪೋಸ್ಟ್ ಹೀಗಿದೆ: বৈদ্যবাটী নিমাই তীর্থ ঘাট থেকে পবিত্র গঙ্গা জল নেওয়ার জন্য পুণ্যার্থীদের কাছে থেকে পশ্চিমবঙ্গ সরকার কোন  “ফি” আদায় করছে না। ಕನ್ನಡದ ಅನುವಾದ ಹೀಗಿದೆ: “ಪಶ್ಚಿಮ ಬಂಗಾಳ ಸರ್ಕಾರವು ಬೈದ್ಯಾಬಾತಿ ನಿಮೈ ತೀರ್ಥ ಘಾಟಿಯಿಂದ ಪವಿತ್ರ ಗಂಗಾಜಲವನ್ನು ತೆಗೆದುಕೊಳ್ಳಲು ತೀರ್ಥಯಾತ್ರಿಗಳಿಂದ ಯಾವುದೇ “ಶುಲ್ಕ” ಸಂಗ್ರಹಿಸುತ್ತಿಲ್ಲ.”

ಟ್ವೀಟ್ ಅನ್ನು ಇಲ್ಲಿ ನೋಡಿ.

ನಮ್ಮ ತನಿಖೆಯ ಸಮಯದಲ್ಲಿ, ಪಶ್ಚಿಮ ಬಂಗಾಳ ಸರ್ಕಾರದ ಮೇಲೆ ಸುಕಾಂತ ಮಜುಂದಾರ್ ರವರ ಆರೋಪಗಳನ್ನು ಚರ್ಚಿಸಿದ ದ ಸ್ಟೇಟ್ಸ್‌ಮನ್‌ನ ಲೇಖನ ನಮಗೆ ದೊರಕಿತು. “ಕೆಲವೊಮ್ಮೆ ನೈರ್ಮಲ್ಯ ಮತ್ತು ಜನಸಂದಣಿ ನಿರ್ವಹಣೆಗಾಗಿ ಘಾಟಿಗಳಲ್ಲಿ ಒಂದು ಸಣ್ಣ ಶುಲ್ಕವನ್ನು ಸಂಗ್ರಹಿಸಲಾಗುತ್ತದೆ, ವಿಶೇಷವಾಗಿ ದೊಡ್ಡ ಪ್ರಮಾಣದ ಧಾರ್ಮಿಕ ಕಾರ್ಯಕ್ರಮಗಳ ಸಮಯದಲ್ಲಿ” ಎಂದು ಸ್ಥಳೀಯ ಸ್ವಯಂಸೇವಕರು ಅವರಿಗೆ ಹೇಳಿದ್ದರು.

ಹೆಚ್ಚುವರಿಯಾಗಿ, ಇವುಗಳನ್ನು “ರಾಜ್ಯವು ಕಡ್ಡಾಯಗೊಳಿಸಿಲ್ಲ” ಎಂಬುದನ್ನೂ ಸಹ ಲೇಖನವು ವಿವರಿಸಿದೆ. ಲೇಖನದ ಒಂದು ಸಣ್ಣ ತುಣುಕನ್ನು ಇಲ್ಲಿ ನೋಡಿ-

ಹೀಗಾಗಿ, ಹಿಂದೂಗಳಿಂದ ಯಾವುದೇ ತೆರಿಗೆ ಸಂಗ್ರಹದ ಪುರಾವೆಗಳಿಲ್ಲ. ಪಶ್ಚಿಮ ಬಂಗಾಳ ಸರ್ಕಾರವು ಶ್ರಾವಣ ಮಾಸದಲ್ಲಿ ತಾರಕೇಶ್ವರ ಗಂಗೆಗೆ ಭೇಟಿ ನೀಡುವ ಹಿಂದೂ ತೀರ್ಥಯಾತ್ರಿಗಳಿಂದ ತೆರಿಗೆ ಸಂಗ್ರಹಿಸುತ್ತಿದೆ ಎಂಬ ಹೇಳಿಕೆ ಸುಳ್ಳು.

ಇದನ್ನೂ ಓದಿ:

ಬಿಜೆಪಿ ಆಡಳಿತವು ಜೀವಂತ ಡೈನೋಸಾರ್‌ಗಳ ಮರಳುವಿಕೆಗೆ ಕಾರಣವಾಯಿತೇ? ಸತ್ಯ ಪರಿಶೀಲನೆExternal Affairs Minister of India S Jaishankar

ಮೋದಿ ಸರ್ಕಾರವು ಸೌರ ಫಲಕಗಳನ್ನು ಬಳಸಿ ರೈಲು ಹಳಿಗಳನ್ನು ವಿದ್ಯುತ್ ಸ್ಥಾವರಗಳನ್ನಾಗಿ ಪರಿವರ್ತಿಸುತ್ತಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*