Don't Miss

ಕೇರಳದಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತದ ಹಳೆಯ ಚಿತ್ರವನ್ನು ಅಹಮದಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಅಪಘಾತದ ಚಿತ್ರವೆಂದು ಹಂಚಿಕೊಳ್ಳಲಾಗಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಚಿತ್ರವು ಜೂನ್ 12, 2025 ರಂದು ಅಹಮದಾಬಾದ್‌ನಲ್ಲಿ ಅಪಘಾತಕ್ಕೀಡಾದ ಏರ್ ಇಂಡಿಯಾ ವಿಮಾನದ ಅವಶೇಷಗಳನ್ನು ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಈ ಚಿತ್ರವು 2020 ರಲ್ಲಿ ಕೇರಳದ ಕೋಯಿಕ್ಕೋಡ್‌ನಲ್ಲಿ ನಡೆದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಪಘಾತದ ಚಿತ್ರವಾಗಿದ್ದು, ಇತ್ತೀಚಿನ ಅಹಮದಾಬಾದ್ ಘಟನೆಗೆ ಸಂಬಂಧಿಸಿಲ್ಲ.

ರೇಟಿಂಗ್/Rating: ತಪ್ಪು ನಿರೂಪಣೆ-- 

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

****************************************************************

ಜೂನ್ 12, 2025 ರಂದು ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಕೆಲವೇ ನಿಮಿಷಗಳ ನಂತರ ಅಹಮದಾಬಾದ್‌ನಿಂದ ಲಂಡನ್‌ಗೆ ಹಾರಿದ ಏರ್ ಇಂಡಿಯಾ ವಿಮಾನ AI171ರ ದಾರುಣ ವಿಮಾನ ಅಪಘಾತದ ನಂತರ, ಸಾಮಾಜಿಕ ಮಾಧ್ಯಮದಲ್ಲಿ ಹಲವಾರು ಚಿತ್ರಗಳು ಮತ್ತು ಹೇಳಿಕೆಗಳನ್ನು ಹಂಚಿಕೊಳ್ಳಲಾಯಿತು. ಬೋಯಿಂಗ್ 787-8 ವಿಮಾನವು ಸಿಬ್ಬಂದಿ ಸೇರಿದಂತೆ 242 ಜನರನ್ನು ಹೊತ್ತೊಯ್ಯುತ್ತಿತ್ತು. ವಿಮಾನವು ವೈದ್ಯರ ಹಾಸ್ಟೆಲ್‌ಗೆ ಅಪ್ಪಳಿಸಿತು. ಈ ದುರಂತದಲ್ಲಿ ನೆಲದ ಮೇಲಿದ್ದವರು ಸೇರಿದಂತೆ 260 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು.

ಅಹಮದಾಬಾದ್ ಅಪಘಾತದ ಬಗ್ಗೆ ವ್ಯಾಪಕ ವರದಿಗಳು ಮತ್ತು ಸಾಮಾಜಿಕ ಮಾಧ್ಯಮ ಅಪ್ಡೇಟ್ ಗಳ ನಡುವೆ, ಎರಡು ಭಾಗಗಳಾಗಿ ತುಂಡಾಗಿರುವ ತೀವ್ರವಾಗಿ ಹಾನಿಗೊಳಗಾದ ವಿಮಾನವನ್ನು ತೋರಿಸುವ ಛಾಯಾಚಿತ್ರವನ್ನು ಅಂತರ್ಜಾಲದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು. ಫೇಸ್‌ಬುಕ್‌ನಲ್ಲಿರುವ ಚಿತ್ರದೊಂದಿಗೆ ಹಿಂದಿ ಭಾಷೆಯಲ್ಲಿ ಒಂದು ಸಂದೇಶವನ್ನೂ ಕಾಣಬಹುದು, ಈ ಸಂದೇಶವು ಘಟನೆಯ ಬಗ್ಗೆ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತಾ ಪ್ರಯಾಣಿಕರ ಸುರಕ್ಷತೆಗಾಗಿ ಪ್ರಾರ್ಥನೆಯನ್ನು ಸೂಚಿಸುತ್ತದೆ. ಇದು, ಚಿತ್ರವು ಜೂನ್ 12, 2025 ರಂದು ಅಹಮದಾಬಾದ್ ಬಳಿ ನಡೆದ ಅಪಘಾತಕ್ಕೆ ಸಂಬಂಧಿಸಿದ್ದು ಎಂಬುದನ್ನು ಸೂಚಿಸುತ್ತದೆ.

ಇದೇ ವಿಷಯವನ್ನು ಇಲ್ಲಿಯೂ ಹಂಚಿಕೊಳ್ಳಲಾಗಿದೆ.

ಹೇಳಿಕೆ ಹಿಂದಿಯಲ್ಲಿ: : “गुजरात के अहमदाबाद में एयरपोर्ट के पास एक यात्री विमान के क्रैश होने की सूचना अत्यंत पीड़ादायक और मन को व्यथित करने वाली है। घटनास्थल पर राहत व बचाव कार्य युद्धस्तर पर जारी है। मैं ईश्वर से सभी यात्रियों की कुशलता, स्वास्थ्य और सुरक्षा की प्रार्थना करती हूं।” ಕನ್ನಡದಲ್ಲಿ ಇದರ ಅನುವಾದ ಹೀಗಿದೆ: ಗುಜರಾತ್ ನ ಅಹಮದಾಬಾದ್ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಅಪಘಾತ ಅತೀವ ದುಃಖದಾಯಕ ಮತ್ತು ಹೃದಯವಿದ್ರಾವಕ. ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಉನ್ನತ ಮಟ್ಟದಲ್ಲಿ ನಡೆಯುತ್ತಿವೆ. ಎಲ್ಲ ಪ್ರಯಾಣಿಕರ ಸುರಕ್ಷತೆ, ಆರೋಗ್ಯ ಮತ್ತು ಚೇತರಿಕೆಗಾಗಿ ದೇವರನ್ನು ಬೇಡಿಕೊಳ್ಳುತ್ತೇನೆ.

FACT-CHECK

ಚಿತ್ರದ ಸತ್ಯಾಸತ್ಯತೆಯನ್ನು ಪರಿಶೀಲಿಸಲು, ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಲಾಯಿತು, ಮತ್ತು ಫಲಿತಾಂಶಗಳು ಪ್ರಶ್ನೆಯಲ್ಲಿರುವ ಛಾಯಾಚಿತ್ರವು ಅಹಮದಾಬಾದ್ ಅಪಘಾತದದ್ದಲ್ಲ ಎಂದು ಸ್ಪಷ್ಟವಾಗಿ ತೋರಿಸಿದೆ. ಇದು ಸುಮಾರು ಐದು ವರ್ಷಗಳ ಹಿಂದೆ – ಆಗಸ್ಟ್ 7, 2020 ರಂದು – ದುಬೈನಿಂದ ಕೋಝಿಕ್ಕೋಡ್‌ಗೆ ಹೋಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಕೇರಳದ ಕೋಝಿಕ್ಕೋಡ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯುವಾಗ ರನ್‌ವೇಯಿಂದ ಜಾರಿದ ಘಟನೆಯಾಗಿದೆ. ಬೋಯಿಂಗ್ 737 ವಿಮಾನವು ಟೇಬಲ್-ಟಾಪ್ ರನ್‌ವೇಯನ್ನು ದಾಟಿ, ಕಣಿವೆಗೆ ಧುಮುಕಿ, ಬೇರ್ಪಟ್ಟಿತ್ತು.

ಆನ್ ಮನೋರಮಾ ಸುದ್ದಿ ವೆಬ್‌ಸೈಟ್‌ನಲ್ಲಿ ಬಳಸಲಾದ ಕೇರಳ ಅಪಘಾತದ ಮೂಲ ಚಿತ್ರ ಇಲ್ಲಿದೆ. ಅದೇ ಚಿತ್ರವನ್ನು ಹಿಂದೂಸ್ತಾನ್ ಟೈಮ್ಸ್‌ನಲ್ಲಿ ಬಳಸಲಾಗಿದೆ.

ಆ ಸಮಯದಲ್ಲಿ ಈ ಘಟನೆ ವ್ಯಾಪಕವಾಗಿ ವರದಿಯಾಗಿತ್ತು. 2020 ರ ಅಪಘಾತದಲ್ಲಿ ಇಬ್ಬರೂ ಪೈಲಟ್‌ಗಳು ಸೇರಿದಂತೆ 21 ಜನರು ಸಾವನ್ನಪ್ಪಿದ್ದರು ಹಾಗೂ 100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದ್ದರಿಂದ, ಅಹಮದಾಬಾದ್ ದುರಂತದ ದೃಶ್ಯವೆಂದು ಈಗ ಪ್ರಚರಿಸಲ್ಪಡುವ ಚಿತ್ರವು ಅಸಂಬದ್ಧ ಹಾಗೂ ಸುಳ್ಳು.

ಇದನ್ನೂ ಓದಿ:

ಕೈಕೋಳ ಹಾಕಿದ ಭಾರತೀಯ ವಲಸಿಗರನ್ನು ಗ್ವಾಟೆಮಾಲಾಗೆ ಗಡೀಪಾರು ಮಾಡಲಾಗುತ್ತಿರುವುದನ್ನು ಚಿತ್ರ ತೋರಿಸುತ್ತದೆ; ಸತ್ಯ ಪರಿಶೀಲನೆ

ಯುಎಸ್, ಕೆನಡಾ 1.2 ಮಿಲಿಯ ಅಕ್ರಮ ಭಾರತೀಯ ವಲಸಿಗರನ್ನು ಗಡೀಪಾರು ಮಾಡಲಾರಂಭಿಸಿವೆಯೇ? ಸತ್ಯ-ಪರಿಶೀಲನೆ

Leave a Reply

Your email address will not be published. Required fields are marked *

*