Don't Miss

ಈ ಕ್ಲಿಪ್‌, ರಜನಿಕಾಂತ್ ರವರು ತಮ್ಮ ಮನೆಯಲ್ಲಿ ಬೀಳುವುದು ತೋರಿಸುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸುತ್ತದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಈ ಕ್ಲಿಪ್‌, ರಜನಿಕಾಂತ್ ರವರು ತಮ್ಮ ಮನೆಯಲ್ಲಿ ಬೀಳುವುದು ತೋರಿಸುವುದರೊಂದಿಗೆ ಅವರ ಆರೋಗ್ಯದ ಬಗ್ಗೆ ಕಳವಳ ಮೂಡಿಸುತ್ತದೆ.

ಕಡೆನುಡಿ/Conclusion:  ತಪ್ಪು ನಿರೂಪಣೆ. ವೀಡಿಯೊದಲ್ಲಿ ತೋರಿಸಿರುವ ವ್ಯಕ್ತಿ ರಜನಿಕಾಂತ್ ಅಲ್ಲ, ಅದು ಕರ್ನಾಟಕ ಮೂಲದ ಪತ್ರಕರ್ತ ರಾಜಾರಾಮ್ ತಲ್ಲೂರ್.

ರೇಟಿಂಗ್/Rating: ತಪ್ಪು ನಿರೂಪಣೆ —

************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ತಮಿಳು ನಟ ರಜನಿಕಾಂತ್ ರವರು ಜಾರಿ ಬಿದ್ದರು ಎನ್ನುವ ಸಿಸಿಟಿವಿ ದೃಶ್ಯಾವಳಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದನ್ನು ಲೋಕಲ್‌ತಕ್ ನಂತಹ ಮಾಧ್ಯಮಗಳು ಸೇರಿದಂತೆ ಹಲವಾರು ಬಳಕೆದಾರರು Xನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟ್‌ಗೆ ಲಿಂಕ್ ಇಲ್ಲಿದೆ.

ಪೋಸ್ಟ್‌ ನ ಶೀರ್ಷಿಕೆ ಹೀಗಿದೆ: “ಸೂಪರ್‌ಸ್ಟಾರ್ ರಜನಿಕಾಂತ್ ರವರು ಪತ್ರಿಕೆ ತೆಗೆದುಕೊಳ್ಳಲು ಬಾಗುವಾಗ ಆಕಸ್ಮಿಕವಾಗಿ ಜಾರಿಬಿದ್ದ ಸಿಸಿಟಿವಿ ವೀಡಿಯೊ ವೈರಲ್ ಆಗುತ್ತಿದೆ. “ಈ ಘಟನೆಯಿಂದಾಗಿ ಅಭಿಮಾನಿಗಳು ಕೂಡಲೆ ಕಳವಳಗೊಂಡು ಸಾಮಾಜಿಕ ಮಾಧ್ಯಮಗಳಲ್ಲಿ ಅವರ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವ ಸಂದೇಶಗಳನ್ನು ತುಂಬಿದರು. ಇಲ್ಲಿಯವರೆಗೆ, ಯಾವುದೇ  ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.”

ನ್ಯೂಸ್ 24 ನಂತಹ ಹಲವಾರು ಇತರ ವಾಹಿನಿಗಳು ಅದೇ ಕ್ಲಿಪಿಂಗ್ ಅನ್ನು ಹಂಚಿಕೊಳ್ಳುತ್ತಾ ರಜನಿಕಾಂತ್ ಜಾರಿ ಮುಖದ ಮೇಲೆ ಬಿದ್ದಿದ್ದಾರೆ ಎಂದು ಹೇಳಿಕೊಂಡಿವೆ. ಪೋಸ್ಟ್ 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಅದನ್ನು ಇಲ್ಲಿ ಕಾಣಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ದೃಶ್ಯಗಳನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಗೂಗಲ್‌ನಲ್ಲಿ ವೀಡಿಯೊದ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿತು. ವೀಡಿಯೊದಲ್ಲಿರುವ ವ್ಯಕ್ತಿ ರಜನಿಕಾಂತ್ ಅಲ್ಲ ಮತ್ತು ಇದು ತಪ್ಪು ನಿರೂಪಣೆಯೆಂದು ನಾವು ಕಂಡುಕೊಂಡಿದ್ದೇವೆ.

ರಜನಿಕಾಂತ್ ಬಿದ್ದಿದ್ದಾರೆ ಎಂದು ಹೇಳಿಕೊಳ್ಳುವ ವೀಡಿಯೊ ಕರ್ನಾಟಕ ಮೂಲದ ಪತ್ರಕರ್ತ ರಾಜಾರಾಮ್ ತಲ್ಲೂರ್ ಅವರ ಸಿಸಿಟಿವಿ ದೃಶ್ಯಾವಳಿಯಾಗಿದೆ ಮತ್ತು ವೀಡಿಯೊವನ್ನು ಒಂದು ವಾರದ ಹಿಂದೆ, ಜುಲೈ 24, 2025 ರಂದು ಅವರ ಫೇಸ್‌ಬುಕ್ ಪುಟದಲ್ಲಿ ಒಂದು ಹಾಸ್ಯಾತ್ಮಕ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಲಾಗಿದೆ ಎಂದು ತಿಳಿದುಬಂತು.

ಫೇಸ್‌ಬುಕ್ ಪೋಸ್ಟ್‌ನ ಲಿಂಕ್ ಅನ್ನು ಇಲ್ಲಿ ಕಾಣಬಹುದು.

ರಾಜಾರಾಮ್ ತಲ್ಲೂರ್ ಆ ಬೆಳಿಗ್ಗೆ “ಪತ್ರಿಕೆಗಳ ಬಂಡಲ್ ತರಲು ಹೋದಾಗ” ಕಾಲು ಜಾರಿಬಿದ್ದಿರುವುದಾಗಿ ಬರೆದಿದ್ದಾರೆ. ಅವರು ಶೀರ್ಷಿಕೆಯಲ್ಲಿ ತಮಗೆ ಯಾವುದೇ ಗಾಯಗಳಾಗಿಲ್ಲ ಮತ್ತು ಈ ವೀಡಿಯೊ “ಮನೆಯ ಭದ್ರತಾ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಸಣ್ಣ ತುಣುಕು” ಎಂದು ಭರವಸೆ ನೀಡಿದ್ದಾರೆ.

ಇದಲ್ಲದೆ, ರಾಜಾರಾಮ್ ತಲ್ಲೂರ್ ಈ ಸುಳ್ಳು ಸುದ್ದಿ ಮತ್ತು ಹೇಳಿಕೆಗಳ ಬಗ್ಗೆ ಸ್ಪಷ್ಟನೆ ನೀಡುತ್ತಾ ಜುಲೈ 31 ರಂದು ಪೋಸ್ಟ್ ಮಾಡಿದ್ದಾರೆ. ನಕಲಿ ಸುದ್ದಿಯನ್ನು ಉದ್ದೇಶಿಸಿ ತಲ್ಲೂರ್ ಅವರ ಪೋಸ್ಟ್‌ನ ಲಿಂಕ್ ಅನ್ನು ಇಲ್ಲಿ ನೋಡಿ.

ಒಂದು ಟೈಮ್ಸ್ ಆಫ್ ಇಂಡಿಯಾ ವರದಿ ಮತ್ತು MSN ವರದಿಯು ಈ ವಿಷಯದ ಬಗ್ಗೆ ರಜನಿಕಾಂತ್ ಅವರ PR ತಂಡ ಅಧಿಕೃತ ಸ್ಪಷ್ಟೀಕರಣವನ್ನು ನೀಡಿರುವುದಾಗಿ ಉಲ್ಲೇಖಿಸಿದೆ. “ವೀಡಿಯೊದಲ್ಲಿ ವ್ಯಕ್ತಿಯ ಮುಖ ಸ್ಪಷ್ಟವಾಗಿ ಗೋಚರಿಸದ ಕಾರಣ ಗೊಂದಲ ಉಂಟಾಗಿದೆ ಮತ್ತು ರಜನಿಕಾಂತ್ ಪ್ರಸ್ತುತ ಆರೋಗ್ಯವಾಗಿದ್ದಾರೆ ಎಂದು ತಂಡದಿಂದ ಅಧಿಕೃತ ಹೇಳಿಕೆ ಬಂದಿದೆ” ಎಂದು ವರದಿಗಳು ತಿಳಿಸಿವೆ.

ಆದ್ದರಿಂದ, ಬೆಳಗಿನ ಪತ್ರಿಕೆಯನ್ನು ತೆಗೆದುಕೊಳ್ಳುವಾಗ ರಜನಿಕಾಂತ್ ಕೆಳಗೆ ಬಿದ್ದಿದ್ದಾರೆ ಎಂಬ ಹೇಳಿಕೆ ಸುಳ್ಳು. ಸಾಮಾನ್ಯವಾಗಿ ತಮಿಳು ತಾರೆ ರಜನಿಕಾಂತ್ ರವರ ಹೊಸ ಚಲನಚಿತ್ರ ಬಿಡುಗಡೆಗೆ ಮುಂಚಿತವಾಗಿ ಇಂತಹ ಹೇಳಿಕೆಗಳು ಹೊರಹೊಮ್ಮುತ್ತವೆ ಮತ್ತು ಈ ಬಾರಿ ಅವರ ಮುಂಬರುವ “ಕೂಲಿ” ಆಗಸ್ಟ್ 14, 2025 ರಂದು ಬಿಡುಗಡೆಯಾಗಲಿದೆ.

 

Leave a Reply

Your email address will not be published. Required fields are marked *

*