ಹೇಳಿಕೆ/Claim: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಚೀನಾದ ಮೇಲೆ ಆರೋಪ ಹೊರೆಸಿ ಅದರ ಮೇಲೆ ಯುದ್ಧ ಘೋಷಿಸಿದ್ದಾರೆ ಎಂದು ಕ್ಲಿಪ್ ಹೇಳುತ್ತದೆ.
ಕಡೆನುಡಿ/Conclusion: ಹೇಳಿಕೆ ದಾರಿತಪ್ಪಿಸುವಂತಿದೆ. ಯುದ್ಧದ ಕುರಿತು ಯಾವುದೇ ಅಧಿಕೃತ ಘೋಷಣೆಯನ್ನು ಹೊರಡಿಸಲಾಗಿಲ್ಲ. ಬದಲಾಗಿ, ನೆತನ್ಯಾಹು ಚೀನಾ ಮತ್ತು ಕತಾರ್ ಮೇಲೆ ಇಸ್ರೇಲ್ ವಿರೋಧಿ ಪ್ರಚಾರ ಮಾಡಿದ್ದರ ಕುರಿತು ಮತ್ತು ಇಸ್ರೇಲ್ನ ಪ್ರತ್ಯೇಕತೆಗೆ ಕೊಡುಗೆ ನೀಡುತ್ತಿರುವ ಕುರಿತು ಆರೋಪಿಸಿದ್ದಾರೆ, ಆದರೆ ಯುದ್ಧದ ಕುರಿತು ಏನೂ ಹೇಳಿಲ್ಲ.
ರೇಟಿಂಗ್/Rating:ದಾರಿತಪ್ಪಿಸುವಂತಿದೆ — ![]()
******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
******************************************************
ದೃಢೀಕೃತ X ಬಳಕೆದಾರ ‘SilentlySirs’ ಸೆಪ್ಟೆಂಬರ್ 21, 2025 ರಂದು ಇಸ್ರೇಲ್ ಚೀನಾದ ಮೇಲೆ ಯುದ್ಧ ಘೋಷಿಸಿದೆ ಎಂಬ ಹೇಳಿಕೆಯೊಂದಿಗೆ X ಪೋಸ್ಟ್ ಅನ್ನು ಮಾಡಿದ್ದಾರೆ. ಈ ಪೋಸ್ಟ್ ಸುಮಾರು ಐದು ನಿಮಿಷಗಳ ದೃಶ್ಯಗಳನ್ನು ಹೊಂದಿದ್ದು, ಸೆಪ್ಟೆಂಬರ್ 15, 2025ರಂದು ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ನಡುವೆ ನಡೆದ ಸಮ್ಮೇಳನದ ತುಣುಕುಗಳನ್ನು ಒಳಗೊಂಡಿದೆ.
ನೆತನ್ಯಾಹು ರವರ ವೀಡಿಯೊದಲ್ಲಿನ ಭಾಷಣ ಮತ್ತು ಆಡಿಯೊವನ್ನು ಮ್ಯೂಟ್ ಮಾಡಲಾಗಿದೆ ಮತ್ತು ದೃಶ್ಯಾವಳಿಯಲ್ಲಿ ವೀಡಿಯೊ ಸೃಷ್ಟಿಕರ್ತರದ್ದೆಂದು ಹೇಳಲಾದ ವ್ಯಾಖ್ಯಾನವನ್ನು ಹೊಂದಿದೆ. ನೆತನ್ಯಾಹು ಅವರ ಹೇಳಿಕೆಗಳನ್ನು ಯುದ್ಧ ಘೋಷಣೆ ಎಂದು ವ್ಯಾಖ್ಯಾನಕಾರರು ಹೇಳುವುದನ್ನು ಕೇಳಬಹುದು, ಚೀನಾ ಇಸ್ರೇಲ್ನ ಶತ್ರುಗಳನ್ನು “ಸಮನ್ವಯಗೊಳಿಸುತ್ತಿದೆ, ಹಣಕಾಸು ಒದಗಿಸುತ್ತಿದೆ ಮತ್ತು ಶಸ್ತ್ರಾಸ್ತ್ರಗಳನ್ನು ಒದಗಿಸುತ್ತಿದೆ” ಎಂದು ಮತ್ತು ಚೀನಾ ಇಸ್ರೇಲ್ ವಿರುದ್ಧ ಜಾಗತಿಕ ಮುತ್ತಿಗೆಯನ್ನು ಆಯೋಜಿಸುತ್ತಿದೆ ಮತ್ತು ಡ್ರ್ಯಾಗನ್ ಅಖಾಡಕ್ಕಿಳಿದಿದ್ದು ಅದರ ಉಗುರುಗಳು ಎಲ್ಲೆಡೆ ಕಾಣುತ್ತವೆ ಎಂದು ಆರೋಪಿಸಲಾಗಿದೆ. ಈ ಪೋಸ್ಟ್ ಗೆ ಸುಮಾರು 1.1 ಮಿಲಿಯನ್ ವೀಕ್ಷಣೆಗಳನ್ನು ಮತ್ತು 13,000 ಕ್ಕೂ ಹೆಚ್ಚು ಲೈಕ್ಗಳು ದೊರಕಿವೆ, ಅದನ್ನು ಇಲ್ಲಿ ಕಾಣಬಹುದು.
“ISRAEL 🇮🇱 declares war on CHINA 🇨🇳 pic.twitter.com/6AHgSJYRS1
— SilencedSirs◼️ (@SilentlySirs) September 20, 2025

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ಕುರಿತು ತನಿಖೆ ಮಾಡಲು ನಿರ್ಧರಿಸಿತು ಮತ್ತು ಇದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಈ ಪೋಸ್ಟ್ ಪ್ರಧಾನಿ ಬೆಂಜಮಿನ್ ನೆತನ್ಯಾಹುರವರ ಆರೋಪಗಳನ್ನು ಯುದ್ಧಕ್ಕೆ ಅಕ್ಷರಶಃ ಕರೆ ಎಂಬಂತೆ ದೊಡ್ಡದಾಗಿಸಿ ಹೇಳುತ್ತದೆ, ಇದು ಆಧಾರರಹಿತ ಜಾಗತಿಕ ಉದ್ವಿಗ್ನತೆಯನ್ನು ಹೆಚ್ಚಿಸುವ ಸಾಧ್ಯತೆಯಿದೆ.
ಪರಿಶೀಲಿಸಿದಾಗ, ಜೆರುಸಲೆಮ್ನಲ್ಲಿ ನಡೆದ ಸಮ್ಮೇಳನವು ಗಾಜಾ ಸಂಘರ್ಷ, ಒತ್ತೆಯಾಳು ಸಮಸ್ಯೆಗಳು ಮತ್ತು ಹಮಾಸ್ನಂತಹ ಪ್ರಾದೇಶಿಕ ಬೆದರಿಕೆಗಳ ನಡುವೆ ಅಮೆರಿಕ-ಇಸ್ರೇಲ್ ಹೊಂದಾಣಿಕೆಯ ಮೇಲೆ ಕೇಂದ್ರೀಕೃತವಾಗಿದೆ.
ಸೆಪ್ಟೆಂಬರ್ 15, 2025 ರಂದು ದ ಟೈಮ್ಸ್ ಆಫ್ ಇಸ್ರೇಲ್ನ ವರದಿಯ ಪ್ರಕಾರ, ಹಣಕಾಸು ಸಚಿವಾಲಯದ ಸಮ್ಮೇಳನದಲ್ಲಿ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇಸ್ರೇಲ್ ಆರ್ಥಿಕವಾಗಿ ಪ್ರತ್ಯೇಕವಾಗಿದೆ ಎಂದು ಒಪ್ಪಿಕೊಂಡರು. ಮುಸ್ಲಿಂ ಬಹುಸಂಖ್ಯಾತ ದೇಶಗಳಿಂದ ವಲಸೆ ಬಂದ ಪರಿಣಾಮವಾಗಿ ಮತ್ತು ಹೊಸ ತಂತ್ರಜ್ಞಾನಗಳ ಸಹಾಯದಿಂದ ಡಿಜಿಟಲ್ ಮಾಧ್ಯಮಗಳಲ್ಲಿ ಇಸ್ರೇಲ್ ವಿರೋಧಿ ಸಮೂಹಗಳ ಪ್ರಭಾವದಿಂದಾಗಿ ಯುರೋಪಿನಲ್ಲಿನ ಜನಸಂಖ್ಯಾ ಬದಲಾವಣೆಗಳಿಂದಾಗಿ ಇದು ಸಂಭವಿಸಿದೆ ಎಂದು ಅವರು ಮತ್ತಷ್ಟು ವಿವರಿಸಿದರು. ವರದಿಯ ತುಣುಕನ್ನು ಕೆಳಗೆ ನೋಡಿ:

ಬಿ) ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರವರ ಜಂಟಿ ಸಮ್ಮೇಳನ
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ರವರ ಜಂಟಿ ಸಮ್ಮೇಳನದ ಪತ್ರಿಕಾಗೋಷ್ಠಿಯ ಅಧಿಕೃತ ಪ್ರತಿಲಿಪಿಯನ್ನು ನಾವು ಪರಿಶೀಲಿಸಿದಾಗ, ಅದರಲ್ಲಿ ಚೀನಾದ ಬಗ್ಗೆ ಉಲ್ಲೇಖಗಳನ್ನು ತಪ್ಪಿಸಲಾಯಿತು ಮತ್ತು ಪ್ರಧಾನಿ ನೆತನ್ಯಾಹು ಚೀನಾದ ಮೇಲೆ ಯಾವುದೇ ರೀತಿಯ ಯುದ್ಧವನ್ನು ಘೋಷಿಸಲಿಲ್ಲ ಎಂಬುದು ಕಂಡುಬಂತು.
ರೂಬಿಯೊ ರವರು ಅದರ ಪರಮಾಣು ಮಹತ್ವಾಕಾಂಕ್ಷೆಗಳು ಮತ್ತು ಕ್ಷಿಪಣಿ ಕಾರ್ಯಕ್ರಮಗಳನ್ನು ವಿರೋಧಿಸುತ್ತಾ, ತಮ್ಮ ಕಡೆಯಿಂದ ಇರಾನ್ ವಿರುದ್ಧ ಅಮೆರಿಕವು “ಗರಿಷ್ಠ ಒತ್ತಡ” ಅಭಿಯಾನವನ್ನು ವಿಸ್ತರಿಸುತ್ತಿದೆ ಎಂದು ಪುನರುಚ್ಚರಿಸಿದರು, ಮತ್ತು ಯುರೋಪಿಯನ್ ನಿರ್ಬಂಧಗಳನ್ನು “ಸ್ನ್ಯಾಪ್ಬ್ಯಾಕ್” ಎಂದು ಎತ್ತಿ ತೋರಿಸಿದರು. ಭಯೋತ್ಪಾದಕರಿಗೆ ಎಲ್ಲಿಯೂ ಯಾವುದೇ ವಿನಾಯಿತಿ ಇಲ್ಲ ಎನ್ನುತ್ತಾ ಸೆಪ್ಟೆಂಬರ್ 9, 2025 ರಂದು ದೋಹಾದ ಲೆಕ್ತೈಫಿಯಾ ಜಿಲ್ಲೆಯಲ್ಲಿ ಇಸ್ರೇಲ್ನ ಸ್ವತಂತ್ರ ದಾಳಿಯನ್ನು ನೆತನ್ಯಾಹು ಸಮರ್ಥಿಸಿಕೊಂಡರು, ಮತ್ತು ಅದೇ ರೀತಿಯ ಭವಿಷ್ಯದ ಕ್ರಮಗಳನ್ನು ತಳ್ಳಿಹಾಕಲಿಲ್ಲ. U.S. ವಿದೇಶಾಂಗ ಇಲಾಖೆಯಿಂದ ಅಧಿಕೃತ ಪ್ರತಿಲಿಪಿಯನ್ನು ನೋಡಿ:
ಸಿ) 50 ಅಮೇರಿಕದ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡುವಾಗ ಚೀನಾದ ಬಗ್ಗೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ರವರ ಟಿಪ್ಪಣಿಗಳು
“ಚೀನಾದ ಬಗ್ಗೆ ಬೆಂಜಮಿನ್ ನೆತನ್ಯಾಹು ಅವರ ಟಿಪ್ಪಣಿಗಳು” ಎಂಬ ಪದಗುಚ್ಛದೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿದ ನಂತರ, ಅಮೆರಿಕದ ಪ್ರತಿನಿಧಿಗಳನ್ನು ಉದ್ದೇಶಿಸಿ ಅವರು ಮಾಡಿದ ಭಾಷಣದ ಸಮಯದಲ್ಲಿ ಮಾಡಲಾದ ಆರೋಪಗಳ ಬಗ್ಗೆ ತಿಳಿದುಬಂತು. ಈ ಭಾಷಣವನ್ನು ಸೆಪ್ಟೆಂಬರ್ 15, 2025 ರಂದು ಜೆರುಸಲೆಮ್ನಲ್ಲಿ ನೀಡಲಾಗಿತ್ತು, ಅಲ್ಲಿ ನೆತನ್ಯಾಹು “50 ರಾಜ್ಯಗಳು – ಒಂದು ಇಸ್ರೇಲ್” ಸಮ್ಮೇಳನದಲ್ಲಿ USನ 50 ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.
ನೆತನ್ಯಾಹು ಇಸ್ರೇಲ್ನ “ಅಂತರರಾಷ್ಟ್ರೀಯ ಪ್ರತ್ಯೇಕತೆ”ಯನ್ನು ಒಪ್ಪಿಕೊಂಡರು ಮತ್ತು “ಒಂದು ಚೀನಾ ಮತ್ತು ಇನ್ನೊಂದು ಕತಾರ್” ಎಂದು ಹೇಳಿ ಚೀನಾ ಮತ್ತು ಕತಾರ್ ಪಶ್ಚಿಮದಲ್ಲಿ ಪ್ರಚಾರ ಅಭಿಯಾನವನ್ನು ಆಯೋಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಆತ “ಇಸ್ರೇಲ್ನ ನ್ಯಾಯಸಮ್ಮತತೆ ಮತ್ತು ಪಾಶ್ಚಿಮಾತ್ಯ ಪ್ರಪಂಚ ಮತ್ತು ಯುನೈಟೆಡ್ ಸ್ಟೇಟ್ಸ್ನ ಸಾಮಾಜಿಕ ಮಾಧ್ಯಮದ ಮೇಲೆ ದಾಳಿಯನ್ನು ಆಯೋಜಿಸುತ್ತಿದ್ದಾರೆ. ನಾವು ಅದನ್ನು ಎದುರಿಸಬೇಕಾಗುತ್ತದೆ ಮತ್ತು ನಾವು ಅದನ್ನು ನಮ್ಮ ಸ್ವಂತ ಪ್ರಯತ್ನಗಳಿಂದ ಎದುರಿಸುತ್ತೇವೆ..”
AP ಆರ್ಕೈವ್ ಪ್ರಕಟಿಸಿದ ಆತ ಹೀಗೆ ಹೇಳುವ ಕ್ಲಿಪ್ ಅನ್ನು ಇಲ್ಲಿ ನೋಡಿ.
EUನ್ಯೂಸ್ ಪ್ರಕಟಿಸಿದ ಮತ್ತೊಂದು ವರದಿಯು, ನೆತನ್ಯಾಹು “ವಿರೋಧಿ ದಿಕ್ಕಿನಲ್ಲಿ “ಸರ್ಕಾರಗಳನ್ನು ತಳ್ಳಿರುವ” ಯುರೋಪ್ನಲ್ಲಿರುವ ಮುಸ್ಲಿಂ ವಲಸಿಗರ ಮೇಲೆ ಮೊದಲು ಬೆರಳು ಮಾಡಿದರು, ನಂತರ ಯಹೂದಿ ರಾಜ್ಯದ ವಿರುದ್ಧ ದ್ವೇಷದ ಅಭಿಯಾನವನ್ನು ಆಯೋಜಿಸಿರುವ “ಕೆಲವು ರಾಜ್ಯಗಳ” ಮೇಲೆ ಬೆರಳು ಮಾಡಿದರು. ಕೆಳಗಿನ ವರದಿಯ ತುಣುಕನ್ನು ವೀಕ್ಷಿಸಿ:

ಸೆಪ್ಟೆಂಬರ್ 18, 2025 ರಂದು ದ ಟೈಮ್ಸ್ ಆಫ್ ಇಸ್ರೇಲ್ ಪ್ರಕಟಿಸಿದ ಸುದ್ದಿಗಳಲ್ಲಿ ಪ್ರಧಾನಿ ನೆತನ್ಯಾಹು ರವರ ಹಿಂದಿನ ಹೇಳಿಕೆಗಳ ಬಗ್ಗೆ ಚೀನಾ ‘ತೀವ್ರ ಕಳವಳ’ ಹೊಂದಿದೆ ಎಂದು ವರದಿ ಮಾಡಿತು. ಚೀನಾ ಆಘಾತಕ್ಕೊಳಗಾಗಿದೆ ಮತ್ತು “ಹಕ್ಕು ಆಧಾರರಹಿತವಾಗಿದೆ ಮತ್ತು ಚೀನಾ-ಇಸ್ರೇಲ್ ಸಂಬಂಧಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಚೀನಾ ತೀವ್ರವಾಗಿ ಕಳವಳಗೊಂಡಿದೆ ಮತ್ತು ದೃಢವಾಗಿ ಇದನ್ನು ವಿರೋಧಿಸುತ್ತದೆ” ಎಂದು ಇಸ್ರೇಲ್ ಹೇಳಿಕೆಯಲ್ಲಿ ಚೀನಾ ರಾಯಭಾರ ಕಚೇರಿಯ ವರದಿಯನ್ನು ಎತ್ತಿ ತೋರಿಸುತ್ತದೆ. ಸೆಪ್ಟೆಂಬರ್ 15, 2025 ರಂದು ಜೆರುಸಲೆಮ್ನಲ್ಲಿ ನಡೆದ US ಪ್ರತಿನಿಧಿಗಳ ಸಮ್ಮೇಳನದಲ್ಲಿ ನೆತನ್ಯಾಹು ಮಾಡಿದ ಭಾಷಣವನ್ನು ಚೀನಾ ರಾಯಭಾರ ಕಚೇರಿ ಉಲ್ಲೇಖಿಸುತ್ತಿದ್ದರು.
ಪ್ರಧಾನಿ ನೆತನ್ಯಾಹು ಚೀನಾದ ಮೇಲೆ ಪ್ರಚಾರ ಅಭಿಯಾನ ರಚಿಸಿದ್ದರ ಕುರಿತು ಆರೋಪ ಮಾಡಿದ್ದರೂ, ಆತ ಯುದ್ಧ ಘೋಷಿಸಲಿಲ್ಲ. ದೃಶ್ಯಾವಳಿಯಲ್ಲಿರುವ ಆಡಿಯೋ ವಿಷಯವನ್ನು ಉತ್ಪ್ರೇಕ್ಷಿಸುವ ಮತ್ತು ಅದನ್ನು ತಪ್ಪಾಗಿ ಅರ್ಥೈಸುವ ವ್ಯಾಖ್ಯಾನವನ್ನು ಒಳಗೊಂಡಿದೆ.
ಹೀಗಾಗಿ, ಈ ಪ್ರತಿಪಾದನೆ ದಾರಿತಪ್ಪಿಸುವಂಥದ್ದು.
ಇದನ್ನೂ ಓದಿ:
ಈಗಿನಿಂದ ಪ್ರತಿ ತಿಂಗಳ ಎಲ್ಲಾ ಭಾನುವಾರಗಳು ಮತ್ತು ಶನಿವಾರಗಳಂದು ಬ್ಯಾಂಕುಗಳು ಮುಚ್ಚಿರುತ್ತವೆಯೇ? ಸತ್ಯ ಪರಿಶೀಲನೆ
ನೇಪಾಳ ಪ್ರತಿಭಟನಾಕಾರರು ಭಾರತದ ಪ್ರಧಾನಿ ಮೋದಿಯವರನ್ನು ಬೆಂಬಲಿಸಿ ಮೆರವಣಿಗೆ ನಡೆಸಿದರೇ? ಸತ್ಯ ಪರಿಶೀಲನೆ
Digiteye Kannada Fact Checkers