Don't Miss

‘ಭಾರತ-ಪಾಕಿಸ್ತಾನ ಸಂಘರ್ಷ ಅಂಕಿಅಂಶಗಳು’ ಎಂಬ ಸುಳ್ಳು CNN ಇನ್ಫೋಗ್ರಾಫಿಕ್ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ; ಸತ್ಯ ಪರಿಶೀಲನೆ

ಹೇಳಿಕೆ/Claim: CNN ಇನ್ಫೋಗ್ರಾಫಿಕ್ ಪಾಕಿಸ್ತಾನ-ಭಾರತ ಸಂಘರ್ಷದಲ್ಲಾದ ನಷ್ಟಗಳನ್ನು ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. CNN ಅಂತಹ ಯಾವುದೇ ಇನ್ಫೋಗ್ರಾಫಿಕ್ ಅನ್ನು ಪೋಸ್ಟ್ ಮಾಡಿಲ್ಲ ಎಂದು ನಿರಾಕರಿಸಿದೆ ಮತ್ತು ಅಂಕಿಅಂಶಗಳು ಅಧಿಕೃತ ಸಂಖ್ಯೆಗಳಿಗೆ ಹೊಂದಿಕೆಯಾಗುವುದಿಲ್ಲ.

ರೇಟಿಂಗ್/Rating: Misrepresentation — —

ಪಹಲ್ಗಾಮ್ ಸಂಘರ್ಷದ ನಂತರದ ಭಾರತ ಮತ್ತು ಪಾಕಿಸ್ತಾನದ ನಷ್ಟಗಳನ್ನು ಹೋಲಿಸುವ CNN ಗ್ರಾಫಿಕ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ಅದರಲ್ಲಿ ಪಾಕಿಸ್ತಾನ “ಗೆದ್ದಿದೆ” ಎಂದು ಹೇಳಲಾಗಿದೆ. ಆ ಹೇಳಿಕೆಯು ಹೀಗಿದೆ: “ಭಾವನೆಗಳನ್ನು ಬದಿಗಿಟ್ಟು ನೋಡಿ, ಇವು ಈ ಸಂಘರ್ಷದ ಬಗೆಗಿನ ನಿಜವಾದ ಕಹಿ ಸಂಗತಿಗಳು. ಸ್ಪಷ್ಟವಾಗಿ, ಪಾಕಿಸ್ತಾನ ಅಗಾಧವಾಗಿ ಗೆದ್ದಿತು.” “ಭಾರತ-ಪಾಕಿಸ್ತಾನ ಸಂಘರ್ಷದ ಅಂಕಿಅಂಶಗಳು” ಎಂಬ ಶೀರ್ಷಿಕೆಯ ಇನ್ಫೋಗ್ರಾಫಿಕ್, ಕೆಳಗಿನ ಬಲ ಮೂಲೆಯಲ್ಲಿ CNN ಸುದ್ದಿ ವಾಹಿನಿಯ ಲೋಗೋ ಕಾಣುತ್ತದೆ.

ನಾಲ್ಕು ದಿನಗಳ ಸಂಘರ್ಷದಲ್ಲಿ ಎರಡೂ ಕಡೆಯವರ ನಷ್ಟಗಳನ್ನು ಹೋಲಿಸುವ ಗ್ರಾಫಿಕ್ ನಲ್ಲಿ ಭಾರತವು ಹೆಚ್ಚಿನ ಜೆಟ್‌ಗಳು, ಡ್ರೋನ್‌ಗಳು, ಸೈನಿಕರು ಮತ್ತು ನಾಗರಿಕರನ್ನು ಕಳೆದುಕೊಂಡಿರುವುದಾಗಿ ತೋರಿಸಲಾಗಿದೆ. X ನಲ್ಲಿ ಪ್ರಸಾರವಾಗುತ್ತಿರುವ ಗ್ರಾಫಿಕ್ ಅನ್ನು ನೋಡಿ. ಅದರ ಶೀರ್ಷಿಕೆ ಹೀಗಿದೆ: “CNN ಎಂಬ ಮೂರನೇ ಪಕ್ಷದ ದೃಷ್ಟಿಕೋನದ ಪ್ರಕಾರ ಪಾಕಿಸ್ತಾನ-ಭಾರತ ಸಂಘರ್ಷದಿಂದ ನಷ್ಟಗಳು. ಯಾವ ಕಡೆ ಗೆದ್ದಿತೆಂಬುದು ಸ್ಪಷ್ಟ.”

ಇದನ್ನು ಇಲ್ಲಿ ಮತ್ತು ಇಲ್ಲಿ ಹಂಚಿಕೊಳ್ಳಲಾಗಿದೆ.

ಸತ್ಯ ಪರಿಶೀಲನೆ

ನಮ್ಮ ವಾಟ್ಸಾಪ್ ಟಿಪ್‌ಲೈನ್‌ನಲ್ಲಿ ಇನ್ಫೋಗ್ರಾಫಿಕ್‌ನ ಸತ್ಯ-ಪರಿಶೀಲನೆಗಾಗಿ ವಿನಂತಿ ಬಂದಾಗ, ದೃಶ್ಯದ ಕೆಳ-ಬಲ ಮೂಲೆಯಲ್ಲಿ CNNನ ಲೋಗೋ ಇದ್ದುದರಿಂದ ನಾವು CNNನ ಅಧಿಕೃತ ಇನ್ಫೋಗ್ರಾಫಿಕ್‌ಗಾಗಿ ಹುಡುಕಾಟ ನಡೆಸಿದೆವು. ಭಾರತ ಮತ್ತು ಪಾಕಿಸ್ತಾನವೆರಡೂ ಕದನ ವಿರಾಮವನ್ನು ಘೋಷಿಸಿದ ಎರಡು ದಿನಗಳ ಬಳಿಕ ಮೇ 13 ರಂದು ಇದನ್ನು ಹಂಚಿಕೊಳ್ಳಲಾಗಿದೆ. ಆದರೆ CNN ಅಧಿಕೃತ ವೆಬ್‌ಸೈಟ್‌ನಲ್ಲಿ ಎಲ್ಲಿಯೂ ನಮಗೆ ಯಾವುದೇ ಗ್ರಾಫಿಕ್ ಸಿಗಲಿಲ್ಲ, ಆದರೆ ಒಂದು ವರದಿಯಲ್ಲಿ ಸಂಘರ್ಷದಲ್ಲಿ ಯಾವುದೇ ವಿಜೇತರಿಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳಲಾಗಿತ್ತು.

ನಾವು ಮತ್ತಷ್ಟು ಹುಡುಕಿದಾಗ, ಮೇ 12 ರ ಇಮೇಲ್‌ನಲ್ಲಿ CNN ವಕ್ತಾರರನ್ನು ಉಲ್ಲೇಖಿಸಿರುವ AFP ವರದಿ ಕಂಡುಬಂತು, ಅದರಲ್ಲಿ ಸ್ಪಷ್ಟವಾಗಿ ಹೇಳಲಾಗಿರುವುದು ಹೀಗೆ: “CNN ಈ ಮಾಹಿತಿಯನ್ನು ಯಾವುದೇ ಸಮಯದಲ್ಲಿ ವರದಿ ಮಾಡಿಲ್ಲ.” CNN ತನ್ನ ವೆಬ್‌ಸೈಟ್‌ನಲ್ಲಿ ಅಥವಾ ತನ್ನ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಅಂತಹ ಯಾವುದೇ ಗ್ರಾಫಿಕ್ ಅನ್ನೂ ಸಹ ಹಂಚಿಕೊಂಡಿಲ್ಲ.

ಭಾರತದ ಅಧಿಕೃತ PIB ಸತ್ಯ-ಪರಿಶೀಲನಾ ಘಟಕವು ಗ್ರಾಫಿಕ್ ಅನ್ನು ನಕಲಿ ಮತ್ತು ಕಟ್ಟುಕಥೆ ಎಂದು ಕೆಳಗೆ ತೋರಿಸಿರುವಂತೆ ವರ್ಗೀಕರಿಸಿದೆ:

ಇದಲ್ಲದೆ, ಗ್ರಾಫಿಕ್‌ನಲ್ಲಿರುವ ಅಂಕಿಅಂಶಗಳು ಅಧಿಕೃತ ಅಂಕಿಅಂಶಗಳಿಗೆ ಹೊಂದಿಕೆಯಾಗುವುದೇ ಇಲ್ಲ. ಪಟ್ಟಿಯ ಪ್ರಕಾರ, ಹೋರಾಟದಲ್ಲಿ 40 ಭಾರತೀಯರು ಸಾವನ್ನಪ್ಪಿದರು – 21 ಸೈನಿಕರು ಮತ್ತು 19 ನಾಗರಿಕರು ಮತ್ತು ಪಾಕಿಸ್ತಾನದಲ್ಲಿ ಸಾವಿನ ಸಂಖ್ಯೆ 14 – ಒಬ್ಬ ಸೈನಿಕ ಮತ್ತು 13 ನಾಗರಿಕರು. ಆದರೆ, ಮೇ 14 ರಂದು ಪಾಕಿಸ್ತಾನದ ಸೇನೆಯು, 40 ನಾಗರಿಕರು ಮತ್ತು 11 ಮಿಲಿಟರಿ ಸೇವಾ ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿತು, ಆದರೆ ಭಾರತವು ತನ್ನ ಕಡೆಯ 16 ನಾಗರಿಕರು ಮತ್ತು ಐವರು ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿತ್ತು.

ಆದ್ದರಿಂದ, ಇನ್ಫೋಗ್ರಾಫಿಕ್‌ನಲ್ಲಿರುವ ಹೇಳಿಕೆ ಸುಳ್ಳು ಮತ್ತು CNN ಲೋಗೋವನ್ನು ಗ್ರಾಫಿಕ್‌ನಲ್ಲಿ ತಪ್ಪಾಗಿ ತೋರಿಸಲಾಗಿದೆ.

ಇದನ್ನೂ ಓದಿ:

ಜನ್ಮಸಿದ್ಧ ಹಕ್ಕಿನ ಕುರಿತ ಟ್ರಂಪ್ ರವರ ಆದೇಶದ ನಂತರ ಉಷಾ ವಾನ್ಸ್ ಅವರ ಪೌರತ್ವವನ್ನು ಹಿಂತೆಗೆದುಕೊಳ್ಳಲಾಗುವುದೇ? ಸತ್ಯ-ಪರಿಶೀಲನೆ

ಕೇಂದ್ರ ಸರ್ಕಾರವು ನಿವೃತ್ತಿ ವಯಸ್ಸನ್ನು 62 ವರ್ಷಕ್ಕೆ ಹೆಚ್ಚಿಸಿದೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*