ಹೇಳಿಕೆ/Claim: ಟರ್ಕಿ ಸರ್ಕಾರವು ಭಾರತೀಯ ಪ್ರವಾಸಿಗರು ಬಹಿಷ್ಕಾರ ಮಾಡಬಾರದೆಂದು ಕೋರಿ ಹೇಳಿಕೆ ಬಿಡುಗಡೆ ಮಾಡಿದೆ.
ಕಡೆನುಡಿ/Conclusion: ತಪ್ಪು ನಿರೂಪಣೆ. ಟರ್ಕಿಯ ಯಾವುದೇ ಅಧಿಕೃತ ಪ್ರಾಧಿಕಾರವು ಈವರೆಗೆ ಇಂತಹ ಪತ್ರ ಅಥವಾ ಪ್ರಕಟಣೆ ನೀಡಿಲ್ಲ, ಹಾಗಾಗಿ ಈ ಪತ್ರವು ಕೃತ್ರಿಮವಾದ್ದು.
ರೇಟಿಂಗ್/Rating: ತಪ್ಪು ನಿರೂಪಣೆ —
ಭಾರತೀಯ ಪ್ರವಾಸಿಗರು ಟರ್ಕಿಗೆ ಪ್ರಯಾಣ ಮಾಡುವುದನ್ನು ನಿಲ್ಲಿಸಬಾರದು ಎಂದು ಟರ್ಕಿ ಸರ್ಕಾರ ಕೇಳಿಕೊಂಡಿರುವುದು ಎಂದು ಹೇಳಲಾಗುತ್ತಿರುವ ಪತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಈ ಪತ್ರವು ಸುತ್ತೋಲೆಯ ರೂಪದಲ್ಲಿದ್ದು, ಇದರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಸಂಘರ್ಷದ ಕುರಿತು ಟರ್ಕಿಯ ಜನತೆಗೆ ಹೆಚ್ಚಿನ ಅರಿವಿರಲಿಲ್ಲ, ಮತ್ತು ಭಾರತೀಯ ಪ್ರವಾಸಿಗರನ್ನು ದೇಶದಾದ್ಯಂತ ಆತ್ಮೀಯವಾಗಿ ಸ್ವಾಗತಿಸಲಾಗುವುದು ಎಂದು ಹೇಳಲಾಗಿದೆ.
BREAKING: Turkey urges Indian tourists not to initiate an economic boycott.
This comes despite Turkey reportedly supplying weapons and drones to Pakistan a move seen as hostile to Indian interests.
Indian citizens demand accountability#NuclearLeak#BoycottTurkey #SayNoToTurkey pic.twitter.com/ttaHelblem
— Manglam Mishra (@ManglamMis67977) May 14, 2025
ಈ ಕರೆಗಳು ಇತ್ತೀಚಿನ ಭಾರತ-ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಟರ್ಕಿಯು ಪಾಕಿಸ್ತಾನದ ಪರವಾಗಿ ಧ್ವನಿಯೆತ್ತಿದ ಹಿನ್ನೆಲೆಯಲ್ಲಿ ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ಟರ್ಕಿಯನ್ನು ಬಹಿಷ್ಕರಿಸುವ ಕರೆಗಳೆದ್ದವು. ಈ ನಡುವೆಯೇ ಈ ಪೋಸ್ಟ್ ಅನ್ನು ಹಂಚಿಕೊಳ್ಳಲಾಗಿದೆ.
ಶೀರ್ಷಿಕೆ ಹೀಗಿದೆ: “ಬ್ರೇಕಿಂಗ್ ನ್ಯೂಸ್: ಭಾರತೀಯ ಪ್ರವಾಸಿಗರು ಆರ್ಥಿಕ ಬಹಿಷ್ಕಾರ ಹೂಡಬಾರದೆಂದು ಟರ್ಕಿ ಮನವಿ ಮಾಡಿದೆ. ಭಾರತೀಯ ಹಿತದೃಷ್ಟಿಯ ವಿಪರೀತವಾಗಿ ಟರ್ಕಿಯು ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಡ್ರೋನ್ಗಳನ್ನು ಪೂರೈಸುತ್ತಿರುವ ಬಗ್ಗೆ ವರದಿಯ ಹೊರತಾಗಿಯೂ ಈ ಮನವಿ ಬಂದಿದೆ. ಹೊಣೆಗಾರಿಕೆಯನ್ನು ಅರಸುತ್ತಿರುವ ಭಾರತೀಯ ನಾಗರಿಕರು.”
ಈ ಹೇಳಿಕೆಯನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಸುತ್ತೋಲೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದಾಗ ಮೊದಲ ನೋಟದಲ್ಲೇ ಹಲವಾರು ಅಸಮಂಜಸ ಅಂಶಗಳು ಕಂಡುಬಂದವು. ಈ ಸುತ್ತೋಲೆಯನ್ನು “ಪ್ರವಾಸೋದ್ಯಮ ಇಲಾಖೆ, ಅಂಕಾರಾ” ಇಂದ ಬಿಡುಗಡೆ ಮಾಡಲಾಗಿದೆ. ಆದರೆ ಟರ್ಕಿಯಲ್ಲಿ ಪ್ರವಾಸೋದ್ಯಮವನ್ನು ನಿರ್ವಹಿಸುತ್ತಿರುವ ಅಧಿಕೃತ ಇಲಾಖೆ “ರಿಪಬ್ಲಿಕ್ ಆಫ್ ಟರ್ಕಿ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವಾಲಯ”. ಇದು ಪತ್ರ ನಕಲಿ ಎನ್ನುವುದಕ್ಕೆ ಮೊದಲ ಸೂಚನೆ.
ಅಂತೆಯೇ, ಇಲಾಖೆಯ ಅಧಿಕೃತ ವೆಬ್ಸೈಟ್ ಮತ್ತು ಅದರ ಇತ್ತೀಚಿನ ಪತ್ರಿಕಾ ಪ್ರಕಟಣೆಗಳ ಪರಿಶೀಲನೆ ನಡೆಸಿದಾಗಲೂ ಭಾರತೀಯ ಪ್ರವಾಸಿಗರಿಗೆ ಉದ್ದೇಶಿಸಿದ ಯಾವುದೇ ಅಧಿಕೃತ ಹೇಳಿಕೆ ಕಂಡುಬರಲಿಲ್ಲ. ಟರ್ಕಿಯ ಸ್ಥಳೀಯ ಮಾಧ್ಯಮಗಳು ಅಥವಾ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಬಹಿಷ್ಕಾರದ ಕುರಿತಾದ ಸುದ್ದಿ ಬಿಡಿ, ಈ ರೀತಿಯ ಪತ್ರದ ಬಗ್ಗೆಯೂ ಯಾವುದೇ ವರದಿ ಮಾಡಲಾಗಿಲ್ಲ. ಅದಲ್ಲದೆ, ಸುತ್ತೋಲೆಯ ಬರಹವು ಯಾವುದೇ ಅಧಿಕೃತ ದಾಖಲೆ ಅಥವಾ ಪ್ರಕಟಣೆಯನ್ನು ಹೋಲುವುದಿಲ್ಲ.
ಮತ್ತೊಂದು ಅಸಂಗತತೆ ಎಂದರೆ, ಈ ಸುತ್ತೋಲೆಯ ಶೀರ್ಷಿಕೆಯು “ಕಮು ದುಯುರುಸು” (ಸಾರ್ವಜನಿಕ ಪ್ರಕಟಣೆ) ಎಂದು ಟರ್ಕಿ ಭಾಷೆಯಲ್ಲಿ ಇದ್ದರೂ, ಪತ್ರದ ವಿಷಯ ಮಾತ್ರ ಆಂಗ್ಲ ಭಾಷೆಯಲ್ಲಿದೆ, ಇದು ಟರ್ಕಿಯ ಸರಕಾರಿ ಪ್ರಕಟಣೆಗಳಲ್ಲಿ ಸಾಮಾನ್ಯವಲ್ಲ. ಅದಲ್ಲದೆ, ದಾಖಲೆಯ ವಿನ್ಯಾಸವೂ ಸಹ ಅಧಿಕೃತ ಶೈಲಿಗೆ ಹೊಂದಿಕೆಯಾಗುವುದಿಲ್ಲ. ಹಾಗಾಗಿ, ಹೇಳಿಕೆ ಸುಳ್ಳು.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ