ಹೇಳಿಕೆ/Claim : 2018 ರಲ್ಲಿ 12 ವರ್ಷ ವಯಸ್ಸಿನಲ್ಲಿ, ಜಾಕ್ಸನ್ ಒಸ್ವಾಲ್ಟ್ ಒಂದು ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಫ್ಯೂಜನ್ ಸಾಧನವನ್ನು ನಿರ್ಮಿಸಿ ಗಿನ್ನಿಸ್ ವಿಶ್ವ ದಾಖಲೆಯನ್ನು ಗಳಿಸಿದರು ಮತ್ತು FBI ದಾಳಿಗೂ ಒಳಗಾದರು
ಕಡೆನುಡಿ/Conclusion: ಈ ಹೇಳಿಕೆ ನಿಜ. ಹಲವು ವಿಶ್ವಾಸಾರ್ಹ ಮೂಲಗಳು ಇದನ್ನು ದೃಢೀಕರಿಸಿವೆ ಮತ್ತು ಗಿನ್ನಿಸ್ ವಿಶ್ವ ದಾಖಲೆಯಂತೆ 2025 ರಲ್ಲಿಯೂ ಸಹ ನ್ಯೂಕ್ಲಿಯರ್ ಫ್ಯೂಜನ್ ಸಾಧಿಸಿದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಬಿರುದನ್ನು ಈತ ಹೊಂದಿದ್ದಾರೆ.
ರೇಟಿಂಗ್/Rating : ನಿಜ.
************************************************************************
ಟೆನ್ನೆಸ್ಸೀಯ ಮೆಂಫಿಸ್ನ ಜಾಕ್ಸನ್ ಒಸ್ವಾಲ್ಟ್ 12 ವರ್ಷ ವಯಸ್ಸಿನಲ್ಲಿ, ಕುಟುಂಬದ ಆಟದ ಕೋಣೆಯಲ್ಲಿ, ಕಾರ್ಯನಿರ್ವಹಿಸುವ ನ್ಯೂಕ್ಲಿಯರ್ ಫ್ಯೂಜನ್ ಸಾಧನವನ್ನು ನಿರ್ಮಿಸಿದನೆಂದು ಹಲವಾರು ಬಳಕೆದಾರರು ಹೇಳಿಕೊಂಡಿದ್ದಾರೆ. ಫೇಸ್ಬುಕ್ನಲ್ಲಿ ದ ಹಿಸ್ಟರಿ ಆರ್ಕೈವ್ಸ್ ಮಾಡಿದ ಹೇಳಿಕೆಯ ಅನುಸಾರ 2018ರಲ್ಲಿ ಫ್ಯೂಸರ್ ಅನ್ನು ನಿರ್ಮಿಸುವ ಮೂಲಕ ನ್ಯೂಕ್ಲಿಯರ್ ಫ್ಯೂಜನ್ ಅನ್ನು ಸಾಧಿಸಲು ಆತ ಹೇಗೆ ತನಗೆ ತಾನೇ ಸವಾಲು ಹಾಕಿಕೊಂಡನು ಎಂಬುದನ್ನು ಹೇಳುತ್ತದೆ. ಫೇಸ್ಬುಕ್ ಪೋಸ್ಟ್ ಅನ್ನು ಕೆಳಗೆ ನೋಡಿ:
ತನ್ನ ಪೋಷಕರು ಒದಗಿಸಿದ ಸುಮಾರು 10,000 ಯುಎಸ್ ಡಾಲರ್ ಗಳ ಬಜೆಟ್ನೊಂದಿಗೆ, ಅತ eBay ಮತ್ತು ಇತರ ಪೂರೈಕೆದಾರರಿಂದ ಸಾಮಗ್ರಿಗಳನ್ನು ಪಡೆದುಕೊಂಡ ಬಗ್ಗೆಯೂ ಈ ಪೋಸ್ಟ್ ವಿವರ ನೀಡುತ್ತದೆ. ಒಂದು ವರ್ಷದ ನಂತರ, ಆತ ಎರಡು ಡ್ಯೂಟೇರಿಯಮ್ ಪರಮಾಣುಗಳನ್ನು ಬೆಸೆದ ಮತ್ತು ನ್ಯೂಟ್ರಾನ್ಗಳನ್ನು ಪತ್ತೆಹಚ್ಚಿದ, ಅದರ ನಂತರವೇ ಆತನ ಮನೆಯ ಮೇಲೆ FBI ದಾಳಿಯೂ ಆಯಿತು.
Memphis 12-Year-Old Achieves Nuclear Fusion at Home — FBI Investigates
Jackson Oswalt, a curious and determined 12-year-old from Memphis, Tennessee, taught himself nuclear physics via YouTube and online forums. Driven by inspiration from teen physicist Taylor Wilson, Jackson… pic.twitter.com/1RiR3PK5vO
— Kalen (@kalen_wi) September 6, 2025
ಇತರ ಬಳಕೆದಾರರೂ ಸಹ Xನಲ್ಲಿ ಇದೇ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಸತ್ಯ ಪರಿಶೀಲನೆ
ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧಿರಿಸಿತು ಮತ್ತು ಹೇಳಿಕೆ ನಿಜವೆಂದು ತಿಳಿದುಬಂತು. ಅಧಿಕೃತ ಮೂಲಗಳೊಂದಿಗೆ ದೃಢೀಕರಿಸಿ, ವಿಶ್ವಾಸಾರ್ಹ ಮಾಹಿತಿಯನ್ನು ಪಡೆದ ನಂತರ, ಜಾಕ್ಸನ್ ಒಸ್ವಾಲ್ಟ್ ಇಂದಿಗೂ ಗಿನ್ನೆಸ್ ವಿಶ್ವ ದಾಖಲೆಯನ್ನು ಹೊಂದಿದ್ದಾರೆ.
ಇದನ್ನು ದೃಢೀಕರಿಸಲು, ನಾವು ಮೊದಲು ಅಧಿಕೃತ ಗಿನ್ನೆಸ್ ವಿಶ್ವ ದಾಖಲೆ ವೆಬ್ಸೈಟ್ ಮತ್ತು ಯೂಟ್ಯೂಬ್ ವಾಹಿನಿಯನ್ನು ಪರಿಶೀಲಿಸಿದೆವು. ಜನವರಿ 19, 2018ರಂದು ತನ್ನ 13ನೇ ಹುಟ್ಟುಹಬ್ಬದ ಕೆಲವೇ ಗಂಟೆಗಳ ಮುನ್ನ, 12ನೇ ವಯಸ್ಸಿನಲ್ಲಿ, ಜಾಕ್ಸನ್ ಒಸ್ವಾಲ್ಟ್ ಮನೆಯಲ್ಲಿ ತಯಾರಿಸಿದ ಫ್ಯೂಸರ್ನಲ್ಲಿ ಡ್ಯೂಟೇರಿಯಮ್ ಪರಮಾಣುಗಳನ್ನು ಬೆಸೆಯುವ ಮೂಲಕ ನ್ಯೂಕ್ಲಿಯರ್ ಫ್ಯೂಜನ್ ಸಾಧಿಸಿದ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಪರಿಶೀಲಿಸಿದೆ. ವಿವರಗಳನ್ನು ಇಲ್ಲಿ ನೋಡಿ.
ಇದಲ್ಲದೆ, ನಾವು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಅಧಿಕೃತ ಯೂಟ್ಯೂಬ್ ವಾಹಿನಿಯನ್ನು ಸಹ ಪರಿಶೀಲಿಸಿದೆವು ಮತ್ತು ಆತನ ಸಾಧನೆಯ ವೀಡಿಯೊವನ್ನು ಇಲ್ಲಿ ಕಂಡುಕೊಂಡೆವು:
ಈ ಪ್ರಾಜೆಕ್ಟ್ ಟೆನ್ನೆಸ್ಸೀಯ ಮೆಂಫಿಸ್ನಲ್ಲಿರುವ ಆತನ ಕುಟುಂಬದ ಆಟದ ಕೋಣೆಯಲ್ಲಿ ನಡೆಯಿತು, ಆ ಜಾಗವನ್ನುಆತ ಒಂದು ವರ್ಷದ ಸಂಶೋಧನೆಯ ನಂತರ ಪ್ರಯೋಗಾಲಯವಾಗಿ ಪರಿವರ್ತಿಸಿದ. ಡೈಲಿ ಮೇಲ್ ಪ್ರಕಟಿಸಿದ ಒಂದು ವರದಿಯು, ಪೋಷಕರು ಸುಮಾರು $10,000 ಬಜೆಟ್ ಅನ್ನು ಒದಗಿಸಿದರು ಅದನ್ನು ಆತ eBay ಯಿಂದ ಪರಿಕರಗಳನ್ನು ಪಡೆಯಲು ಬಳಸಿದನೆಂದು ದೃಢಪಡಿಸುತ್ತದೆ.
ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಿದ ವರದಿಯ ಪ್ರಕಾರ ಪ್ರಯೋಗದ ಬಗ್ಗೆ ತಿಳಿದುಕೊಂಡ ನಂತರ FBI ಆತನ ಮನೆಗೆ ಭೇಟಿ ನೀಡಿತು ಮತ್ತು ಯಾವುದೇ ವಿಕಿರಣಶೀಲ ವಸ್ತು ಕಂಡುಬಂದಿಲ್ಲ ಎಂದು ದೃಢಪಡಿಸುತ್ತದೆ.
ಇಂಡಿಯಾ ಟುಡೇಯ ಮತ್ತೊಂದು ಲೇಖನವು ಒಸ್ವಾಲ್ಟ್ ಮನೆಗೆ FBI ತಂಡದ ಭೇಟಿಯ ಬಗ್ಗೆಯೂ ವರದಿ ಮಾಡಿದ್ದು, ಅದರಲ್ಲಿ ಆತನ ಹೇಳಿಕೆಯನ್ನೂ ವರದಿ ಮಾಡಿದೆ, ಅದು ಹೀಗಿದೆ: “ನಾನು ಕಡಿಮೆ ಮೋಜಿನ ಗಮನಕ್ಕೂ ಪಾತ್ರನಾದೆ: ಒಂದು ಶನಿವಾರ ಇಬ್ಬರು FBI ಏಜೆಂಟ್ಗಳು ನನ್ನನ್ನು ಎಚ್ಚರಗೊಳಿಸಿದರು, ಅವರು ನನ್ನ ಮನೆಯ ಸುತ್ತಲೂ ಗೀಗರ್ ಕೌಂಟರ್ನೊಂದಿಗೆ ಎಲ್ಲವನ್ನೂ ಚೆನ್ನಾಗಿ ಪರಿಶೀಲಿಸಿದರು, ಎಲ್ಲವೂ ಸರಿಯಾಗಿದೆಯೇ ಎಂದು ನೋಡಿದರು.”
ಈ ಘಟನೆಯು ವಿಶ್ವಾದ್ಯಂತ ಮಹತ್ವಾಕಾಂಕ್ಷಿ ಯುವ ವಿಜ್ಞಾನಿಗಳನ್ನು ಪ್ರೇರೇಪಿಸುತ್ತಲೇ ಇದೆ. ಹೀಗಾಗಿ, ಹೇಳಿಕೆ ನಿಜ.
***********************************************************************
ಇದನ್ನೂ ಓದಿ: