Don't Miss

ಕ್ಯಾನ್ಸರ್ ವಿರುದ್ಧ ವಿಟಮಿನ್ ಡಿ ಯು ಏಕೈಕ ಅತ್ಯಂತ ಪರಿಣಾಮಕಾರಿ ಔಷಧವೇ? ಸತ್ಯ ಪರಿಶೀಲನೆ

ಹೇಳಿಕೆ/Claim:: ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧವಾಗಿದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಜೀವಕೋಶಗಳ ಆರೋಗ್ಯದಲ್ಲಿ ವಿಟಮಿನ್ ಡಿ ಪ್ರಮುಖ ಪಾತ್ರ ವಹಿಸುತ್ತದೆಯಾದರೂ, ಅದು ಕ್ಯಾನ್ಸರ್ ವಿರುದ್ಧದ ಏಕೈಕ ಅತ್ಯಂತ ಪರಿಣಾಮಕಾರಿ ಔಷಧ ಎಂದು ವಿವರಿಸುವುದು ತಪ್ಪು.

ರೇಟಿಂಗ್/Rating: ತಪ್ಪು ನಿರೂಪಣೆ —

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ವಿಟಮಿನ್ ಡಿ ಕ್ಯಾನ್ಸರ್ ವಿರುದ್ಧ ಅತ್ಯಂತ ಪರಿಣಾಮಕಾರಿ ಔಷಧ ಎಂದು ಹೇಳುವ ಸಾಮಾಜಿಕ ಮಾಧ್ಯಮದ ಹೇಳಿಕೆಯೊಂದು ವೈರಲ್ ಆಗುತ್ತಿದೆ. ಆಧುನಿಕ ವಿಜ್ಞಾನಕ್ಕೆ ತಿಳಿದಿರುವ ಯಾವುದೇ ಕ್ಯಾನ್ಸರ್ ಔಷಧದ ಪ್ರಯೋಜನಗಳನ್ನು ವಿಟಮಿನ್ ಮೀರುತ್ತದೆ ಎಂದು ಅದು ಹೇಳುತ್ತದೆ. ಹೇಳಿಕೆಯನ್ನು ನೋಡಿ:

ಇದನ್ನು ಇಲ್ಲಿ ಮತ್ತು ಇಲ್ಲಿ ಕಾಣಬಹುದು. ವಾಸ್ತವವಾಗಿ, ಇದೇ ಹೇಳಿಕೆಯನ್ನು 2022 ಮತ್ತು 2023 ರಲ್ಲಿಯೂ ಹಂಚಿಕೊಳ್ಳಲಾಗಿತ್ತು.

FACT CHECK

ಕೋವಿಡ್-19 ರ ದಿನಗಳಿಂದಲೂ ಮಾನವರಿಗೆ ವಿಟಮಿನ್ ಡಿ ಪ್ರಯೋಜನಗಳ ಕುರಿತಾದ ಚರ್ಚೆ ನಡೆಯುತ್ತಲೇ ಇರುವುದರಿಂದ, ಲಭ್ಯವಿರುವ ಸಂಶೋಧನಾ ಫಲಿತಾಂಶಗಳನ್ನು ಗಮನದಲ್ಲಿಟ್ಟುಕೊಂಡು ಡಿಜಿಟೈ ಇಂಡಿಯಾ ಈ ವಿಷಯವನ್ನು ಪರಿಶೀಲನೆಗೆ ಕೈಗೆತ್ತಿಕೊಂಡಿತು. NIH ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆಯ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಪೂರಕಗಳು ಕ್ಯಾನ್ಸರ್ ಸಂಭಾವನೆಯನ್ನು ಕಡಿಮೆ ಮಾಡುವುದಿಲ್ಲ. ಇಲ್ಲಿ ಕಾಣಬಹುದಾದ ಅಧ್ಯಯನವನ್ನು ನವೆಂಬರ್ 10, 2018 ರಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್ (NEJM) ನಲ್ಲಿ ಪ್ರಕಟಿಸಲಾಗಿತ್ತು, ಈ ಯಾದೃಚ್ಛಿಕ ಕ್ಲಿನಿಕಲ್ ಪ್ರಯೋಗದಲ್ಲಿ 25,000 ಜನರು ಭಾಗವಹಿಸಿದ್ದರು.

ಈ ಅಧ್ಯಯನವು ಕ್ಯಾನ್ಸರ್ ತಡೆಗಟ್ಟುವಿಕೆಗೆ ವಿಟಮಿನ್ ಡಿ ಯನ್ನು ಬಳಸಲು ಪ್ರಯತ್ನಿಸಿತು, ಆದರೆ ಭಾಗವಹಿಸುವವರಿಗೆ ನೀಡಲಾದ ವಿಟಮಿನ್ ಪೂರಕವು ಕ್ಯಾನ್ಸರ್ ಅಭಿವೃದ್ಧಿಯ ಅಪಾಯವನ್ನು ಕಡಿಮೆ ಮಾಡಲಿಲ್ಲ ಎಂದು ಫಲಿತಾಂಶಗಳು ತೋರಿಸಿದವು. ಸಂಶೋಧನೆಗಳನ್ನು ಪೂರ್ಣವಾಗಿ ಇಲ್ಲಿ ಕಾಣಬಹುದು.

ಆದರೆ, ಇಲ್ಲಿ ಕಂಡುಬರುವಂತೆ ಮರಣ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ವಿಟಮಿನ್ ಡಿ ಯ ಪ್ರಯೋಜನಗಳನ್ನು ಎಲ್ಲಾ ಅಧ್ಯಯನಗಳು ಒತ್ತಿಹೇಳಿವೆ.

ಆದ್ದರಿಂದ, ವಿಟಮಿನ್ ಡಿ ಯು ಜೀವಕೋಶಗಳ ಆರೋಗ್ಯದಲ್ಲಿ ಪೂರಕ ಪ್ರಯೋಜನಗಳೊಂದಿಗೆ ಪ್ರಮುಖ ಪಾತ್ರವಹಿಸಬಹುದು, ಆದರೆ ಇದು ಎಲ್ಲಾ ಕ್ಯಾನ್ಸರ್ ಔಷಧಿಗಳನ್ನು ಮೀರಿಸುತ್ತದೆ ಎಂದು ವಿವರಿಸುವುದು ಇಲ್ಲಿಯವರೆಗೆ ಲಭ್ಯವಿರುವ ಪುರಾವೆಗಳ ತಪ್ಪು ಪ್ರಾತಿನಿಧ್ಯ.

ಇದನ್ನೂ ಓದಿ:

ಹೇಳಿಕೆಯಂತೆ, ಈ ವಿಚಿತ್ರ ಸಮುದ್ರ ಪ್ರಾಣಿಯು ಸಮುದ್ರ ಹಸುವನ್ನು ಪ್ರತಿನಿಧಿಸುತ್ತದೆಯೇ? ಸತ್ಯ ಪರಿಶೀಲನೆ

ಆನಿಮೇಟರ್‌ಗಳ ಪೋಸ್ಟ್ ನಿಂದಾಗಿ X ನಲ್ಲಿ ಹ್ಯಾಶ್‌ಟ್ಯಾಗ್ #RIPCartoonNetwork ಟ್ರೆಂಡ್ ಗೆ ಪ್ರಚೋದನೆ; ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*