Don't Miss

ಈ ಚಿತ್ರವು ಉತ್ತರ ಪ್ರದೇಶದ ಕೆಸರುಮಯ, ಹಾನಿಗೊಳಗಾದ ರಸ್ತೆಗಳಲ್ಲಿ ಶಾಲೆಗೆ ನಡೆದುಕೊಂಡು ಹೋಗುತ್ತಿರುವ ಮಕ್ಕಳನ್ನು ತೋರಿಸುತ್ತಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claimಉತ್ತರ ಪ್ರದೇಶದ ಕೆಸರುಮಯ, ಹಾನಿಗೊಳಗಾದ ರಸ್ತೆಗಳಲ್ಲಿ ಶಾಲಾ ಮಕ್ಕಳು ಶಾಲೆಗೆ ನಡೆದುಕೊಂಡು ಹೋಗುತ್ತಿರುವುದನ್ನು ಚಿತ್ರವು ತೋರಿಸುತ್ತದೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಚಿತ್ರವು ಉತ್ತರ ಪ್ರದೇಶದ ಹಾನಿಗೊಳಗಾದ ರಸ್ತೆಗಳನ್ನು ತೋರಿಸುವುದಿಲ್ಲ, ಅದು ಮಹಾರಾಷ್ಟ್ರದ ಗಡ್ಚಿರೋಳಿ ಜಿಲ್ಲೆಯದ್ದಾಗಿದೆ. ಮೇಲಾಗಿ, ಇದು 2018 ರ ಹಳೆಯ ಹೇಳಿಕೆಯಾಗಿದ್ದು, ಇದೀಗ ಪುನಃ ವೈರಲ್ ಆಗಿರುವಂಥದ್ದು.

ರೇಟಿಂಗ್/Rating: ತಪ್ಪು ನಿರೂಪಣೆ 

*****************************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

************************************************************************

ಸಮವಸ್ತ್ರಧಾರಿ ಶಾಲಾ ಮಕ್ಕಳು ಕೆಸರುಮಯ ಗ್ರಾಮೀಣ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ತೋರಿಸುವ ಒಂದು ವೈರಲ್ ಚಿತ್ರವನ್ನು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಜುಲೈ 9, 2025 ರಂದು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ ಈ ಚಿತ್ರದ ಲಿಂಕ್ ಉದ್ದೇಶಪೂರ್ವಕವಾಗಿ ಉತ್ತರ ಪ್ರದೇಶದ ರಸ್ತೆಗಳ ಸ್ಥಿತಿಯನ್ನು ತೋರಿಸುತ್ತಿದ್ದು, ಉತ್ತರ ಪ್ರದೇಶದ ಸರ್ಕಾರ ಆ ಶಾಲೆಯನ್ನು ಮುಚ್ಚುತ್ತಿದೆ ಎಂದೂ ಆರೋಪಿಸಿದೆ.

ಹಿಂದಿಯಲ್ಲಿರುವ ಪೋಸ್ಟ್‌ನ ಶೀರ್ಷಿಕೆ ಹೀಗಿದೆ: :

“स्कूल” जाने के रास्ते बना दो,
हम “मंगल” पे जाने के रास्ते बना देंगे..!!!❤️
उत्तर प्रदेश सरकार.
स्कूल के लिए रास्ता नहीं बना पाई।
तो सोचा स्कूल वह बंद कर दो।
ना रहेगा बांस.
ना बजेगी बांसुरी.

ಕನ್ನಡದ ಭಾಷಾ ಅನುವಾದ ಹೀಗಿದೆ:

“ಶಾಲೆಗೆ” ಹೋಗಲು ದಾರಿ ಮಾಡಿ

ನಾವು “ಮಂಗಳ” ಕ್ಕೆ ಹೋಗಲು ದಾರಿ ಮಾಡಿಕೊಡುತ್ತೇವೆ..!!!

ಉತ್ತರ ಪ್ರದೇಶ ಸರ್ಕಾರ.

ಶಾಲೆಗೆ ಹೋಗಲು ದಾರಿ ಮಾಡಿಕೊಡಲಾಗಲಿಲ್ಲ.

ಆದ್ದರಿಂದ ಶಾಲೆಯನ್ನು ಮುಚ್ಚುವ ಬಗ್ಗೆ ಯೋಚಿಸಿದೆ.

ಬಿದಿರು ಇಲ್ಲದಿದ್ದರೆ, ಕೊಳಲೂ ಇರುವುದಿಲ್ಲ.”

 

ಮತ್ತೊಬ್ಬ X ಬಳಕೆದಾರರು ಅದೇ ಚಿತ್ರವನ್ನು ಹಂಚಿಕೊಳ್ಳುತ್ತಾ ಒಳ್ಳೆಯ ರಸ್ತೆಗಳಿಲ್ಲದಿದ್ದರೆ ಶಾಲೆಗಳನ್ನು ಮುಚ್ಚಬೇಕು ಎಂದು ಸೂಚಿಸಿ ಇದೇ ನಿಟ್ಟಿನಲ್ಲಿ ಪೋಸ್ಟ್ ಮುಂದುವರಿಸಿದ್ದಾರೆ.

ಅನುವಾದ: “ಮಕ್ಕಳಿಗೆ ಉತ್ತಮ ಶಿಕ್ಷಕರನ್ನು ಒದಗಿಸಲು ಸಾಧ್ಯವಾಗದಿದ್ದರೆ ಶಾಲೆಯನ್ನು ಮುಚ್ಚಿ. ಮಕ್ಕಳು ಶಾಲೆಗೆ ಹೋಗಲು ಒಳ್ಳೆಯ ರಸ್ತೆಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ಶಾಲೆಯನ್ನು ಮುಚ್ಚಿ. ಶಾಲೆಗಳೇ ಇಲ್ಲದಿರುವಾಗ, ಶಿಕ್ಷಕರನ್ನು ನೇಮಿಸಿಕೊಳ್ಳುವ ಅಗತ್ಯವಿಲ್ಲ. ಶಾಲೆಗಳೇ ಇಲ್ಲದಿರುವಾಗ, ಮಕ್ಕಳ ಮಧ್ಯಾಹ್ನದ ಬಿಸಿಯೂಟಕ್ಕೂ ಯಾವುದೇ ಖರ್ಚಿರುವುದಿಲ್ಲ.”

 

ಅನುವಾದ: “ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕ ವ್ಯವಸ್ಥೆಯನ್ನು ಹೊಂದಿರುವ ದೇಶದ ಸ್ಥಿತಿ ಇದು… ದೇಶದ ಯಾವುದೇ ಪ್ರದೇಶದಲ್ಲಿ ಮಕ್ಕಳು ಶಾಲೆಗೆ ಹೋಗಲು ರಸ್ತೆ ಇಲ್ಲದಿದ್ದರೆ, ಸ್ಥಳೀಯ ಶಾಸಕರು ಮತ್ತು ಸಂಸದರು ನಿಷ್ಪ್ರಯೋಜಕರು ಎಂದರ್ಥ.”

ಇದೇ ಚಿತ್ರವಿರುವ ಯೂಟ್ಯೂಬ್ ವೀಡಿಯೊ ಇಲ್ಲಿದೆ.

ಸತ್ಯ ಪರಿಶೀಲನೆ:

ಸಾಮಾಜಿಕ ಮಾಧ್ಯಮಗಳಲ್ಲಿ ಒಂದೇ ಚಿತ್ರವು ಹಲವಾರು ಬಾರಿ ಪ್ರಸಾರವಾದುದರಿಂದ ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ಪರಿಶೀಲಿಸಲು ನಿರ್ಧರಿಸಿತು. ನಾವು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದಾಗ, ಅದು ಜುಲೈ 26, 2018 ರಂದು ಯಾವುದೇ ಶೀರ್ಷಿಕೆಯಿಲ್ಲದೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಲಾದ ಹಳೆಯ ಚಿತ್ರ ಎಂದು ನಮಗೆ ತಿಳಿದುಬಂತು.

ಪುನಃ ಅದೇ ಚಿತ್ರವನ್ನು ಸೆಪ್ಟೆಂಬರ್ 6, 2024 ರಂದು X ಬಳಕೆದಾರರೊಬ್ಬರು ಪೋಸ್ಟ್ ಮಾಡಿದರು ಮತ್ತದು 98,000 ವೀಕ್ಷಣೆಗಳನ್ನು ಗಳಿಸಿತು.

ಅನುವಾದ ಹೀಗಿದೆ:

“ಕೋಟ್ಯಂತರ ರೂಪಾಯಿಗಳನ್ನು ಲೂಟಿ ಮಾಡಿದ ಶಾಸಕರು, ಸಂಸದರು, ಸಚಿವರು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಕ್ಕಳು ಲಂಡನ್, ಅಮೆರಿಕ ಮತ್ತು ಯುರೋಪಿನಲ್ಲಿ ಓದುತ್ತಿದ್ದಾರೆ. ನಿಮ್ಮ ಮಕ್ಕಳು ಮೂಲಭೂತ ಸೌಲಭ್ಯಗಳು ಅಥವಾ ಶಿಕ್ಷಕರು ಸಮರ್ಪಕ ಪ್ರಮಾಣದಲ್ಲಿರದ ಶಾಲೆಗೆ ಹೋಗಲು ಈ ರಸ್ತೆಗಳ ಮೂಲಕ ಹಾದು ಹೋಗುತ್ತಾರೆ.”

ಹೆಚ್ಚಿನ ತನಿಖೆ ನಡೆಸಿದಾಗ ನಮಗೆ, 16 ಆಗಸ್ಟ್ 2019 ರಂದು ಹಿಂದಿಯಲ್ಲಿ ಪ್ರಕಟವಾದ ದಿನೈಕ್ ಭಾಸ್ಕರ್ ನಿಂದ ಸುದ್ದಿ ವರದಿಯು  ದೊರಕಿತು

ವರದಿಯ ಶೀರ್ಷಿಕೆ ಹೀಗಿತ್ತು ““कीचड़ में गिरते संभलते स्कूल पहुंचते हैं बच्चे, सैकड़ों गांवों में स्कूल तक पहुंचने के लिए नहीं सड़क” (ಕನ್ನಡ ಭಾಷಾಂತರ ಹೀಗಿದೆ: ಮಕ್ಕಳು ಕೆಸರಿನಲ್ಲಿ ಎದ್ದು ಬಿದ್ದು ಶಾಲೆ ತಲುಪುತ್ತಾರೆ, ನೂರಾರು ಹಳ್ಳಿಗಳಲ್ಲಿ ಶಾಲೆಗೆ ಹೋಗಲು ರಸ್ತೆಯಿಲ್ಲ.) ಲೇಖನವು ಕೂಡ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಅದೇ ಚಿತ್ರವನ್ನು ಬಳಸಿದೆ.

ಇಲ್ಲಿನ ಸುದ್ದಿ ವರದಿಯು ಅಹೇರಿ ವಿಭಾಗದ ಜಿಲ್ಲಾ ಪರಿಷತ್ ಶಾಲೆಗಳಿಗೆ ಮಕ್ಕಳು ಹೇಗೆ ಹಾಜರಾಗುತ್ತಿದ್ದಾರೆ ಎಂಬುದರ ಪರಿಚಯದೊಂದಿಗೆ ಪ್ರಾರಂಭವಾಗುತ್ತದೆ. ಅಹೇರಿ ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣ ಮತ್ತು ಉಪವಿಭಾಗವಾಗಿದೆ. ಲೇಖನವು ಸಿರೊಂಚ, ಭಮ್ರಾಗಢ, ಎಟಪಲ್ಲಿ ಮತ್ತು ಮುಲ್ಚೇರಾದಂತಹ ಗಡ್ಚಿರೋಲಿಯ ಇತರ ಉಪವಿಭಾಗಗಳನ್ನು ಸಹ ಉಲ್ಲೇಖಿಸುತ್ತದೆ.

ಮೇಲಿನ ಚಿತ್ರದಲ್ಲಿ ನೋಡಿದಂತೆ, ಸುದ್ದಿ ವರದಿಯು ಗಡ್ಚಿರೋಲಿ ಜಿಲ್ಲೆಯ ಸ್ಥಿತಿಯ ಬಗ್ಗೆ ವಿವರ ನೀಡುತ್ತದೆ, ಇದು ಮಹಾರಾಷ್ಟ್ರದ ದೂರದ, ಬುಡಕಟ್ಟು ಪ್ರಾಬಲ್ಯವುಳ್ಳ ನಕ್ಸಲ್ ಪೀಡಿತ ಜಿಲ್ಲೆಯಾಗಿದೆ ಎಂದು ಈ ವರದಿಯಲ್ಲಿ ಗಮನಿಸಲಾಗಿದೆ. ಈ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಸರ್ಕಾರವು ಪ್ರತಿ ವರ್ಷ ವಿವಿಧ ಯೋಜನೆಗಳಡಿಯಲ್ಲಿ ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದರೂ, ಸ್ಥಳೀಯ ಅಧಿಕಾರಿಗಳು ಮತ್ತು ಪ್ರತಿನಿಧಿಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಪ್ರಗತಿಗೆ ಅಡ್ಡಿಯಾಗುತ್ತಿದೆ ಎಂದು ಇದು ಆರೋಪಿಸಿದೆ.

ಹೀಗಾಗಿ, ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯ ರಸ್ತೆಯ ಚಿತ್ರಣವನ್ನು, ಅದೂ 2018 ರ ಹಳೆಯ ಚಿತ್ರವನ್ನು ಉತ್ತರ ಪ್ರದೇಶದ್ದು ಎಂದು ಹೇಳಿ ತೋರಿಸಲಾಗುತ್ತಿದೆ. ಆದ್ದರಿಂದ ಈ ಹೇಳಿಕೆ ಸುಳ್ಳು.

 


					
					
									

Leave a Reply

Your email address will not be published. Required fields are marked *

*