ಹೇಳಿಕೆ/Claim:ತಮಿಳುನಾಡಿನ ತಿರುಚ್ಚಿಯಲ್ಲಿರುವ BHEL ಘಟಕವು ರಾಮಮಂದಿರಕ್ಕಾಗಿ ಬೃಹತ್ ಗಂಟೆಗಳನ್ನು ತಯಾರಿಸಿದೆ. ಕಡೆನುಡಿ/Conclusion: ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಮೋಹನೂರ್ ರಸ್ತೆಯಲ್ಲಿರುವ ಆಂಡಾಲ್ ಮೋಲ್ಡಿಂಗ್ ವರ್ಕ್ಸ್ ಈ ಗಂಟೆಗಳನ್ನು ತಯಾರಿಸಿದೆ ಮತ್ತು ಹೇಳಿಕೆಯಲ್ಲಿರುವಂತೆ BHEL, ತಿರುಚ್ಚಿ ಇವುಗಳನ್ನು ತಯಾರಿಸಿಲ್ಲ. ರೇಟಿಂಗ್:ತಪ್ಪು ನಿರೂಪಣೆ — ಒಂದು ಟ್ರಕ್ ದೊಡ್ಡದಾದ ದೇವಾಲಯದ ಗಂಟೆಗಳನ್ನು ಸಾಗಿಸುತ್ತಿರುವ ವೀಡಿಯೊವನ್ನು ಹೊಂದಿರುವ ಒಂದು ವೀಡಿಯೊ ವೈರಲ್ ಆಗುತ್ತಿದೆ. ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಸಾರ್ವಜನಿಕ ವಲಯದ ಕಂಪನಿಯಾದ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL) ಈ ಗಂಟೆಗಳನ್ನು ತಯಾರಿಸಿದೆ ಎಂಬುದು ಅದರೊಂದಿಗಿರುವ ಹೇಳಿಕೆ. ಹೇಳಿಕೆಯ ಅನುಸಾರ: “ಅಯೋಧ್ಯಾಧಾಮಕ್ಕೆ (ರಾಮ ಮಂದಿರ) ರವಾನೆಯಾಗುತ್ತಿರುವ ಈ ಗಂಟೆಗಳನ್ನು ಅಯೋಧ್ಯಾ ಮಂದಿರಕ್ಕಾಗಿ BHEL ತಿರುಚ್ಚಿಯು ತಯಾರಿಸಿದೆ. ಕಾಮೆಂಟ್ ಬಾಕ್ಸ್ನಲ್ಲಿ ಜೈ ಶ್ರೀ ರಾಮ್ ಎಂದು ಬರೆಯಿರಿ ಮತ್ತು ಅದನ್ನು ಭಕ್ತರಾಗಿ ಹಂಚಿಕೊಳ್ಳಿ. भारत हैवी इलेक्ट्रिकल्स, त्रिचुरापल्ली में निर्माण कर अयोध्या मंदिर को भेजे जा रहे हैं ये सभी घंटे जय श्री राम लिख कर शेयर करें (ಅನುವಾದ ಹೀಗಿದೆ: ಈ ಎಲ್ಲಾ ಗಂಟೆಗಳನ್ನು ಭಾರತ್ ಹೆವಿ ಎಲೆಕ್ಟ್ರಿಕಲ್ಸ್, ತಿರುಚಿರಾಪಳ್ಳಿಯಲ್ಲಿ ನಿರ್ಮಾಣ ಮಾಡಿ ಅಯೋಧ್ಯೆ ದೇವಸ್ಥಾನಕ್ಕೆ ಕಳುಹಿಸಲಾಗುತ್ತಿದೆ. ಜೈ ಶ್ರೀ ರಾಮ್ ಎಂದು ಬರೆದು ಹಂಚಿಕೊಳ್ಳಿ). FACT CHECK BHEL ಸಾರ್ವಜನಿಕ ವಲಯದ ಉದ್ಯಮ (PSU) ಆಗಿರುವುದರಿಂದ ಮತ್ತು ಯಾವುದೇ ಸುದ್ದಿವಾಹಿನಿಗಳಲ್ಲಿ ಇಂತಹ ಯಾವುದೇ ವರದಿ ಪ್ರಕಟವಾಗದ್ದರಿಂದ ಡಿಜಿಟೈ ಇಂಡಿಯಾ ತಂಡವು ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಿತು. ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಕೀ ...
Read More »