Don't Miss

Tag Archives: false claims

ಯೋಗಿ ಆದಿತ್ಯನಾಥ್ 2017 ರಲ್ಲಿ ಮುಖ್ಯ ಮಂತ್ರಿಯಾಗುವ ಮೊದಲು ಉತ್ತರ ಪ್ರದೇಶದಲ್ಲಿ ಕೇವಲ 2 ವಿಮಾನ ನಿಲ್ದಾಣಗಳಿದ್ದವು? ಸತ್ಯ ಪರಿಶೀಲನೆ

ಹೇಳಿಕೆ/Claim: ಬ್ರಿಟಿಷರ ಕಾಲದಿಂದ 2017ರ ವರೆಗೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ವಿಮಾನ ನಿಲ್ದಾಣಗಳಿದ್ದವು. ಯೋಗಿ ಆದಿತ್ಯನಾಥ್ ರವರಡಿಯಲ್ಲಿ ಈಗ 24 ವಿಮಾನ ನಿಲ್ದಾಣಗಳಿವೆ. ಕಡೆನುಡಿ/Conclusion: 2017 ರ ಮೊದಲು, ದಾಖಲೆಯನುಸಾರ  ಉತ್ತರ ಪ್ರದೇಶದಲ್ಲಿ 6 ವಿಮಾನ ನಿಲ್ದಾಣಗಳಿದ್ದವು ಮತ್ತು ಪ್ರಸ್ತುತ 10 ಕಾರ್ಯಾಚರಣೆಯಲ್ಲಿರುವ ವಿಮಾನ ನಿಲ್ದಾಣಗಳಿವೆ ಹಾಗೂ 14 ನಿರ್ಮಾಣ ಹಂತದಲ್ಲಿವೆ ಎಂದು ವಿಮಾನಯಾನ ಸಚಿವರ ಪ್ರಕಟಣೆ ತಿಳಿಸಿದೆ. ರೇಟಿಂಗ್: ದಾರಿತಪ್ಪಿಸುವ ಸುದ್ದಿ— ಸತ್ಯ ಪರಿಶೀಲನೆ ವಿವರಗಳು ಯೋಗಿ ಆದಿತ್ಯನಾಥ್ ರವರು 2017 ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಮೊದಲು ಉತ್ತರ ಪ್ರದೇಶದಲ್ಲಿ ...

Read More »

‘ಹೆಚ್ಚು ಹಳದಿ’ಯಾಗಿರುವ ಅರಿಶಿನವು ಸೀಸದ ಕ್ರೋಮೇಟ್ ಅನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವು ಹೇಳುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim: ಮಾರುಕಟ್ಟೆಯಲ್ಲಿ ಮಾರಾಟಗೊಳ್ಳುತ್ತಿರುವ ‘ಹೆಚ್ಚು ಹಳದಿಯಾಗಿರುವ’ ಅರಿಶಿನವು ಸೀಸದ ಕ್ರೋಮೇಟ್ ಪುಡಿಯನ್ನು ಹೊಂದಿರುತ್ತದೆ ಎಂದು ವೈರಲ್ ಸಂದೇಶವೊಂದು ಹೇಳುತ್ತದೆ. ಕಡೆನುಡಿ/Conclusion: ಅರಿಶಿನವು ಹೆಚ್ಚು ಹಳದಿಯಾಗಿ ಕಾಣುವಂತೆ ಮಾಡಲು ಅದರಲ್ಲಿ ಸೀಸದ ಕ್ರೋಮೇಟ್ ಅನ್ನು ಬಳಸಲಾಗುತ್ತದೆ. ಅರಿಶಿನದಲ್ಲಿ ಸೀಸದ ಕ್ರೋಮೇಟ್ ಇರಬಾರದು ಎಂದು FSSAI ಹೇಳಿದೆ. ಅಷ್ಟೇ ಅಲ್ಲದೆ, ಅರಿಶಿನದಲ್ಲಿ ಕಲಬೆರಕೆಯನ್ನು ಪರೀಕ್ಷಿಸಲು ಜನರು ತಮ್ಮ ಮನೆಗಳಲ್ಲಿ ನಡೆಸಬಹುದಾದ ಸರಳ ಪರೀಕ್ಷೆಗಳನ್ನು ಸಹ ಸಂಸ್ಥೆಯು ಬಹಿರಂಗಪಡಿಸಿದೆ. ಮಾರುಕಟ್ಟೆಯಲ್ಲಿ ಪ್ರಮಾಣೀಕೃತ ಮತ್ತು ಅಧಿಕೃತ ಮಾರಾಟಗಾರರಿಂದ ಅರಿಶಿನವನ್ನು ಖರೀದಿಸಲು ಸಲಹೆ ನೀಡಲಾಗಿದೆ. ರೇಟಿಂಗ್: ನಿಜ — ಸತ್ಯ ಪರಿಶೀಲನೆ ವಿವರಗಳು ...

Read More »

ಸತ್ಯ ಪರಿಶೀಲನೆ: ಕಾಂಗ್ರೆಸ್ನ ಚಿಹ್ನೆಯನ್ನು ಇಸ್ಲಾಂನಿಂದ ಪಡೆಯಲಾಗಿದೆ ಎಂದು ವೈರಲ್ ಸಾಮಾಜಿಕ ಜಾಲತಾಣ ಪೋಸ್ಟ್ಗಳು ಹೇಳುತ್ತವೆ

ಹೇಳಿಕೆ/Claim: ಕಾಂಗ್ರೆಸ್ ಪಕ್ಷದ ಚುನಾವಣಾ ಚಿಹ್ನೆಯಾಗಿರುವ ತೆರೆದ ಹಸ್ತವನ್ನು ಇಸ್ಲಾಂ ಧರ್ಮದಿಂದ ಪಡೆಯಲಾಗಿದೆ ಎಂದು ವೈರಲ್ ಆಗಿರುವ ಸಾಮಾಜಿಕ ಮಾಧ್ಯಮದ ಚಿತ್ರವೊಂದು ಹೇಳುತ್ತದೆ. ಕಡೆನುಡಿ/Conclusion: ಕಾಂಗ್ರೆಸ್ ಪಕ್ಷವು ವರ್ಷಗಳಾದ್ಯಂತ ತನ್ನ ಚುನಾವಣಾ ಚಿಹ್ನೆಗಳನ್ನು ಬದಲಾಯಿಸಿದೆ. ತೆರೆದ ಹಸ್ತದ ಪ್ರಸ್ತುತ ಚಿಹ್ನೆಯು 1977 ರಲ್ಲಿ ಅಸ್ತಿತ್ವಕ್ಕೆ ಬಂದಿತು. ಅಷ್ಟೇ ಅಲ್ಲದೆ, ಯಾವುದೇ ಪಕ್ಷವು ಧಾರ್ಮಿಕ ಅಥವಾ ಸಾಮುದಾಯಿಕ ಅರ್ಥವನ್ನು ಹೊಂದಿರುವ ಚಿಹ್ನೆಯನ್ನು ಹೊಂದಿರಬಾರದು ಎಂದು ಭಾರತೀಯ ಚುನಾವಣಾ ಆಯೋಗವು ತನ್ನ ಆದೇಶದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ. ರೇಟಿಂಗ್: ತಪ್ಪು ನಿರೂಪಣೆ — ಸತ್ಯ ಪರಿಶೀಲನೆ ವಿವರಗಳು ಕಾಂಗ್ರೆಸ್ ಚುನಾವಣಾ ...

Read More »

ಹಮಾಸ್ ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿ ಆಟದ ಮೈದಾನವನ್ನು ಪ್ರವೇಶಿಸಿತು ಎಂದು ವೈರಲ್ ವೀಡಿಯೊ ಆರೋಪಿಸಿದೆ; ಸತ್ಯ ಪರಿಶೀಲನೆ

ಪ್ಯಾಲೇಸ್ಟಿನಿನ ಮಿಲಿಟರಿ ಗುಂಪಾದ ಹಮಾಸ್, ಇಸ್ರೇಲ್ ಮೇಲೆ ದಾಳಿ ನಡೆಸಲು ಮೋಟರೀಕೃತ ಪ್ಯಾರಾಗ್ಲೈಡರ್‌ಗಳನ್ನು ಬಳಸಿತು. ಆದರೆ, ಹಮಾಸ್‌ನ ನಿಜವಾದ ದಾಳಿಯನ್ನು ತೋರಿಸುತ್ತಿರುವುದಾಗಿ ಹೇಳುವ ದಾಳಿಗೆ ಸಂಬಂಧಿಸಿರದ ಇತರ ಅನೇಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಅಂತಹ ಒಂದು ವೀಡಿಯೊದಲ್ಲಿ ಪ್ಯಾರಾಗ್ಲೈಡರ್‌ಗಳು ಆಟದ ಮೈದಾನದಂತೆ ಕಾಣುತ್ತಿರುವ ಸ್ಥಳದೊಳಗೆ ಹಾರಿ ಬರುವುದನ್ನು  ಕಾಣಬಹುದು. ವೀಡಿಯೊದೊಂದಿಗಿನ ಹೇಳಿಕೆಯ ಪ್ರಕಾರ “ಹಮಾಸ್ ಭಯೋತ್ಪಾದಕರು ಇಸ್ರೇಲ್‌ ನೊಳಗೆ ಪ್ಯಾರಾಗ್ಲೈಡ್ ಮಾಡಿದರು, ಅಮಾಯಕ ನಾಗರಿಕರನ್ನು ಹತ್ಯೆಗೊಳಿಸಲು, ಮಹಿಳೆಯರು ಮತ್ತು ಮಕ್ಕಳನ್ನು ಅತ್ಯಾಚಾರಕ್ಕೊಳಗಾಗಿಸಿ ಕೊಲ್ಲಲು ಮನೆ-ಮನೆಗೆ ಹೋದರು.” ಪ್ಯಾರಾಗ್ಲೈಡರ್‌ಗಳು ಗಾಳಿಯಲ್ಲಿ ಹಾರಿ ಆಟದ ಮೈದಾನದಲ್ಲಿ ...

Read More »