ಒಂದು ಸೀಮಿತ ಹೊಣೆಗಾರಿಕೆ ಪಾಲುದಾರಿಕೆ ಕಂಪನಿಯಾಗಿರುವ ಸಾಫ್ಟ್‌ಮೀಡಿಯಾ ಹಬ್ ಎಲ್.ಎಲ್.ಪಿ.ಯನ್ನು 2014ರಲ್ಲಿ ಭಾರತ ಸರ್ಕಾರದ ಸಾಂಸ್ಥಿಕ ವ್ಯವಹಾರಗಳ ಸಚಿವಾಲಯದಲ್ಲಿ ನೋಂದಾಯಿಸಿ ಸ್ಥಾಪಿಸಲಾಯಿತು.
ಡಿಜಿಟೈ ಇಂಡಿಯಾ (www.digiteye.in) ಒಂದು ಸ್ವತಂತ್ರ ಡಿಜಿಟಲ್ ಪತ್ರಿಕೋದ್ಯಮ ವೇದಿಕೆಯಾಗಿದ್ದು ಸಾಫ್ಟ್‌ಮೀಡಿಯಾ ಹಬ್ ಎಲ್.ಎಲ್.ಪಿ.ಯ ಭಾಗವಾಗಿದೆ.
ಡಿಜಿಟೈ ಇಂಡಿಯಾ (www.digiteye.in) ಸಂಪೂರ್ಣವಾಗಿ ಸುದ್ದಿಗಳ ಅಥವಾ ಹೇಳಿಕೆಗಳ ಸತ್ಯ-ಪರಿಶೀಲನೆಯೆಡೆಗೆ ಮಾತ್ರವೇ ಕೆಲಸ ಮಾಡುವ ಸಮರ್ಪಿತ ತಂಡವೊಂದನ್ನು ಹೊಂದಿದೆ. ಪ್ರಸ್ತುತ ನಮ್ಮದು, ಒಬ್ಬ ಸಾಮಾಜಿಕ ಜಾಲತಾಣಗಳ ಸಂಯೋಜಕರನ್ನು ಹೊರತುಪಡಿಸಿ ಒಬ್ಬ ಸಂಪಾದಕರು ಮತ್ತು ಮೂವರು ಸತ್ಯ ಪರೀಕ್ಷಕರ ತಂಡವಾಗಿದೆ (ದಯವಿಟ್ಟು “ನಮ್ಮ ತಂಡ” ಪುಟವನ್ನು ನೋಡಿ), ಇವರು ಹೇಳಿಕೆಗಳು ಅಥವಾ ಸುಳ್ಳು ನಿರೂಪಣೆಗಳನ್ನು ಆಯ್ದು, ಸತ್ಯ-ಪರಿಶೀಲನೆ ಮಾಡಿ, ಪರಿಷ್ಕರಿಸಿ, ಕಂಡುಕೊಂಡ ಅಂಶಗಳನ್ನು ನಮ್ಮ ವೆಬ್‌ಸೈಟ್ ನಲ್ಲಿ ಪ್ರಕಟಿಸುವ ಕಾರ್ಯವನ್ನು ಮಾಡುತ್ತಲಿದ್ದಾರೆ. ನಮ್ಮಲ್ಲಿ ಮೂವರು ಸತ್ಯ ಪರೀಕ್ಷಕರಿದ್ದು ಇವರು ಪ್ರತಿಯೊಂದು ಲೇಖನವನ್ನು ವೆಬ್‌ಸೈಟ್ ನಲ್ಲಿ ಪ್ರಕಟಿಸುವ ಮುನ್ನ ಹಲವಾರು ಹಂತಗಳಲ್ಲಿ ಪರಿಶೀಲಿಸುತ್ತಾರೆ.
ಒಂದು ಸುದ್ದಿಯು ನಮ್ಮ ಕಾರ್ಯವಿಧಾನದಲ್ಲಿ ಮತ್ತು ತತ್ವ ಸಂಹಿತೆಯಲ್ಲಿ ಉಲ್ಲೇಖಿಸಿರುವ ಎಲ್ಲಾ ಅವಶ್ಯಕತೆಗಳನ್ನು ಪೂರೈಸುತ್ತದೆಯೇ ಎಂದು ನಿರ್ಧರಿಸುವ ಅಂತಿಮ ಅಧಿಕಾರ ನಮ್ಮ ಸಂಪಾದಕರದ್ದು. ಎಲ್ಲಾ ಅವಶ್ಯಕತೆಗಳನ್ನು ಪೂರೈಸುವುದು ಮತ್ತು ನಮ್ಮ ಬರಹಗಳಲ್ಲಿ ಯಾವುದೇ ರೀತಿಯ ಪಕ್ಷಪಾತ ಅಥವಾ ಒಲವು ತೋರದಿರುವುದು ಐ.ಎಫ್.ಸಿ.ಎನ್ ತತ್ವ ಸಂಹಿತೆಯ ಸಹಿದಾರರಾದ ನಮ್ಮ ಪ್ರಾಮಾಣಿಕ ಪ್ರಯತ್ನವಾಗಿರುತ್ತದೆ.
Name of the owner entity: Softmedia Hub LLP.
Legal Status: Limited Liability Partnership (LLP) company
Directors:NageshNarayana and Naga Arun KN
Registered Address: 17-B-24, Nandi Gardens, Avalahalli,
JP Nagar 9th Phase, Bangalore-560062, INDIA.
Date of Incorporation: 24-oct-2014.
CIN/LLPIN Number: AAC-8433
Softmedia Hub LLP Funding Details:
ಸಾಫ್ಟ್‌ಮೀಡಿಯಾ ಹಬ್ ಎಲ್.ಎಲ್.ಪಿ.ಯ ನಿರ್ದೇಶಕರಿಂದ ಸ್ವಯಂ-ಹೂಡಿಕೆ ಮಾಡಲಾಗಿದ್ದು, ಈ ನಿರ್ದೇಶಕರು ಅನುಕ್ರಮವಾಗಿ ಸುದ್ದಿ ಪ್ರಸಾರ ಮತ್ತು ಕಂಪ್ಯೂಟರ್ ಸಾಫ್ಟ್ವೇರ್ ಪ್ರದೇಶಗಳ ವೃತ್ತಿಪರರಾಗಿದ್ದಾರೆ. ಜೂಲೈ 31, 2023ರಂತೆ ಡಿಜಿಟೈ ಇಂಡಿಯಾದ ಕಾರ್ಯಾಚರಣೆಗಳನ್ನು ಬೆಂಬಲಿಸುವ ಸಲುವಾಗಿ ಸಾಫ್ಟ್‌ಮೀಡಿಯಾ ಹಬ್ ಹೊರಗಿನಿಂದ ಯಾವುದೇ ಹಣವನ್ನು ಸ್ವೀಕರಿಸಿಲ್ಲ.