Don't Miss

ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಪ್ರಯಾಣಿಕರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತಯಾರಿಸಲಾದ ವೀಡಿಯೊ ತೋರಿಸುತ್ತದೆ; ಸತ್ಯ ಪರಿಶೀಲನೆ

ಹೇಳಿಕೆ/Claim:  : ಭದ್ರತಾ ಸಿಬ್ಬಂದಿಯು ವಿಮಾನ ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.

ಕಡೆನುಡಿ/Conclusion:: ವೀಡಿಯೊ ಪ್ರಕಟಪಡಿಸಿದವರು ಅಪ್‌ಲೋಡ್ ಮಾಡಿರುವ ಹಲವಾರು ವೀಡಿಯೊಗಳಲ್ಲಿ ಕಂಡುಬರುವ ನಟರ ಕಾರ್ಯ ಪ್ರಕ್ರಿಯೆಯನ್ನು ತೋರಿಸುವ ನಾಟಕೀಯ ವೀಡಿಯೊ.

ರೇಟಿಂಗ್:ತಪ್ಪು ನಿರೂಪಣೆ

ಸತ್ಯ ಪರಿಶೀಲನೆ ವಿವರಗಳು

ವಿಮಾನ ನಿಲ್ದಾಣದ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಬ್ಬರ ಪರ್ಸ್‌ನಿಂದ ಹಣ ಕದಿಯುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದು ಟ್ವಿಟರ್‌ನಲ್ಲಿ ಬಳಕೆದಾರರಿಂದ  ಹಲವಾರು ಪ್ರತಿಕ್ರಿಯೆಗಳನ್ನು ಪಡೆದಿದೆ, ಕೆಳಗೆ ತೋರಿಸಿರುವಂತೆ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಯ ವಿರುದ್ಧ ಎಚ್ಚರಿಕೆ ನೀಡುತ್ತದೆ.

ಇದರ ಹಿಂದಿಯ ಶೀರ್ಷಿಕೆ (ಆಂಗ್ಲ ಭಾಷಾ ಲಿಪಿಯಲ್ಲಿ ಬರೆಯಲಾಗಿದೆ): Airport se safar karne wale pessenger is video ko khas karke zaroor dekho… airport k andar ka staff passenger ka rupya Paisa kis tarah se chori karte hain zara dekh Lo… is video ko apne sabhi group mein share karo… (ಆಂಗ್ಲ ಭಾಷೆಯ ಅನುವಾದ ಹೀಗಿದೆ: ವಿಮಾನದಲ್ಲಿ ಪ್ರಯಾಣಿಸುವ ಪ್ರಯಾಣಿಕರು ಈ ವೀಡಿಯೊವನ್ನು ನೋಡಬೇಕು. ವಿಮಾನ
ನಿಲ್ದಾಣದ ಒಳಗೆ ಸಿಬ್ಬಂದಿ ಪ್ರಯಾಣಿಕರ ಹಣವನ್ನು ಹೇಗೆ ಕದಿಯುತ್ತಾರೆ ಎಂಬುದನ್ನು ನೋಡಿ. ಈ ವೀಡಿಯೊವನ್ನು ನಿಮ್ಮ ಎಲ್ಲಾ ಗುಂಪುಗಳಲ್ಲಿ ಶೇರ್ ಮಾಡಿ…)
ನೀವು ಪೋಸ್ಟ್ ಅನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಓಂದು ವಾಟ್ಸಾಪ್ ವಿನಂತಿಯ ಆಧಾರದ ಮೇಲೆ ಡಿಜಿಟೈ ಇಂಡಿಯಾ ಇದನ್ನು ಸತ್ಯ-ಪರಿಶೀಲನೆಗಾಗಿ ಕೈಗೆತ್ತಿಕೊಂಡಾಗ ಇದನ್ನು ಈಗಾಗಲೇ ಇತರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ ಎಂದು ತಿಳಿದುಬಂತು. ತಂಡವು ಇನ್‌ವಿಡ್ ಟೂಲ್ ಬಳಸಿಕೊಂಡು ವೀಡಿಯೊದಿಂದ ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಅವುಗಳನ್ನು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದಾಗ, ಈ ವೀಡಿಯೊವನ್ನು ಪೌಲ್‌ವು ಟಿವಿಯು ನವೆಂಬರ್ 1, 2023 ರಂದು ಯೂಟ್ಯೂಬ್ ನಲ್ಲಿ ಅಪ್‌ಲೋಡ್ ಮಾಡಿತ್ತು ಎಂದು ಫಲಿತಾಂಶಗಳು ತೋರಿಸಿದವು. ಮೂಲ ವೀಡಿಯೊದ ಶೀರ್ಷಿಕೆ ಹೀಗಿದೆ, ‘ಆಸೆಬುರುಕ ಉದ್ಯೋಗಿ ಪ್ರಯಾಣಿಕರಿಂದ ತೆಗೆದುಕೊಳ್ಳುವುದು!’.

ನಾವು ಪ್ರಕಟಪಡಿಸಿದವರ ಮುಖಪುಟವನ್ನು ಪರಿಶೀಲಿಸಿದಾಗ, ಅದೇ ನಟರು ಪೀಡಿತರಾಗಿ ಅಥವಾ ಅಪರಾಧಿಗಳಾಗಿ ನಟಿಸಿರುವ ಹಲವಾರು ನಾಟಕೀಯ ವೀಡಿಯೊಗಳಿವೆ ಎಂಬುದು ನಮಗೆ ತಿಳಿಯಿತು. ಪೌಲ್‌ವು ಟಿವಿಯ ಮುಖಪುಟವನ್ನು ಇಲ್ಲಿ ನೋಡಿ: ಗುರುತುಪಡಿಸಿರುವ ಚಿತ್ರಗಳು ಅದೇ ವ್ಯಕ್ತಿಯನ್ನು ಒಂದು ತಿಂಗಳ ಹಿಂದೆ ಅಪ್‌ಲೋಡ್ ಮಾಡಲಾಗಿರುವ ಮೂರು ವೀಡಿಯೊಗಳಲ್ಲಿ ತೋರಿಸುತ್ತವೆ.

ಆದ್ದರಿಂದ, ಇದು ಸ್ಕ್ರಿಪ್ಟ್ ಮಾಡಿದ ವೀಡಿಯೊ ಆಗಿದೆ, ಇದು ನಿಜವಾದ್ದಲ್ಲ.

ಇದನ್ನೂ ಓದಿ:

ಈ ವೀಡಿಯೊ 170-ವರ್ಷ-ಹಳೆಯ ಟಿಸ್ಸಾಟ್ ವಾಚ್ನ ಮರುಸ್ಥಾಪನೆಯನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ

ಸತ್ಯ ಪರಿಶೀಲನೆ: ಸುಡಾನ್‌ನಲ್ಲಿ ಡ್ರೋನ್ ದಾಳಿಯ ಒಂದು ಹಳೆಯ ವೀಡಿಯೊಗೂ ಗಾಜಾ಼ ಮೇಲಿನ ದಾಳಿಗೂ ಸಂಬಂಧ ಕಲ್ಪಿಸಲಾಗಿದೆ

Leave a Reply

Your email address will not be published. Required fields are marked *

*