ಚೀನಾ ರೀಚಾರ್ಜ್ ಮಾಡದೆ 50 ವರ್ಷಗಳ ಕಾಲ ನಿರಂತರ ವಿದ್ಯುತ್ತನ್ನು ನೀಡುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ

ಚೀನಾ ರೀಚಾರ್ಜ್ ಮಾಡದೆ 50 ವರ್ಷಗಳ ಕಾಲ ನಿರಂತರ ವಿದ್ಯುತ್ತನ್ನು ನೀಡುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಬಿಡುಗಡೆ ಮಾಡಿದೆಯೇ? ಸತ್ಯ ಪರಿಶೀಲನೆ

ಹೇಳಿಕೆ/Claim :  ಚೀನಾ ದೇಶವು ರೀಚಾರ್ಜ್ ಮಾಡದೆ 50 ವರ್ಷಗಳ ಕಾಲ ನಿರಂತರ ಶಕ್ತಿಯನ್ನು ನೀಡುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಅನಾವರಣಗೊಳಿಸಿದೆ.

ಕಡೆನುಡಿ/Conclusion :ಈ ಹೇಳಿಕೆ ನಿಜ. ಬೀಜಿಂಗ್ ಮೂಲದ ಬೀಟಾವೋಲ್ಟ್ ಅಭಿವೃದ್ಧಿಪಡಿಸಿದೆ ಮತ್ತು 2024ರಿಂದ BV100 ಅನ್ನು ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಲು ಆರಂಭಿಸಿದೆ, ಇದು ನಿಕೆಲ್-63 ಬೀಟಾವೋಲ್ಟಾಯಿಕ್ ತಂತ್ರಜ್ಞಾನವನ್ನು ಬಳಸಿಕೊಂಡು 50 ವರ್ಷಗಳವರೆಗೆ ರೀಚಾರ್ಜ್ ಮಾಡದೆ ಅಥವಾ ನಿರ್ವಹಣೆ ಇಲ್ಲದೆ ಸ್ಥಿರ, ಕಡಿಮೆ-ಶಕ್ತಿಯ ವಿದ್ಯುತ್ ಅನ್ನು ಒದಗಿಸಲು ತಯಾರಿಸಲಾದ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯಾಗಿದೆ.

ರೇಟಿಂಗ್/Rating : ನಿಜ. 

******************************************************
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.

******************************************************

ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಚೀನಾ ದೇಶವು ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಅನಾವರಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ. ದೃಢೀಕೃತ X ಬಳಕೆದಾರ ‘Kekius_Sage’ ಅಂತಹ ಪೋಸ್ಟ್ ಹಂಚಿಕೊಂಡಿದ್ದು, ಚೀನಾ ದೇಶವು ರೀಚಾರ್ಜ್ ಮಾಡದೆಯೇ 50 ವರ್ಷಗಳ ನಿರಂತರ ಶಕ್ತಿಯನ್ನು ಒದಗಿಸುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಅನಾವರಣಗೊಳಿಸಿದೆ ಎಂದು ಹೇಳಿಕೊಂಡಿದ್ದಾರೆ. ಪೋಸ್ಟ್ ಜೊತೆಗೆ ಎರಡು ಚಿತ್ರಗಳಿವೆ, ಒಂದರಲ್ಲಿ ಚೀನೀ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ತೋರಿಸಲಾಗಿದ್ದರೆ ಮತ್ತೊಂದು ‘ಬೀಟಾವೋಲ್ಟ್’ ಎಂದು ಬರೆದಿರುವ ನಾಣ್ಯದಂತಹ ಉಪಕರಣದಂತೆ ಕಾಣುತ್ತದೆ. ಈ ಪೋಸ್ಟ್ ಗೆ 4.1 ಮಿಲಿಯ ವೀಕ್ಷಣೆಗಳು ದೊರಕಿವೆ, ಅದನ್ನು ಕೆಳಗೆ ನೋಡಬಹುದು –

ಇತರ ಬಳಕೆದಾರರು ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ಈ ಹೇಳಿಕೆಯನ್ನು ತನಿಖೆ ಮಾಡಲು ನಿರ್ಧರಿಸಿತು ಮತ್ತು ಅದು ನಿಜವೆಂದು ಕಂಡುಕೊಂಡಿತು. ಬೀಜಿಂಗ್ ಮೂಲದ ಬೀಟಾವೋಲ್ಟ್ 2024 ರಿಂದ ನಿಕೆಲ್ 63 ಬೀಟಾವೋಲ್ಟಾಯಿಕ್ ತಂತ್ರಜ್ಞಾನದಿಂದ ನಡೆಸಲ್ಪಡುವ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯಾದ BV100 ಅನ್ನು ಅಭಿವೃದ್ಧಿಪಡಿಸಿ ಬೃಹತ್ ಉತ್ಪಾದನೆಯನ್ನು ಪ್ರಾರಂಭಿಸಿದೆ. ದೃಢೀಕೃತ ವರದಿಗಳ ಪ್ರಕಾರ, ಇದು 50 ವರ್ಷಗಳವರೆಗೆ ರೀಚಾರ್ಜಿಂಗ್ ಅಥವಾ ನಿರ್ವಹಣೆ ಅಗತ್ಯವಿಲ್ಲದೆ ಸ್ಥಿರವಾದ, ಕಡಿಮೆ ಶಕ್ತಿಯ ವಿದ್ಯುತ್ ಅನ್ನು ನೀಡಬಲ್ಲದು.

ಹೆಚ್ಚಿನ ಮಾಹಿತಿಗಾಗಿ ನಾವು ಮೊದಲು “ಚೀನಾ ನಾಣ್ಯ ಗಾತ್ರದ ಪರಮಾಣು ಬ್ಯಾಟರಿಯನ್ನು ಬಿಡುಗಡೆ ಮಾಡಿದೆ” ಎಂಬ ಪದಗಳೊಂದಿಗೆ ಅಂತರ್ಜಾಲದ ಹುಡುಕಾಟವನ್ನು ನಡೆಸಿದೆವು. ಹುಡುಕಾಟದ ಫಲಿತಾಂಶಗಳು ಜನವರಿ 17, 2024 ರಂದು ಬ್ಯಾಟರಿ ಟೆಕ್ನಾಲಜಿ ಪ್ರಕಟಿಸಿದ ವರದಿಗೆ ನಮ್ಮನ್ನು ಕರೆದೊಯ್ಯವು, ಅದರಲ್ಲಿ “ಬೀಟಾವೋಲ್ಟ್ ಒಂದು ಚೀನೀ ಕಂಪನಿಯಾಗಿದ್ದು, ಹೊಸ ಪರಮಾಣು ವಿದ್ಯುತ್ ಬ್ಯಾಟರಿಯು ಚಾರ್ಜಿಂಗ್ ಅಥವಾ ನಿರ್ವಹಣೆ ಇಲ್ಲದೆ 50 ವರ್ಷಗಳ ಕಾಲ ಸ್ಥಿರವಾಗಿ ಮತ್ತು ಸ್ವಾಯತ್ತವಾಗಿ ವಿದ್ಯುತ್ ಉತ್ಪಾದಿಸಬಹುದು ಎಂದು ಹೇಳುತ್ತದೆ” ಎನ್ನಲಾಗಿದೆ. “ಬೀಟಾವೋಲ್ಟ್‌ನ ವಿಜ್ಞಾನಿಗಳ ತಂಡವು ಕೇವಲ 10µ ದಪ್ಪವಿರುವ ವಿಶಿಷ್ಟವಾದ ಸಿಂಗಲ್-ಕ್ರಿಸ್ಟಲ್ ಡೈಮಂಡ್ ಸೆಮಿಕಂಡಕ್ಟರ್ ಕನ್ವರ್ಟರ್ ಗಳನ್ನು ಅಭಿವೃದ್ಧಿಪಡಿಸಿದೆ ಮತ್ತು ಎರಡು ಡೈಮಂಡ್ ಸೆಮಿಕಂಡಕ್ಟರ್ ಕನ್ವರ್ಟರ್ ಗಳ ನಡುವೆ 2µ ದಪ್ಪದ ನಿಕೆಲ್-63 ಶೀಟನ್ನು (ವಿಕಿರಣಶೀಲ ಐಸೊಟೋಪ್) ಇರಿಸುವ ಮೂಲಕ, ವಿಕಿರಣಶೀಲ ಮೂಲದ ಡೀಕೇ ಶಕ್ತಿಯು ಸಂಭವಿಸುತ್ತದೆ ಮತ್ತು ಅದು ವಿದ್ಯುತ್ ಪ್ರವಾಹವಾಗಿ ಪರಿವರ್ತನೆಗೊಳ್ಳುತ್ತದೆ, ಈ ಮೂಲಕ ಸ್ವತಂತ್ರ ಘಟಕವನ್ನು ರೂಪಿಸುತ್ತದೆ” ಎಂದು ಕೂಡ ವರದಿಯು ಹೇಳುತ್ತದೆ.

ಕಂಪನಿಯು ಯಾವುದೇ ಬಾಹ್ಯ ವಿಕಿರಣವಿಲ್ಲದೆ ಸಂಪೂರ್ಣ ಸುರಕ್ಷತೆಯ ಬಗ್ಗೆ ಮಾತನಾಡುತ್ತದೆ, ಈ ಮೂಲಕ ಇದು ಪೇಸ್‌ಮೇಕರ್‌ಗಳು, ಕೃತಕ ಹೃದಯಗಳು ಮತ್ತು ಕಾಕ್ಲಿಯರ್ ಇಂಪ್ಲಾಂಟ್‌ಗಳಂತಹ ವೈದ್ಯಕೀಯ ಸಾಧನಗಳಿಗೆ ಸೂಕ್ತವಾಗುವುದು. ಈ ಬ್ಯಾಟರಿಗಳು ಡೀಕೇ ಅವಧಿಗೆ ಒಳಗಾಗುತ್ತವೆ, ಈ ಸಮಯದಲ್ಲಿ ವಿಕಿರಣಶೀಲ ನಿಕೆಲ್ -63 ಐಸೊಟೋಪ್ ವಿಕಿರಣಶೀಲವಲ್ಲದ ತಾಮ್ರ ಐಸೊಟೋಪ್ ಆಗಿ ರೂಪಾಂತರಗೊಳ್ಳುತ್ತದೆ. ಇದು ಪರಿಸರ ಬೆದರಿಕೆಗಳು ಅಥವಾ ಮಾಲಿನ್ಯವನ್ನು ನಿವಾರಿಸುತ್ತದೆ.

ವರದಿಯ ಒಂದು ಭಾಗವನ್ನು ಕೆಳಗೆ ನೋಡಿ. ಅಥವಾ ಇಲ್ಲಿ ಸಂಪೂರ್ಣ ವರದಿ ನೋಡಿ

ಇದರ ನಂತರ, ವರ್ಲ್ಡ್ ನ್ಯೂಕ್ಲಿಯರ್ ನ್ಯೂಸ್‌ನ ಮತ್ತೊಂದು ವರದಿಯು ನಮ್ಮ ಕೈಬಿತ್ತು, ಇದರಲ್ಲಿಯೂ ಹೇಳಿಕೆಯಲ್ಲಿ ತೋರಿಸಿರುವಂಥದ್ದೇ ಚಿತ್ರವನ್ನು ಬಳಸಲಾಗಿದೆ. ಈ ವರದಿಯಲ್ಲಿ “ಕಂಪನಿಯು ಬಿಡುಗಡೆ ಮಾಡಲು ಯೋಜಿಸಿರುವ ಮೊದಲ ಬ್ಯಾಟರಿ BV100 ಆಗಿದೆ, ಇದು ಬೃಹತ್ ಉತ್ಪಾದನೆಯಾಗುವ ವಿಶ್ವದ ಮೊದಲ ಪರಮಾಣು ಬ್ಯಾಟರಿಯಾಗಲಿದೆ ಎಂದು ಅದು ಹೇಳುತ್ತದೆ” ಎಂದು ಉಲ್ಲೇಖಿಸಲಾಗಿದೆ. ಗಾತ್ರವನ್ನು ನೋಡುವುದಾದರೆ, ಬ್ಯಾಟರಿಯ ಅಳತೆ “15mm x 15mm ಮತ್ತು 5 mm ದಪ್ಪವನ್ನು ಹೊಂದಿದೆ… ಇದು 3V ವೋಲ್ಟೇಜ್‌ನ 100 ಮೈಕ್ರೋವ್ಯಾಟ್‌ಗಳನ್ನು ಉತ್ಪಾದಿಸಬಹುದು”. ಒಂದು ಭಾಗವನ್ನು ಕೆಳಗೆ ನೋಡಿ-

ನಂತರ, ಬೃಹತ್ ಉತ್ಪಾದನೆಗಾಗಿರುವ ಪ್ರಸ್ತುತ ಯೋಜನೆಗಳು ಮತ್ತು ಅದರ ಪ್ರಸ್ತುತ ಸ್ಥಿತಿಯ ಬಗ್ಗೆ ನಾವು ಇನ್ನಷ್ಟು ಮಾಹಿತಿಗಾಗಿ ಹುಡುಕಾಟ ನಡೆಸಿದೆವು. ಸ್ಲಾಶ್‌ಗೇರ್‌ನ ಇತ್ತೀಚಿನ ಲೇಖನದಲ್ಲಿಯೂ ಕೂಡ “ನಾಣ್ಯ ಗಾತ್ರದ BV100 ಎಂಬ ಹೆಸರಿನ ಇದು 3 ವೋಲ್ಟ್‌ಗಳ ಮಟ್ಟಿಗೆ 100 ಮೈಕ್ರೋವ್ಯಾಟ್‌ಗಳನ್ನು ಉತ್ಪಾದಿಸಲು ನಿಕೆಲ್-63ನ್ನು ವಿದ್ಯುತ್ ಮೂಲವಾಗಿ ಬಳಸುತ್ತದೆ” ಎಂದು ದೃಢಪಡಿಸಲಾಗಿದೆ. ಆದಾಗ್ಯೂ, 2025ರಲ್ಲಿ ಬೃಹತ್ ಉತ್ಪಾದನೆಗಾಗಿ 1 ವ್ಯಾಟ್ ಆವೃತ್ತಿಗೆ ಸಂಬಂಧಿಸಿದಂತೆ ವರದಿ ಹೇಳುವುದೇನೆಂದರೆ, ಬೀಟಾವೋಲ್ಟ್ “2025ರಲ್ಲಿ 1-ವ್ಯಾಟ್ ಆವೃತ್ತಿಯನ್ನು ಅನಾವರಣಗೊಳಿಸುವ ಯೋಜನೆಯನ್ನು ಘೋಷಿಸಿತು, ಆದರೆ ಅದು ಸಂಭವಿಸಿದೆಯೇ ಎಂಬುದು ಸ್ಪಷ್ಟವಾಗಿಲ್ಲ”.

ಏಪ್ರಿಲ್ 2025ರಲ್ಲಿ ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್‌ನ ಇತರ ವರದಿಗಳು ಸಹ ಈ ನಾಣ್ಯ ಗಾತ್ರದ ಪರಮಾಣು ಬ್ಯಾಟರಿ ಅಸ್ತಿತ್ವದಲ್ಲಿದೆ ಎಂದು ದೃಢಪಡಿಸಿದವು.

ಇದರ ಆರಂಭ 2024ರಲ್ಲಿ ಆದದ್ದಾದರೂ, ಹೇಳಿಕೆಯಲ್ಲಿರುವ ಮಾಹಿತಿಯು ನಿಜ.

***********************************************************************************

ಇದನ್ನೂ ಓದಿ:

ಇಂಡೋನೇಷ್ಯಾದ ಮಾಜಿ ಅಧ್ಯಕ್ಷ ಜೋಕೊ ವಿಡೋಡೊ ಆಂಧ್ರಪ್ರದೇಶದ ತಿರುಮಲ ದೇವಸ್ಥಾನಕ್ಕೆ ಭೇಟಿ ನೀಡಿದರೇ? ಸತ್ಯ ಪರಿಶೀಲನೆ

ತಮ್ಮನ್ನು ಟೀಕಿಸಿದ್ದಕ್ಕಾಗಿ ಒಲಿಂಪಿಕ್ ಕ್ರೀಡಾಪಟುಗಳ ಪಾಸ್‌ಪೋರ್ಟ್‌ಗಳನ್ನು ಟ್ರಂಪ್ ರವರು ರದ್ದುಗೊಳಿಸುವುದಾಗಿ ಕ್ಯಾರೋಲಿನ್ ಲೆವಿಟ್ ಹೇಳಿದ್ದಾರೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published.