Don't Miss

ರಾಣಿ ಮುಖರ್ಜಿಯವರನ್ನು ಮದುವೆಯ ನಂತರದ ತೂಕ ಹೆಚ್ಚಳಕ್ಕಾಗಿ ಅಪಹಾಸ್ಯ ಮಾಡಿದ್ದಕ್ಕಾಗಿ ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ಆಕೆ ವಾಗ್ದಾಳಿ ನಡೆಸಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim: ಮದುವೆಯ ನಂತರದ ತೂಕ ಹೆಚ್ಚಳದ ಕುರಿತಾಗಿ ತಮ್ಮನ್ನು ಅಣಕಿಸಿದ್ದಕ್ಕಾಗಿ ರಾಣಿ ಮುಖರ್ಜಿಯವರು ರಾಜ್‌ದೀಪ್ ಸರ್ದೇಸಾಯಿ ವಿರುದ್ಧ ವಾಗ್ದಾಳಿ ನಡೆಸಿದರು.

ಕಡೆನುಡಿ/Conclusion:  ಈ ಹೇಳಿಕೆಯಲ್ಲಿ ತಪ್ಪು ನಿರೂಪಣೆ ಮಾಡಲಾಗಿದೆ. ಈ ಕ್ಲಿಪ್ ಇಂಡಿಯಾ ಟುಡೇ ಕಾನ್ಕ್ಲೇವ್ 2025 ರದ್ದು, ಅದರಲ್ಲಿ ರಾಜ್‌ದೀಪ್ ಸರ್ದೇಸಾಯಿ ಮತ್ತು ರಾಣಿ ಮುಖರ್ಜಿಯವರು ಮರ್ದಾನಿ (2014) ಚಿತ್ರದ ದೃಶ್ಯವನ್ನು ಮರುಅಭಿನಯಿಸುತ್ತಿದ್ದರು.

ರೇಟಿಂಗ್/Rating: ತಪ್ಪು ನಿರೂಪಣೆ —

******************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಪತ್ರಕರ್ತ ರಾಜ್‌ದೀಪ್ ಸರ್ದೇಸಾಯಿ ಮತ್ತು ನಟಿ ರಾಣಿ ಮುಖರ್ಜಿಯವರನ್ನೊಳಗೊಂಡ ವೈರಲ್ ಕ್ಲಿಪ್ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹರಿದಾಡುತ್ತಿದೆ. ದೃಢೀಕೃತ X ಬಳಕೆದಾರ ‘MithilaWaala’ ಈ ಕ್ಲಿಪ್ ಅನ್ನು ಹಂಚಿಕೊಳ್ಳುತ್ತಾ, ಸರ್ದೇಸಾಯಿ ಬಾಲಿವುಡ್ ನಟಿ ರಾಣಿ ಮುಖರ್ಜಿಯವರನ್ನು “ಮದುವೆಯಾದ ನಂತರ ತುಂಬಾ ದಪ್ಪಗಿದ್ದೀರಾ” ಎಂದು ಸಂವೇದನಾರಹಿತವಾಗಿ ಕೇಳಿದ್ದಾರೆ ಎಂಬ ಹೇಳಿಕೆ ಹಂಚಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಮುಖರ್ಜಿಯವರು “ನಾಯಿಗೆ ಬೈದಂತೆ” ಕಟುವಾಗಿ ಗದರಿಸಿದ್ದಾರೆ ಅಥವಾ ಖಂಡಿಸಿದ್ದಾರೆ ಎಂದೂ ಪೋಸ್ಟ್ ಹೇಳುತ್ತದೆ, ಆದರೆ ಆ ಭಾಗವನ್ನು ತೆಗೆದುಹಾಕುವಂತೆ ವೀಡಿಯೊವನ್ನು ತಕ್ಷಣವೇ ಕತ್ತರಿಸಲಾಗಿದೆ. ಪೋಸ್ಟ್ ಅನ್ನು ಕೆಳಗೆ ನೋಡಿ:

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

 ಸತ್ಯ ಪರಿಶೀಲನೆ

ಡಿಜಿಟೈ ಇಂಡಿಯಾ ತಂಡವು ಈ ಹೇಳಿಕೆಯ ವಾಸ್ತವ ಪರಿಶೀಲನೆ ಮಾಡಲು ನಿರ್ಧರಿಸಿತು ಮತ್ತು ಅದು ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಪೋಸ್ಟ್ ನಲ್ಲಿ ಚಲನಚಿತ್ರದ ಮರು-ನಟನೆಯನ್ನು ನಿಜವಾದ ವಾಗ್ವಾದ ಎಂದು ತಪ್ಪಾಗಿ ಪ್ರತಿನಿಧಿಸಲಾಗಿದೆ. ವೈಯಕ್ತಿಕ ತೂಕದ ಕುರಿತಾದ ಟಿಪ್ಪಣಿ ಅಥವಾ ವೀಡಿಯೊ ಅಳಿಸುವಿಕೆಯನ್ನು ಬೆಂಬಲಿಸುವ ಯಾವುದೇ ಪುರಾವೆಗಳು ಇಲ್ಲ; ಇದು ಪ್ರಚಾರ ಕಾರ್ಯಕ್ರಮದಿಂದ ಪಡೆದ ಒಂದು ಕ್ಲಿಪ್ ಅಷ್ಟೇ.

ಮೂಲ ಕ್ಲಿಪ್ ಅನ್ನು ಹುಡುಕಲು ನಾವು ಮೊದಲು ವೀಡಿಯೊದ ವಿವಿಧ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದೆವು. ಇಂಡಿಯಾ ಟುಡೇ ಯೂಟ್ಯೂಬ್ ವಾಹಿನಿಯಲ್ಲಿ ಲಭ್ಯವಿರುವ 48 ನಿಮಿಷಗಳ ಸಂಪೂರ್ಣ ಸಂಚಿಕೆಯಲ್ಲಿ, ಸರ್ದೇಸಾಯಿಯವರು ರಾಣಿ ಮುಖರ್ಜಿಯವರಿಗೆ “ಶ್ರೀಮತಿ ಚಟರ್ಜಿ ವರ್ಸಸ್ ನಾರ್ವೆ” ಮತ್ತು “ಮರ್ದಾನಿ” ಫ್ರಾಂಚೈಸ್ ಹಿಂದಿ ಚಲನಚಿತ್ರಗಳಿಗಾಗಿ ದೊರಕಿದ ರಾಷ್ಟ್ರೀಯ ಪ್ರಶಸ್ತಿ ಪ್ರಚಾರ ಚರ್ಚೆಯನ್ನು ನಿರ್ವಹಿಸುವುದನ್ನು ಕಾಣಬಹುದು. ಸಂಪೂರ್ಣ ದೃಶ್ಯಾವಳಿಗಳನ್ನು ಕೆಳಗೆ ವೀಕ್ಷಿಸಿ –

ರಾಣಿ ಮುಖರ್ಜಿಯವರೊಂದಿಗೆ, ಮತ್ತೊಬ್ಬ ಅತಿಥಿ IPS ಅಧಿಕಾರಿ ಮೀರನ್ ಚಡ್ಡಾ ಬೋರ್ವಾಂಕರ್ ಕೂಡ ಉಪಸ್ಥಿತರಿದ್ದರು. ನಂತರ ಬೋರ್ವಾಂಕರ್ ಮರ್ದಾನಿ (2014) ಚಿತ್ರದ ಒಂದು ಪ್ರಸಿದ್ಧ ದೃಶ್ಯವನ್ನು 31:15 ರಿಂದ ವಿವರಿಸುತ್ತಾರೆ ಮತ್ತು ಮುಖರ್ಜಿಯವರು ಅದನ್ನು ಮರು-ನಟಿಸಬೇಕು ಎಂದು ಕೇಳಿಕೊಳ್ಳುತ್ತರೆ. ಸರಿಸುಮಾರು 32:25–33:04 ಕ್ಕೆ, ಸರ್ದೇಸಾಯಿ ತಮಾಷೆಯಾಗಿ ಮುಖರ್ಜಿಯವರನ್ನು ಮರ್ದಾನಿ (2014)ಯ “ಕಟ್ಟುನಿಟ್ಟಾದ ಪೊಲೀಸ್” ವ್ಯಕ್ತಿತ್ವವನ್ನು ಪ್ರದರ್ಶಿಸಲು ಕೇಳುತ್ತಾರೆ.

ಇದು ಮರ್ದಾನಿ ಚಿತ್ರದ ಕ್ಷಣವೊಂದನ್ನು ಪ್ರತಿಬಿಂಬಿಸುತ್ತದೆ, ಅದರಲ್ಲಿ ಖಳನಾಯಕನು ಮದುವೆಯ ನಂತರ ತೂಕ ಹೆಚ್ಚಾಗಿರುವ ಬಗ್ಗೆ ಲೈಂಗಿಕ ಹೇಳಿಕೆಯನ್ನು ಮಾಡಿದಾಗ ಆಕೆಯ ಪಾತ್ರವು ಖಳನಾಯಕನನ್ನು ಖಂಡಿಸುತ್ತದೆ. ಮುಖರ್ಜಿ ನಂತರ ನಗುತ್ತಾ, ಮನೆಯಲ್ಲಿ “ಬಂಗಾಳಿ ಮಹಿಳೆಯರು ಅಪಾಯಕಾರಿ” ಎಂದು ತಮಾಷೆ ಮಾಡುತ್ತಾರೆ, ನಂತರ ಪ್ರೇಕ್ಷಕರೂ ಹರ್ಷೋದ್ಗಾರವೆತ್ತುತ್ತಾರೆ.

ಮೂಲ ವೀಡಿಯೊದ 46:45 ನಿಮಿಷಗಳ ಸಮಯಮುದ್ರೆಯಲ್ಲಿ, “ರಾಜ್‌ದೀಪ್ ಅವರನ್ನು ಯಾರೂ ಹಾಗೆ ಬೈಯುವುದನ್ನು ನೋಡಿಲ್ಲ ಎಂದನಿಸುತ್ತದೆ” ಎಂದು ಪುನರಾವರ್ತನೆಯ ಬಗ್ಗೆ ನಿರೂಪಕರು ಸೂಚಿಸುತ್ತಾರೆ. ಮತ್ತು ಇಡೀ ವೀಡಿಯೊದಲ್ಲಿ ತೂಕ ಹೆಚ್ಚಾಗಿರುವ ಬಗ್ಗೆ ಯಾವುದೇ ಮಾತುಕತೆ ಇರಲಿಲ್ಲ. ಪೂರ್ಣ ಅವಧಿಯು ಸಂತಸಭರಿತ ಸಂವಾದವನ್ನು ತೋರಿಸುತ್ತದೆ.

ಹೀಗಾಗಿ, ಹೇಳಿಕೆ ತಪ್ಪು ನಿರೂಪಣೆಯಾಗಿದೆ.

******************************************************
ಇದನ್ನೂ ಓದಿ

ಬೋಧ್ ಗಯಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ರಾಷ್ಟ್ರಗೀತೆಗೆ ಅಗೌರವ ತೋರಿದರೇ? ಸತ್ಯ ಪರಿಶೀಲನೆ

ಪಾರದರ್ಶಕತೆಯ ಕೊರತೆಯಿಂದಾಗಿ ಪ್ಯಾಟ್ ಕಮ್ಮಿನ್ಸ್ PM CARES ನಿಧಿಯಿಂದ ತನ್ನ $50,000 ದೇಣಿಗೆಯನ್ನು UNICEF ಗೆ ಮರುನಿರ್ದೇಶಿಸಿದ್ದಾರೆಯೇ? ಸತ್ಯ ಪರಿಶೀಲನೆ

 

Leave a Reply

Your email address will not be published. Required fields are marked *

*