Don't Miss

ಬೋಧ್ ಗಯಾ ಕಾರ್ಯಕ್ರಮದಲ್ಲಿ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ರಾಷ್ಟ್ರಗೀತೆಗೆ ಅಗೌರವ ತೋರಿದರೇ? ಸತ್ಯ ಪರಿಶೀಲನೆ

ಹೇಳಿಕೆ/Claim:  ಬಿಹಾರದ ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದೆ ಬಾಂಸುರಿ ಸ್ವರಾಜ್ ರವರು ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ.

ಕಡೆನುಡಿ/Conclusion: ತಪ್ಪು ನಿರೂಪಣೆ. ಸುಳ್ಳು ನಿರೂಪಣೆ ತೋರಿಸಲು ದೃಶ್ಯಗಳನ್ನು ಕತ್ತರಿಸಲಾಗಿದೆ. ಗೀತೆಯನ್ನು ಸಂಪೂರ್ಣವಾಗಿ ಹೊಂದಾಣಿಕೆಯಲ್ಲಿ ಮತ್ತು ಪಲ್ಲವಿಯೊಂದಿಗೆ ಹಾಡಲಾಗುವುದನ್ನು ಖಚಿತಪಡಿಸಿಕೊಳ್ಳಲು ಸ್ವರಾಜ್ ರವರು ಮಧ್ಯಪ್ರವೇಶಿಸಿದ್ದರೆಂದು ಪೂರ್ಣ ಸನ್ನಿವೇಶವನ್ನು ನೋಡಿದರೆ ತಿಳಿದುಬರುತ್ತದೆ.

ರೇಟಿಂಗ್/Rating: ತಪ್ಪು ನಿರೂಪಣೆ. —

*********************************************************************

ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.

ಅಥವಾ ಕೆಳಗಿನ ಲೇಖನವನ್ನು ಓದಿ.
******************************************************

ಬಿಜೆಪಿ ನಾಯಕಿ, ಸಂಸದೆ ಬಾಂಸುರಿ ಸ್ವರಾಜ್ ರವರು ಭಾರತೀಯ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ ಎಂದು ಆರೋಪಿಸಿ ಇತ್ತೀಚೆಗೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಒಂದು ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಬೋಧ್ ಗಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ವರಾಜ್ ರವರು ವೇದಿಕೆಯಲ್ಲಿ ಇರುವುದನ್ನು ತೋರಿಸುವ 31 ಕ್ಷಣಗಳ ವೀಡಿಯೊದೊಂದಿಗೆ X ಬಳಕೆದಾರ ‘NCMIndiaa’ ಇಂತಹ ಒಂದು ಹೇಳಿಕೆಯನ್ನು ಹಂಚಿಕೊಂಡಿದ್ದಾರೆ.

ಈ ದೃಶ್ಯಾವಳಿಯಲ್ಲಿ, ಆಕೆ ಮಧ್ಯದಲ್ಲಿ ಮುಂದೆ ಬಂದು, ಸಂಕ್ಷಿಪ್ತವಾಗಿ ಮಾತನಾಡಿ ಹಿಂದೆ ಸರಿಯುವಂತೆ ಕಾಣುತ್ತದೆ, ಇದು 1971 ರ ರಾಷ್ಟ್ರೀಯ ಗೌರವಕ್ಕೆ ಅವಮಾನಗಳ ತಡೆಗಟ್ಟುವಿಕೆ ಕಾಯ್ದೆಯ ಕಲಂ 3 ರ ಅಡಿಯಲ್ಲಿ ಅವಮಾನದ ಆರೋಪಗಳನ್ನು ಪ್ರಚೋದಿಸಿದೆ. ಸಾಮಾಜಿಕ ಮಾಧ್ಯಮದ ಪೋಸ್ಟ್ ನಲ್ಲಿ ಇದನ್ನು “ಶಿಕ್ಷಾರ್ಹ” ಎಂಬ ಗುರುತುಪಟ್ಟಿ ನೀಡಲಾಗಿದೆ ಮತ್ತು 10,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ, ಅದನ್ನು ಇಲ್ಲಿ ನೋಡಬಹುದು.

 

ಅದೇ ರೀತಿ, ದೃಢೀಕೃತ X ಬಳಕೆದಾರ ‘ssrajputINC’ ಈ ಮುಂದಿನ ಶೀರ್ಷಿಕೆಯೊಂದಿಗೆ ಅದೇ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ: “राष्ट्रगान की बेइज्जती करती हुई भाजपा सांसद बांसुरी स्वराज! इन्हें देशद्रोह में जेल भेजिये मोदी जी!वरना माना जायेंगे आप देश में दो संविधान चलाते है एक आम इंसान के लिये दूसरा भाजपा वालो के लिये?”

ಕನ್ನಡದ ಅನುವಾದ ಹೀಗಿದೆ: “ರಾಷ್ಟಗೀತೆಗೆ ಅವಮಾನ ಮಾಡುತ್ತಿರುವ ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್! ಈಕೆಯನ್ನು ದೇಶದ್ರೋಹಕ್ಕಾಗಿ ಜೈಲಿಗೆ ಕಳುಹಿಸಿ, ಮೋದಿ ಜೀ! ಇಲ್ಲದಿದ್ದರೆ, ನೀವು ದೇಶದಲ್ಲಿ ಎರಡು ಸಂವಿಧಾನಗಳನ್ನು ನಡೆಸುತ್ತಿದ್ದೀರಿ ಎಂದು ಭಾವಿಸಲಾಗುತ್ತದೆ, ಒಂದು ಸಾಮಾನ್ಯ ಜನರಿಗೆ, ಇನ್ನೊಂದು ಬಿಜೆಪಿ ಜನರಿಗೆ?” ಪೋಸ್ಟ್ ಅನ್ನು ಕೆಳಗೆ ನೋಡಿ:

 

ಇತರ ಬಳಕೆದಾರರು ಸಹ ಇದೇ ರೀತಿಯ ಹೇಳಿಕೆಗಳನ್ನು ಹಂಚಿಕೊಂಡಿದ್ದಾರೆ, ಅದನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

FACT CHECK

ಡಿಜಿಟೈ ಇಂಡಿಯಾ ಈ ಹೇಳಿಕೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ನಿರ್ಧರಿಸಿತು ಮತ್ತು ಹೇಳಿಕೆ ದಾರಿತಪ್ಪಿಸುವಂತಿದೆ ಎಂದು ಕಂಡುಕೊಂಡಿತು. ಹಂಚಿಕೊಳ್ಳಲಾಗಿರುವ ವೀಡಿಯೊದಲ್ಲಿ ಆಯ್ದ ಭಾಗಗಳನ್ನು ಮಾತ್ರ ಸೇರಿಸಿ ಸಂದರ್ಭಬಾಹಿರವಾಗಿ ಬಳಸಲಾಗಿದೆ. ಪೂರ್ಣ ಸನ್ನಿವೇಶವನ್ನು ಗಮನಿಸಿದರೆ ಸ್ವರಾಜ್ ಅವರು ಗೀತೆಯನ್ನು ಸರಿಯಾಗಿ ಹೊಂದಾಣಿಕೆಯೊಂದಿಗೆ ಮತ್ತು ಒಟ್ಟಾಗಿ ಸಂಪೂರ್ಣವಾಗಿ ಮತ್ತೊಮ್ಮೆ ಹಾಡಲಾಗಿದೆಯೆಂದು ಖಚಿತಪಡಿಸಿಕೊಳ್ಳಲು ಮಧ್ಯಪ್ರವೇಶಿಸಿದರು ಎಂದು ತಿಳಿದುಬರುತ್ತದೆ.

ಸತ್ಯವನ್ನು ಕಂಡುಹಿಡಿಯಲು, ನಾವು ಮೊದಲು “ಬಿಜೆಪಿ ಸಂಸದೆ ಬಾಂಸುರಿ ಸ್ವರಾಜ್ ಬೋಧ್ ಗಯಾ” ಎಂಬ ಪದಗಳೊಂದಿಗೆ ಕೀವರ್ಡ್ ಹುಡುಕಾಟವನ್ನು ನಡೆಸಿ, ಈ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿಯನ್ನು ಖಚಿತಪಡಿಸುವ ಪ್ರಯತ್ನ ನಡೆಸಿದೆವು. ಸೆಪ್ಟೆಂಬರ್ 13, 2025 ರಂದು ಪಾಟ್ನಾ ಪ್ರೆಸ್ ಪ್ರಕಟಿಸಿದ ವರದಿಯಲ್ಲಿ “ಬಾಂಸುರಿಯವರು ಜಾಮುಯಿ ಶಾಸಕಿ ಮತ್ತು ಮಾಜಿ ಶೂಟರ್ ಶ್ರೇಯಸಿ ಸಿಂಗ್ ರವರೊಂದಿಗೆ ಬೋಧ್ ಗಯಾದಲ್ಲಿ ಬಿಜೆಪಿ ಯುವ ಮೋರ್ಚಾದ ಯುವ ಶಂಖನಾದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ” ಎಂದು ಉಲ್ಲೇಖಿಸಲಾಗಿದೆ. ವರದಿಯ ತುಣುಕನ್ನು ಕೆಳಗೆ ನೋಡಿ:

ಕಾಮೆಂಟ್‌ಗಳನ್ನು ಪರಿಶೀಲಿಸಿ, ಅಧಿಕೃತ ಪ್ರತಿಕ್ರಿಯೆಗಳನ್ನು ಹುಡುಕಿದಾಗ ನಮಗೆ ಬಾನ್ಸುರಿ ಸ್ವರಾಜ್ ಅವರ ಅಧಿಕೃತ X ಪೋಸ್ಟ್ ದೊರಕಿತು. ಸೆಪ್ಟೆಂಬರ್ 17, 2025 ರಂದು ಆಕೆ 1:17 ಸೆಕೆಂಡುಗಳ ಸಂಪೂರ್ಣ ವೀಡಿಯೊ ಮೂಲಕ ಸ್ಪಷ್ಟೀಕರಣವನ್ನು ಬಿಡುಗಡೆ ಮಾಡಿದರು. ಪೋಸ್ಟ್‌ ನ ಶೀರ್ಷಿಕೆ ಹೀಗಿತ್ತು: सोशल मीडिया पर अधूरा वीडियो फैलाया जा रहा है। सच्चाई ये है कि मैंने आग्रह किया था कि राष्ट्रगान पूरा और सही ढंग से गाया जाए। यह पूरा वीडियो है जहाँ हमने गर्व और सम्मान के साथ पूरा राष्ट्रगान गाया।”

ಕನ್ನಡಾನುವಾದ ಹೀಗಿದೆ: “ಸಾಮಾಜಿಕ ಮಾಧ್ಯಮದಲ್ಲಿ ಅಪೂರ್ಣ ವೀಡಿಯೊವನ್ನು ಪ್ರಸಾರ ಮಾಡಲಾಗುತ್ತಿದೆ. ಸತ್ಯವೆಂದರೆ ನಾನು ರಾಷ್ಟ್ರಗೀತೆಯನ್ನು ಪೂರ್ಣವಾಗಿ ಮತ್ತು ಸರಿಯಾಗಿ ಹಾಡಬೇಕೆಂದು ಕೋರಿದ್ದೆ. ನಾವು ಪೂರ್ಣ ರಾಷ್ಟ್ರಗೀತೆಯನ್ನು ಹೆಮ್ಮೆ ಮತ್ತು ಗೌರವದಿಂದ ಹಾಡಿದ ಸಂಪೂರ್ಣ ವೀಡಿಯೊ ಇಲ್ಲಿದೆ.” ಅವರ ಅಧಿಕೃತ ಪೋಸ್ಟ್ ಅನ್ನು ಇಲ್ಲಿ ನೋಡಿ.

 

ಸ್ವರಾಜ್ ಸ್ವತಃ ಪೋಸ್ಟ್ ಮಾಡಿದ ಪೂರ್ಣ ವೀಡಿಯೊದಲ್ಲಿ, ಕೆಲವು ಭಾಗವಹಿಸುವವರು ನಿಲ್ಲುತ್ತಿಲ್ಲ ಅಥವಾ ಕೋರಸ್‌ನಲ್ಲಿ ಹಾಡುತ್ತಿಲ್ಲ ಎಂದು ಗಮನಿಸಿದ ನಂತರ, “ದಯವಿಟ್ಟು ರಾಷ್ಟ್ರಗೀತೆಯನ್ನು ಗೌರವದೊಂದಿಗೆ ಸಂಪೂರ್ಣವಾಗಿ ಮತ್ತು ಸರಿಯಾಗಿ ಹಾಡಿ” ಎಂದು ಅವರು ಹೇಳುವುದನ್ನು ತೋರಿಸಲಾಗಿದೆ. ಇದು ವೀಡಿಯೊ ವಿಶ್ಲೇಷಣೆಯ ಚೌಕಟ್ಟುಗಳಿಗೆ ಹೊಂದಿಕೆಯಾಗುತ್ತದೆ, ಅಲ್ಲಿ ಅವರು ಮತ್ತೆ ಪ್ರಾರಂಭಿಸುವ ಮೊದಲು ಗಮನಕ್ಕಾಗಿ ಸನ್ನೆ ಮಾಡುತ್ತಾರೆ.

ಸ್ವರಾಜ್ ರವರು ರಾಷ್ಟ್ರಗೀತೆಯನ್ನು ಗೌರವಿಸುತ್ತಿಲ್ಲ ಎಂದು ತೋರಿಸುವ ಉದ್ದೇಶದಿಂದ ಸ್ವರಾಜ್ ರವರು ಮೈಕ್ರೊಫೋನ್ ನ ಹತ್ತಿರ ಬರುತ್ತಿದ್ದಂತೆಯೇ ವೀಡಿಯೊ ಕ್ಲಿಪ್ ಥಟ್ಟನೆ ಕೊನೆಗೊಳ್ಳುತ್ತದೆ. ಆದರೆ ಪೂರ್ಣ ಕ್ಲಿಪ್ ನಲ್ಲಿ ಸ್ವರಾಜ್ ರವರು ಒಟ್ಟಾಗಿ ಮತ್ತು ಹೊಂದಾಣಿಕೆಯಿಂದ ಹಾಡದೆ ಇರುವವರನ್ನು ಗಮನಿಸುತ್ತಿದ್ದರು ಎಂದು ತಿಳಿದುಬರುತ್ತದೆ. ಆಕೆ ಮಾತಾಡಿದ ನಂತರ, ಗುಂಪು ಒಟ್ಟಾಗಿ ರಾಷ್ಟ್ರಗೀತೆಯನ್ನು ಹಾಡುವುದನ್ನು ಪುನರಾರಂಭಿಸಿ ಅದನ್ನು ಪೂರ್ಣಗೊಳಿಸುವುದನ್ನು ಕಾಣಬಹುದು.

ಆದ್ದರಿಂದ ಹೇಳಿಕೆಯನ್ನು ತಪ್ಪು ನಿರೂಪಿಸುವ ಉದ್ದೇಶದಿಂದ ನೀಡಲಾಗಿದೆ.

.


ಇದನ್ನೂ ಓದಿ:

ಭಾರತದ ರಾಷ್ಟ್ರಗೀತೆಯನ್ನು ಕೇಳಿದ ನಂತರ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡೆಯುವುದನ್ನು ನಿಲ್ಲಿಸಿದ್ದರೇ? ಸತ್ಯ ಪರಿಶೀಲನೆ

ಟ್ರಂಪ್ ರವರ ಆರೋಗ್ಯ ಗಂಭೀರವಾಗಿದೆಯೇ, ಮತ್ತು ಪ್ರಸ್ತುತ ಕೋಮಾದಲ್ಲಿದ್ದಾರೆಯೇ? ಸತ್ಯ ಪರಿಶೀಲನೆ

Leave a Reply

Your email address will not be published. Required fields are marked *

*