Don't Miss

BUSINESS

ಈ ದೀಪಾವಳಿಗೆ ಚೀನಾದ ಪಟಾಕಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕೆಂದು ಗೃಹ ಸಚಿವಾಲಯವು ಜನರಿಗೆ ಹೇಳಿದೆಯೇ? ಸತ್ಯ ಪರಿಶೀಲನೆ

ಚೀನಾದಲ್ಲಿ ತಯಾರಾದ ಪಟಾಕಿಗಳನ್ನು ಜನರು ಖರೀದಿಸಬೇಡಿ ಎಂಬ ಸಂದೇಶವು ದೀಪಾವಳಿಗೂ ಮುನ್ನ ವಾಟ್ಸಾಪ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ. ಅದರ ಪ್ರಕಾರ ಚೀನಾದ ಪಟಾಕಿಗಳು ಕಾರ್ಬನ್ ಮಾನಾಕ್ಸೈಡ್‌ಗಿಂತ ಹೆಚ್ಚು ವಿಷಕಾರಿ ಹಾಗೂ ಅದು ಕ್ಯಾನ್ಸರ್‌ಗೆ ಕಾರಣವಾಗಬಹುದು. ಸಂದೇಶದ ಇನ್ನೊಂದು ಭಾಗದಲ್ಲಿ ವಿಶೇಷ ಚೀನೀ ಅಲಂಕಾರಿಕ ದೀಪಗಳು ಪಾದರಸವನ್ನು ಹೊಂದಿರುವುದರಿಂದ ಅವು ಕುರುಡುತನವನ್ನು ಉಂಟುಮಾಡಬಹುದು ಎಂದು ಹೇಳಲಾಗಿದೆ. ಇದು ಹಿರಿಯ ತನಿಖಾ ಅಧಿಕಾರಿಗಳು ಜಾರಿಗೊಳಿಸಿದ, ಗೃಹ ಸಚಿವಾಲಯವು ಹಂಚಿಕೊಂಡಿರುವ ಸಲಹೆ ಎಂದು ಈ ಸಂದೇಶವು ಹೇಳಿಕೊಳ್ಳುತ್ತದೆ. ಪಾಕಿಸ್ತಾನವು ಭಾರತದ ಮೇಲೆ ನೇರ ದಾಳಿ ಮಾಡಲು ಸಾಧ್ಯವಿರದ ಕಾರಣ, ಭಾರತವನ್ನು ...

Read More »

ನಂದಿನಿ ತುಪ್ಪದ ಪೂರೈಕೆಗೆ ಕೆಎಂಎಫ್ ನೀಡಿದ ಬೆಲೆ ಹೇಳಿಕೆಯನ್ನು ಟಿಟಿಡಿ 50 ವರ್ಷಗಳ ನಂತರ ತಿರಸ್ಕರಿಸಿತೇ? ಸತ್ಯ ಪರಿಶೀಲನೆ

ಸಾಂಪ್ರದಾಯಿಕ ತಿರುಪತಿ ಲಡ್ಡುಗಳ ತಯಾರಿಕೆಗಾಗಿ ನಂದಿನಿ ತುಪ್ಪದ ಪೂರೈಕೆಗೆ ಸಂಬಂಧಿತ ಬೆಲೆ ಪ್ರಸ್ತಾವನೆಯನ್ನು ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರಸ್ಕರಿಸಿತು ಎಂದು ಕರ್ನಾಟಕ ಹಾಲು ಮಹಾಮಂಡಳಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವಾರು ಹೇಳಿಕೆಗಳು ಕಾಣಿಸಿಕೊಂಡಿವೆ. ಈ ಸುದ್ದಿ ವೈರಲ್ ಆಗಿದ್ದು, ಮೇ 2023ರ ಚುನಾವಣೆ ವೇಳೆ ರಾಜ್ಯದಲ್ಲಿ ಅಮುಲ್ ಪ್ರವೇಶವನ್ನು ಎತ್ತಿ ಹಿಡಿದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರವು ಕೆಎಂಎಫ್ ಮತ್ತು ಅದರ ನಂದಿನಿ ತುಪ್ಪದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸುವ ಹಲವು ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿವೆ. ಟ್ವಿಟರ್‌ನಲ್ಲಿನ ಸಂದೇಶಗಳನ್ನು ...

Read More »