ಹೇಳಿಕೆ/Claim:ವೀಡಿಯೊದಲ್ಲಿ X ಸಾಮಾಜಿಕ ವೇದಿಕೆಯನ್ನು ಮುಚ್ಚಬೇಕು ಎಂದು ಹ್ಯಾರಿಸ್ ಹೇಳಿದರು.
ಕಡೆನುಡಿ/Conclusion:ತಪ್ಪು ನಿರೂಪಣೆ. ಹ್ಯಾರಿಸ್ X ಅನ್ನು ಮುಚ್ಚಲು ಬಯಸುತ್ತಿದ್ದಾರೆ ಎಂದು ತೋರಿಸಲು ಟ್ರಂಪ್ ಅವರ ಟ್ವಿಟರ್ ಖಾತೆಯ ರದ್ದತಿಯ ಬಗೆಗಿನ ಹಳೆಯ ವೀಡಿಯೊ ಸಂದರ್ಶನವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ರೇಟಿಂಗ್/Rating: ತಪ್ಪು ನಿರೂಪಣೆ–
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
************************************************************************
ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ರವರು X ಮಾಲೀಕ ಎಲಾನ್ ಮಸ್ಕ್ ಅವರ ಬಗ್ಗೆ X ಅನ್ನು ಮುಚ್ಚಬೇಕು ಎಂದು ಹೇಳಿದರೆನ್ನುವ ವೀಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.
BREAKING VIDEO: Kamala Harris Announces Plan To Silence Free Speech On Elon Musk’s X—
“He has lost his privileges & it should be taken down.” pic.twitter.com/rsUDUvDzkw
— Alex Jones (@RealAlexJones) September 4, 2024
Oh boy… “he has lost his privileges” #cndpoli #Trump2024 pic.twitter.com/n6eggHubkg
— Krystle Caputo (@krystle_caputo) August 31, 2024
“ಆತ ತಮ್ಮ ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ ಮತ್ತು ಅದನ್ನು ತೆಗೆದುಹಾಕಬೇಕು. ಇದರ ಮುಖ್ಯ ಅಂಶವೆಂದರೆ ಇಲ್ಲಿ ಫೇಸ್‌ಬುಕ್‌ಗೆ ಒಂದು ನಿಯಮವಿದೆ ಮತ್ತು ಟ್ವಿಟ್ಟರ್‌ಗೆ ಬೇರೆ ನಿಯಮವಿದೆ. ಈ ಸಾಮಾಜಿಕ ಜಾಲತಾಣಗಳು ತಮ್ಮ ಬಲವನ್ನು ಅರ್ಥಮಾಡಿಕೊಳ್ಳಲು ಈ ಸಾಮಾಜಿಕ ಮಾಧ್ಯಮ ಸೈಟ್‌ಗಳ ಮೇಲೆ ಜವಾಬ್ದಾರಿ ಇರಿಸಬೇಕು. ಇವು ಯಾವುದೇ ಮಟ್ಟದ ಮೇಲ್ವಿಚಾರಣೆ ಅಥವಾ ನಿಯಂತ್ರಣವಿಲ್ಲದೆ ಲಕ್ಷ- ಲಕ್ಷಾಂತರ ಜನರೊಂದಿಗೆ ನೇರವಾಗಿ ಮಾತನಾಡುತ್ತದೆ, ಅದು ನಿಲ್ಲಬೇಕು” ಎಂದು ಹ್ಯಾರಿಸ್ ಹೇಳುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
Xನಲ್ಲಿ ವಾಕ್ ಸ್ವಾತಂತ್ರ್ಯವನ್ನು ತಡೆಗೊಳಿಸುವ ಪ್ರಯತ್ನವಾಗಿ ಇದನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
BREAKING VIDEO: Kamala Harris Announces Plan To Silence Free Speech On Elon Musk’s X—
“He has lost his privileges & it should be taken down.” pic.twitter.com/rsUDUvDzkw
— Alex Jones (@RealAlexJones) September 4, 2024
FACT CHECK
ನಾವು ಪ್ರಮುಖ ಫ್ರೇಮ್‌ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟ ನಡೆಸಿದಾಗ, ಈ ವೀಡಿಯೊ 2019ನೇ ಇಸವಿಯದ್ದು ಎಂದು ತಿಳಿದುಬಂತು, ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಖಾತೆಯನ್ನು ಈ ಹಿಂದೆ ಟ್ವಿಟರ್ ಎಂದು ಕರೆಯಲ್ಪಡುತ್ತಿದ್ದ X ನಿಂದ ತೆಗೆದುಹಾಕುವುದರ ಕುರಿತು ಡೆಮಾಕ್ರಟಿಕ್ ಪ್ರಾಥಮಿಕ ಚರ್ಚೆಯ ನಂತರ ಹ್ಯಾರಿಸ್ ರವರೊಂದಿಗೆ CNN ಹೋಸ್ಟ್ ಜೇಕ್ ಟ್ಯಾಪರ್ ಅವರೊಂದಿಗೆ ಮಾತನಾಡುತ್ತಿದ್ದಾಗ ಈ ವೀಡಿಯೊವನ್ನು ತೆಗೆಯಲಾಗಿತ್ತು. ಅಕ್ಟೋಬರ್ 2019 ರಲ್ಲಿ CNNನಲ್ಲಿ ಹ್ಯಾರಿಸ್ ಅವರ ಸಂದರ್ಶನದಿಂದ ಈ ಕ್ಲಿಪ್ ಪಡೆಯಲಾಗಿದೆ ಎಂದು ಫಲಿತಾಂಶಗಳು ತೋರಿಸಿವೆ, ಆಗ ಆಕೆ ಟ್ರಂಪ್ ಬಗ್ಗೆ ಮಾತನಾಡಿದ್ದಾರೆ, Xನಲ್ಲಿ ಟ್ರಂಪ್ ರವರ ಅಧಿಕೃತ ಖಾತೆಯನ್ನು ಮುಚ್ಚಿಹಾಕುವ ವಿಷಯದಲ್ಲಿ ಮಾತನಾಡಿದ್ದರು. ಮೂಲ ಸಂದರ್ಶನವನ್ನು ಇಲ್ಲಿ ನೋಡಿ:
Sen. Kamala Harris: President Trump “has lost his privileges and [his Twitter account] should be taken down…. [Social media sites] are directly speaking to millions and millions of people without any level of oversight or regulation. And that has to stop.” pic.twitter.com/blR3guE05Y
— The Hill (@thehill) October 17, 2019
ಹ್ಯಾರಿಸ್ ತಮ್ಮ ಚುನಾವಣೆಯ ನಂತರ X ಅನ್ನು ಮುಚ್ಚುತ್ತಾರೆ ಎಂದು ಆಕೆಯ ಸಂದರ್ಶನದ ವೀಡೊಯೊವನ್ನು ಬದಲಾಯಿಸಿ, ಪ್ರಸ್ತುತ ಹೇಳಿಕೆಯು ಹೇಳುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ವೀಡಿಯೊ ಕ್ಲಿಪ್ ಅನ್ನು 2019 ರ ಸಂದರ್ಶನದಿಂದ ಪಡೆಯಲಾಗಿದೆ; ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರಿಂದ Xನ ( ಈ ಹಿಂದೆ ಟ್ವಿಟರ್) ಬಳಕೆಯ ಬಗ್ಗೆ ಹ್ಯಾರಿಸ್ ಅವರ ಟೀಕೆಗಳಿಗೆ ಇದು ಸಂಬಂಧಿಸಿದೆ. ಆದ್ದರಿಂದ, ಹ್ಯಾರಿಸ್ ತಮ್ಮ ಪ್ರಚಾರದಲ್ಲಿ ಇಲ್ಲಿಯವರೆಗೆ X ಅನ್ನು ಮುಚ್ಚುವ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಿಲ್ಲ.
ಇದನ್ನೂ ಓದಿ:
ಈ ಚಿತ್ರವು ರಾಜಸ್ಥಾನದ 5000 ವರ್ಷ ಹಳೆಯ ದೇವಾಲಯವನ್ನು ತೋರಿಸುತ್ತದೆಯೇ? ಸತ್ಯ ಪರಿಶೀಲನೆ
ಎನ್‌ಡಿಎ ಸರ್ಕಾರ ರಚನೆಯ ಮುನ್ನ ನಿತೀಶ್ ಕುಮಾರ್ ಇಂಡಿಯಾ ಬ್ಲಾಕ್ ನಾಯಕರನ್ನು ಭೇಟಿ ಮಾಡಿದರೇ? ಸತ್ಯ ಪರಿಶೀಲನೆ