ಹೇಳಿಕೆ/Claim: ವಯನಾಡ್ ಭೂಕುಸಿತಕ್ಕೆ ಒಂದು ಗಂಟೆ ಮೊದಲು ಆನೆಗಳು ಸುರಕ್ಷಿತವಾಗಿರಲು ಧಾವಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ.
ಕಡೆನುಡಿ/Conclusion: ತಪ್ಪು ನಿರೂಪಣೆ. ಮೂಲ ವೀಡಿಯೊ ಜನವರಿ 2024 ರದ್ದು ಮತ್ತು ಜುಲೈ 30, 2024 ರಂದು ವಯನಾಡ್ ಭೂಕುಸಿತಕ್ಕೆ ಒಂದು ಗಂಟೆ ಮೊದಲು ನಡೆದದ್ದಲ್ಲ.
ರೇಟಿಂಗ್: ತಪ್ಪು ನಿರೂಪಣೆ —
ವೀಡಿಯೊದಲ್ಲಿ ಸಂಪೂರ್ಣ ಸತ್ಯ ಪರಿಶೀಲನೆಯನ್ನು ನೋಡಲು ಚಿತ್ರದ ಮೇಲೆ ಕ್ಲಿಕ್ಕಿಸಿ.
ಅಥವಾ ಕೆಳಗಿನ ಲೇಖನವನ್ನು ಓದಿ.
*************************************************************************
ಸತ್ಯ ಪರಿಶೀಲನೆ ವಿವರಗಳು
ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸುವ ಮುನ್ನವೇ ಆನೆಗಳ ಹಿಂಡು ಸುರಕ್ಷಿತವಾಗಿರಲು ಧಾವಿಸುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾತ್ತಿದೆ.
Elephants running to safety 1 hour before the landslide in Wayanad, Kerala. Animals have subtle vision. pic.twitter.com/BSywnKRjtP
— 🚩Mohan Gowda🇮🇳 (@MohanGowda_HJS) August 4, 2024
ಈ ವೀಡಿಯೊ ತುಣುಕನ್ನು, : “ಕೇರಳದ ವಯನಾಡಿನಲ್ಲಿ ಭೂಕುಸಿತ ಸಂಭವಿಸುವ ಒಂದು ಗಂಟೆ ಮೊದಲು ಆನೆಗಳು ಸುರಕ್ಷತೆಗೆ ಓಡುತ್ತಿರುವುದು. ಪ್ರಾಣಿಗಳು ಸೂಕ್ಷ್ಮ ದೃಷ್ಟಿಯನ್ನು ಹೊಂದಿರುತ್ತವೆ.” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
ಜುಲೈ 30, 2024 ರಂದು ಭೂಕುಸಿತ ಸಂಭವಿಸುವ ಒಂದು ಘಂಟೆ ಮೊದಲೇ ಪ್ರಾಣಿಗಳು ಅದನ್ನು ಅರಿಯಲು ಸಾಧ್ಯವಾಗಿತ್ತು ಎಂದು ಹೇಳಿಕೆಯು ಸೂಚಿಸುತ್ತದೆ ಮತ್ತು ಪ್ರಾಣಿಗಳು ನೈಸರ್ಗಿಕ ವಿಪತ್ತುಗಳ ಕುರಿತಾಗಿ ಸೂಕ್ಷ್ಮ ದೃಷ್ಟಿಯನ್ನು ಹೊಂದಿರುತ್ತವೆ ಎಂಬ ಹೇಳಿಕೆಯನ್ನೂ ಸಹ ಒಳಗೊಂಡಿದೆ. ಹೇಳಿಕೆಯನ್ನು X ನಲ್ಲಿ ಇಲ್ಲಿ ಮತ್ತು ಇಲ್ಲಿ ವೀಕ್ಷಿಸಬಹುದು.
FACT-CHECK
ನಾವು ವೀಡಿಯೊದಿಂದ ಕೆಲವು ಕೀ ಫ್ರೇಮ್ ಗಳನ್ನು ತೆಗೆದುಕೊಂಡು ಗೂಗಲ್ ರಿವರ್ಸ್ ಇಮೇಜ್ ಹುಡುಕಾಟದಲ್ಲಿ ಪರಿಶೀಲಿಸಿದಾಗ ಈ ವೀಡಿಯೊ ತುಣುಕು @TravelwithAJ96 ನ ಯುಟ್ಯೂಬ್ ಚಾನಲ್‌ನಿಂದ ದೊರಕಿರುವುದು ಮತ್ತು ಅದನ್ನು 2024 ರಲ್ಲಿ ನಾಲ್ಕು ತಿಂಗಳ ಹಿಂದೆ ಅಪ್‌ಲೋಡ್ ಮಾಡಲಾಗಿತ್ತು ಎಂದು ಫಲಿತಾಂಶಗಳು ತೋರಿಸಿವೆ. ಆನೆಗಳ ಹಿಂಡು ರಸ್ತೆ ದಾಟುತ್ತಿರುವುದನ್ನು ಮೂಲ ವೀಡಿಯೊ ತೋರಿಸುತ್ತದೆ.
ಅದೇ ವೀಡಿಯೊವನ್ನು “ಕೇವಲ 900 ಕಂಡಿ ವಿಷಯಗಳು…” ಎಂಬ ಶೀರ್ಷಿಕೆಯೊಂದಿಗೆ, ಇನ್ಸ್ಟಾಗ್ರಾಂನಲ್ಲಿ @wayanadan ಮತ್ತು jashir.ibrahim ಜನವರಿ 12, 2024 ರಂದು ಪೋಸ್ಟ್ ಮಾಡಿರುವುದನ್ನು ನೋಡಬಹುದು.
ಆನೆಗಳು ಸುರಕ್ಷತೆಯೆಡೆಗೆ ಓಡುತ್ತಿರುವುದು, ಹೇಳಿಕೆಯಲ್ಲಿ ತಿಳಿಸಿರುವಂತೆ, ವಯನಾಡ್ ಭೂಕುಸಿತ ಸಂಭವಿಸುವ ಒಂದು ಗಂಟೆ ಮೊದಲಲ್ಲ, ಆದರೆ ಬಹಳ ಹಿಂದೆ, ಜನವರಿ 2024ರಲ್ಲಿ ಎಂದು ಮೂಲ ವೀಡಿಯೊ ತುಣುಕು ಸ್ಪಷ್ಟವಾಗಿ ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆ ಸುಳ್ಳು.
ಇದನ್ನೂ ಓದಿ:
ಶ್ರೀಲಂಕಾದ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರು ‘ತೌಬಾ ತೌಬಾ’ ಹಾಡಿಗೆ ನೃತ್ಯ ಮಾಡುತ್ತಿದ್ದಾರೆಯೇ? ಸತ್ಯ ಪರಿಶೀಲನೆ